Eye Twitching: ಬಲಗಣ್ಣು ಅದುರಿದರೆ ಕೆಡುಕಾ, ಅದೃಷ್ಟವಾ?; ಏನು ಹೇಳುತ್ತೆ ಶಕುನ ಶಾಸ್ತ್ರ

ನಿಮಿತ ಶಾಸ್ತ್ರ ಅಥವಾ ಶಕುನಗಳ ಅಧ್ಯಯನ ಎಂಬ ವೈಜ್ಞಾನಿಕ ಪ್ರಕಾರವು ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಭಾಗವಾಗಿದೆ. ಇದರಲ್ಲಿ ಕಣ್ಣಿನ ಸೆಳೆತದ ಬಗ್ಗೆ ಕೂಡ ತಿಳಿಸಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಜ್ಯೋತಿಷ್ಯದಲ್ಲಿ (Astrology) ಶಕುನಗಳನ್ನು ಭವಿಷ್ಯವನ್ನು(Future) ಮುನ್ಸೂಚಿಸುವ ಅಥವಾ ಬದಲಾವಣೆಯನ್ನು ಸೂಚಿಸುವ ಚಿಹ್ನೆಗಳು ಎಂದು ಪರಿಗಣಿಸಲಾಗುತ್ತದೆ. ನಿಮಿತ ಶಾಸ್ತ್ರ ಅಥವಾ ಶಕುನಗಳ (Omen Study) ಅಧ್ಯಯನ ಎಂಬ ವೈಜ್ಞಾನಿಕ ಪ್ರಕಾರವು ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಭಾಗವಾಗಿದೆ. ಋಷಿಮುನಿಗಳು ಮತ್ತು ಜ್ಯೋತಿಷ್ಯ ತಜ್ಞರು ಶಕುನಗಳನ್ನು ತಿಳಿಯುವ  ಕಾರಣಗಳಿಂದ ಇವುಗಳನ್ನು ವಿಶ್ಲೇಷಿಸಲು ಮತ್ತು ವಿವರಿಸಲು ಬಳಕೆ ಮಾಡುತ್ತಿದ್ದರು. ಇದರ ಅನುಸಾರ ಕೆಲವು ಶಕುನಗಳು ಭವಿಷ್ಯದ ಮುನ್ಸೂಚನೆ ತಿಳಿಸುತ್ತವೆ ಎಂದು ಪರಿಗಣಿಸಲಾಗಿದೆ. ಅದರಲ್ಲಿ ಕಣ್ಣು ಅದುರುವಿಕೆ ಕೂಡ ಒಂದು. ಈ ಕಣ್ಣು ಅದುರುವಿಕೆಗೂ ಮುಂದೆ ಆಗಲಿರುವ ಘಟನೆಗಳಿಗೂ ತಾಳವನ್ನು ಈ ಶಕುನ ಶಾಸ್ತ್ರದಲ್ಲಿ ತಿಳಿಸಲಾಗಿದೆ.

    ಕಣ್ಣುಗಳ ಸೆಳೆತವನ್ನು ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಶಕುನವೆಂದು ಪರಿಗಣಿಸಲಾಗಿದೆ. . ಎಡ ಮತ್ತು ಬಲ ಕಣ್ಣುಗಳ ಸೆಳೆತವು ವಿಭಿನ್ನ ಅರ್ಥಗಳನ್ನು ಹೊಂದಿದೆ ಎಂದು ನಂಬಲಾಗಿದೆ.

    ಮಹಿಳೆಯರಿಗೆ ಯಾವ ಕಣ್ಣಿನ ಸೆಳೆತ ಅದೃಷ್ಟ
    ಮಹಿಳೆಯರಿಗೆ, ಎಡಗಣ್ಣಿನ ಸೆಳೆತವು ಅದೃಷ್ಟವನ್ನು ತರುತ್ತದೆ. ಆದರೆ, ಬಲಗಣ್ಣಿನ ಸೆಳೆತವನ್ನು ಅಷ್ಟು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.

    ಪುರುಷರ ಕಣ್ಣು ಸೆಳೆತ
    ಪುರುಷರ ವಿಷಯದಲ್ಲಿ ಇದು ಕೇವಲ ವಿರುದ್ಧವಾಗಿರುತ್ತದೆ. ಎಡಗಣ್ಣು ಸೆಳೆತದ ಬಲ ಎಂದರೆ ಅವನು ಶೀಘ್ರದಲ್ಲೇ ಪ್ರೀತಿಪಾತ್ರರನ್ನು ಅಥವಾ ಅವನ ಸಂಗಾತಿಯನ್ನು ಭೇಟಿಯಾಗುತ್ತಾನೆ. ಅವರ ಬಹುಕಾಲದ ಕನಸು ಶೀಘ್ರದಲ್ಲೇ ನನಸಾಗಲಿದೆ ಎಂದು ಸಹ ಅರ್ಥೈಸಬಹುದು.

    ಎಡಗಣ್ಣಿನ ಸೆಳೆತ ಒಳಿತಲ್ಲವಾ
    ಮಹಿಳೆಯರಾಗಲಿ, ಪುರುಷರಾಗಲಿ ಮನುಷ್ಯನಿಗೆ ಎಡಗಣ್ಣಿನ ಸೆಳೆತವು ಕೆಟ್ಟ ಅದೃಷ್ಟ ಅಥವಾ ದುರದೃಷ್ಟವನ್ನು ಅರ್ಥೈಸಬಲ್ಲದು. ಇದರಿಂದ ತೊಂದರೆಯಲ್ಲಿ ಸಿಲುಕಬಹುದು ಎನ್ನಲಾಗಿದೆ. ಎಡಗಣ್ಣು ಸೆಳೆತವನ್ನು ಪ್ರಾರಂಭಿಸಿದರೆ ಜಾಗರೂಕರಾಗಿರಲು ಮನುಷ್ಯನಿಗೆ ಆಗಾಗ್ಗೆ ಸಲಹೆ ನೀಡಲಾಗುತ್ತದೆ

    ಇದನ್ನು ಓದಿ: ಈ ರಾಶಿಯವರೇ ಬೆಸ್ಟ್​ ಜೋಡಿಗಳಂತೆ!

    ಏನಿದರ ವೈಜ್ಞಾನಿಕ ಕಾರಣ?
    ಕಣ್ಣು ರೆಪ್ಪೆಯ ಈ ಸೆಳೆತ ವೈಜ್ಞಾನಿಕವಾಗಿ ಗಂಭೀರ ಸಮಸ್ಯೆ ಅಲ್ಲ ಎಂದು ಪರಿಗಣಿಸಿರದ ಹಿನ್ನಲೆ ಅದನ್ನು ಅಷ್ಟು ಆಳವಾಗಿ ಅಧ್ಯಯನ ನಡೆಸಿಲ್ಲ. ಆದರೆ, ಕೆಲವು ಸಮಸ್ಯೆಗಳಿಂದ ಕೆಲವು ಬಾರಿ ಈ ರೀತಿ ಸೆಳೆತ ಉಂಟಾಗುತ್ತದೆ. ಈ ಸೆಳೆತ ಹೆಚ್ಚಾದಲ್ಲಿ ವೈದ್ಯರ ಸಂಪರ್ಕಿಸುವುದು ಒಳಿತು.

    ಕಣ್ಣಿನ ರೆಪ್ಪೆಯ ಒತ್ತಡ, ಆಯಾಸ, ನಿದ್ರೆಯ ಕೊರತೆ, ದೈಹಿಕ ಪರಿಶ್ರಮ, ಔಷಧಿಗಳ ಅಡ್ಡ ಪರಿಣಾಮಗಳು, ಒತ್ತಡ, ಆಲ್ಕೋಹಾಲ್, ತಂಬಾಕು ಅಥವಾ ಕೆಫೀನ್ ಬಳಕೆಯಿಂದ ಈ ರೀತಿ ಸಮಸ್ಯೆ ಆಗುತ್ತದೆ ಎನ್ನಲಾಗಿದೆ.

    ಇದನ್ನು ಓದಿ: ನಿಮ್ಮ ಹೆಸರು 'A' ಅಕ್ಷರದಿಂದ ಪ್ರಾರಂಭವಾಗುತ್ತದಾ?

    ಸೆಳೆತಗಳು ದೀರ್ಘಕಾಲದವರೆಗೆ ಕಣ್ಣು ಸೆಳೆತವನ್ನು ವೈದ್ಯಕೀಯ ಪರಿಭಾಷೆಯಲ್ಲಿ "ಬೆನಿಗ್ನ್ ಎಸೆನ್ಷಿಯಲ್ ಬ್ಲೆಫರೊಸ್ಪಾಸ್ಮ್" (Benign Essential Blepharospasm) ಎನ್ನಲಾಗುತ್ತದೆ, ಇದು ದೀರ್ಘಕಾಲದ ಮತ್ತು ನಿಯಂತ್ರಿಸಲಾಗದ ಕಣ್ಣು ಮಿಟುಕಿಸುವಿಕೆ ಎನ್ನಲಾಗಿದೆ.

    ಕೆಫೀನ್ ಕಣ್ಣುರೆಪ್ಪೆಗಳ ಸೆಳೆತವನ್ನು ಉಂಟುಮಾಡಬಹುದು. ನಿಮ್ಮ ಕಾಫಿ, ಟೀ ಅಥವಾ ಸೋಡಾ ಸೇವನೆಯನ್ನು ಮಿತಿಗೊಳಿಸುವುದು. ದೇಹ ಮುಖ್ಯವಾಗಿ ಕಣ್ಣುಗಳಿಗೆ ವಿಶ್ರಾಂತಿ ಕೊಡುವುದರ ಮೂಲಕ ಕಣ್ಣುರೆಪ್ಪೆಗಳ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜನರು ಹೆಚ್ಚು ದಣಿದಿರುವಾಗ ಕಣ್ಣುರೆಪ್ಪೆಗಳ ಸೆಳೆತಗಳು ಹೆಚ್ಚಾಗಿ ಸಂಭವಿಸುತ್ತವೆ. ಈ ಹಿನ್ನಲೆಯಲ್ಲಿ ಅಗತ್ಯವಾದ ನಿದ್ದೆಯನ್ನು ಮಾಡಬೇಕು.

    (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್​ 18 ಕನ್ನಡ ಖಚಿತಪಡಿಸುವುದಿಲ್ಲ)
    Published by:Seema R
    First published: