Udupi: ಕೃಷ್ಣನ ಪೂಜಾಧಿಕಾರ ಪಡೆದ ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ; ಅದ್ದೂರಿ ದರ್ಬಾರ್ ಮೂಲಕ ಪರ್ಯಾಯ ಸಂಪನ್ನ

ಇದೀಗ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು ತಮ್ಮ ಪರ್ಯಾಯವನ್ನು ಪೂರೈಸಿದ್ದಾರೆ. ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ರು ನಾಲ್ಕನೇ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಿದ್ದಾರೆ. 

ಕೃಷ್ಣನ ಪೂಜಾಧಿಕಾರ ಪಡೆದ  ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ

ಕೃಷ್ಣನ ಪೂಜಾಧಿಕಾರ ಪಡೆದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ

  • Share this:
ಉಡುಪಿಯಲ್ಲಿ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ (Paryaya utsav) ಸಂಪನ್ನಗೊಂಡಿದೆ. ಮಾಡಲಿದ್ದಾರೆ . ಕೋವಿಡ್ ನಿಯಮಾವಳಿಗಳ (Covid Protocol ) ಕಾರಣದಿಂದಾಗಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾಂಪ್ರದಾಯಿಕ ಪರ್ಯಾಯೋತ್ಸವ ಸಂಪನ್ನಗೊಂಡಿದೆ. ಉಡುಪಿಯ ಅಷ್ಟಮಠಗಳ ಪಾಲಿಗೆ ಅತಿದೊಡ್ಡ ಹಬ್ಬವೆಂದರೆ ಪರ್ಯಾಯೋತ್ಸವ. ಶ್ರೀ ಕೃಷ್ಣ ದೇವರ ಪೂಜೆಯ ಅಧಿಕಾರವನ್ನು ಒಂದು ಮಠದವರು ಇನ್ನೊಂದು ಮಠಕ್ಕೆ ಹಸ್ತಾಂತರಿಸುವ ಮಹೋತ್ಸವ. ಇದೀಗ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು ತಮ್ಮ ಪರ್ಯಾಯವನ್ನು ಪೂರೈಸಿದ್ದಾರೆ. ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ರು ನಾಲ್ಕನೇ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಿದ್ದಾರೆ. 

ಕೃಷ್ಣಾಪುರ ಪರ್ಯಾಯಕ್ಕೆ ಅಡ್ಡಿಯಾದ ನಿಯಮಾವಳಿ

ಹೌದು ರಾಜ್ಯಾದ್ಯಂತ ಮಾತ್ರವಲ್ಲ ಉಡುಪಿ ಜಿಲ್ಲೆಯಲ್ಲಿ ಕೂಡ ಕೂಡ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಉಡುಪಿಯ ಪರ್ಯಾಯ ಮಹೋತ್ಸವ ಅಂದ್ರೆ ಲಕ್ಷಾಂತರ ಜನ ಪ್ರವಾಸಿಗರು ಸ್ಥಳೀಯರು ಭಾಗವಹಿಸುವ ಸಂಪ್ರದಾಯ ಇದೆ. ಆದರೆ ಈ ಬಾರಿ ಸಾಂಪ್ರದಾಯಿಕ ರೀತಿಯಲ್ಲಿ ಮಾತ್ರ ಆಚರಣೆ ನಡೆಸುವಂತೆ ಜಿಲ್ಲಾಡಳಿತ ಹೇಳಿತ್ತು. ಹಾಗಾಗಿ ಪ್ರತಿವರ್ಷದಂತೆ ಈ ಬಾರಿಯ ಪರ್ಯಾಯ ಮಹೋತ್ಸವದಲ್ಲಿ ಯಾವುದೇ ಅದ್ದೂರಿತನ ಇರಲಿಲ್ಲ.ಕೆಲವೇ ಸಾವಿರ ಜನರು ನಿಂತು ಮೆರವಣಿಗೆ ನೋಡುವುದಕ್ಕೆ ಮಾತ್ರ ಅವಕಾಶ ಸಿಕ್ಕಿತ್ತು. ರಾತ್ರಿಯೆಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದಾಗಿದ್ದವು. ಪರ್ಯಾಯೋತ್ಸವ ಮೆರವಣಿಗೆಯಲ್ಲಿ ಟ್ಯಾಬ್ಲೋಗಳ ಸಂಖ್ಯೆಯನ್ನು ಇಳಿಸಲಾಗಿತ್ತು. ಕಲಾತಂಡಗಳ ಪ್ರದರ್ಶನಕ್ಕೆ ಅವಕಾಶ ಇರಲಿಲ್ಲ. ಹೇಳಿಕೇಳಿ ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ರು ಸಂಪ್ರದಾಯ ಪ್ರಿಯರು. ಸರಕಾರದ ಕಾನೂನು ಮತ್ತು ಶ್ರೀಪಾದರ ಇಚ್ಛೆಯಂತೆ, ಅತ್ಯಂತ ಸರಳವಾದ ಪರ್ಯಾಯೋತ್ಸವಕ್ಕೆ ಇದೇ ಮೊದಲ ಬಾರಿಗೆ ಉಡುಪಿ ಸಾಕ್ಷಿಯಾಯಿತು.

ಇದನ್ನು ಓದಿ: ದ್ವೈವಾರ್ಷಿಕ ಪರ್ಯಾಯಕ್ಕೆ Udupi ಸಜ್ಜು; ಕೃಷ್ಣಾಪುರ ಮಠದ ಪರ್ಯಾಯ ಇತಿಹಾಸ ಇದು

ಸಂಪ್ರದಾಯಕ್ಕೆ ಚ್ಯುತಿ ಇಲ್ಲ ಅಬ್ಬರಕ್ಕೆ ಆಸ್ಪದವಿಲ್ಲ

ಮುಂಜಾನೆ 3:30 ಕ್ಕೆ ದಂಡತೀರ್ಥದಲ್ಲಿ ಪುಣ್ಯಸ್ನಾನ ಕೈಗೊಂಡು ಬಂದ ಕೃಷ್ಣಾಪುರ ಶ್ರೀಗಳು ಜೋಡುಕಟ್ಟೆಗೆ ಆಗಮಿಸಿದರು. ಅಲ್ಲಿ ಹಾಜರಿದ್ದ ಅಷ್ಟ ಮಠಾಧೀಶರ ಜೊತೆಗೆ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಅಷ್ಟ ಮಠಾಧೀಶರ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಮಾನವ ಹೊರೆಯ ಪಲ್ಲಕ್ಕಿ ಗಳಿಗೆ ಬದಲಾಗಿ ಎಲ್ಲ ಮಠಾಧೀಶರನ್ನು ವಾಹನ ಪಲ್ಲಕ್ಕಿಯಲ್ಲಿ ಕರೆಯಲಾಯಿತು. ಕೃಷ್ಣಾಪುರ ಶ್ರೀಗಳು ಮುಂದೆ ಸಾಗಿದರೆ, ಅವರ ಹಿಂದೆ ಪಲಿಮಾರು ಪೇಜಾವರ ಕಾಣಿಯೂರು ಸೋದೆ ಶಿರೂರು ಶ್ರೀಗಳು ಪಲ್ಲಕ್ಕಿ ಏರಿ ಬಂದರು. ದೇಶದಲ್ಲಿ ಸಾವಿರಾರು ಮೆರವಣಿಗೆಗಳು ನಡೆಯಬಹುದು. ಸದರಿ ಏಕಕಾಲದಲ್ಲಿ ಇಷ್ಟೊಂದು ಯತಿಗಳನ್ನು ಒಂದೇ ಮೆರವಣಿಗೆಯಲ್ಲಿ ಕಾಣುವ ಅಪೂರ್ವ ಅವಕಾಶವೇ ಉಡುಪಿ ಪರ್ಯಾಯದ ವಿಶೇಷ.ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಸೇರಿದಂತೆ ಅನೇಕ ಗಣ್ಯರು ಭಾಗಿ

ಮೆರವಣಿಗೆ ಮುಗಿಯುತ್ತಿದ್ದಂತೆ ರಥಬೀದಿಗೆ ಆಗಮಿಸಿದ ಅಷ್ಟಮಠಾಧೀಶರು ಕೃಷ್ಣಮಠವನ್ನು ಪ್ರವೇಶಿಸಿದರು. ಶುಭಮುಹೂರ್ತದಲ್ಲಿ ಅದಮಾರು ಶ್ರೀಗಳು ಕೃಷ್ಣಾಪುರ ಸ್ವಾಮೀಜಿಗೆ ಅಧಿಕಾರ ಹಸ್ತಾಂತರಿಸಿದರು. ಅಕ್ಷಯ ಪಾತ್ರೆ ಮತ್ತು ಸಟ್ಟುಗವನ್ನು ಕೃಷ್ಣಾಪುರ ಶ್ರೀಗಳ ಕೈಗೆ ನೀಡುವ ಮೂಲಕ ಶ್ರೀಕೃಷ್ಣ ಪೂಜಾ ಅಧಿಕಾರ ವರ್ಗಾವಣೆಗೊಂಡಿತು‌ ಬಳಿಕ ವಿದ್ಯಾಸಾಗರ ತೀರ್ಥರು ಸರ್ವಜ್ಞ ಪೀಠಾರೋಹಣ ಮಾಡಿದರು. ಅರಳು ಗದ್ದುಗೆಯಲ್ಲಿ ಅಷ್ಠ ಮಠಾಧೀಶರಿಗೆ ಗೌರವ ಸಲ್ಲಿಕೆ ಆಯ್ತು. ನಂತರ ನಡೆದ ದರ್ಬಾರಿನಲ್ಲಿ ಎಲ್ಲಾ ಮಠಾಧೀಶರು ಆಶೀರ್ವಚನ ನೀಡಿದರು. ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಸೇರಿದಂತೆ ಅನೇಕ ಗಣ್ಯರು ಸಭೆಯಲ್ಲಿ ಭಾಗಿಯಾಗಿದ್ದರು.

ಇದನ್ನು ಓದಿ: ಸರಳವಾಗಿ ನಡೆದ ಪುರ ಪ್ರವೇಶ; ಪರ್ಯಾಯ ಮಹೋತ್ಸವಕ್ಕೂ ಕೋವಿಡ್​ ಕರಿನೆರಳು

ಹದಿನಾಲ್ಕು ವರ್ಷಗಳ ನಂತರ ವಿದ್ಯಾಸಾಗರತೀರ್ಥ ಕೃಷ್ಣನಿಗೆ ಮಹಾಪೂಜೆ ಸಲ್ಲಿಸಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ನಿರಂತರ ಸೇವೆ ಮುಂದುವರಿಯಲಿದೆ.ಕೋವಿಡ್ ಆತಂಕ ಕಳೆದು, ಸಮಾಜದಲ್ಲಿ ಮತ್ತೆ ನೆಮ್ಮದಿ ಮರಳಲಿ ಎಂದು ಎಲ್ಲಾ ಮಠಾಧೀಶರು ಈ ವೇಳೆ ಹಾರೈಸಿದರು
Published by:Seema R
First published: