ತಿರುಮಲ ತಿರುಪತಿ ದೇವಸ್ಥಾನ (Tirumala Tirupati Temple) ಇಂದು ಆನ್ಲೈನ್ (online) ಕೋಟಾದ ವಿಶೇಷ ಪ್ರವೇಶ ದರ್ಶನ (Special Darshan Ticket) ಟಿಕೆಟ್ಗಳನ್ನು (Ticket) ಬಿಡುಗಡೆ ಮಾಡಿದ್ದು, ಈ ಟಿಕೆಟ್ ದರ ಪ್ರತಿ ಭಕ್ತರಿಗೆ 300 ರೂಪಾಯಿಗಳು ಎಂದು ದೇವಸ್ಥಾನ ತಿಳಿಸಿದೆ. ಇನ್ನು ಇಂದು ಬೆಳಗ್ಗೆ 10 ಗಂಟೆಯಿಂದ ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸುವಂತೆ ಭಕ್ತರಿಗೆ (devotees) ಆಡಳಿತ ಮಂಡಳಿ ತಿಳಿಸಿದೆ. ಜನವರಿ (January) 12 ರಿಂದ ಫೆಬ್ರವರಿ (Febuary) 31 ರವರೆಗೆ ಈ ಟಿಕೆಟ್ ನೀಡಲಾಗುತ್ತದೆ. ಈ ಆನ್ಲೈನ್ ಪ್ರವೇಶ ಟಿಕೆಟ್ ಅನ್ನು ಇಂದು ಬೆಳಗ್ಗೆ 10 ಗಂಟೆಗೆ ಟಿಟಿಡಿ (TTD) ಬಿಡುಗಡೆ ಮಾಡಿದೆ.
ವಿಶೇಷ ಟಿಕೆಟ್ ಇಂದು ಬಿಡುಗಡೆ
ಬಾಲಾಲಯ ಕಾರ್ಯಕ್ರಮ ಇರುವುದರಿಂದ ಫೆ.22ರಿಂದ ಫೆ.28ರವರೆಗೆ ಸರ್ವ ದರ್ಶನಕ್ಕೆ ಅವಕಾಶವಿಲ್ಲ ಎಂದು ಟಿಟಿಡಿ ತಿಳಿಸಿದೆ. ಇದೇ ವೇಳೆ ವೈಕುಂಠ ಏಕಾದಶಿಯನ್ನು ಇಲ್ಲಿ 10 ದಿನಗಳ ಕಾಲ ಆಚರಿಸಲಾಗುತ್ತಿದೆ, ಈ ಬಾರಿ ಜನವರಿ 2 ರಿಂದ 11 ರವರೆಗೆ ಆಚರಿಸಲಾಗುತ್ತಿದ್ದು, ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನ ನಡೆಯುತ್ತಿದೆ.
ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪ್ರತಿದಿನ 50,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಟಿಟಿಡಿ ಪ್ರಕಾರ, ಡಿಸೆಂಬರ್ 23, 2022 ರ ವೇಳೆಗೆ ಒಟ್ಟು 62,055 ಭಕ್ತಾಧಿಗಳು ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ: ತುಳಸಿಯನ್ನು ಈ ರೀತಿ ಪೂಜೆ ಮಾಡಿದ್ರೆ ಕಷ್ಟ ಅನ್ನೋದು ಬರೋದೇ ಇಲ್ಲ
ತಿರುಮಲ ದೇವಸ್ಥಾನದಲ್ಲಿ ಡಿಸೆಂಬರ್ 23, 2022 ರಂದು ಸಂಜೆ ರಂಗನಾಯಕುಲ ಮಂಟಪದಲ್ಲಿ ವಾರ್ಷಿಕ ಅಧ್ಯಯನೋತ್ಸವಗಳು ಪ್ರಾರಂಭವಾಗಿದ್ದು, 25 ದಿನಗಳ ಈ ವಾರ್ಷಿಕ ಉತ್ಸವವು ವೈಕುಂಠ ಏಕಾದಶಿಯ 11 ದಿನಗಳ ಮೊದಲು ಪ್ರಾರಂಭವಾಗುತ್ತದೆ ಮತ್ತು ಜನವರಿ 15 ರಂದು ಮುಗಿಯುತ್ತದೆ.
ಈ ಉತ್ಸವದ ವಿಶಿಷ್ಟತೆ ಏನೆಂದರೆ 12 ಆಳ್ವಾರರು ರಚಿಸಿದ 4000 ಸ್ತೋತ್ರಗಳನ್ನು ನಾಲಯೈರ ದಿವ್ಯಪ್ರಬಂಧ ಪಾಸುರಂಗಳನ್ನು ಪ್ರತಿದಿನ ಪಠಿಸಲಾಗುತ್ತದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
The online quota of Rs.300 for January 12 to 31and for February will be released by TTD on January 9 at 10am.
The devotees are requested to make note of this and book the tickets online.
— Tirumala Tirupati Devasthanams (@TTDevasthanams) January 8, 2023
ತಿರುಪತಿ ವೆಂಕಟೇಶ ಎಂದರೆ ಬೇಡಿದ್ದು ನೀಡುವ ದೇವರು ಎಂದು ಹೆಸರು ಪಡೆದಿದೆ. 7 ಬೆಟ್ಟಗಳ ಮೇಲಿರುವ ಈ ದೇವರನ್ನು ನಂಬಿ ದಿನಕ್ಕೆ ಸಾವಿರಾರು ಜನ ಹೋಗುತ್ತಾರೆ. ಇಷ್ಟಾರ್ಥ ಈಡೇರಿಸುವಂತೆ ಹಾಗೂ ಕಷ್ಟಗಳನ್ನು ನಿವಾರಿಸುವಂತೆ ಬೇಡಿಕೊಂಡು ಹರಕೆಯನ್ನು ತೀರಿಸಿ ಬರುತ್ತಾರೆ. ಹಾಗೆಯೇ ಈ ದೇವಾಲಯದಲ್ಲಿ ದಿನಕ್ಕೆ ಕಡಿಮೆ ಎಂದರೂ 2 ರಿಂದ 3 ಕೋಟಿ ದೇಣಿಗೆ ಬರುತ್ತದೆ. ಹಾಗಾಗಿ ಈ ದೇವಾಲಯವನ್ನು ಸಿರಿವಂತ ದೇವಾಲಯ ಎಂದು ಹೇಳಲಾಗುತ್ತದೆ.
ಕಲಿಯುಗದ ವೈಕುಂಠ’ಅಂತಾನೇ ಕರೆಯಲ್ಪಡುವ ತಿರುಪತಿಯು ತಿಮ್ಮಪ್ಪನ ಆವಾಸ ಸ್ಥಾನ. ಪದ್ಮಾವತಿಸಮೇತನಾಗಿ ತಿರುಪತಿಯಲ್ಲಿ ನೆಲೆಗೊಂಡಿರುವ ಸ್ವಾಮಿ ಶ್ರೀನಿವಾಸ ಅತ್ಯಂತ ಶ್ರೀಮಂತ ದೇವರು. ಪ್ರತಿ ನಿತ್ಯ ಲಕ್ಷಾಂತರ ಭಕ್ತರಿಂದ ಪೂಜೆಗೊಳ್ಳುವ ಶ್ರೀವಾರಿಯು ನಗದು ಹಣ, ಚಿನ್ನ, ಬೆಳ್ಳಿ, ವಜ್ರ ವೈಢೂರ್ಯ, ಅಮೂಲ್ಯ ಆಭರಣಗಳಿಂದ ಶೋಭಿಸುತ್ತಾನೆ.
ಇದನ್ನೂ ಓದಿ: ಜನವರಿ 17 ರ ತನಕ ಈ 4 ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು, ಅಪಾಯ ತಪ್ಪಿದ್ದಲ್ಲ
ಈ ಕಾರಣದಿಂದ ದಿನಕ್ಕೆ ಲಕ್ಷಾಂತರ ಭಕ್ತಾಧಿಗಳು ಶ್ರೀನಿವಾಸನ ನಂಬಿ ಬರುತ್ತಾರೆ. ಗಂಟೆ-ಗಟ್ಟಲೆ ಕ್ಯೂ ನಿಂತು ದರ್ಶನ ಪಡೆಯುತ್ತಾರೆ. ಈ ವಿಶೇಷ ಕಾರ್ಯಕ್ರಮದ ಸಮಯದಲ್ಲಿ ದರ್ಶನ ವ್ಯವಸ್ಥೆ ಮಾಡಿರುವುದು ಭಕ್ತಾಧಿಗಳಿಗೆ ಬಹಳ ಅನುಕೂಲಕರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ