Udupi: ಸರಳವಾಗಿ ನಡೆದ ಪುರ ಪ್ರವೇಶ; ಪರ್ಯಾಯ ಮಹೋತ್ಸವಕ್ಕೂ ಕೋವಿಡ್​ ಕರಿನೆರಳು

ನಾಲ್ಕು ಶತಮಾನಗಳ ಇತಿಹಾಸವಿರುವ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯ ಮಹೋತ್ಸವ  ಸಂಪ್ರದಾಯದಂತೆ ಸರಳವಾಗಿ ಆಚರಿಸಲಾಗುವುದು

ಪುರ ಪ್ರವೇಶ

ಪುರ ಪ್ರವೇಶ

  • Share this:
 ಈ ಬಾರಿಯ ಉಡುಪಿ  ಪರ್ಯಾಯೋತ್ಸವದ (Paryaya Utsava) ಸಂಭ್ರಮಕ್ಕೆ ಕೋವಿಡ್ (Covid) ಬ್ರೇಕ್‌ ಹಾಕಿದೆ. ಪುರ ಪ್ರವೇಶ ದೊಂದಿಗೆ ಆರಂಭವಾಗಿರುವ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ಸಾಂಪ್ರದಾಯಿಕ ಮತ್ತು ಸಾಂಕೇತಿಕ ಆಚರಣೆಗಳಿಗೆ ಸೀಮಿತವಾಗಿದೆ. ಸಾವಿರಾರು ಜನರು ಸೇರಿ ನಡೆಯುತ್ತಿದ್ದ ಪುರಪ್ರವೇಶಕ್ಕೆ, ಇಂದು ಕೇವಲ ನೂರೆಂಟು ಮಂದಿ ಸಾಕ್ಷಿಯಾದರು. ನಾಲ್ಕನೇ ಬಾರಿಗೆ ಪರ್ಯಾಯ ಪೀಠ ಏರಲಿರುವ ಅಷ್ಟಮಠಗಳಲ್ಲೇ ಹಿರಿಯ ಯತಿಗಳಾಗಿರುವ ವಿದ್ಯಾಸಾಗರ ತೀರ್ಥ ‌ಶ್ರೀಗಳ ಪುರ ಪ್ರವೇಶ ಹೇಗಿತ್ತು‌ ಈ ಬಾರಿಯ ಪರ್ಯಾಯ ಹೇಗಿರಲಿದೆ ಎಂಬುವುದರ ಬಗ್ಗೆ ಇಂದು ತಿಳಿಸಿದ್ದಾರೆ. 

ವಿಂಜೃಭಣೆಯಿಂದ ನಡೆಯುತ್ತಿದ್ದ ಪುರ ಪ್ರವೇಶ ಈ ಬಾರಿ ಸರಳ
ನಾಡಹಬ್ಬದ ರೀತಿಯಲ್ಲಿ ನಡೆಯುತ್ತಿದ್ದ ಉಡುಪಿ ಪರ್ಯಾಯೋತ್ಸವ, ಈ ಬಾರಿ ಕೋವಿಡ್ ರೂಲ್ಸ್ ಗಳಿಂದಾಗಿ ಕಳೆಗುಂದಿದೆ. ಕೇವಲ ಸಾಂಪ್ರದಾಯಿಕ ಆಚರಣೆಗಳಿಗೆ ಸೀಮಿತವಾಗಿ, ಮಹೋತ್ಸವ ಆಚರಿಸಲು ಸ್ವಾಮೀಜಿ ನಿರ್ಧರಿಸಿದ್ದು, ಇಂದು ಅತ್ಯಂತ ಸರಳವಾಗಿ ಪುರಪ್ರವೇಶ ನಡೆಯಿತು. ದೇಶದ ನಾನಾ ಪುಣ್ಯಕ್ಷೇತ್ರಗಳ ಸಂದರ್ಶನ ಪೂರೈಸಿ ಬಂದಿರುವ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಯವರನ್ನು, ನಗರದ ಜೋಡುಕಟ್ಟೆಯಲ್ಲಿ ಬರಮಾಡಿಕೊಳ್ಳಲಾಯಿತು. ಜನಪ್ರತಿನಿಧಿಗಳು,  ಜಿಲ್ಲಾಧಿಕಾರಿಗಳು ಹಿರಿಯ ಯತಿಯನ್ನು ಗೌರವಿಸಿದರು. ಬಳಿಕ ಜೋಡುಕಟ್ಟೆಯಿಂದ ಕೃಷ್ಣ ಮಠದವರಿಗೆ ಶ್ರೀಪಾದರ ಪುರಪ್ರವೇಶ ಮೆರವಣಿಗೆ ನಡೆಯಿತು.

ಇದನ್ನು ಓದಿ: ಕೋವಿಡ್ ಕರಿನೆರಳು: ಐತಿಹಾಸಿಕ ಬಾದಾಮಿ ಬನಶಂಕರಿ ಜಾತ್ರೆ ರದ್ದು

ಮರೆಯದ ಹಬ್ಬದ ವಾತಾವರಣ

ಈ ಹಿಂದೆಲ್ಲಾ ಪುರಪ್ರವೇಶ ಅಂದರೆ ಅಲ್ಲಿ ಹಬ್ಬದ ವಾತಾವರಣ ಇರುತ್ತಿತ್ತು. ಸಾವಿರಾರು ಜನ ಸೇರುವ ಈ ಮಹೋತ್ಸವದ ವೇಳೆ, ನೂರಾರು ಕಲಾತಂಡಗಳು ಟ್ಯಾಬ್ಲೋಗಳು, ಬಾವಿ ಪರ್ಯಾಯ ಮಠಾಧೀಶರನ್ನು ಸ್ವಾಗತಿಸಲು ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೇವಲ ಸಾಂಪ್ರದಾಯಿಕ ಆಚರಣೆ ನಡೆದಿದೆ. ಮಠದ ಸಾಂಪ್ರದಾಯಿಕ ವಾಲಗ,ಚಂಡೆ, ಕೊಂಬು ಕಹಳೆಗಳ ನಾದ ಹೊರತುಪಡಿಸಿದರೆ ಯಾವುದೇ ಅಬ್ಬರ ಇರಲಿಲ್ಲ.ಸಂಪ್ರದಾಯಿಕ ಆಚರಣೆಗೆ ಸೀಮಿತ
ಮೆರವಣಿಗೆಯಲ್ಲಿ ಬಂದ ವಿದ್ಯಾಸಾಗರತೀರ್ಥರು ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಕೈಗೊಂಡರು. ಬಳಿಕ ರಥಬೀದಿಯಲ್ಲಿರುವ ಅನಂತೇಶ್ವರ ಚಂದ್ರಮೌಳೀಶ್ವರ ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಕೃಷ್ಣಾಪುರ ಮಠವನ್ನು ಪ್ರವೇಶಿಸಿದರು. ಜನವರಿ 18ರಂದು ನಡೆಯಬೇಕಾಗಿರುವ ಪರ್ಯಾಯ ಮಹೋತ್ಸವದ ವೇಳೆಯಲ್ಲೂ ನೈಟ್ ಕರ್ಪ್ಯೂ ಸಹಿತ, ಕೋವಿಡ್ ನಿಯಮಾವಳಿಗಳು ಜಾರಿಯಲ್ಲಿರುತ್ತವೆ. ಅಂದು ಮುಂಜಾನೆ 2 ಗಂಟೆಗೆ ಮೆರವಣಿಗೆ ಆರಂಭವಾಗಬೇಕಾಗಿದೆ. ಸೀಮಿತ ಭಕ್ತರೊಂದಿಗೆ ಪರ್ಯಾಯ ಮೆರವಣಿಗೆ ನಡೆಸಲು ಸರ್ಕಾರದ ಅನುಮತಿ ಕೋರಲಾಗಿದೆ. ರಾತ್ರಿ ಯಾವುದೇ ಕಾರ್ಯಕ್ರಮ ಆಯೋಜನೆಗೆ ಅವಕಾಶವಿಲ್ಲ ಎಂದು ಈಗಾಗಲೇ ಜಿಲ್ಲಾಡಳಿತ ಹೇಳಿದೆ. ಸ್ವತಃ ಪರ್ಯಾಯ ಮಠಾಧೀಶರಾದ ಕೃಷ್ಣಾಪುರ ಶ್ರೀಗಳೇ ಬಯಸಿದಂತೆ, ಕೇವಲ ಸಾಂಪ್ರದಾಯಿಕ ಆಚರಣೆಗಳ ಈ ಬಾರಿಯ ಪರ್ಯಾಯ ಸೀಮಿತವಾಗಲಿದೆ.

ಇದನ್ನು ಓದಿ: ಈ ದಿನಾಂಕದಲ್ಲಿ ಹುಟ್ಟಿದವರು ಸಿಕ್ಕಾಪಟ್ಟೆ ಮಾತಿನಮಲ್ಲರಂತೆ; ಯಾವುದು ಆ ಸಂಖ್ಯೆ?

ಎರಡು ವರ್ಷಕ್ಕೆ ಒಮ್ಮೆ ಬರಲಿರುವ ಪರ್ಯಾಯ ಮಹೋತ್ಸವ

ವಾರಾಂತ್ಯದಲ್ಲಿ ಬರುವ ಎಲ್ಲಾ ಸಾರ್ವಜನಿಕ ಆಚರಣೆಗಳನ್ನು ರದ್ದುಗೊಳಿಸಲಾಗಿದೆ, ಪ್ರತಿದಿನ ನಿಗದಿತ ಜನರ ಉಪಸ್ಥಿತಿಯಲ್ಲಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ನಾಲ್ಕು ಶತಮಾನಗಳ ಇತಿಹಾಸವಿರುವ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯ ಮಹೋತ್ಸವ  ಸಂಪ್ರದಾಯದಂತೆ ಸರಳವಾಗಿ ಆಚರಿಸಲಾಗುವುದು ಎಂದು ಪರ್ಯಾಯ ಪೂಜಾ ಕೈಂಕರ್ಯವನ್ನು ಕೈಗೊಳ್ಳಲಿರುವ ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥರು ತಿಳಿಸಿದ್ದಾರೆಜನವರಿ 17- 18ರಂದು ನಡೆಯಲಿರುವ ಶ್ರೀ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ನಡೆಯಲಿದ್ದು, ರಾತ್ರಿ 9 ಗಂಟೆವರೆಗೆ ಸಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಇರಲಿದೆ. ಅಷ್ಟ ಮಠದ ಸ್ವಾಮೀಜಿಗಳು, ಸೀಮಿತ ಕಲಾತಂಡಗಳ ಮೆರವಣಿಗೆ, ಪರ್ಯಾಯ ಮಹೋತ್ಸವದಲ್ಲಿ ಧಾರ್ಮಿಕತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದೇ ವೇಳೇ ಸೀಮಿತ ಸಂಖ್ಯೆಯಲ್ಲಿ ಪರ್ಯಾಯ ದರ್ಬಾರ್ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ಭಾವಿ ಪರ್ಯಾಯ ಕೃಷ್ಣಾಪುರ ಮಠ ಇದಕ್ಕೆ ಒಪ್ಪಿದೆ. ಅಪಾರ ಸಂಖ್ಯೆಯಲ್ಲಿ ಜನ ಭಾಗವಹಿಸಬಾರದೆಂದು ವಿನಂತಿ ಮಾಡುತ್ತೇವೆ. ಕೃಷ್ಣಮಠದಲ್ಲಿ ದೇವರ ದರ್ಶನಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು  ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್  ತಿಳಿಸಿದ್ದಾರೆ
Published by:Seema R
First published: