ದ್ವೈವಾರ್ಷಿಕ ಪರ್ಯಾಯಕ್ಕೆ Udupi ಸಜ್ಜು; ಕೃಷ್ಣಾಪುರ ಮಠದ ಪರ್ಯಾಯ ಇತಿಹಾಸ ಇದು

ದ್ವಾರಕೆಯ ರುಕ್ಮಿಣೀಕರಾರ್ಚಿತ ಕಡೆಗೋಲುಕೃಷ್ಣನ ಪ್ರತಿಮೆಯನ್ನು ಉಡುಪಿಯಲ್ಲಿ ಪ್ರತಿಷ್ಟಾಪಿಸಿ ಪೂಜೆಗಾಗಿ ಎಂಟು ಯತಿಗಳನ್ನು ನೇಮಿಸಿದರು

ಪರ್ಯಾಯ ಮಹೋತ್ಸವದ ಹಳೆಯ ಚಿತ್ರ

ಪರ್ಯಾಯ ಮಹೋತ್ಸವದ ಹಳೆಯ ಚಿತ್ರ

  • Share this:
ಅಷ್ಟಮಠಗಳಲ್ಲಿ ಒಂದಾಗಿರುವ ಕೃಷ್ಣಾಪುರ ಮಠದ (KrishnaPura Mutt) ಪರ್ಯಾಯ (Paryaya) ಮಹೋತ್ಸವಕ್ಕೆ ಕೃಷ್ಣನೂರು ಸಿಂಗಾರಗೊಂಡಿದೆ. ಪರ್ಯಾಯ ಉತ್ಸವದ ಮೇಲೆ ಕೋವಿಡ್‌–19 ಕರಿನೆರಳು ಆವರಿಸಿದ್ದರೂ ಸಂಪ್ರದಾಯಬದ್ಧ ಹಾಗೂ ಸರಳ ಪರ್ಯಾಯಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಜ.18ರಂದು ಮಧ್ಯರಾತ್ರಿ ಪರ್ಯಾಯ ಮೆರವಣಿಗೆ ಸೇರಿದಂತೆ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಅಂದು ನಸುಕಿನ 2.15ಕ್ಕೆ ಕಾಪುವಿನ ದಂಡ ತೀರ್ಥದಲ್ಲಿ ಪವಿತ್ರ ಸ್ನಾನ ಮಾಡಲಿರುವ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು 2.30ಕ್ಕೆ ಉಡುಪಿಯ ಜೋಡುಕಟ್ಟೆ ಪ್ರವೇಶಿಸಲಿದ್ದಾರೆ. 

6.45ಕ್ಕೆ ರಾಜಾಂಗಣದಲ್ಲಿ ಅಷ್ಟಮಠಾಧೀಶರ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಪರ್ಯಾಯ ದರ್ಬಾರ್ ನಡೆದು, ಮಹಾಪೂಜೆ, ಪಲ್ಲಪೂಜೆ, ಅನ್ನ ಸಂತರ್ಪಣೆ, ಸಭಾ ಕಾರ್ಯಕ್ರಮ ರಾತ್ರಿ ಪೂಜೆ, ಬ್ರಹ್ಮರಥೋತ್ಸವದ ಮೂಲಕ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಳ್ಳಲಿವೆ.

ಅಷ್ಟಮಠಗಳ ದ್ವೈವಾರ್ಷಿಕ ಪರ್ಯಾಯ

ಮಧ್ವಾಚಾರ್ಯರು ಆರಂಭಿಸಿದ ಅಷ್ಟಮಠಗಳ ದ್ವೈವಾರ್ಷಿಕ ಪರ್ಯಾಯ -
ದ್ವೈತ ಮತ ಸ್ಥಾಪಕರಾದ ಮಧ್ವಾಚಾರ್ಯರು. ದ್ವಾರಕೆಯ ರುಕ್ಮಿಣೀಕರಾರ್ಚಿತ ಕಡೆಗೋಲುಕೃಷ್ಣನ ಪ್ರತಿಮೆಯನ್ನು ಉಡುಪಿಯಲ್ಲಿ ಪ್ರತಿಷ್ಟಾಪಿಸಿ ಪೂಜೆಗಾಗಿ ಎಂಟು ಯತಿಗಳನ್ನು ನೇಮಿಸಿದರು. ಉತ್ತರ ಬದರಿಕಾಶ್ರಮದಲ್ಲಿ ವೇದವ್ಯಾಸ ದೇವರು ಮಧ್ವಾಚಾರ್ಯರಿಗೆ ನೀಡಿದ ದಿವ್ಯ ಪ್ರತಿಮೆಗಳನ್ನು ಮಧ್ವಚಾರ್ಯರು ತಮ್ಮ ಎಲ್ಲ ಶಿಷ್ಯರಿಗೂ ನೀಡಿ ಅನುಗ್ರಹಿಸಿದರು. ಈ ಪ್ರತಿಮೆಗಳು ಅಷ್ಟಮಠಗಳ ಪಟ್ಟದ ದೇವರಾಗಿ ಪೂಜೆಗೊಳ್ಳುತ್ತಿದೆ.

ಅಷ್ಟಮಠಗಳ ಮೂಲ ಯತಿಗಳು

ಮಧ್ವಾಚಾರ್ಯರ ಪ್ರತ್ಯಕ್ಷ ಶಿಷ್ಯರೇ ಉಡುಪಿಯ ಅಷ್ಟಮಠಗಳ ಮೂಲ ಯತಿಗಳು ಹೃಷಿಕೇಶ ತೀರ್ಥರು

ಪಲಿಮಾರುಮಠ  ಸೀತಾಲಕ್ಷಣ ಸಹಿತ ಶ್ರೀರಾಮಜನಾರ್ದನ ತೀರ್ಥರು–

ಕೃಷ್ಣಾಪುರ ಮಠ– ದ್ವಿಭುಜ ಕಾಲೀಯ ಮರ್ದನ, ನರಸಿಂಹವಾಮನ ತೀರ್ಥರು

ಶಿರೂರು ಮಠ– ರುಕ್ಮಿಣಿ, ಸತ್ಯಭಾಮಾ ಸಹಿತ ವಿಠಲರಾಮತೀರ್ಥರು

ಕಾಣಿಯೂರು ಮಠ–ಯೋಗಾನರಸಿಂಹವಿಷ್ಣುತೀರ್ಥರು

ಸೋದೆ ವಾದಿರಾಜ ಮಠ– ಭೂವರಾಹ ದೇವರುಉಪೇಂದ್ರ ತೀರ್ಥರು

ಪುತ್ತಿಗೆ ಮಠ–ವಿಠಲ ದೇವರುಶ್ರೀನರಸಿಂಹತೀರ್ಥರು

ಅದಮಾರು ಮಠ–ಚತುರ್ಭುಜ ಕಾಲೀಯ ಮರ್ದನಅಧೋಕ್ಷಜ ತೀರ್ಥರು

ಪೇಜಾವರ ಮಠ–ವಿಠಲಕೃಷ್ಣಾಪುರ ಮಠದ

ಗುರುಪರಂಪರೆ
 ಕೃಷ್ಣಾಪುರ ಮಠದ ಇತಿಹಾಸ
ದ್ವಿಭುಜ ಕಾಳೀಯ ಮರ್ಧನ ಕೃಷ್ಣದೇವರ ಸಹಿತ ನರಸಿಂಹ ದೇವರು ಕೃಷ್ಣಾಪುರ ಮಠದ ಪಟ್ಟದ ದೇವರ ಮೂರ್ತಿಗಳು.

ಇದನ್ನು ಓದಿ: ಸರಳವಾಗಿ ನಡೆದ ಪುರ ಪ್ರವೇಶ; ಪರ್ಯಾಯ ಮಹೋತ್ಸವಕ್ಕೂ ಕೋವಿಡ್​ ಕರಿನೆರಳು

ಕೃಷ್ಣಾಪುರ ಮಠಕ್ಕೆ ಅದರದ್ದೇ ಆದ ಇತಿಹಾಸವಿದೆ.  ಅಷ್ಟಮಠಗಳಲ್ಲೇ ಅತ್ಯಂತ ತಪಸ್ವಿಗಳು ಹಾಗೂ ಹಿರಿಯ 35 ಯತಿಗಳನ್ನ ಕಂಡ ವೈಶಿಷ್ಟ್ಯ ಕೃಷ್ಣಾಪುರ ಮಠಕ್ಕಿದೆ.

ಹೌದು ಜನಾರ್ಧನ ತೀರ್ಥರು, ವತ್ಸಾಂಕ ತೀರ್ಥರು, ವಾಗೀಶತೀರ್ಥರು, ಲೋಕೇಶ ತೀರ್ಥರು,  ಲೋಕನಾಥ ತೀರ್ಥರು, ಲೋಕಪೂಜ್ಯ ತೀರ್ಥರು, ವಿದ್ಯಾಧಿರಾಜ, ವಿಶ್ವಾಧಿರಾಜ, ವಿದ್ಯಾಧೀಶ, ವಿಶ್ವೇಶತೀರ್ಥ, ವಿಶ್ವವಂಧ್ಯ, ವಿಶ್ವರಾಜತೀರ್ಥ, ಧರಣೀತೀರ್ಥ, ಶ್ರೀಧರಾದರ, ಪ್ರಜ್ಞಾ ಮೂರ್ತಿ, ತಪೋ ಮೂರ್ತಿ,  ಸುರೇಶ್ವರ ತೀರ್ಥ, ಜಗನಾಥ ತೀರ್ಥ, ಸುರೇಶತೀರ್ಥ, ವಿಶ್ವಪುಂಗವತೀರ್ಥ, ವಿಶ್ವವಲ್ಲಭತೀರ್ಥರು, ವಿಶ್ವಭೂಷಣತೀರ್ಥರು, ಯಾದವೇಂದ್ರ ತೀರ್ಥರು, ಪ್ರಜ್ಞಾನಮೂರ್ತಿ ತೀರ್ಥರು, ವಿದ್ಯಾಧಿರಾಜ ತೀರ್ಥರು, ವಿದ್ಯಾಮೂರ್ತಿತೀರ್ಥರು, ವಿದ್ಯಾವಲ್ಲಭ ತೀರ್ಥರು, ವಿದ್ಯೆಂದ್ರ ತೀರ್ಥರು, ವಿದ್ಯಾನಿಧಿ ತೀರ್ಥರು, ವಿದ್ಯಾಸಮುದ್ರ ತೀರ್ಥರು, ವಿದ್ಯಾಪತಿ ತೀರ್ಥರು, ವಿದ್ಯಾಧೀಶ ತೀರ್ಥರು, ವಿದ್ಯಾಪೂರ್ಣ ತೀರ್ಥರು, ವಿದ್ಯಾರತ್ನ ತೀರ್ಥ ಸ್ವಾಮೀಜಿ‌ ಬಳಿಕ‌ ಹಿರಿಯ ಯತಿ ವಿದ್ಯಾಸಾಗರ ತೀರ್ಥರು ಇದೀಗ ಪರ್ಯಾಯ ಪೀಠ ಏರಲಿದ್ದಾರೆ.

ಇದನ್ನು ಓದಿ: ಕೃಷ್ಣಾಪುರ ಪರ್ಯಾಯಕ್ಕೆ Udupi ಸಜ್ಜು: ಅಷ್ಟಮಠಗಳಲ್ಲೇ ಹಿರಿಯ ಯತಿಗಳ ಪರ್ಯಾಯ

 ಕೃಷ್ಣಾಪುರ ಮಠದ 35 ಯತಿಗಳ ಇತಿಹಾಸ
ಜನಾರ್ದನ ತೀರ್ಥರು-  ಕೃಷ್ಣಾಪುರ ಮಠದ ಮೂಲಯತಿಗಳಾಗಿದ್ದು, ನರಸಿಂಹದೇವರ ಅನನ್ಯ ಉಪಾಸಕರಾಗಿದ್ದ ಶ್ರೀಗಳಿಗೆ ಮಧ್ವಾಚಾರ್ಯರು ನರಸಿಂಹದೇವರ ಪ್ರತಿಮೆ ಅನುಗ್ರಹಿಸಿದರು ಎಂಬ ಐತಿಹ್ಯವಿದೆ. ಹಾಗಾಗಿ, ಕೃಷ್ಣಾಪುರಮಠದಲ್ಲಿ ಪಟ್ಟದದೇವರಿಗೆ ಸಲ್ಲುವ ಪ್ರತಿ ಪೂಜೆ, ನೈವೇದ್ಯ, ಉಪಚಾರಾದಿಗಳು ನರಸಿಂಹದೇವರಿಗೂ ಸಲ್ಲುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಜನಾರ್ದನ ತೀರ್ಥರು 1329ರಲ್ಲಿ ಕಾಶೀಕ್ಷೇತ್ರದಲ್ಲಿ ಹರಿಪಾದ ಸೇರಿದರು.
Published by:Seema R
First published: