• ಹೋಂ
 • »
 • ನ್ಯೂಸ್
 • »
 • ಭವಿಷ್ಯ
 • »
 • Vastu Tips For Good Health: ಉತ್ತಮ ಆರೋಗ್ಯಕ್ಕೆ ವಾಸ್ತು ಸಲಹೆ; ಈ ಐದು ಅಂಶಗಳನ್ನು ಯಾವತ್ತೂ ಮರೀಬೇಡಿ

Vastu Tips For Good Health: ಉತ್ತಮ ಆರೋಗ್ಯಕ್ಕೆ ವಾಸ್ತು ಸಲಹೆ; ಈ ಐದು ಅಂಶಗಳನ್ನು ಯಾವತ್ತೂ ಮರೀಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಮನೆಯದ್ದಾಗಿರಬಹುದು, ಆಫೀಸಿನದ್ದಾಗಿರಬಹುದು ಇವುಗಳ ವಾಸ್ತುಗಳು ಸರಿಯಾಗಿದ್ದರೆ ಆ ಸ್ಥಳದಲ್ಲಿರುವವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳುತ್ತಾರೆ.

 • Share this:

  ಎಲ್ಲಾ ಸಮಸ್ಯೆಗಳಿಗೂ ವಾಸ್ತುಶಾಸ್ತ್ರದಲ್ಲಿ (Architecture) ಪರಿಹಾರವಿದೆ. ಮನೆ (House), ಓದು (Study), ಆರೋಗ್ಯ (Health), ಸಂಪತ್ತು (Wealth), ನೆಮ್ಮದಿ ಎಲ್ಲವೂ ಉತ್ತಮವಾಗಿ ನಡೆಯಲು ವಾಸ್ತುಶಾಸ್ತ್ರ ಹಲವು ಸಲಹೆಗಳನ್ನು ನೀಡುತ್ತದೆ. ಇತ್ತೀಚೆಗೆ ಕೆಲವರಂತೂ ದೇಹದ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಬಂದರೂ ಈ ಜ್ಯೋತಿಷ್ಯ ಅಥವಾ ವಾಸ್ತು ಪರಿಹಾರಗಳನ್ನು ನೋಡುತ್ತಾರೆ. ಮನೆ ಕಟ್ಟುವಾಗಲಂತೂ ಎಲ್ಲರೂ ಸಹ ವಾಸ್ತುವಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಅಂತೆಯೇ ಆರೋಗ್ಯದ ಮೇಲೂ ಗಮನ ನೀಡಲು ವಾಸ್ತು ಹಲವು ಸಲಹೆಗಳನ್ನು ನೀಡುತ್ತದೆ. ಕೆಲವೊಂದು ನಂಬಿಕೆಗಳು ಕೆಲವು ಸಮಸ್ಯೆಗಲಿಗೆ ಕಾರಣ ಅಂತಾನೂ ಹೇಳ್ಬಹುದು. ಯಾಕೆಂದರೆ ಬಹಳಷ್ಟು ಜನರು ಈ ವಾಸ್ತು, ಜ್ಯೋತಿಷ್ಯ (Astrology) ಇಂತಹುಗಳ ಮೇಲೆ ನಂಬಿಕೆ ಇಟ್ಟಿರುತ್ತಾರೆ. ಹಾಗಿರುವಾಗ ಏನೇ ಸಮಸ್ಯೆ ಬಂದರೂ ಸಹ ಇದನ್ನು ಅನುಸರಿಸುವುದು ಸಾಮನ್ಯವಾಗಿಬಿಟ್ಟಿದೆ.


  ಆರೋಗ್ಯದ ಮುಂದೆ ಯಾವುದೇ ಸಂಪತ್ತು, ಅಹಂಕಾರ, ಸ್ವಾರ್ಥ ಇಲ್ಲ. ಮಾನವರಿಗೆ ಜೀವಿಸಲು ಆರೋಗ್ಯ ಒಂದಿದ್ದರೆ ಸಾಕು ಇನ್ಯಾವುದು ಇಂಪಾರ್ಟೆಂಟ್ ಎಂದು ಅನಿಸಲ್ಲ. ಕೆಲವೊಬ್ಬರಿಗೆ ಮನೆಯ ವಾಸ್ತುವಿನಿಂದ ತನ್ನ ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಾರೆ. ಹಾಗಿದ್ರೆ ಆರೋಗ್ಯ ಉತ್ತಮವಾಗಿರ್ಬೇಕಾದ್ರೆ ವಾಸ್ತು ಕೂಡಾ ಅಷ್ಟೇ ಮುಖ್ಯವಾಗಿರುತ್ತದೆ.


  ಉತ್ತಮ ಆರೋಗ್ಯಕ್ಕೆ ವಾಸ್ತು ಸಲಹೆ


  ಆರೋಗ್ಯದ ಮುಂದೆ ಯಾವ ಸಂಪತ್ತೂ ಇಲ್ಲ. ಹೀಗಾಗಿ ಮೊದಲು ನಮ್ಮ ಆರೋಗ್ಯಕ್ಕೆ ನಾವು ಹೆಚ್ಚು ಕಾಳಜಿ ನೀಡಬೇಕು. ಮನೆಯವರೆಲ್ಲಾ ಆರೋಗ್ಯವಾಗಿದ್ದರೆ ನೆಮ್ಮದಿ, ಸುಖ-ಸಂತೋಷ ತಾನಾಗಿಯೇ ಬರುತ್ತದೆ.


  ಇದನ್ನೂ ಓದಿ: ಮಕ್ಕಳು ಚೆನ್ನಾಗಿ ಓದೋಕೆ ಮನೆ ಹೀಗಿರಲಿ, ಇಲ್ಲಿದೆ ವಾಸ್ತು ಸಲಹೆ


  ಕೆಲವೊಮ್ಮೆ ಮನೆಯ ವಿನ್ಯಾಸ ಮತ್ತು ಪೀಠೋಪಕರಣಗಳು ಜನರ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಹೀಗಾಗಿ ಇವು ಕೂಡ ವಾಸ್ತು ಪ್ರಕಾರ ಇದ್ದರೆ ಮನೆಯ ಜನರಿಗೆ ಆರೋಗ್ಯ ಮತ್ತು ನೆಮ್ಮದಿ ನೀಡುತ್ತದೆ ಎಂದು ನಂಬಲಾಗಿದೆ.


  ನಮ್ಮ ಮನೆಯ ಪೀಠೋಪಕರಣಗಳನ್ನು ಸರಿಯಾಗಿ ಜೋಡಿಸುವುದರಿಂದ ಹಿಡಿದು ಕೆಲ ಚಿಕ್ಕ-ಪುಟ್ಟ ವಿಷಯವೂ ಸಹ ನಮ್ಮ ಆರೋಗ್ಯವನ್ನು ಅವಲಂಬಿಸಿರುತ್ತವೆ. ಹಾಗಾದರೆ ಆರೋಗ್ಯವೇ ಭಾಗ್ಯಕ್ಕೆ ನಾವು ಅನುಸರಿಸಬೇಕಾದ ಐದು ವಾಸ್ತು ಸಲಹೆಗಳ ಬಗ್ಗೆ ಇಲ್ಲಿ ತಿಳಿಯೋಣ.


  1. ಉತ್ತಮ ಆರೋಗ್ಯಕ್ಕಾಗಿ, ಉತ್ತಮ ನಿದ್ರೆ


  ಉತ್ತಮ ಆರೋಗ್ಯಕ್ಕೂ ನಿದ್ರೆಗೂ ಅವಿನಾಭಾವ ಸಂಬಂಧ. ಹೀಗಾಗಿ ಚೆನ್ನಾಗಿ ನಿದ್ರಿಸುವುದು ಮುಖ್ಯ. ನಿದ್ರೆ ಚೆನ್ನಾಗಿ ಆಗಬೇಕಾದರೆ ಮಲಗುವ ಕೋಣೆ ಮತ್ತು ಅದು ಇರುವ ದಿಕ್ಕು ಮುಖ್ಯವಾಗುತ್ತದೆ. ನಿಮ್ಮ ಮಾಸ್ಟರ್ ಬೆಡ್ ರೂಂ ನೈಋತ್ಯ ದಿಕ್ಕಿಗೆ ಇರುವುದು ಉತ್ತಮವಾಗಿದೆ. ಉತ್ತರ ದಿಕ್ಕಿಗೆ ತಲೆ ಇಟ್ಟು ನಿದ್ರಿಸಬೇಡಿ. ಇದು ನಕಾರಾತ್ಮಕ ಅಂಶಗಳನ್ನು ಸೆಳೆಯುತ್ತದೆ.ನಿಮ್ಮ ಹಾಸಿಗೆಯನ್ನು ಗೋಡೆಯಿಂದ ಕನಿಷ್ಠ ಮೂರರಿಂದ ನಾಲ್ಕು ಇಂಚುಗಳಷ್ಟು ಹಿಂದಕ್ಕೆ ಇರಿಸಿ. ಹಾಗೆ ಮರದ ಮಂಚಗಳನ್ನು ಬಳಸಿ.


  2. ಗೋಡೆಗಳ ಮೇಲಿನ ಬಣ್ಣಗಳು


  ಮನೆಯ ಗೋಡೆಗಳು ಸಹ ಆರೋಗ್ಯವನ್ನು ನಿರ್ಧರಿಸುತ್ತವೆ. ಕೆಂಪು ಅಥವಾ ಹಸಿರು ಮುಂತಾದ ಬಣ್ಣಗಳನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಹಸಿರು ಶಾಂತಿಯನ್ನು ಸಂಕೇತಿಸುತ್ತದೆ ಮತ್ತು ಕೆಂಪು ಚೈತನ್ಯವನ್ನು ಸೆಳೆಯುತ್ತದೆ. ಗೋಡೆಗಳು ಯಾವುದೇ ಗೆದ್ದಲು ಹಿಡಿಯದಂತೆ ಅಥವಾ ಬಿರುಕುಗಳನ್ನು ಹೊಂದದಂತೆ ನೋಡಿಕೊಳ್ಳಿ.


  3. ನಿಮ್ಮ ಪೀಠೋಪಕರಣಗಳನ್ನು ಸರಿಯಾಗಿ ಜೋಡಿಸಿ


  ನೀವು ನಿಮ್ಮ ಮನೆಯಲ್ಲಿ ಜೋಡಿಸುವ ಫರ್ನಿಚರ್‌ಗಳು ಸಹ ನಿಮ್ಮ ಆರೋಗ್ಯವನ್ನು ನಿರ್ಧರಿಸುತ್ತವೆ. ಮನೆಯ ಪೀಠೋಪಕರಣಗಳು ಮತ್ತು ಅಲಂಕಾರಗಳ ವ್ಯವಸ್ಥೆಯು ನಿಮ್ಮ ಮನೆಯ ವಾತಾವರಣ ಮತ್ತು ಮನಸ್ಥಿತಿಯನ್ನು ನಿರ್ಧರಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ವಾಸ್ತು ಪ್ರಕಾರ, ಉತ್ತಮ ಆರೋಗ್ಯ ಮತ್ತು ನೆಮ್ಮದಿಗೆ ಹಾಸಿಗೆಯ ಮುಂದೆ ಅಥವಾ ಮಲಗುವ ಕೋಣೆಯಲ್ಲಿ ಬೇರೆಲ್ಲಿಯೂ ಕನ್ನಡಿ ಅಥವಾ ಟಿವಿ ಸೇರಿದಂತೆ ಪ್ರತಿಫಲಿಸುವ ಸಾಧನಗಳನ್ನು ಇಡಬೇಡಿ.


  ಮುಖ್ಯವಾಗಿ ಸ್ನಾನಗೃಹದ ಅಥವಾ ಮಟ್ಟಿಲುಗಳ ಬಳಿ ಲೈಟ್‌ ವ್ಯವಸ್ಥೆಯನ್ನು ಚೆನ್ನಾಗಿ ಮಾಡಿಕೊಳ್ಳಿ. ಇದು ಅಪಘಾತಗಳನ್ನು ತಡೆಯಲು ಸಹಕಾರಿ. ಮಕ್ಕಳಿದ್ದರೆ ಮಕ್ಕಳ ಓದುವಂತಹ ಜಾಗದಲ್ಲಿ ಅವರ ಜ್ಞಾನ ಹೆಚ್ಚಿಸಲು ಮಾರ್ಬಲ್ ಅಥವಾ ಓಕ್ ಪೀಠೋಪಕರಣಗಳನ್ನು ಆಯ್ಕೆಮಾಡಿ. ಮತ್ತು ಅವರು ಓದುವ ಸ್ಥಳವನ್ನು ಯಾವಾಗಲೂ ಶುಚಿಯಾಗಿಡಿ.


  4. ಒಡೆದ ವಸ್ತು ಅಥವಾ ಕನ್ನಡಿಯನ್ನು ಇಟ್ಟುಕೊಳ್ಳಬೇಡಿ


  ಮನೆಯಲ್ಲಿ ಮುರಿದ ವಸ್ತುಗಳು ಇಡುವುದು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದೆ. ಹೀಗಾಗಿ ಮನೆಯಲ್ಲಿ ಮುರಿದ ಇಲ್ಲಾ ಒಡೆದ ವಸ್ತುಗಳು ಅಥವಾ ಕನ್ನಡಿಗಳನ್ನು ಇರಿಸಬೇಡಿ. ಹೀಗಾದಲ್ಲಿ ಅವುಗಳನ್ನು ಸರಿಪಡಿಸಿ ಇಲ್ಲಾ ಬದಲಾಯಿಸುವುದು ಉತ್ತಮ. ಚಿಂತೆ ಮತ್ತು ಒತ್ತಡದ ಲಕ್ಷಣಗಳ ಜೊತೆಗೆ, ಹಾನಿಗೊಳಗಾದ ವಸ್ತುಗಳು ಸಹ ದುರದೃಷ್ಟವನ್ನು ಆಕರ್ಷಿಸುತ್ತವೆ ಎನ್ನಲಾಗಿದೆ.


  5. ಪೂಜಾ ಕೊಠಡಿ


  ನಿಮ್ಮ ಮನೆಯ ಅತ್ಯಂತ ಶಾಂತಿಯುತ ಮತ್ತು ಶುದ್ಧ ಪ್ರದೇಶವೆಂದರೆ ಅದು ದೇವರ ಮನೆ. ಹೀಗಾಗಿ ಸಕಲ ಸಂಪತ್ತು, ಆರೋಗ್ಯ ಎಲ್ಲವನ್ನೂ ಕಾಪಾಡಿಕೊಳ್ಳಲು ಪೂಜಾ ಕೋಣೆಯನ್ನು ಉತ್ತಮವಾಗಿ ನೋಡಿಕೊಳ್ಳಿ. ವಿಗ್ರಹಗಳನ್ನು ಸರಿಯಾಗಿ ಇರಿಸಲಾಗಿದೆಯೆ ಅಥವಾ ಯಾವುದಾದರೂ ಮುರಿದ ವಸ್ತುಗಳು ಇದೆಯೇ ಎಂದು ಪರಿಸೀಲಿಸಿ. ನಿಮ್ಮ ಮನೆಯಲ್ಲಿ ಗಾಳಿಯನ್ನು ಶುದ್ಧೀಕರಿಸಲು, ಸಂಜೆ ಮೇಣದಬತ್ತಿಗಳು ಮತ್ತು ಅಗರಬತ್ತಿಗಳನ್ನು ಬೆಳಗಿಸಿ. ಸಾಮರಸ್ಯ ಮತ್ತು ಉತ್ತಮ ಆರೋಗ್ಯವನ್ನು ತರಲು ಮನೆಯಲ್ಲಿ ತುಳಸಿ ಅಥವಾ ಬೇವನ್ನು ಬೆಳೆಸಿ.

  Published by:Prajwal B
  First published: