Vaastu Tips: ಹೊಸ ಮನೆ ಖರೀದಿ ಮಾಡುತ್ತಿದ್ದೀರಾ? ಹಾಗಾದ್ರೆ ಈ ವಾಸ್ತು ಟಿಪ್ಸ್ ಓದಿ..

Vaastu Tips For New Home: ಇನ್ನು ಮನೆಯ ಮುಖ್ಯ ಸ್ಥಳ ಎಂದರೆ ಅಡಿಗೆ ಮನೆ. ಎಲ್ಲರ ಆರೋಗ್ಯ ನಿರ್ಧಾರವಾಗವುದು ಇಲ್ಲಿಯೇ. ಹಾಗಾಗಿ ಅಡುಗೆ ಮನೆ ಯಾವ ದಿಕ್ಕಿನಲ್ಲಿದೆ ಎಂಬುದು ಇಲ್ಲಿ ಪ್ರಮುಖವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನೆಯೇ (Home)ಮಂತ್ರಾಲಯ ಎನ್ನುತ್ತೇವೆ.  ಮನೆ ಎಂಬುದು ಪ್ರತಿಯೊಬ್ಬರ ಜೀವನದ ಕನಸು. ಎಲ್ಲರಿಗೂ ತಮ್ಮದೇ ಸ್ವಂತ ಮನೆ(own House) ಇರಬೇಕು ಎಂಬ ಮಹದಾಸೆ ಇರುತ್ತದೆ. ಅಲ್ಲದೇ ನಮ್ಮ ಮನೆ ಹೀಗೆ ಇರಬೇಕು ಎನ್ನುವ ಒಂದು ಆಲೋಚನೆ ಇರುತ್ತದೆ, ಮನೆ ಕಟ್ಟಿಸಿಕೊಳ್ಳುವವರು ತಮಗೆ ಬೇಕಾದ ಹಾಗೇ ಕಟ್ಟಿಸಿಕೊಳ್ಳುತ್ತಾರೆ. ವಾಸ್ತುವಿನ(Vaastu) ಅನುಸಾರ ಹೇಗೆ ಬೇಕೋ ಹಾಗೆ ಮನೆ ಕಟ್ಟಿಸಿಕೊಳ್ಳಬಹುದು. ಆದರೆ ಕೆಲವರು ಕಟ್ಟಿಸಿದ ಮನೆಯನ್ನು ಖರೀದಿ ಮಾಡುತ್ತಾರೆ. ನೀವು ಗಮನಿಸಿ ನೋಡಿ ಬಹುಪಾಲು ಜನರು ವಾಸ್ತುವನ್ನು ನೋಡಿಯೆ ಮನೆ ತೆಗೆದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಕೆಲ ಅಂಶಗಳನ್ನು ಬಿಟ್ಟು ಬಿಡುತ್ತಾರೆ ಇದು ಅವರಿಗೆ ಮುಂದಿನ ದಿನಗಳಲ್ಲಿ ಸಮಸ್ಯೆಯನ್ನು ಉಂಟು ಮಾಡುತ್ತದೆ.  ಆದರೆ ಮನೆ ತೆಗದುಕೊಳ್ಳುವಾಗ ವಾಸ್ತು ಶಾಸ್ತ್ರದ ಪ್ರಕಾರ ಕೆಲ ಅಂಶಗಳನ್ನು ಗಮನಿಸಬೇಕು. ಯಾವುದು ಆ ಅಂಶಗಳು ಇಲ್ಲಿದೆ.

ನಮ್ಮ ಮನೆಯಲ್ಲಿ ವಿವಿಧ ಪ್ರದೇಶಗಳ ವ್ಯವಸ್ಥೆಯು ವಾಸ್ತು ನಿಯಮಗಳಂತೆ ಇರಬೇಕು. ಇಲ್ಲದಿದ್ದರೆ, ಇದು ಮನಸ್ಸಿನಲ್ಲಿ ಅಶಾಂತಿ ಸೃಷ್ಟಿಸಬಹುದು, ಆರೋಗ್ಯ ಸಮಸ್ಯೆಗಳು ಮತ್ತು ಜೀವನದ ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಾಸ್ತು ನಿಯಮಗಳ ಕನಿಷ್ಠ 70% -80% ಗೆ ಅನುಗುಣವಾದ ಮನೆಯನ್ನು ಖರೀದಿಸಬೇಕು.

ಎಲ್ಲಾ ನಾಲ್ಕು ಮೂಲೆಗಳು ಸರಿಯಾಗಿರುವ ಮನೆಯನ್ನು ಆರಿಸಿಕೊಳ್ಳಿ, ಅಂದರೆ, ಯಾವುದೇ ಮೂಲೆಯೂ ಕಟ್ ಆಗಿರಬಾರದು. ನೈಋತ್ಯ ದಿಕ್ಕಿನ ಮನೆಗಳನ್ನು ಎಂದಿಗೂ ಖರೀದಿ ಮಾಡಬೇಡಿ.

ಮನೆಯ ಮುಖ್ಯದ್ವಾರವನ್ನು ಯಾವ ದಿಕ್ಕಲ್ಲಾದರೂ ಕಟ್ಟಿದರೆ  ಆಗುವುದಿಲ್ಲ. ಅದು ಮುಖ್ಯವಾಗಿ ಪೂರ್ವ, ಉತ್ತರ ಇಲ್ಲವೇ ಈಶಾನ್ಯ ಭಾಗದಲ್ಲಿದ್ದರೆ ಮಾತ್ರ ಶ್ರೇಷ್ಠ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.  ಹೀಗಾಗಿ ಬಾಗಿಲು ಯಾವ ದಿಕ್ಕಿನಲ್ಲಿದೆ ಎಂಬುದನ್ನ ತಿಳಿದುಕೊಳ್ಳಿ.

ಇದನ್ನೂ ಓದಿ: ಮೇಷ ರಾಶಿಯವರಿಗೆ ಇಂದು ವಿವಾಹ ಯೋಗ; ಇಲ್ಲಿದೆ 12 ರಾಶಿಗಳ ದಿನಭವಿಷ್ಯ

ಮೆಟ್ಟಿಲು ಯಾವಾಗಲೂ ಪ್ರದಕ್ಷಿಣಾಕಾರವಾಗಿರಬೇಕು ಮತ್ತು ಈಶಾನ್ಯ ದಿಕ್ಕಿನಲ್ಲಿರಬಾರದು ಎಂಬುದನ್ನ ನೆನಪಿನಲ್ಲಿಟ್ಟುಕೊಳ್ಳಿ.

ಹೊಸ ಮನೆಯನ್ನು ಖರೀದಿಸುವಾಗ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಸೂರ್ಯನ ಕಿರಣ ಮನೆಯೊಳಗೆ ಬೀಳುತ್ತಿರಬೇಕು ಎಂಬುದು. ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯನ ಬೆಳಕು ಮನೆಗೆ ಬಿದ್ದರೆ  ಆ ಮನೆಯವರ ಆರೋಗ್ಯ ಚೆನ್ನಾಗಿರುತ್ತದೆ. ಯಾವ ಮನೆಗೆ ಸೂರ್ಯನ ಬೆಳಕು  ಬೀಳುವುದಿಲ್ಲವೋ ಆ ಮನೆಯಲ್ಲಿ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.

ಇನ್ನು ಮನೆಯ ಮುಖ್ಯ ಸ್ಥಳ ಎಂದರೆ ಅಡಿಗೆ ಮನೆ. ಎಲ್ಲರ ಆರೋಗ್ಯ ನಿರ್ಧಾರವಾಗವುದು ಇಲ್ಲಿಯೇ. ಹಾಗಾಗಿ ಅಡುಗೆ ಮನೆ ಯಾವ ದಿಕ್ಕಿನಲ್ಲಿದೆ ಎಂಬುದು ಇಲ್ಲಿ ಪ್ರಮುಖವಾಗುತ್ತದೆ. ಆಗ್ನೇಯ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು. ಇದು ಈಶಾನ್ಯ ದಿಕ್ಕಿನಲ್ಲಿ ಇರಬಾರದು. ಮನೆ ಖರೀದಿ ಮಾಡುವಾಗ ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಿ.

ಮನೆಯನ್ನು ಖರೀದಿ ಮಾಡುವಾಗ ದಿಕ್ಕುಗಳು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಮಾಸ್ಟರ್ ಬೆಡ್‌ರೂಮ್ ನೈಋತ್ಯ ದಿಕ್ಕಿನಲ್ಲಿರಬೇಕು. ಇದು ಯಾವುದೇ ಕಾರಣಕ್ಕೂ ಆಗ್ನೇಯ ದಿಕ್ಕಿನಲ್ಲಿ ಇರಬಾರದು.

ಇನ್ನು ಮತ್ತೊಂದು ಪ್ರಮುಖ ಸ್ಥಳ ಎಂದರೆ ಶೌಚಾಲಯಗಳು . ಇದು ವಾಯುವ್ಯ ದಿಕ್ಕಿನಲ್ಲಿರಬೇಕು. ಇದು ಈಶಾನ್ಯ ದಿಕ್ಕಿನಲ್ಲಿ ಇರಬಾರದು.

ಕಪ್ಪು ಯಾವಾಗಲೂ ಆಕರ್ಷಕ, ಸುಂದರ ಆದರೆ ಎಲ್ಲ ಕಡೆಯೂ ಕಪ್ಪು ಶ್ರೇಷ್ಠವಲ್ಲ ಎಂಬುದನ್ನ ಅರ್ಥ  ಮಾಡಿಕೊಳ್ಳಬೇಕು. . ಅದರಲ್ಲೂ ನಾವು ವಾಸವಾಗಿರುವ ಮನೆಯ ಮುಖ್ಯ ದ್ವಾರ ಕಪ್ಪು ಬಣ್ಣದ್ದಾಗಿರಬಾರದು. ಮನೆ ಖರೀದಿ ಮಾಡುವಾಗ  ಬಾಗಿಲಿನ ಬಣ್ಣವನ್ನು ಗಮನಿಸಿ. ಬಾಗಿಲು ಕಪ್ಪಿದ್ದರೆ ತೊಂದರೆಗಳು ಹೆಚ್ಚಾಗುತ್ತದೆ. . ಕೆಟ್ಟ ಶಕ್ತಿಗಳು ಮನೆಯೊಳಗೆ ಆರಾಮವಾಗಿ ಪ್ರವೇಶ ಮಾಡಿ ಮನೆಯ ನೆಮ್ಮದಿಯನ್ನು ಹಾಳು ಮಾಡುತ್ತದೆ.

ಇದನ್ನೂ ಓದಿ:ಹೆಚ್ಚು ಮಾತನಾಡುವ ರಾಶಿಗಳು ಯಾವುವು ಗೊತ್ತಾ? ನಿಮ್ಮ ರಾಶಿಯೂ ಈ ಲಿಸ್ಟ್​ನಲ್ಲಿದೆಯಾ ನೋಡಿ..

ಮನೆ ಖರೀದಿ ಮಾಡುವಾಗ ಹಲವಾರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಖರೀದಿ ಮಾಡುವುದು ಬಹಳ ಮುಖ್ಯವಾಗುತ್ತದೆ.
Published by:Sandhya M
First published: