• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Valentines Day: ಪ್ರಪೋಸ್ ಮಾಡ್ಬೇಕಾ? ಹಾಗಾದ್ರೆ ನಿಮ್ಮ ರಾಶಿಗೆ ಅನುಗುಣವಾಗಿ ಈ ಬಟ್ಟೆ ಧರಿಸಿ ಪಕ್ಕಾ ಲವ್​ ಸಕ್ಸಸ್​ ಆಗುತ್ತೆ!

Valentines Day: ಪ್ರಪೋಸ್ ಮಾಡ್ಬೇಕಾ? ಹಾಗಾದ್ರೆ ನಿಮ್ಮ ರಾಶಿಗೆ ಅನುಗುಣವಾಗಿ ಈ ಬಟ್ಟೆ ಧರಿಸಿ ಪಕ್ಕಾ ಲವ್​ ಸಕ್ಸಸ್​ ಆಗುತ್ತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Valentines Day: ಹೆಚ್ಚಿನವರು ವ್ಯಾಲೆಂಟೈನ್ಸ್‌ ಡೇಗೆ ಕೆಂಪು ಬಣ್ಣದ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ನಿಮ್ಮ ಲವ್‌ ಸಕ್ಸಸ್‌ ಆಗಬೇಕು, ನಿಮ್ಮ ಸಂಗಾತಿ ಇಂಪ್ರೆಸ್‌ ಆಗಬೇಕು, ಸಂಬಂಧ ಗಟ್ಟಿಯಾಗಿ ಉಳಿಯಬೇಕು ಅಂದರೆ ಯಾವುದ್ಯಾವುದೋ ಬಟ್ಟೆ ಹಾಕಿಕೊಂಡು ಹೋಗಬೇಡಿ. 

  • Trending Desk
  • 5-MIN READ
  • Last Updated :
  • Share this:

ಪ್ರೇಮಿಗಳಿಗಾಗೇ ಇರುವ ದಿನವಾದ ವ್ಯಾಲೆಂಟೈನ್ಸ್‌ ಡೇ (Valentines Day) ಇನ್ನೇನು ಬಂದೇ ಬಿಡ್ತು. ಈಗಾಗ್ಲೇ ಚಾಕ್‌ಲೇಟ್‌ ಡೇ, ರೋಸ್‌ ಡೇ (Rose Day) ಅಂತಾ ಒಂದೊಂದೇ ನಡೆಯುತ್ತಿದ್ದು, ಮುಂಬರುವ ವ್ಯಾಲೆಂಟೈನ್ಸ್‌ ಡೇಗೆ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಪ್ರತಿ ವರ್ಷ ಫೆಬ್ರವರಿ 14ಕ್ಕೆ (FEB 14) ಬರುವ ಪ್ರೇಮಿಗಳ ದಿನದಂದು ಪ್ರೀತಿಸುವವರು ತಮ್ಮ ಪ್ರೀತಿಯ ಸಂಗಾತಿಗೆ ಮನಸಾರೆ ಪ್ರೀತಿಯನ್ನು ವ್ಯಕ್ತಪಡಿಸುವ ಅಥವಾ ಹೊಸದಾಗಿ ಪ್ರಪೋಸ್‌ ಮಾಡುವವರಿಗೆ ಇದೊಂದು ವಿಶೇಷ ದಿನ. ಪ್ರೇಮಿಗಳು ಈ ದಿನವನ್ನು ತುಂಬಾ ವಿಶೇಷವಾಗಿ ಆಚರಿಸುತ್ತಾರೆ. ವ್ಯಾಲೆಂಟೈನ್ಸ್‌ ಡೇಗೆ ತಮ್ಮ ಪ್ರೇಮಿಯನ್ನು ನೋಡಲು ಹಿಂದಿನ ದಿನದಿಂದಲೇ ಯಾವ ಬಟ್ಟೆ ಹಾಕೋಬೇಕು, ಹೇಗೆ ರೆಡಿಯಾಗಬೇಕು ಅಂತಾ ಯೋಚನೆ ಮಾಡುತ್ತಿರುತ್ತಾರೆ.


ಹೆಚ್ಚಿನವರು ವ್ಯಾಲೆಂಟೈನ್ಸ್‌ ಡೇಗೆ ಕೆಂಪು ಬಣ್ಣದ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ನಿಮ್ಮ ಲವ್‌ ಸಕ್ಸಸ್‌ ಆಗಬೇಕು, ನಿಮ್ಮ ಸಂಗಾತಿ ಇಂಪ್ರೆಸ್‌ ಆಗಬೇಕು, ಸಂಬಂಧ ಗಟ್ಟಿಯಾಗಿ ಉಳಿಯಬೇಕು ಅಂದರೆ ಯಾವುದ್ಯಾವುದೋ ಬಟ್ಟೆ ಹಾಕಿಕೊಂಡು ಹೋಗಬೇಡಿ. ನಿಮ್ಮ ರಾಶಿಯ ಪ್ರಕಾರ, ಅದಕ್ಕೆ ಅನುಗುಣವಾಗಿರುವ ಅದೇ ಬಣ್ಣದ ಬಟ್ಟೆಯನ್ನು ಧರಿಸಿಕೊಂಡರೆ ಹೋದರೆ ನಿಮ್ಮ ಪ್ರೇಮಿಗಳ ದಿನ ನೀವು ಅಂದುಕೊಂಡಕ್ಕಿಂತ ಸುಂದರವಾಗಿರುತ್ತದೆ ನೋಡಿ.


ವ್ಯಾಲೆಂಟೈನ್ಸ್ ಡೇ 2023: ಇವುಗಳು ನಿಮ್ಮ ಅದೃಷ್ಟದ ಬಣ್ಣಗಳು


ಮೇಷ ರಾಶಿ: ಮೇಷ ರಾಶಿಯವರ ಒರಟು ಮತ್ತು ಶುದ್ಧ ವ್ಯಕ್ತಿತ್ವಕ್ಕೆ ಕೆಂಪು ಬಣ್ಣ ಸೂಕ್ತವಾಗಿದೆ. ವ್ಯಾಲೆಂಟೈನ್‌ ಡೇಗೆ ಎಲ್ಲರೂ ಕೆಂಪು ಬಣ್ಣ ಧರಿಸುತ್ತಾರೆ, ಆದರೆ ಮೇಷ ರಾಶಿಯವರಿಗೆ ಈ ಬಣ್ಣ ಹೆಚ್ಚು ಅದೃಷ್ಟ ತರುತ್ತದೆ. ಕೆಂಪು ಬಣ್ಣದ ಜೊತೆಗೆ ಇವರು ಬಿಳಿ, ಹಳದಿ ಬಣ್ಣದ ಬಟ್ಟೆಗಳನ್ನು ಸಹ ಧರಿಸಬಹುದು. ಇದು ಇವರಿಗೆ ಮಂಗಳಕರವಾಗಿರುತ್ತದೆ.


ವೃಷಭ ರಾಶಿ: ವೃಷಭ ರಾಶಿಯವರು ಪ್ರೇಮಿಗಳ ದಿನದಂದು ಗುಲಾಬಿ, ಬಿಳಿ ಅಥವಾ ಹಸಿರು ಬಣ್ಣದ ಬಟ್ಟೆ ಧರಿಸುವುದು ಅವರಿಗೆ ಈ ದಿನದಂದು ಅಂದುಕೊಂಡ ಕನಸುಗಳು ಸಫಲವಾಗಬಹುದು.


ಇದನ್ನೂ ಓದಿ: Numerology: ನಿಮ್ಮ ಹೆಸರು W ಅಕ್ಷರದಿಂದ ಶುರುವಾದ್ರೆ ಜೀವನ ಹೀಗಿರಲಿದೆಯಂತೆ ನೋಡಿ


ಮಿಥುನ ರಾಶಿ: ಮಿಥುನ ರಾಶಿಯವರು ಸಂಗಾತಿಗೆ ಪ್ರಫೋಸ್‌ ಮಾಡಲು ಅಥವಾ ಶುಭಾಶಯ ಕೋರಲು ಹೋಗುವಾಗ ಗುಲಾಬಿ, ಹಳದಿ, ಹಸಿರು ಅಥವಾ ಬಿಳಿ ಬಣ್ಣ ಧರಿಸಿದರೆ ಉತ್ತಮ ಫಲಿತಾಂಶ ಒಲಿಯುತ್ತದೆ.


ಕರ್ಕಾಟಕ ರಾಶಿ: ಬಿಳಿ, ಸಿಲ್ವರ್‌ ಬಣ್ಣ, ಕೆನೆ ಮತ್ತು ಬೂದು ಬಣ್ಣಗಳು ಕರ್ಕ ರಾಶಿಯವರಿಗೆ ಅದೃಷ್ಟದ ಬಣ್ಣಗಳಾಗಿದ್ದು, ಪ್ರೇಮಿಗಳ ದಿನ ಅಂತಾ ಕೆಂಪು ಧರಿಸುವ ಬದಲು ಈ ಬಣ್ಣದ ಬಟ್ಟೆ ಧರಿಸಿ ಹೋಗಿ.


ಸಿಂಹ ರಾಶಿ: ತುಂಬಾ ಧೈರ್ಯಶಾಲಿ ಸ್ವಭಾವ ಹೊಂದಿರುವ ಸಿಂಹ ರಾಶಿಯವರಿಗೆ ಗೋಲ್ಡನ್‌, ನೇರಳೆ, ಕಿತ್ತಳೆ ಬಣ್ಣಗಳು ಅವರ ವ್ಯಕ್ತಿತ್ವಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತವೆ. ಈ ಬಣ್ಣಗಳನ್ನು ಧರಿಸುವುದರಿಂದ ಇವರಿಗೆ ಈ ದಿನದಂದು ಶುಭಪ್ರದವಾಗಿರುತ್ತದೆ.


ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಹಸಿರು, ಹಳದಿ, ನೀಲಿ ಮತ್ತು ಬಿಳಿ ಬಣ್ಣಗಳು ಅದೃಷ್ಟದ ಬಣ್ಣಗಳು. ಈ ಬಣ್ಣಗಳು ನಿಮ್ಮ ಶಾಂತ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವುದರ ಜೊತೆಗೆ ನಿಮ್ಮ ಸಂಬಂಧಗಳನ್ನು ಉಳಿಸಿಕೊಳ್ಳಲು ಸಹಕಾರಿಯಾಗಿವೆ.


ತುಲಾ ರಾಶಿ: ತುಲಾ ರಾಶಿಯವರಿಗೆ ಹೆಚ್ಚು ಗಾಢ ಬಣ್ಣಗಳು ಅದೃಷ್ಟ ತರುತ್ತವೆ. ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ನೀವು ಪ್ರೇಮಿಗಳ ದಿನದಂದು ತಿಳಿ ನೀಲಿ ಮತ್ತು ಬಿಳಿ ಬಣ್ಣದ ಬಟ್ಟೆ ಧರಿಸುವುದು ಉತ್ತಮ.
ವೃಶ್ಚಿಕ ರಾಶಿ: ಕೆಂಪು, ಬಿಳಿ ಮತ್ತು ಕಂದು ಬಣ್ಣದ ಛಾಯೆಗಳು ವೃಶ್ಚಿಕ ರಾಶಿಯವರಿಗೆ ಲಕ್ಕಿ ಬಣ್ಣಗಳು. ಜೊತೆಗೆ ನೀವು ಕಿತ್ತಳೆ ಮತ್ತು ಹಳದಿ ಬಣ್ಣದ ಬಟ್ಟೆಗಳನ್ನು ಸಹ ಆಯ್ಕೆ ಮಾಡಬಹುದು ಏಕೆಂದರೆ ಅವು ನಿಮ್ಮ ವೈಯಕ್ತಿಕ ಸಂಬಂಧಗಳಿಗೆ ಮಂಗಳಕರವಾಗಿವೆ.


ಧನು ರಾಶಿ: ಧನು ರಾಶಿಯವರು ಸಂಗಾತಿಯನ್ನು ಭೇಟಿ ಮಾಡಲು ಹೋಗುವಾಗ ಕಿತ್ತಳೆ ಮತ್ತು ಗಾಢ ಹಳದಿಯಂತಹ ಬಣ್ಣದ ಬಟ್ಟೆ ಆರಿಸುವುದು ಮಂಗಳಕರ. ಜೊತೆಗೆ ನೀಲಿ ಬಣ್ಣವನ್ನು ಸಹ ಆರಿಸಿಕೊಳ್ಳಬಹುದು.


ಮಕರ ರಾಶಿ: ಕಪ್ಪು, ನೇರಳೆ ಮತ್ತು ಹಸಿರು ಬಣ್ಣಗಳು ಮಕರ ರಾಶಿಯವರಿಗೆ ಹೆಚ್ಚು ಹೊಂದಿಕೆಯಾಗುವ ಬಣ್ಣಗಳು. ಹೀಗಾಗಿ ನಿಮ್ಮ ಸ್ಪೆಷಲ್‌ ಡೇ ದಿನ ನೀವು ಇದೇ ಬಣ್ಣದ ಬಟ್ಟೆ ಧರಿಸಿ ಹೋದರೆ ನಿಮ್ಮ ಮನಸ್ಸಿನ ನಿವೇದನೆ ಈಡೇರುತ್ತದೆ.


ಕುಂಭ ರಾಶಿ: ತಿಳಿ ನೀಲಿ, ನೇರಳೆ ಮತ್ತು ಬಿಳಿಯಂತಹ ಗಾಢ ಬಣ್ಣಗಳನ್ನು ಆರಿಸಿ. ಈ ಬಣ್ಣಗಳು ಕುಂಭ ರಾಶಿಯವರ ವ್ಯಕ್ತಿತ್ವಕ್ಕೆ ಸರಿಹೊಂದಲಿದ್ದು, ಈ ದಿನವನ್ನು ಮತ್ತಷ್ಟು ವಿಶೇಷಗೊಳಿಸುವ ಸಂದರ್ಭಗಳು ಸಂಭವಿಸಬಹುದು.


ಮೀನ ರಾಶಿ: ಮೀನ ರಾಶಿಗೆ ಹಳದಿ ಮತ್ತು ಕಿತ್ತಳೆಯಂತಹ ಬಣ್ಣಗಳು ಮಂಗಳಕರವಾಗಿರುವುದರಿಂದ ನೀವು ಇದೇ ಬಣ್ಣದ ಬಟ್ಟೆ ಆಯ್ಕೆ ಮಾಡಬಹುದು. ಹಾಗೆಯೇ ನೀವು ಗುಲಾಬಿ ಬಣ್ಣವನ್ನು ಸಹ ಆರಿಸಿಕೊಳ್ಳಬಹುದು, ಇದು ನಿಮ್ಮ ಪ್ರೇಮಿಯ ಜೊತೆಗೆ ಸಂಬಂಧವನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ.

Published by:shrikrishna bhat
First published: