• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • SKY: ಆಕಾಶದಲ್ಲಿಂದು ಐದು ಗ್ರಹಗಳ ಸಂಯೋಗ, ಇಂದು ಮಿಸ್‌ ಮಾಡ್ಕೊಂಡ್ರೆ ಇನ್ನೂ 17 ವರ್ಷ ಕಾಯಬೇಕು!

SKY: ಆಕಾಶದಲ್ಲಿಂದು ಐದು ಗ್ರಹಗಳ ಸಂಯೋಗ, ಇಂದು ಮಿಸ್‌ ಮಾಡ್ಕೊಂಡ್ರೆ ಇನ್ನೂ 17 ವರ್ಷ ಕಾಯಬೇಕು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Viral News: ಆಕಾಶದಲ್ಲಿ ನಡೆಯುವ ಈ ಕೌತುಕದ ವಿದ್ಯಾಮಾನ ಸೂರ್ಯಾಸ್ತದ ನಂತರ ಏರ್ಪಡಲಿದ್ದು, ಐದು ಗ್ರಹಗಳ ಅಪರೂಪದ ಜೋಡಣೆಯನ್ನು ನಾವು ಕಣ್ತುಂಬಿಕೊಳ್ಳಬಹುದು.

  • Share this:

ನಮ್ಮ ಖಗೋಳ ಹಲವು ಕೌತುಕಗಳ ತಾಣ ಎನ್ನುವುದರಲ್ಲಿ ಆಶ್ಚರ್ಯವೇ ಇಲ್ಲ . ಗ್ರಹಕಾಯಗಳು, ನಕ್ಷತ್ರಗಳು (stars), ಚಂದ್ರ, ಸೂರ್ಯ (Son) ಹೀಗೆ ಹಲವು ಅಚ್ಚರಿಯ ಸಂಗತಿಗಳು ಇಲ್ಲಿವೆ. ವಿಶಿಷ್ಟ ರೀತಿಯಲ್ಲಿ ನಕ್ಷತ್ರಗಳು ಒಮ್ಮೊಮ್ಮೆ ಹೊಳೆಯುತ್ತಿದ್ದರೆ, ಇನ್ನೂ ವಿಶೇಷ ಸಂದರ್ಭದಲ್ಲಿ ಕೆಲ ಗ್ರಹಗಳು ಒಟ್ಟಿಗೆ ಬಂದು ಕಾಣಿಸಿಕೊಳ್ಳುವ ಸುಂದರ ದೃಶ್ಯ ಆಗಸದಲ್ಲಿ ಸೃಷ್ಟಿಯಾಗುತ್ತವೆ.


ಆಕಾಶದಲ್ಲಿ ಐದು ಗ್ರಹಗಳ ಸಂಯೋ:


ಚಂದ್ರ ಮತ್ತು ಶುಕ್ರವು ಅಪರೂಪದ ಸಂಯೋಗದಲ್ಲಿ ಒಂದು ತಲೆಕೆಳಗಾದ ಚಂದ್ರಬಿಂದುವಿನಂತೆ ಕಾಣಿಸಿಕೊಂಡ ಕೆಲವು ದಿನಗಳ ನಂತರ ಆಗಸದಲ್ಲಿ ಮತ್ತೊಂದು ದೃಶ್ಯ ಸೃಷ್ಟಿಯಾಗುತ್ತಿದೆ. ಹೌದು, ಆಗಸವು ಇಂದು (ಮಾರ್ಚ್ 28 ರಂದು ) ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಲಿದೆ. ಅದೇನಪ್ಪಾ ಎಂದರೆ ಇಂದು ಐದು ಗ್ರಹಗಳ ಅಪರೂಪದ ಸಂಯೋಗ ಏರ್ಪಡಲಿದ್ದು, ಬುಧ, ಗುರು, ಶುಕ್ರ, ಯುರೇನಸ್ ಮತ್ತು ಮಂಗಳ ಒಂದೆಡೆ ಸಮರೇಖೆಯಲ್ಲಿ ಸೇರಿಕೊಳ್ಳುತ್ತಿವೆ. ಹೀಗಾಗಿ, ಭೂಮಿಯಿಂದ ಆಕಾಶದಲ್ಲಿ ಐದು ಗ್ರಹಗಳನ್ನು ಏಕಕಾಲದಲ್ಲಿ ಒಟ್ಟಿಗೆ ನೋಡುವ ಒಂದು ಅನನ್ಯ ಅವಕಾಶ ಸಿಗಲಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.


ಮತ್ತೊಂದು ವಿಶೇಷತೆ ಎಂದರೆ ಈ ಐದು ಗ್ರಹಗಳ ಜೊತೆ ಶನಿ ಕೂಡ ಇಂದು ಮಧ್ಯಾಹ್ನ ಗೋಚರವಾಗಲಿದೆ. ಈ ಐದು ಗ್ರಹಗಳು ಸೂರ್ಯನನ್ನು ಒಂದೇ ಸಮತಲದಲ್ಲಿ ಸುತ್ತುವುದರಿಂದ, ಅವೆಲ್ಲವೂ ಭೂಮಿಯ ಮೇಲಿನ ಆಕಾಶದಲ್ಲಿ ಒಂದರ ನಂತರ ಒಂದರಂತೆ ಸಾಲಾಗಿ ಕಾಣುತ್ತವೆ. ಆದರೂ ಅವೆಲ್ಲವೂ ತಮ್ಮದೇ ಆದ ವಿಶಿಷ್ಟ ಕಕ್ಷೆಗಳಲ್ಲಿ ತಿರುಗುತ್ತಾ ಶತಕೋಟಿ ಕಿಲೋಮೀಟರ್ಗಳಷ್ಟು ದೂರದಲ್ಲಿರುತ್ತವೆ.


ಇದನ್ನೂ ಓದಿ: Daily Horoscope: ಈ ರಾಶಿಯವರಿಗಿಂದು ಮಕ್ಕಳಿಂದ ಸಂಕಷ್ಟ! ಎಷ್ಟು ತಾಳ್ಮೆ ಇದ್ದರೂ ಸಾಲದು


ಐದು ಗ್ರಹಗಳನ್ನು ಎಲ್ಲಿ ನೋಡಬೇಕು?:


ಆಕಾಶದಲ್ಲಿ ನಡೆಯುವ ಈ ಕೌತುಕದ ವಿದ್ಯಾಮಾನ ಸೂರ್ಯಾಸ್ತದ ನಂತರ ಏರ್ಪಡಲಿದ್ದು, ಐದು ಗ್ರಹಗಳ ಅಪರೂಪದ ಜೋಡಣೆಯನ್ನು ನಾವು ಕಣ್ತುಂಬಿಕೊಳ್ಳಬಹುದು. ಗ್ರಹಗಳು ಗುರುಗ್ರಹದಿಂದ ಪ್ರಾರಂಭವಾಗುವ ಹಾರಿಜಾನ್‌ನಿಂದ ಸಾಲಾಗಿ ನಿಲ್ಲುತ್ತವೆ, ಇದು ಸೂರ್ಯಾಸ್ತದ ನಂತರ 7:30ಕ್ಕೆ ಸಂಜೆ ಆಕಾಶದಲ್ಲಿ ಕಂಡುಬರುತ್ತದೆ.


ಇದರ ನಂತರ ಶುಕ್ರ, ಯುರೇನಸ್, ಚಂದ್ರ ಮತ್ತು ಮಂಗಳಗಳು ಮೇಲಕ್ಕೆ ಹೋಗುತ್ತವೆ. ಹೀಗಾಗಿ ಮಿಸ್‌ ಮಾಡದೇ ಸಂಜೆ ಸೂರ್ಯಾಸ್ತದ ನಂತರ ಈ ದೃಶ್ಯ ನೋಡಲು ಮರೆಯದಿರಿ. ಖಗೋಳಶಾಸ್ತ್ರಜ್ಞರು ಹೇಳಿರುವ ಪ್ರಕಾರ, ಗ್ರಹಗಳು ಹಾರಿಜಾನ್ ಲೈನ್‌ನಿಂದ ರಾತ್ರಿಯ ಆಕಾಶದ ಅರ್ಧದವರೆಗೆ ವಿಸ್ತರಿಸುತ್ತವೆ. ಹೀಗಾಗಿ ಸೂರ್ಯಾಸ್ತದ ನಂತರ ಅರ್ಧ ಗಂಟೆಯ ನಂತರ ಬುಧ ಮತ್ತು ಗುರುವು ತ್ವರಿತವಾಗಿ ದಿಗಂತದ ಕೆಳಗೆ ಮುಳುಗುತ್ತದೆ. ಮೋಡವಿಲ್ಲದೇ ಆಕಾಶ ಸ್ಪಷ್ಟವಾಗಿದ್ದರೆ ಐದು ಗ್ರಹಗಳನ್ನು ಒಟ್ಟಿಗೆ ಭೂಮಿಯ ಮೇಲೆ ಎಲ್ಲಿಂದಲಾದರೂ ನೋಡಬಹುದು.




ಐದು ಗ್ರಹಗಳನ್ನು ನೋಡುವುದು ಹೇಗೆ?:


ಈ ಐದು ಗ್ರಹಗಳನ್ನು ನೋಡಲು ದುರ್ಬಿನ್‌ ಅಗತ್ಯವಿರುವುದಿಲ್ಲ. ಗುರು, ಶುಕ್ರ, ಮತ್ತು ಮಂಗಳ ಗ್ರಹಗಳನ್ನು ಅವುಗಳ ಹೆಚ್ಚಿನ ಹೊಳಪಿನಿಂದ ಬರಿಗಣ್ಣಿನಿಂದ ನೋಡಬಹುದು.


ಮತ್ತು ಬುಧ ಮತ್ತು ಯುರೇನಸ್‌ಗಳು ಮಸುಕಾಗಿರುವುದರಿಂದ ಅವುಗಳನ್ನು ಗುರುತಿಸಲು ಕಷ್ಟವಾಗುತ್ತದೆ. ಹೀಗಾಗಿ ಸಂಜೆ ಆಕಾಶದಲ್ಲಿ ಈ ಎರಡು ಗ್ರಹಗಳನ್ನು ನೋಡಲು ನೀವು ಬೈನಾಕ್ಯುಲರ್ ಅಥವಾ ದೂರದರ್ಶಕ ಬಳಸಿಕೊಂಡು ಈ ಗ್ರಹಗಳನ್ನು ನೋಡಬಹುದು.


ಇಂದು ಮಿಸ್‌ ಮಾಡಿಕೊಂಡರೆ ಇನ್ನೂ 17 ವರ್ಷ ಕಾಯಬೇಕು:


ಹೀಗೆ ಐದು ಗ್ರಹಗಳು ಒಟ್ಟಿಗೆ ಬರುವ ದೃಶ್ಯವನ್ನು ಇಂದು ನೀವು ಮಿಸ್‌ ಮಾಡಿಕೊಂಡರೆ ನೀವು ಅಪರೂಪದ ಈ ದೃಶ್ಯವನ್ನು 17 ವರ್ಷಗಳ ನಂತರ 2040 ರಲ್ಲಿ ಮಾತ್ರ ನೀವು ನೋಡಬಹುದು.


"ಬೆಳಗಿನ ನಕ್ಷತ್ರ" ಶುಕ್ರವು ಎಲ್ಲಕ್ಕಿಂತ ಹೆಚ್ಚು ಪ್ರಕಾಶಮಾನವಾಗಿರುತ್ತದೆ. ಹೀಗಾಗಿ ನೀವು ಗಮನಾರ್ಹ ಬೆಳಕಿನ ಮಾಲಿನ್ಯವನ್ನು ಹೊಂದಿರುವ ಪ್ರದೇಶದಲ್ಲಿದ್ದರೂ ಸಹ, ನೀವು ಶುಕ್ರ ಗ್ರಹವನ್ನು ನೋಡಲು ಸಾಧ್ಯವಾಗುತ್ತದೆ. ಮಂಗಳ ಗ್ರಹವೂ ಗೋಚರಿಸುತ್ತದೆ ಮತ್ತು ಅದು ಚಂದ್ರನ ಹತ್ತಿರ ಇರುತ್ತದೆ.

top videos
    First published: