• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Valentines Day 2023: ಈ ರಾಶಿಯವ್ರು ಈ ಡೇಟ್‌ನಂದು ಪ್ರಪೋಸ್ ಮಾಡಿದ್ರೆ ಲವ್ ಪಕ್ಕಾ ಸಕ್ಸಸ್! ಹಾಗಾದ್ರೆ ನಿಮ್ಮ ರಾಶಿ ಯಾವುದೆಂದು ನೋಡ್ಕೊಳ್ಳಿ

Valentines Day 2023: ಈ ರಾಶಿಯವ್ರು ಈ ಡೇಟ್‌ನಂದು ಪ್ರಪೋಸ್ ಮಾಡಿದ್ರೆ ಲವ್ ಪಕ್ಕಾ ಸಕ್ಸಸ್! ಹಾಗಾದ್ರೆ ನಿಮ್ಮ ರಾಶಿ ಯಾವುದೆಂದು ನೋಡ್ಕೊಳ್ಳಿ

ಸಾಂರ್ಭಿಕ ಚಿತ್ರ

ಸಾಂರ್ಭಿಕ ಚಿತ್ರ

Valentines Day 2023: ಜ್ಯೋತಿಷ್ಯ ಶಾಸ್ತ್ರದಲ್ಲಿ ಪಳಗಿರುವ ಚಿರಾಗ್ ನುರಿತ ಅನುಭವಿಗಳಾಗಿದ್ದಾರೆ. ವೃತ್ತಿ, ಆರೋಗ್ಯ, ಪ್ರೀತಿ, ವಿವಾಹ, ಆರ್ಥಿಕತೆ ಹಾಗೂ ವ್ಯವಹಾರದ ಕುರಿತು ಜ್ಯೋತಿಷಿ ಸಲಹೆಗಳನ್ನು ನೀಡುತ್ತಾರೆ. 

  • Trending Desk
  • 2-MIN READ
  • Last Updated :
  • Share this:

ಫೆಬ್ರವರಿ 14 ಪ್ರೇಮಿಗಳಿಗೆ ಸಂಭ್ರಮದ ದಿನ. ಪ್ರೇಮಿಗಳು ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಹಾಗೂ ತಮ್ಮ ಪ್ರೀತಿ ಎಷ್ಟು ಅಗಾಧವಾದುದು ಎಂಬುದನ್ನು ನಿರೂಪಿಸಲು ಈ ದಿನವನ್ನೇ ಆಯ್ದುಕೊಳ್ಳುವುದು ಹೆಚ್ಚು. ವಿಶ್ವದಾದ್ಯಂತ ಫೆಬ್ರವರಿ 14 ಎಂಬುದು ಪ್ರೇಮಿಗಳಿಗೆ (Valentines Day 2023) ವಿಶೇಷ ದಿನವಾಗಿದೆ. ಕೆಂಪು ಗುಲಾಬಿಗಳ (Red Rose) ವಿನಿಮಯ, ಕಾರ್ಡ್‌ಗಳ ವಿನಿಮಯ, ಉಡುಗೊರೆಗಳ ವಿನಿಮಯ ಹೀಗೆ ವ್ಯಾಲಂಟೈನ್ಸ್ ಡೇ ಎಂಬುದೇ ಅತ್ಯಂತ ಸುಂದರಮಯವಾದ ದಿನವಾಗಿರುತ್ತದೆ. ವ್ಯಾಲಂಟೈನ್ ದಿನವನ್ನು (Valentines Day )ಹೊರದೇಶಗಳಲ್ಲಿ ತುಂಬಾ ವಿಶೇಷವಾಗಿ ಆಚರಿಸಲಾಗುತ್ತದೆ. ಅಲ್ಲಿ ಪ್ರತಿಯೊಂದು ವಸ್ತುಗಳ ಬೆಲೆ ಕೂಡ ಏರಿಕೆಯಾಗುತ್ತದೆ, ಹೂವುಗಳಿಂದ ಹಿಡಿದು ಉಡುಗೊರೆಗಳಿಗೂ ವ್ಯಾಲಂಟೈನ್ಸ್ ಡೇ ಬಂದರೆ ಬೆಲೆ ಏರಿಕೆಯಾಗುತ್ತದೆ. ಆದರೂ ಎಷ್ಟೇ ಖರ್ಚಾದರೂ ಪ್ರೇಮಿಗೆ ಉಡುಗೊರೆ ನೀಡುವುದನ್ನು ತಪ್ಪಿಸುವುದಿಲ್ಲ.


ಪ್ರೇಮಿಗಳ ದಿನದಂದು ಪ್ರೇಮ ನಿವೇದನೆ ಎಷ್ಟು ಸೂಕ್ತ?


ನಿಮ್ಮ ಹೃದಯದಲ್ಲಿ ಮುಚ್ಚಿಟ್ಟಿರುವ ಪ್ರೇಮವನ್ನು ಮನದನ್ನೆಗೆ ಅಥವಾ ಮನದರಸನಿಗೆ ತಿಳಿಸಲು ಈ ದಿನ ಸೂಕ್ತವೇ ಅಲ್ಲವೇ ಎಂಬ ಗೊಂದಲ ಹೆಚ್ಚಿನವರನ್ನು ಕಾಡುವುದು ಸಹಜ. ನಮ್ಮ ಪ್ರೀತಿಯನ್ನು ಅವರು ಒಪ್ಪಿಕೊಳ್ಳದಿದ್ದರೆ ಎಂಬ ಭಯ ಒಂದೆಡೆಯಾದರೆ ಮನಬಿಚ್ಚಿ ಪ್ರೀತಿಯನ್ನು ವ್ಯಕ್ತಪಡಿಸುವುದು ಹೇಗೆ ಎಂಬುದು ಇನ್ನೊಂದು ಚಿಂತೆಯಾಗಿರುತ್ತದೆ.


ಇಂತಹ ಚಿಂತೆಗಳನ್ನು ಬದಿಗೊತ್ತಿ ಆತಂಕ ಕಡಿಮೆ ಮಾಡಲು ಜ್ಯೋತಿಷ್ಯ ಶಾಸ್ತ್ರ ಸಹಕಾರಿಯಾಗಲಿದೆ. ಪ್ರೇಮಿಗಳ ದಿನ ನಿಮಗೆ ಶುಭಕರವೇ? ಪ್ರೀತಿಯನ್ನು ಈ ದಿನ ಪ್ರಸ್ತುತಪಡಿಸಬಹುದೇ ಎಂಬುದನ್ನು ಸೆಲೆಬ್ರಿಟಿ ಜ್ಯೋತಿಷಿ ಚಿರಾಗ್ ದಾರುವಾಲಾ ತಿಳಿಸಿಲಿದ್ದಾರೆ. ಚಿರಾಗ್ ಖ್ಯಾತ ಜ್ಯೋತಿಷ್ಯಜ್ಞ ಬೇಜನ್ ದಾರುವಾಲಾ ಪುತ್ರ. ತಮ್ಮ ತಂದೆಯ ವೃತ್ತಿಯನ್ನೇ ಚಿರಾಗ್ ಮುಂದುವರಿಸುತ್ತಿದ್ದಾರೆ.


ಜ್ಯೋತಿಷ್ಯ ಶಾಸ್ತ್ರದಲ್ಲಿ ಪಳಗಿರುವ ಚಿರಾಗ್ ನುರಿತ ಅನುಭವಿಗಳಾಗಿದ್ದಾರೆ. ವೃತ್ತಿ, ಆರೋಗ್ಯ, ಪ್ರೀತಿ, ವಿವಾಹ, ಆರ್ಥಿಕತೆ ಹಾಗೂ ವ್ಯವಹಾರದ ಕುರಿತು ಜ್ಯೋತಿಷಿ ಸಲಹೆಗಳನ್ನು ನೀಡುತ್ತಾರೆ. ಇಂದಿನ ಲೇಖನದಲ್ಲಿ ಜ್ಯೋತಿಷ್ಯ ಶಾಸ್ತ್ರ ನಿಮ್ಮ ಪ್ರೀತಿಯ ವ್ಯಕ್ತಪಡಿಸುವಿಕೆಗೆ ಯಾವ ರೀತಿಯ ಫಲಾಫಲಾಗಳನ್ನು ನೀಡುತ್ತದೆ ಪ್ರೇಮಿಗಳ ದಿನದಂದು ನಿಮ್ಮ ರಾಶಿಗೆ ಯೋಗ ಹೇಗಿದೆ ಎಂಬುದನ್ನು ನೋಡೋಣ.


ಯಾವ ರಾಶಿಯವರು ಎಂದು ಪ್ರಪೋಸ್​ ಮಾಡಬೇಕು?:


ಮೇಷ ರಾಶಿ:  ಈ ಪ್ರೇಮಿಗಳ ದಿನದಂದು ಒಬ್ಬ ಅನುರಾಗ ಪೂರಿತ ವ್ಯಕ್ತಿ ನಿಮ್ಮ ಜೀವನದಲ್ಲಿ ಪ್ರವೇಶಿಸುತ್ತಾನೆ ಎಂದು ಭಗವಾನ್ ಗಣೇಶ ಹೇಳುತ್ತಾರೆ. ಜ್ಯೋತಿಷ್ಯ ಚಿಹ್ನೆಯ ಪ್ರಕಾರ ಫೆಬ್ರವರಿ 12 ರಿಂದ 14ರವರೆಗೆ ಈ ರಾಶಿಯವರು ಪ್ರೀತಿಯನ್ನು ತಿಳಿಸಬಹುದು.


ಪ್ರೇಮವಿವಾಹವಾಗುವವರಿಗೆ ಮನೆಯವರಿಂದ ಸಹಾಯ ದೊರೆಯಲಿದೆ. ಪ್ರೀತಿಯ ಜೀವನಕ್ಕೆ ಈ ತಿಂಗಳು ಉತ್ತಮವಾಗಿದೆ. ವೈವಾಹಿಕ ಜೀವನಕ್ಕೂ ಈ ತಿಂಗಳು ಪ್ರಶಸ್ತ. ಗಂಡ ಹೆಂಡಿರ ನಡುವೆ ಅನುರಾಗವಿರುತ್ತದೆ. ಮಕ್ಕಳನ್ನು ಪಡೆಯುವ ಶುಭ ಸಂಕೇತವನ್ನು ಈ ತಿಂಗಳು ಹೊಂದಿದೆ. ನಿಮ್ಮ ಮನದರಸಿ ಇಲ್ಲವೇ ಮನದೊಡೆಯನನ್ನು ಸುಂದರವಾದ ಸ್ಥಳಗಳಿಗೆ ಪ್ರವಾಸಕ್ಕೆ ಕೊಂಡೊಯ್ಯಬಹುದಾಗಿದೆ.


ಇದನ್ನೂ ಓದಿ: Valentines Day: ಪ್ರಪೋಸ್ ಮಾಡ್ಬೇಕಾ? ಹಾಗಾದ್ರೆ ನಿಮ್ಮ ರಾಶಿಗೆ ಅನುಗುಣವಾಗಿ ಈ ಬಟ್ಟೆ ಧರಿಸಿ ಪಕ್ಕಾ ಲವ್​ ಸಕ್ಸಸ್​ ಆಗುತ್ತೇ!


ವೃಷಭ ರಾಶಿ: ಈ ಪ್ರೇಮಿಗಳ ದಿನದಂದು ವೃಷಭ ರಾಶಿಯವರ ಜೀವನದಲ್ಲಿ ಏರಿಳಿತಗಳು ಸಂಭವಿಸಬಹುದು ಎಂಬುದು ಗಣೇಶ ಹೇಳುವ ಸೂಚನೆಯಾಗಿದೆ. ಸಂಗಾತಿಯ ನಡುವೆ ಮನಸ್ತಾಪ ಜಗಳಗಳು ಉಂಟಾಗಬಹುದು. ಈ ತಿಂಗಳು ಯಾರಿಗಾದರೂ ಪ್ರೇಮವನ್ನು ಅರುಹಬೇಕೆಂದು ನಿರ್ಧರಿಸಿದರೆ ಅವರಿಗೆ ನೇರವಾಗಿ ಪ್ರಪೋಸ್ ಮಾಡಿ ಎಂಬುದು ಗಣೇಶನ ಸೂಚನೆಯಾಗಿದೆ.


ಹೊಸ ಸಂಬಂಧಗಳನ್ನು ಆರಂಭಿಸಲು ಈ ತಿಂಗಳು ಪ್ರಶಸ್ತವಾಗಿದೆ. ಮೂರನೇ ವ್ಯಕ್ತಿಯ ಮಧ್ಯಪ್ರವೇಶಿಸುವಿಕೆ ಅಶಾಂತಿಯನ್ನುಂಟು ಮಾಡಬಹುದು. ಈ ರಾಶಿಯ ಅಧಿಪತಿ ಶುಕ್ರ. ಈ ರಾಶಿಯವರು ಪರಸ್ಪರ ಹೆಚ್ಚು ಪ್ರೀತಿಸುವವರು ಆದರೆ ಅದನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾರೆ.


ಮಿಥುನ ರಾಶಿ: ಈ ಪ್ರೇಮಿಗಳ ದಿನದಂದು ಮಿಥುನ ರಾಶಿಯವರು ಅದೃಷ್ಟಶಾಲಿಗಳೆಂದು ಗಣೇಶ ಹೇಳುತ್ತಾರೆ. ಏಕಾಂಗಿಯಾಗಿದ್ದವರು ಈ ವ್ಯಾಲಂಟೈನ್‌ನಂದು ಜೋಡಿಗಳಾಗುತ್ತಾರೆ. ನಿಮ್ಮ ಜೀವನ ಅನುರಾಗ ಹಾಗೂ ಪ್ರೀತಿಯಿಂದ ತುಂಬಲಿದೆ. ವೈವಾಹಿಕ ಜೀವನದ ಆರಂಭ ಸುಖಕರವಾಗಲಿದೆ. ಗಂಡ ಹೆಂಡಿರ ನಡುವಿನ ಜಗಳ ಅಂತ್ಯಗೊಳ್ಳುತ್ತದೆ. ಯಾವುದೇ ರೀತಿಯ ಮನಸ್ತಾಪ ಕೊನೆಗೊಳ್ಳುತ್ತದೆ. ಸಂಗಾತಿಗಳ ನಡುವೆ ಆಪ್ತತೆ ಹೆಚ್ಚುತ್ತದೆ.


ವ್ಯಾಲಂಟೈನ್ ದಿನದಂದು ಈ ರಾಶಿಯವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದಾಗಿದೆ. ಪ್ರೀತಿಯಲ್ಲಿ ಯಶಸ್ಸು ದೊರೆಯುವುದು ಖಂಡಿತ ಎಂಬುದು ಗಣೇಶನ ಸೂಚನೆಯಾಗಿದೆ.
ಕರ್ಕಾಟಕ ರಾಶಿ: ಈ ವ್ಯಾಲಂಟೈನ್ ದಿನಂದು ನಿಮ್ಮ ಪ್ರೀತಿಯ ಜೀವನದಲ್ಲಿ ಕೆಲವು ತೊಂದರೆಗಳು ಕಾಣಿಸಿಕೊಳ್ಳಬಹುದು ಎಂಬುದು ಗಣೇಶ ನೀಡುವ ಎಚ್ಚರಿಕೆಯಾಗಿದೆ. ಆದರೂ ಆ ತೊಂದರೆಗಳು ಕೂಡಲೇ ನಿವಾರಣೆಯಾಗುತ್ತವೆ ಎಂಬ ಸಮಾಧಾನವನ್ನು.  ಸಂಗಾತಿಯೊಂದಿಗಿನ ಮನಸ್ತಾಪ, ತಪ್ಪು ಕಲ್ಪನೆಗಳು ನಿವಾರಣೆಯಾಗುತ್ತವೆ. ಈ ರಾಶಿಯವರು ಪ್ರೇಮ ನಿವೇದನಗಳನ್ನು ಸ್ವೀಕರಿಸುತ್ತಾರೆ. ತಮ್ಮ ಸಂಗಾತಿಗಳಿಂದ ಈ ರಾಶಿಯವರು ಬೆಳ್ಳಿಯ ಉಡುಗೊರೆಗಳನ್ನು ಸ್ವೀಕರಿಸುತ್ತಾರೆ.


ಸಂಗಾತಿಗಳೊಂದಿಗೆ ರೊಮ್ಯಾಂಟಿಕ್ ಡೇಟ್ ಅನ್ನು ಈ ರಾಶಿಯವರು ಯೋಜಿಸಬಹುದು. ಸೂಕ್ಷ್ಮಪ್ರವೃತ್ತಿಯವರಾದ ಈ ರಾಶಿಯವರು ಪ್ರೇಮಕ್ಕೆ ತುಂಬಾ ಬೆಲೆ ನೀಡುತ್ತಾರೆ. ಪ್ರೇಮಿಸಿದರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.


ಸಿಂಹ ರಾಶಿ: ಈ ಪ್ರೇಮಿಗಳ ದಿನದಂದು ಈ ರಾಶಿಯವರು ವಿವಾಹ ನಂತರದ ಸಂಬಂಧಗಳನ್ನು ತಿರಸ್ಕರಿಸಬೇಕು ಎಂದು ಗಣೇಶ ಸೂಚಿಸಿದ್ದಾರೆ. ಇಂತಹ ಸಂಬಂಧಗಳು ನಿಮ್ಮ ಸುಖ ಸಂಸಾರದ ಮೇಲೆ ಪ್ರಭಾವ ಬೀರಬಹುದು ಎಂಬುದು ಗಣೇಶ ನೀಡುವ ಎಚ್ಚರಿಕೆಯಾಗಿದೆ.


ನಿಮ್ಮ ಭಾವನೆಗಳನ್ನು ಸಂಗಾತಿಗಳ ಮೇಲೆ ಹೇರಬೇಡಿ ಎಂಬುದು ಗಣೇಶ ನೀಡುವ ಸೂಚನೆಯಾಗಿದೆ. ಸಿಂಹ ರಾಶಿಯವರು ತಮ್ಮ ಸಂಗಾತಿಗೆ ಗುಲಾಬಿ ಬಣ್ಣದ ಉಡುಗೊರೆಗಳನ್ನು ನೀಡಬಹುದು. ಈ ರಾಶಿಯವರು ತಮ್ಮ ಸಂಗಾತಿಗಳನ್ನು ಹೆಚ್ಚು ಜೋಪಾನ ಮಾಡುತ್ತಾರೆ.


ಕನ್ಯಾ ರಾಶಿ: ಪ್ರೀತಿ ಜೀವನಕ್ಕೆ ಈ ವ್ಯಾಲಂಟೇನ್ ದಿನ ಪ್ರಶಸ್ತವಾದುದು ಎಂದು ಗಣೇಶ ಹೇಳುತ್ತಾರೆ. ನೀವು ಪ್ರಪೋಸಲ್ ಸ್ವೀಕರಿಸುತ್ತೀರಿ. ಜೀವನದಲ್ಲಿ ಒಬ್ಬಂಟಿಯಾಗಿರುವವರು ತಮ್ಮ ಸ್ನೇಹಿತರಿಗೆ ಪ್ರೀತಿಯನ್ನು ಹೇಳಬಹುದು.


ನಿಮ್ಮಿಂದ ವಯಸ್ಸಿನಲ್ಲಿ ಹಿರಿಯರಾಗಿರುವವರ ಮೇಲೆ ಪ್ರೀತಿ ಮೂಡಬಹುದು. ಈ ರಾಶಿಯ ಅಧಿಪತಿ ಮಂಗಳನಾಗಿರುವುದರಿಂದ ಪ್ರೀತಿಯ ಸಂಬಂಧವನ್ನು ಯಶಸ್ವಿಯಾಗಿಸುವಲ್ಲಿ ನಿಷ್ಣಾತರಾಗಿದ್ದಾರೆ. ಕನ್ಯಾರಾಶಿಯವರು ಪ್ರೀತಿಯ ವಿಷಯದಲ್ಲಿ ತುಂಬಾ ಸೂಕ್ಷ್ಮಪ್ರವೃತ್ತಿಯವರು.


ತುಲಾ ರಾಶಿ: ಈ ಪ್ರೇಮಿಗಳ ದಿನದಂದು ಈ ರಾಶಿಯವರು ಸಾಕಷ್ಟು ಏರಿಳಿತಗಳನ್ನು ಕಾಣಬಹುದು. ಸಂಗಾತಿಗಳ ಮನಸ್ಸನ್ನು ಅರಿತುಕೊಳ್ಳಬೇಕು. ಪ್ರೀತಿಯ ವಿಷಯದಲ್ಲಿ ಪ್ರಮುಖ ನಿರ್ಧಾರವನ್ನು ಅವಸರದಿಂದ ತೆಗೆದುಕೊಳ್ಳದಿರಿ ಎಂದು ಗಣೇಶ ಸೂಚಿಸುತ್ತಾರೆ. ಈ ಪ್ರೇಮಿಗಳ ದಿನದಂದು ಕಂದು ಬಣ್ಣದ ಉಡುಗೊರೆಗಳನ್ನು ಸಂಗಾತಿಗಳಿಗೆ ನೀಡಬಹುದು.


ವೃಶ್ಚಿಕ ರಾಶಿ: ಈ ಪ್ರೇಮಿಗಳ ದಿನ ವೃಶ್ಚಿಕ ರಾಶಿಯವರಿಗೆ ವಿಶೇಷವಾಗಿರುತ್ತದೆ ಎಂಬುದು ಗಣೇಶನ ಸೂಚನೆಯಾಗಿದೆ. ಒಳ್ಳೆಯ ಪ್ರೀತಿಯ ಸಂಬಂಧಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ನಿಮ್ಮ ಮಾನಸಿಕ ಒತ್ತಡ ದೂರಾಗುತ್ತದೆ. ನಿಮ್ಮ ಪಾಲುದಾರರೊಂದಿಗೆ ಸಮಯ ಕಳೆಯುತ್ತೀರಿ. ಪ್ರೀತಿಯ ಸಂಬಂಧದಲ್ಲಿ ಬಲವಿರುತ್ತದೆ. ಕೆಂಪು ಬಣ್ಣದ ಉಡುಗೊರೆಗಳನ್ನು ಪಾಲುದಾರರು ಉಡುಗೊರೆಯಾಗಿ ನೀಡಬಹುದು.


ಧನು ರಾಶಿ: ಅವಿವಾಹಿತರಾದವರಿಗೆ ಹಾಗೂ ಒಬ್ಬಂಟಿಯಾಗಿರುವ ಧನು ರಾಶಿಯವರು ಈ ಪ್ರೇಮಿಗಳ ದಿನದಂದು ಪ್ರೀತಿಯನ್ನು ಪಡೆಯುತ್ತಾರೆ. ಈಗಾಗಲೇ ಸಂಬಂಧದಲ್ಲಿರುವವರ ಪ್ರೀತಿ ಬಲೆಗೆ ಈ ರಾಶಿಯವರು ಬೀಳಬಹುದು.


ಹಾಗಾಗಿ ಜಾಗರೂಕತೆಯಿಂದ ಇರಬೇಕು ಎಂಬುದು ಗಣೇಶನ ಸೂಚನೆಯಾಗಿದೆ. ಆದಷ್ಟು ಕುಟುಂಬದೊಂದಿಗೆ ಸಮಯ ಕಳೆಯಿರಿ. ಈ ರಾಶಿಯವರ ಪ್ರೇಮ ಸಂಬಂಧ ಸೂಕ್ಷ್ಮವಾಗಿರುತ್ತದೆ ಹಾಗೂ ಸಂಗಾತಿಗಳಿಗೆ ನಿಷ್ಟೆಯಿಂದಿರುತ್ತಾರೆ. ಪ್ರೇಮಿಗಳ ದಿನದಂದು ಸಂಗಾತಿಯನ್ನು ಖುಷಿಯಾಗಿರಿಸಲು ಉತ್ತಮವಾಗಿ ಯೋಜಿಸುತ್ತಾರೆ.


ಮಕರ ರಾಶಿ: ಈ ರಾಶಿಯವರು ಪ್ರೇಮಿಗಳ ದಿನದಂದು ಪ್ರೀತಿ ಹೇಳಲು ನಿರ್ಧರಿಸಿದ್ದರೆ ಅದನ್ನು ಮಾಡಿ ಎಂಬುದು ಗಣೇಶನ ಸೂಚನೆಯಾಗಿದೆ. ನಿಮ್ಮ ಪ್ರೀತಿ ಜಯಶಾಲಿಯಾಗುತ್ತದೆ ಎಂದು ಗಣೇಶ ಹೇಳುತ್ತಾರೆ. ಹೊಸ ಸಂಬಂಧವನ್ನು ಆರಂಭಿಸಲು ಈ ಪ್ರೇಮಿಗಳ ದಿನ, ಈ ತಿಂಗಳು ಶುಭದಾಯಕವಾದುದು. ದಂಪತಿಗಳ ನಡುವಿನ ಕಲಹ ಮುಕ್ತಾಯಗೊಳ್ಳುತ್ತದೆ. ನಿಮಗಿಂತ ವಯಸ್ಸಿನಲ್ಲಿ ಹಿರಿಯರಾಗಿರುವವರ ಮೇಲೆ ಪ್ರೀತಿ ಮೂಡುತ್ತದೆ. ಸಂಗಾತಿಗಳೊಂದಿಗೆ ಸಮಯ ಕಳೆಯಲು ಲಾಂಗ್ ಡ್ರೈವ್ ಹೋಗಬಹುದು.


ಕುಂಭ ರಾಶಿ: ಈ ರಾಶಿಯವರು ತಮ್ಮ ಸಂಗಾತಿಗಳಿಂದ ಉತ್ತಮ ಅನಿಸಿಕೆಗಳನ್ನು ಪಡೆದುಕೊಳ್ಳುತ್ತಾರೆ. ಪ್ರೀತಿ ಜೀವನ ಅತ್ಯುತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯಿಂದ ಸಹಾಯ ಹಾಗೂ ಅನುರಾಗ ನಿರಂತರವಾಗಿ ದೊರೆಯುತ್ತದೆ.


ನೀವಿನ್ನೂ ಒಬ್ಬಂಟಿಯಾಗಿದ್ದರೆ ಪ್ರೀತಿಯ ಜೀವನವನ್ನು ಆರಂಭಿಸಬಹುದು. ಅಪರಿಚಿತರಾದವರು ಈ ದಿನಗಳಂದು ಪರಿಚಿತರಾಗಿ ಪ್ರೀತಿಯಲ್ಲಿ ಬೀಳುತ್ತಾರೆ. ಕುಂಭ ರಾಶಿಯವರು ಪ್ರೇಮ ನಿವೇದನಗಳನ್ನು ಪಡೆಯುತ್ತಾರೆ. ಹೂವುಗಳನ್ನು ಪರಸ್ಪರ ಉಡುಗೊರೆಯಾಗಿ ನೀಡುವುದು ಶುಭ ಸಂಕೇತವಾಗಿದೆ.


ಮೀನ ರಾಶಿ: ಮೀನ ರಾಶಿಯವರಿಗೆ ಈ ಪ್ರೇಮಿಗಳ ದಿನ ಅಷ್ಟೊಂದು ಆಹ್ಲಾದಕರವಾಗಿರುವುದಿಲ್ಲ ಎಂಬುದು ಗಣೇಶನ ಸೂಚನೆಯಾಗಿದೆ. ಸಂಗಾತಿಗಳ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತದೆ. ಆದರೆ ನಿಕಟ ವ್ಯಕ್ತಿಯಿಂದ ಪ್ರೀತಿ ನಿವೇದನೆಯನ್ನು ಈ ರಾಶಿಯವರು ಪಡೆದುಕೊಳ್ಳಬಹುದು.


ಒಮ್ಮೊಮ್ಮೇ ನೇರವಲ್ಲದ ಪ್ರಪೋಸಲ್‌ಗಳು ನಿಮ್ಮನ್ನರಸಿ ಬರಬಹುದು. ಮೂರನೇ ವ್ಯಕ್ತಿಯ ಕಾರಣದಿಂದ ನಿಮ್ಮ ಪ್ರೀತಿಜೀವನದಲ್ಲಿ ಏರಿಳಿತಗಳು ಕಂಡು ಬರಬಹುದು ಅಂತೆಯೇ ಸಂಗಾತಿಗಳ ನಡುವೆ ಮನಸ್ತಾಪ ಉಂಟಾಗಬಹುದು.

Published by:shrikrishna bhat
First published: