Unity in Diversity: ವೈವಿಧ್ಯತೆಯಲ್ಲಿ ಏಕತೆ ಎಂಬ ತತ್ವಕ್ಕೆ ಬದ್ಧವಾಗಿರುವ ಭಾರತದಲ್ಲಿ ವಿವಿಧ ಹಬ್ಬಗಳನ್ನು (Indian Festivals) ಆಚರಿಸಲಾಗುತ್ತದೆ. ಪ್ರತಿಯೊಂದು ಸಂಸ್ಕೃತಿ (Hindu Culture) ಕೂಡ ದೇಶದಲ್ಲಿ ಬೀಡು ಬಿಟ್ಟಿರುವುದರಿಂದ ಪ್ರತಿಯೊಂದು ಸಂಸ್ಕೃತಿ ಸಮುದಾಯಕ್ಕೆ (Community) ಸೇರಿದ ಜನರು ಕೂಡ ಬೇರೆ ಬೇರೆ ಹಬ್ಬಗಳನ್ನು (Festivals Celebration) ಬೇರೆ ಬೇರೆ ಹೆಸರುಗಳಲ್ಲಿ ಆಚರಿಸುತ್ತಾರೆ. ಬೇರೆ ಬೇರೆ ಹಬ್ಬಗಳನ್ನು ಬೇರೆ ಬೇರೆ ಹೆಸರಿನಲ್ಲಿ ದೇಶದಲ್ಲಿ ಆಚರಿಸಲಾಗುತ್ತದೆ. ಯುಗಾದಿ ಅಥವಾ ಯುಗದ ಆದಿ ಎಂದು ಕರೆಯಲ್ಪಡುವ ಈ ಹಬ್ಬವನ್ನು ದಕ್ಷಿಣ ಭಾರತದಲ್ಲಿ (South India) ಅದರಲ್ಲೂ ಕರ್ನಾಟಕ (Karnataka), ತೆಲಂಗಾಣ (Telangana) ಮತ್ತು ಆಂಧ್ರ ಪ್ರದೇಶದಲ್ಲಿ (Andhra Pradesh) ಅದ್ದೂರಿಯಾಗಿ ಆಚರಿಸಲಾಗುತ್ತದೆ. ಒಂದು ಹೊಸ ಪರ್ವದ ಆರಂಭ ಎಂದೂ ಈ ಹಬ್ಬವನ್ನು ಕರೆಯಲಾಗುತ್ತದೆ.
ಗುಡಿ ಪಾಡ್ವಾ ಹಾಗೂ ಯುಗಾದಿ ಹಬ್ಬ ಬೇರೆ ಬೇರೆಯೇ?
ವಿವಿಧ ಸಂಸ್ಕೃತಿ ಹಾಗೂ ಸಮುದಾಯಗಳು ಆಚರಿಸುವ ಹಬ್ಬಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಅವುಗಳನ್ನು ಆಚರಿಸುವ ಸಂಪ್ರದಾಯ ವಿಧಿ ವಿಧಾನಗಳು ಕೌತುಕಮಯವಾಗಿರುತ್ತವೆ.
ಇವುಗಳು ಒಂದೇ ಹಬ್ಬವೇ ಅಥವಾ ಎರಡು ಬೇರೆ ಹಬ್ಬಗಳೇ? ಆಚರಣೆ ಏನು? ಮೊದಲಾದ ವಿಷಯಗಳನ್ನು ಅರಿತುಕೊಳ್ಳೋಣ.
ಗುಡಿ ಪಾಡ್ವಾ ಎಂದರೇನು?
ಗುಡಿ ಪಾಡ್ವಾ ಹಿಂದೂ ಕ್ಯಾಲೆಂಡರ್ ಪ್ರಕಾರ ಮರಾಠಿ ಹೊಸ ವರ್ಷವನ್ನು ಆಚರಿಸುವ ದಿನವಾಗಿದೆ. ಬ್ರಹ್ಮ ದೇವರು ವಿಶ್ವವನ್ನು ಸೃಷ್ಟಿಸಿದನೆಂದು ನಂಬಲಾಗಿದ್ದು ಗುಡಿ ಪಾಡ್ವಾದಂದೇ ಬ್ರಹ್ಮನು ದಿನಗಳು, ವಾರಗಳು, ತಿಂಗಳುಗಳು ಮತ್ತು ವರ್ಷಗಳನ್ನು ಪರಿಚಯಿಸಿದರು ಎಂದು ನಂಬಲಾಗಿದೆ.
ಹಾಗಾಗಿ ಈ ದಿನದಂದು ಜನರು ಗುಡಿ ಪಾಡ್ವಾದಂದು ಬ್ರಹ್ಮ ದೇವರನ್ನು ಪೂಜಿಸುತ್ತಾರೆ. ಗುಡಿ ಪಾಡ್ವಾವನ್ನು ಮುಖ್ಯವಾಗಿ ಪಶ್ಚಿಮ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಆಚರಿಸಲಾಗುತ್ತದೆ. ಈ ವರ್ಷ ಗುಡಿ ಪಾಡ್ವಾವನ್ನು ಮಾರ್ಚ್ 22, 2023 ರಂದು ಆಚರಿಸಲಾಗುತ್ತದೆ.
ಯುಗಾದಿ ಎಂದರೇನು?
ಉಗಾದಿ ಅಥವಾ ಯುಗಾದಿ ಎಂದೂ ಕರೆಯುತ್ತಾರೆ. ಪ್ರಾಥಮಿಕವಾಗಿ ದಕ್ಷಿಣದ ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಆಚರಿಸಲಾಗುವ ಹಿಂದೂ ಹಬ್ಬವಾಗಿದೆ.
ಈ ದಿನದಂದು ಜನರು ತಮ್ಮ ಮನೆಯಲ್ಲಿ ಹೂವಿನ ವಿನ್ಯಾಸಗಳನ್ನು ಮಾಡುತ್ತಾರೆ ಹಾಗೂ ಅದ್ಧೂರಿಯಾಗಿ ಆಹಾರ ತಯಾರಿಸಿ ಕುಟುಂಬದವರೆಲ್ಲಾ ಸೇರಿ ಹಬ್ಬವನ್ನು ಆಚರಿಸುವುದು ಹಬ್ಬದ ಭಾಗವಾಗಿದೆ.
ಗುಡಿ ಪಾಡ್ವಾ ಮತ್ತು ಯುಗಾದಿ ನಡುವಿನ ಸಂಬಂಧವೇನು?
ಗುಡಿ ಪಾಡ್ವಾ ಮರಾಠಿ ಹೊಸ ವರ್ಷದ ದಿನದ ಆಚರಣೆಯಾಗಿದೆ. ಇನ್ನು ಯುಗಾದಿ ಕೂಡ ಹೊಸ ವರ್ಷದ ಸಂಭ್ರಮದ ಸಂಕೇತವಾಗಿ ಆಚರಿಸಲಾಗುತ್ತದೆ. ಈ ಬಾರಿ ಮಾರ್ಚ್ 22 ರಂದು ಈ ಬಾರಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: Ugadi Prediction 2023: ಮೇಷ ರಾಶಿಗೆ ಯುಗಾದಿ ಬೆಲ್ಲ, ವೃಷಭಕ್ಕೆ ಬೇವು!
ಯುಗಾದಿಗಿಂತ ಗುಡಿ ಪಾಡ್ವೆ ಬೇರೆಯೇ?
ಯುಗಾದಿ ಹಾಗೂ ಗುಡಿಪಾಡ್ವಾ ಹಿಂದೂಗಳು ಅನುಸರಿಸುವ ಚಾಂದ್ರಮಾನ ಪಂಚಾಂಗದ ಪ್ರಕಾರ ಮೊದಲ ದಿನದಂದು ಆಚರಿಸಲಾಗುತ್ತದೆ ಹಾಗಾಗಿ ಇದು ಹೊಸತನದ ಸಂಕೇತವಾಗಿದೆ.
ಈ ಹಬ್ಬಕ್ಕಿರುವ ವ್ಯತ್ಯಾಸ ಎಂದರೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಗುಡಿ ಪಾಡ್ವಾವನ್ನು ಆಚರಿಸಲಾಗುತ್ತದೆ ಮತ್ತು ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಯುಗಾದಿಯನ್ನು ಆಚರಿಸಲಾಗುತ್ತದೆ.
ಗುಡಿ ಪಾಡ್ವಾ ಮತ್ತು ಯುಗಾದಿಯ ಆಚರಣೆಗಳು
'ಗುಡಿ' ಪದದ ಅರ್ಥ ಧ್ವಜ ಅಥವಾ ಬ್ರಹ್ಮನ ಲಾಂಛನ ಮತ್ತು 'ಪಾಡ್ವಾ' ಎಂದರೆ ಚಂದ್ರನ ಹಂತದ ಮೊದಲ ದಿನ. 14 ವರ್ಷಗಳ ವನವಾಸವನ್ನು ಮುಗಿಸಿ ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ನಂತರ ಗುಡಿ ಪಾಡ್ವಾ ಭಗವಾನ್ ರಾಮನ ಪಟ್ಟಾಭಿಷೇಕವನ್ನು ಸಂಕೇತಿಸುತ್ತದೆ.
ಗುಡಿ ಎಂಬುದು ರಾಕ್ಷಸ ರಾಜ ರಾವಣನ ಮೇಲೆ ಭಗವಾನ್ ರಾಮನ ವಿಜಯವನ್ನು ಸೂಚಿಸುತ್ತದೆ. ವಿಜಯದ ಸಂಕೇತವಾಗಿ ಗುಡಿಯನ್ನು ಎತ್ತರಕ್ಕೆ ಏರಿಸಲಾಗುತ್ತದೆ.
ಇದನ್ನೂ ಓದಿ: Ugadi Special: 110 ವರ್ಷಗಳ ನಂತರ ಅಪರೂಪದ ಘಟನೆ, 4 ರಾಶಿಯ ಜನರಿಗೆ ಐಶ್ವರ್ಯದ ಮಳೆ
ಜನರು ಬೇವಿನ ಸೊಪ್ಪು ಮತ್ತು ಮಾವಿನ ಹೂವುಗಳೊಂದಿಗೆ ಬಿದಿರಿನ ಕಡ್ಡಿಯ ಮೇಲೆ ಕೆಂಪು ಅಥವಾ ಹಳದಿ ಬಣ್ಣದ ರೇಷ್ಮೆ ಬಟ್ಟೆಯನ್ನು ಅನ್ನು ಕಟ್ಟಿ ಗುಡಿ ಧ್ವಜವನ್ನು ಮಾಡುತ್ತಾರೆ.
ಗುಡಿಯೊಂದಿಗೆ ಸಕ್ಕರೆ ಮಿಠಾಯಿ ಹಾರವನ್ನು ನೇತು ಹಾಕಲಾಗುತ್ತದೆ. ಈ ಆಚರಣೆಯು ಜೀವನದ ಸಿಹಿಕಹಿ ಅನುಭವಗಳನ್ನು ಸೂಚಿಸುತ್ತದೆ. ವಿಜಯವನ್ನು ಸಂಕೇತಿಸುವ ಬಿದಿರಿನ ಕೋಲಿನ ಮೇಲೆ ತಲೆಕೆಳಗಾಗಿ ಬೆಳ್ಳಿ, ತಾಮ್ರ ಅಥವಾ ಕಂಚಿನ ಕಲಶವನ್ನು ಇರಿಸಲಾಗುತ್ತದೆ. ಪೂಜೆ ಮುಗಿದ ಮೇಲೆ ಮನೆಯ ಹೊರಗೆ ಗುಡಿಯನ್ನು ಏರಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ