• Home
  • »
  • News
  • »
  • astrology
  • »
  • Tirupati Laddu History: 300ಕ್ಕೂ ಹೆಚ್ಚು ವರ್ಷಗಳ ಇತಿಹಾಸ, ಅತ್ಯಂತ ಶ್ರೀಮಂತ ದೇವರ ಪ್ರಸಾದದ ಹಿಂದಿನ ಇಂಟರೆಸ್ಟಿಂಗ್ ಕಹಾನಿ

Tirupati Laddu History: 300ಕ್ಕೂ ಹೆಚ್ಚು ವರ್ಷಗಳ ಇತಿಹಾಸ, ಅತ್ಯಂತ ಶ್ರೀಮಂತ ದೇವರ ಪ್ರಸಾದದ ಹಿಂದಿನ ಇಂಟರೆಸ್ಟಿಂಗ್ ಕಹಾನಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Tirupati Timmappa: ತಿರುಪತಿಯಲ್ಲಿರುವ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ನೀಡಲಾಗುವ ಸಹಿ ಪ್ರಸಾದ ಸುಮಾರು 307 ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ತಿರುಪತಿ ಲಡ್ಡು ಆರಂಭವಾಗಿದ್ದು ಹೇಗೆ? ಇದನ್ನು ಕೇವಲ ಟಿಟಿಡಿಯಲ್ಲಿ ಮಾತ್ರ ಏಕೆ ತಯಾರಿಸಲಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಂದೆ ಓದಿ ...
  • Share this:

ತಿರುಪತಿ (tirupati) ಎಂದರೆ ಮೊದಲು ನೆನಪಾಗುವುದು ಶ್ರೀನಿವಾಸ, ನಂತರ ನೆನಪಾಗುವುದು ಅದರ ಲಡ್ಡು. ಶ್ರೀ ವಾರಿ ಲಡ್ಡು (Laddu) ಎಂದೂ ಕರೆಯಲ್ಪಡುವ ಈ ಲಡ್ಡು ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಆಂಧ್ರಪ್ರದೇಶದ(Andra)  ತಿರುಪತಿಯಲ್ಲಿರುವ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ನೀಡಲಾಗುವ ಸಹಿ ಪ್ರಸಾದ ಸುಮಾರು 307 ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ತಿರುಪತಿ ಲಡ್ಡು ಆರಂಭವಾಗಿದ್ದು ಹೇಗೆ? ಇದನ್ನು ಕೇವಲ ಟಿಟಿಡಿಯಲ್ಲಿ ಮಾತ್ರ ಏಕೆ ತಯಾರಿಸಲಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.


300 ವರ್ಷಗಳ ಇತಿಹಾಸ ಇದಕ್ಕಿದೆ


ತಿರುಪತಿಯ ವೆಂಕಟೇಶ್ವರನ ದೇವಸ್ಥಾನದಲ್ಲಿ ಪ್ರಸಾದವಾಗಿ ವಿತರಿಸಲಾಗುವ ತಿರುಪತಿ ಲಡ್ಡುವನ್ನು ಮೊದಲ ಬಾರಿಗೆ  ಆಗಸ್ಟ್ 2, 1715 ರಂದು ಪರಿಚಯಿಸಲಾಯಿತಂತೆ. ಕಡಲೆಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ, ಏಲಕ್ಕಿ ಮತ್ತು ಡ್ರೈ ಫ್ರೂಟ್ಸ್​ ತಯಾರಿಸಲಾದ ಲಡ್ಡು ಪ್ರಪಂಚದ ಶ್ರೀಮಂತ ಹಿಂದೂ ದೇವಾಲಯದ ಭಾಗವಾಗಿದೆ. ಅಲ್ಲದೇ ಹೆಚ್ಚು ಬೇಡಿಕೆ ಇರುವ ಪ್ರಸಾದ ಸಹ ಎಂದು ಹೇಳಬಹುದು.


ಸಾಮಾನ್ಯವಾಗಿ ಈ ಲಡ್ಡುಗೆ 50ರೂಪಾಯಿಗಳು, ದೊಡ್ಡ ಗಾತ್ರದ ಲಡ್ಡುಗೆ 200 ರೂ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ತಿಮ್ಮಪ್ಪನ ಸನ್ನಿಧಿಗೆ ಹೋದಾಗ, ದರ್ಶನದ ಬಳಿಕ ಲಡ್ಡು ಪಡೆದರೆ ಸಾರ್ಥಕ ಭಾವ ಮೂಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ತಿಮ್ಮಪ್ಪನ ದರ್ಶನದ ಬಳಿಕ ಪ್ರಸಾದ ರೂಪದಲ್ಲಿ ಸಿಗುವ ಲಡ್ಡುಗೆ ಭಕ್ತಾಧಿಗಳು ಕ್ಯೂ ನಿಲ್ಲುತ್ತಾರೆ. ಈ ಲಡ್ಡು ವಿತರಿಸಲು ಸುಮಾರು 29ಕ್ಕೂ ಹೆಚ್ಚು ಕೌಂಟರ್​ಗಳಿದ್ದು ಪ್ರತಿದಿನವೂ ಭಕ್ತರಿಂದ ತುಂಬಿತುಳುಕುತ್ತಲೇ ಇರುತ್ತದೆ ಎನ್ನಬಹುದು.


ಇದನ್ನೂ ಓದಿ: ಈ ರಾಶಿಯವರಿಗೆ ಕಪ್ಪು ದಾರವೇ ಕಂಟಕ, ಸಮಸ್ಯೆ ಕಡಿಮೆ ಆಗೋ ಬದ್ಲು ಜಾಸ್ತಿ ಆಗುತ್ತೆ


ಲಡ್ಡು ಪಡೆಯದೇ ಯಾರೂ ಕೂಡ ಮರಳಿ ಬರುವುದಿಲ್ಲ, ಲಡ್ಡು ಇಲ್ಲದಿದ್ದರೆ ದರ್ಶನ ಅಪೂರ್ಣವಾದಂತೆ ಎನ್ನುವ ಭಾವ ಭಕ್ತಾಧಿಗಳಲ್ಲಿದೆ. ಇನ್ನು ಟೋಕನ್ ಅನುಸಾರವಾಗಿ ಇಲ್ಲಿ ಲಡ್ಡು ಸಹ ನೀಡಲಾಗುತ್ತದೆ. ತಿಮ್ಮಪ್ಪನ ದರ್ಶನ ಪಡೆದರೆ ಒಂದು ಲಡ್ಡು ಫ್ರೀ ಆಗಿ ಸಿಗುತ್ತದೆ. ಹಾಗೆಯೇ ಒಂದು ಟೋಕನ್ ಅಡಿಯಲ್ಲಿ ನೀವು ಹಣ ನೀಡಿ 6 ಲಡ್ಡು ಪಡೆಯಬಹುದು. ಈ ಲಡ್ಡು ಪರಿಮಳ ಹಾಗೂ ರುಚಿ ಜನರನ್ನು ಇದರತ್ತ ಸೆಳೆಯುತ್ತದೆ.


ದಿನಕ್ಕೆ ಲಕ್ಷಗಟ್ಟಲೆ ಲಡ್ಡು ತಯಾರಿಸಲಾಗುತ್ತದೆ


ಕೆಲ ಅಂದಾಜಿನ ಪ್ರಕಾರ ತಿರುಪತಿಯಲ್ಲಿ ದಿನಕ್ಕೆ ಸುಮಾರು ಒಂದೂವರೆಯಿಂದ 2 ಲಕ್ಷದ ವರೆಗೆ ಲಡ್ಡು ತಯಾರಿಸಲಾಗುತ್ತದೆ. ದರ್ಶನಕ್ಕೆ ಬಂದ ಪ್ರತಿಯೊಬ್ಬರು 3 ರಿಂದ 4 ಲಡ್ಡು ತೆಗೆದುಕೊಂಡು ಹೋಗುತ್ತಾರೆ. ಇನ್ನು ವಿಶೇಷ ಕಾರ್ಯಕ್ರಮಗಳ ಸಮಯದಲ್ಲಿ ಲಡ್ಡು ಬೇಡಿಕೆ ಹೆಚ್ಚಿರುತ್ತದೆ. ಬ್ರಹ್ಮೋತ್ಸವದ ಸಮಯದಲ್ಲಿ ಕೋಟಿ ಕೋಟಿ ಲಡ್ಡು ಮಾರಾಟವಾಗುತ್ತದೆ ಎಂದು ಆಡಳಿತ ಮಂಡಳಿ ಹೇಳಿದೆ. ಇನ್ನು 2014ರಲ್ಲಿ ಈ ತಿರುಪತಿ ಲಡ್ಡಿಗೆ GI ಟ್ಯಾಗ್​ ಸಹ ಸಿಕ್ಕಿದೆ.


ತಿರುಪತಿಯಲ್ಲಿ ಕೊಡುವ ಲಡ್ಡು ಒಂದೇ ರೀತಿಯ ಆಕಾರದಲ್ಲಿ ಇರಲ್ಲ. ತಿಮ್ಮಪ್ಪನ ಸನ್ನಿಧಾನದಲ್ಲಿ ತಯಾರಾಗುವ ಲಡ್ಡುಗಳಲ್ಲಿ ಮುರು ವಿಧಗಳಿದೆ. ಮೊದಲನೆಯದು ಚಿಕ್ಕ ಲಡ್ಡು, ಇದು  175ರಿಂದ 200 ಗ್ರಾಂ ಇರುತ್ತದೆ. ಇದಕ್ಕೆ 50 ರೂಪಾಯಿ. ಇಲ್ಲಿಗೆ ಭೇಟಿ ನೀಡುವ ಬಹುತೇಕ ಭಕ್ತರು ಈ ಲಡ್ಡು ಪಡೆದುಕೊಳ್ಳುತ್ತಾರೆ. ಇನ್ನು ಎರಡನೇಯ ಲಡ್ಡು , ಇದನ್ನು ಭಕ್ತರು ಕಲ್ಯಾಣ ಲಡ್ಡು ಎಂದು ಕರೆಯುತ್ತಾರೆ. ಈ ಲಡ್ಡು ಅರ್ಧ ಕೆ.ಜಿ. ತೂಕ ಇರುತ್ತದೆ. ಆದರೆ, ಈ ಲಡ್ಡುವನ್ನು ವಿಶೇಷ ದಿನಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ, ಇನ್ನು ಇದಕ್ಕೆ 100 ರೂಪಾಯಿ.


ಇದನ್ನೂ ಓದಿ: ಜಾತಕದಲ್ಲಿ ಈ ಒಂದು ಯೋಗ ಇದ್ರೆ ನಿಮ್ಮನ್ನು ತಡೆಯೋದು ಅಸಾಧ್ಯ


ಇನ್ನು ಮೂರನೇಯ ಹಾಗೂ  ಕೊನೆಯ ಲಡ್ಡು, ಇದರ ಹೆಸರು ಬೃಹತ್ ಲಡ್ಡು. ಹೆಸರು ಮಾತ್ರ ಅಲ್ಲ ಅದರ ತೂಕ ಸಹ ಬೃಹತ್ ಆಗಿದ್ದು ಸುಮಾರು 32 ಕೆಜಿ ಇರುತ್ತದೆ. ಇದನ್ನು ಸಹ ಬಹಳ ಪ್ರಮುಖವಾದ ದಿನಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ. ವರ್ಷಕ್ಕೆ ಸುಮಾರು 2 ರಿಂದ 3 ಬಾರಿ ಮಾತ್ರ ತಯಾರಿಸಲಾಗುತ್ತದೆ.

Published by:Sandhya M
First published: