• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Ugadi 2023: ಬೇರೆ ಬೇರೆ ಹೆಸರುಗಳಲ್ಲಿ ಯುಗಾದಿ ಆಚರಣೆ; ಎಲ್ಲೆಲ್ಲಿ, ಹೇಗಿರುತ್ತೆ ಈ ಹಬ್ಬದ ಸಂಭ್ರಮ?

Ugadi 2023: ಬೇರೆ ಬೇರೆ ಹೆಸರುಗಳಲ್ಲಿ ಯುಗಾದಿ ಆಚರಣೆ; ಎಲ್ಲೆಲ್ಲಿ, ಹೇಗಿರುತ್ತೆ ಈ ಹಬ್ಬದ ಸಂಭ್ರಮ?

ಯುಗಾದಿ ಆಚರಣೆ

ಯುಗಾದಿ ಆಚರಣೆ

Kannada New Year 2023 ವರ್ಷದ ಒಂದೇ ದಿನ, ಬೇರೆ ಬೇರೆ ಹಬ್ಬಗಳ ಹೆಸರಲ್ಲಿ ಭಾರತದಾದ್ಯಂತ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಾಗಾದರೆ ಯುಗಾದಿ ಹಬ್ಬವನ್ನು ಯಾವೆಲ್ಲಾ ರಾಜ್ಯಗಳಲ್ಲಿ ಯಾವ ಹೆಸರಿನಲ್ಲಿ ಮತ್ತು ಯಾವ ರೀತಿ ರೀತಿ ಸಂಭ್ರಮಿಸಲಾಗುತ್ತದೆ ನೋಡೋಣ.

  • Share this:

ಭಾರತ ದೇಶ ತಲತಲಾಂತರದಿಂದಲೂ ವಿಭಿನ್ನ ಸಂಸ್ಕೃತಿ, ಆಚರಣೆ, ವಿಭಿನ್ನ ಹಬ್ಬ ಹರಿದಿನಗಳನ್ನು (Indian Festivals) ಆಚರಿಸಿಕೊಳ್ಳುತ್ತಾ ತನ್ನ ಸಾಂಸ್ಕೃತಿಕ, ಧಾರ್ಮಿಕ ನೆಲೆಯನ್ನು (Culture) ಗಟ್ಟಿಗೊಳಿಸುತ್ತಲೇ ಬಂದಿದೆ. ಇಲ್ಲಿ ಊರಿಂದ ಊರಿಗೆ, ರಾಜ್ಯಗಳಿಂದ ರಾಜ್ಯಗಳಿಗೆ ಆಚರಣೆಗಳು (Festival Celebration), ಹಬ್ಬಗಳು ವಿಭಿನ್ನ ಮತ್ತು ವಿಶೇಷವಾಗಿರುತ್ತವೆ. ಕರ್ನಾಟಕದಲ್ಲಿ ಆಚರಿಸುವ ಯುಗಾದಿ ಹಬ್ಬ (Ugadi in Karnataka) ಬೇರೆ ರಾಜ್ಯಗಳಲ್ಲಿ ವಿಶಿಷ್ಟ ಮತ್ತು ವಿಭಿನ್ನ ರೀತಿಯಲ್ಲಿ ಆಚರಿಸಲ್ಪಡುತ್ತದೆ. ಅಂದರೆ ಹಬ್ಬ ಒಂದೇ ಆದರೂ ಆಚರಣೆಗಳೂ ಮಾತ್ರ ಬೇರೆ ಬೇರೆಯಾಗಿರುತ್ತವೆ. ಯುಗಾದಿ ಸಂಭ್ರಮ ಬಂದೇ ಬಿಟ್ಟಿದೆ. ಹಿಂದೂಗಳ ಹೊಸ ವರ್ಷ (Hindu New Year) ಎಂದೇ ಕರೆಯಲಾಗುವ ಈ ಹಬ್ಬ ದೇಶದಾದ್ಯಂತ ಬೇರೆ ಬೇರೆ ಹೆಸರುಗಳಿಂದ ಆಚರಣೆಯಾಗುತ್ತದೆ.


ವರ್ಷದ ಒಂದೇ ದಿನ, ಬೇರೆ ಬೇರೆ ಹಬ್ಬಗಳ ಹೆಸರಲ್ಲಿ ಭಾರತದಾದ್ಯಂತ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಾಗಾದರೆ ಯುಗಾದಿ ಹಬ್ಬವನ್ನು ಯಾವೆಲ್ಲಾ ರಾಜ್ಯಗಳಲ್ಲಿ ಯಾವ ಹೆಸರಿನಲ್ಲಿ ಮತ್ತು ಯಾವ ರೀತಿ ರೀತಿ ಸಂಭ್ರಮಿಸಲಾಗುತ್ತದೆ ನೋಡೋಣ.


* ಚೈತ್ರ ನವರಾತ್ರಿ: ದಕ್ಷಿಣ ಭಾರತದಲ್ಲಿ ಯುಗಾದಿಯನ್ನು ವ್ಯಾಪಕವಾಗಿ ಆಚರಿಸಿದರೆ, ಉತ್ತರ ಭಾರತದಲ್ಲಿ ಚೈತ್ರ ನವರಾತ್ರಿ ವ್ಯಾಪಕವಾಗಿದೆ. ಅದರಲ್ಲೂ ಉತ್ತರಪ್ರದೇಶದಲ್ಲಿ ಈ ಹಬ್ಬವನ್ನು ವ್ಯಾಪಕವಾಗಿ ಆಚರಿಸಲಾಗುತ್ತದೆ.


ಇದು ಭಾರತದಾದ್ಯಂತ ಆಚರಿಸಲಾಗುವ ಅತ್ಯಂತ ಮಂಗಳಕರವಾದ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ವಸಂತ ನವರಾತ್ರಿ, ಯುಗಾದಿ ಎಂದೂ ಕೂಡ ಕರೆಯಲಾಗುತ್ತದೆ.


ugadi 2023 kannada new year Unique Celebrations Across India stg mrq
ಸಾಂದರ್ಭಿಕ ಚಿತ್ರ


ಈ ವರ್ಷ ಮಾರ್ಚ್‌ 22ರಿಂದ ಮಾರ್ಚ್‌ 30ರವರೆಗೆ 9 ದಿನಗಳ ಕಾಲ ಚೈತ್ರ ನವರಾತ್ರಿ ಆಚರಣೆ ಇರುತ್ತದೆ. ಚೈತ್ರ ಮಾಸದ ನವರಾತ್ರಿಯ ಆಚರಣೆಯಲ್ಲಿ 9 ದಿನಗಳು ಉಪವಾಸವಿದ್ದು ದುರ್ಗೆಯ ಆರಾಧನೆ ಮಾಡಿದರೆ ಮನೋಭಿಲಾಷೆಗಳು ಈಡೇರುತ್ತದೆ ಎಂಬ ನಂಬಿಕೆ ಇದೆ.


ಆದ್ದರಿಂದಲೇ ಉತ್ತರ ಭಾರತದಲ್ಲಿ ಭಕ್ತರು ಉಪವಾಸವಿದ್ದು, ದುರ್ಗೆಗೆ ನಮಿಸುತ್ತಾರೆ. ದಕ್ಷಿಣ ಭಾರತದಲ್ಲಿರುವ ಅನೇಕ ಜನರೂ ಸಹ ಚೈತ್ರ ನವರಾತ್ರಿಯ ವೇಳೆ ಉಪವಾಸವಿದ್ದು ದುರ್ಗೆಯ ಆರಾಧನೆ ಮಾಡುತ್ತಾರೆ.


ಈ ಚೈತ್ರ ನವರಾತ್ರಿಯ ಹಬ್ಬವು ದುರ್ಗೆಯ ಒಂಬತ್ತು ಅವತಾರಗಳನ್ನು ಪೂಜಿಸಲು ಮೀಸಲಾಗಿರುತ್ತದೆ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದ ಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಸೇರಿದಂತೆ ಎಲ್ಲಾ 9 ಅವತಾರಗಳಿಗೂ ಪ್ರತಿ ದಿನವೂ ಒಂದೊಂದು ಪೂಜೆ ಇರುತ್ತದೆ.


ಇದನ್ನೂ ಓದಿ: Ugadi 2023 Prediction: ಈ ರಾಶಿಯವರಷ್ಟು ಕಷ್ಟ ಬೇರಾರಿಗೂ ಇರಲ್ವಂತೆ, ಹೊಸವರ್ಷ ಹರೋಹರ


* ಯುಗಾದಿ: ಚೈತ್ರ ಮಾಸದ ಮೊದಲ ದಿನದಂದು ಯುಗಾದಿಯನ್ನು ಆಚರಿಸುತ್ತಾರೆ ಮತ್ತು ಈ ವರ್ಷದ ಯುಗಾದಿ ಹಬ್ಬವನ್ನು ಮಾರ್ಚ್ 22 ಬುಧವಾರದಂದು ಆಚರಿಸಲಾಗುತ್ತದೆ.




ಯುಗಾದಿ ಅಥವಾ ಯುಗದ ಆದಿ ಎಂದು ಕರೆಯಲ್ಪಡುವ ಈ ಹಬ್ಬವನ್ನು ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಒಂದು ಹೊಸ ಪರ್ವದ ಆರಂಭ ಎಂದೂ ಈ ಹಬ್ಬವನ್ನು ಕರೆಯಲಾಗುತ್ತದೆ.


ಇದನ್ನೂ ಓದಿ: Ugadi 2023: ಯುಗಾದಿ ಹಬ್ಬದ ದಿನ ಎಣ್ಣೆ ಸ್ನಾನ ಮಾಡೋದು ಏಕೆ? ನಿಮಗೆ ಗೊತ್ತಿರದ ವಿಷಯ ಇಲ್ಲಿದೆ


ಬೇವು ಬೆಲ್ಲ ಹಂಚಿಕೊಂಡು, ಜೀವನವೆಂದರೆ ಕಹಿಸಿಹಿಗಳ ಮಿಶ್ರಣ ಎಂದು ಸಾರುವ ಮೂಲಕ ಹಬ್ಬ ಆಚರಿಸುತ್ತಾರೆ. ಹಾಗೆ ಮನೆಯಲ್ಲಿ ಹೋಳಿಗೆ, ಸಿಹಿ ತಿಂಡಿ ಕೆಲವೆಡೆ ಮಾಂಸಹಾರಗಳನ್ನು ಸಹ ಮಾಡಿ ಹಬ್ಬ ಆಚರಣೆ ಮಾಡಲಾಗುತ್ತದೆ.


* ಗುಡಿ ಪಾಡ್ವಾ: ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಯುಗಾದಿ, ಚೂತ್ರ ನವರಾತ್ರಿಯನ್ನು ಗುಡಿ ಪಾಡ್ವಾ ಎಂದು ಆಚರಿಸುತ್ತಾರೆ. ಇದು ಮರಾಠಿಗರಿಗೆ ಹೊಸ ವರ್ಷವಾಗಿದ್ದು, ಜನರು ಹೊಸ ಬಟ್ಟೆಗಳನ್ನು ಧರಿಸಿ, ವಿಶೇಷ ಭಕ್ಷ್ಯಗಳನ್ನು ಮಾಡುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.‘


ugadi 2023 kannada new year Unique Celebrations Across India stg mrq
ಸಾಂದರ್ಭಿಕ ಚಿತ್ರ

top videos


    * ಹೀಗೆ ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ, ಪಂಜಾಬ್‌ನಲ್ಲಿ ಬೈಸಾಖಿ, ಸಿಂಧಿಗಳಲ್ಲಿ ಚೈತಿ ಚಂದ್, ತಮಿಳುನಾಡಿನಲ್ಲಿ ಪುತಾಂಡು ಮತ್ತು ರಾಜಸ್ಥಾನದಲ್ಲಿ ಥಾಪನಾ ಎಂಬ ಹೆಸರಿನಿಂದ ಹಿಂದೂಗಳ ಹೊಸ ವರ್ಷ ಎಂದೇ ಕರೆಯಲಾಗುವ ಯುಗಾದಿ ಹಬ್ಬವನ್ನು ಸಂಭ್ರಮಿಸಲಾಗುತ್ತದೆ.

    First published: