• Home
  • »
  • News
  • »
  • astrology
  • »
  • Astrology: ಈ ರಾಶಿಯ ಪೋಷಕರು ಮಕ್ಕಳನ್ನು ಹೆಚ್ಚು ಮುದ್ದು ಮಾಡಿ ಹಾಳು ಮಾಡುತ್ತಾರಂತೆ

Astrology: ಈ ರಾಶಿಯ ಪೋಷಕರು ಮಕ್ಕಳನ್ನು ಹೆಚ್ಚು ಮುದ್ದು ಮಾಡಿ ಹಾಳು ಮಾಡುತ್ತಾರಂತೆ

ರಾಶಿ ಭವಿಶ್ಯ

ರಾಶಿ ಭವಿಶ್ಯ

Parenting Tips: ನಿಮ್ಮ ಮಕ್ಕಳಿಗೆ ಅವರು ಬಯಸುವ ಎಲ್ಲಾ ವಸ್ತುಗಳು, ಉಡುಪುಗಳು ಮತ್ತು ತಂತ್ರಜ್ಞಾನವನ್ನು ಒದಗಿಸುವುದು ಅಮೂಲ್ಯವಾದ ಆಸ್ತಿಗಾಗಿ ಹಣವನ್ನು ಉಳಿಸುವಂತಹ ಮುಖ್ಯವಾದ ಜೀವನದ ಪಾಠಗಳಿಂದ ಅವರನ್ನು ವಂಚಿತಗೊಳಿಸುತ್ತದೆ ಎನ್ನಬಹುದು.

  • Share this:

ಪೋಷಕರಾದವರು (Parents) ಮಕ್ಕಳ ಖುಷಿಗಾಗಿ (Children Happiness) ತಮ್ಮ ಶಕ್ತಿ ಮೀರಿ ಪ್ರಯತ್ನ ಮಾಡುತ್ತಾರೆ. ಮಕ್ಕಳ ಆಸೆ ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಅದನ್ನು ನನಸು ಮಾಡುವ ಅವರ ಪ್ರಯತ್ನ ದೊಡ್ಡದು. ಪೋಷಕರ ಸ್ವಭಾವ ಬೇರೆ ಬೇರೆ ಇರುತ್ತದೆ. ಮಕ್ಕಳು ಜೀವನದಲ್ಲಿ (Life) ಎಲ್ಲವನ್ನೂ ನೋಡಬೇಕು, ಏನೂ ಸುಲಭವಾಗಿ ಅವರಿಗೆ ಸಿಗಬಾರದು ಎಂದು ಆ ಹಾದಿಯಲ್ಲಿ ಕೆಲವು ಪೋಷಕರು ತಮ್ಮ ಮಕ್ಕಳನ್ನು ಬೆಳೆಸಿದರೆ, ಇನ್ನೂ ಕೆಲ ಪೋಷಕರು ಮಕ್ಕಳು ಕೇಳುವ ಮುಂಚೆಯೇ, ಅವರಿಗೆ ಅಗತ್ಯವಿಲ್ಲದಿದ್ದರೂ ಸೌಲಭ್ಯಗಳನ್ನು ಪೂರೈಸಲು ಹಾತೊರೆಯುತ್ತಿರುತ್ತಾರೆ. ಪೋಷಕರ ಈ ಸ್ವಭಾವ ಮುಂದೆ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಕೆಲವೊಮ್ಮೆ ಇದು ಮಕ್ಕಳ ಹಾಳಾಗುವಿಕೆಗೂ ಕಾರಣವಾಗಬಹುದು. ಈ ಪೋಷಕರು ತಮ್ಮ ಪೋಷಕರ ಶೈಲಿಯನ್ನು ಮೌಲ್ಯಮಾಪನ ಮಾಡುವ ಅಗತ್ಯವನ್ನು ಅನುಭವಿಸುವುದಿಲ್ಲ.


ಇನ್ನೂ ರಾಶಿ (Zodiac Sign) ದೃಷ್ಟಿಯಲ್ಲಿ ನೋಡುವುದಾದರೆ ಕೆಲವು ನಿರ್ದಿಷ್ಟ ರಾಶಿಚಕ್ರ ಚಿಹ್ನೆಗಳ ಪೋಷಕರು ತಮ್ಮ ಮಕ್ಕಳಿಗೆ ಅಗತ್ಯತೆಗಳನ್ನು ಮೀರಿ ಸೌಲಭ್ಯ ನೀಡಲು ಪ್ರಯತ್ನ ಮಾಡುತ್ತಾರೆ. ಹಾಗೆಯೇ ನಾವು ಹೇಳುತ್ತಿರುವ ಈ ನಾಲ್ಕು ರಾಶಿಚಕ್ರದವರು ತಮ್ಮ ಮಕ್ಕಳಿಗೆ ಕೇವಲ ಉಡುಗೊರೆಗಳನ್ನು ನೀಡುವ ಮೂಲಕ ಖುಷಿಯಾಗಿರಿಸಲು ಪ್ರಯತ್ನಿಸುತ್ತಾರೆ.


ಆದರೂ, ನಿಮ್ಮ ಮಕ್ಕಳಿಗೆ ಅವರು ಬಯಸುವ ಎಲ್ಲಾ ವಸ್ತುಗಳು, ಉಡುಪುಗಳು ಮತ್ತು ತಂತ್ರಜ್ಞಾನವನ್ನು ಒದಗಿಸುವುದು ಅಮೂಲ್ಯವಾದ ಆಸ್ತಿಗಾಗಿ ಹಣವನ್ನು ಉಳಿಸುವಂತಹ ನಿರ್ಣಾಯಕ ಜೀವನ ಪಾಠಗಳಿಂದ ಅವರನ್ನು ವಂಚಿತಗೊಳಿಸುತ್ತದೆ ಎನ್ನಬಹುದು.


ಹಾಗಾದರೇ, ಅಗತ್ಯತೆಗಿಂತ ಹೆಚ್ಚಿನ ಸವಲತ್ತು ನೀಡುವ ಪೋಷಕರ ವಿಧಾನದಿಂದ ತಮ್ಮ ಮಕ್ಕಳನ್ನು ಸಂಪೂರ್ಣವಾಗಿ ಹಾಳು ಮಾಡಬಹುದಾದ ಈ 4 ರಾಶಿಚಕ್ರ ಚಿಹ್ನೆಗಳ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.


1. ವೃಷಭ ರಾಶಿ


ವೃಷಭ ರಾಶಿಯು ಐಷಾರಾಮಿ ಮತ್ತು ಜೀವನದಲ್ಲಿ ಅತ್ಯುತ್ತಮವಾದ ವಿಷಯಗಳನ್ನು ಆನಂದಿಸುವುದರಿಂದ, ವೃಷಭ ರಾಶಿಯ ಪೋಷಕರು ತಮ್ಮ ಮಗುವಿಗೆ ಉತ್ತಮ ಪರಿಸರ ಮತ್ತು ಜೀವನ ವಿಧಾನವನ್ನು ನೀಡಲು ಶಕ್ತಿ ಮೀರಿ ಪ್ರಯತ್ನ ಪಡುತ್ತಾರೆ.


ವೃಷಭ ರಾಶಿಯ ಪೋಷಕರು ತಮ್ಮ ಮಕ್ಕಳ ಸೌಕರ್ಯಗಳಿಗೆ ತಮ್ಮ ದುಡಿಮೆ, ಜೀವನ ಎಲ್ಲವನ್ನೂ ಮೀಸಲಿಡುತ್ತಾರೆ. ಅವರು ತಮ್ಮ ಮಕ್ಕಳನ್ನು, ಅವರಿಗೆ ಇಷ್ಟವಾಗುವ ಎಲ್ಲವನ್ನೂ ನೀಡಿ ಮುದ್ದಿಸಲು ಇಷ್ಟಪಡುತ್ತಾರೆ.


ಇದನ್ನೂ ಓದಿ: ಕಾರ್ತಿಕ ಮಾಸದಲ್ಲಿದೆ ತುಳಸಿಗೆ ವಿಶೇಷ ಮಹತ್ವ; ತಪ್ಪದೇ ಪೂಜಿಸಿ


ವೃಷಭ ರಾಶಿಯವರಿಗೆ ದುಬಾರಿ ವಸ್ತುಗಳ ಮೇಲೆ ಇನ್ನಿಲ್ಲದ ಆಕರ್ಷಣೆ. ಹೀಗಾಗಿ ಅವರು ತಮ್ಮ ಮಕ್ಕಳಿಗೆ ಎಲ್ಲಾ ದುಬಾರಿ ವಸ್ತುಗಳನ್ನು ಒದಗಿಸುವುದನ್ನು ಮರೆಯುವುದಿಲ್ಲ ಮತ್ತು ಮಕ್ಕಳನ್ನು ಒಂದು ರೀತಿಯಲ್ಲಿ ಹಾಳು ಮಾಡುತ್ತಾರೆ ಎನ್ನಬಹುದು.


2. ಕರ್ಕಾಟಕ


ಕರ್ಕಾಟಕ ರಾಶಿಯವರು ತಮ್ಮ ಮಕ್ಕಳಿಗಾಗಿ ಅಗತ್ಯವಿಲ್ಲದಿದ್ದರೂ ಅವರಿಗೆ ಏನಾದರೂ ನೀಡಲು ಹೊತೊರೆಯುತ್ತಾರೆ ಮತ್ತು ಹಾಕಬೇಕಾದ ಕೆಲ ಗಡಿಗಳನ್ನು  ಯಾವಾಗಲೂ ನಿರ್ಲಕ್ಷಿಸುತ್ತಾರೆ.




ಕರ್ಕಾಟಕ ರಾಶಿಯ ಜನ ಪ್ರೀತಿ ಮತ್ತು ಆಲೋಚನೆಗಳಿಂದ ತುಂಬಿರುವ ಭಾವನಾತ್ಮಕ ರಾಶಿಚಕ್ರದ ಚಿಹ್ನೆಗಳಾಗಿರುವುದರಿಂದ ಅವರು ತಮ್ಮ ಮಕ್ಕಳಿಗೆ ಎಲ್ಲವನ್ನೂ ನೀಡುವ ಮೂಲಕ ಕಷ್ಟದ ಅರಿವು ಇಲ್ಲದ್ದಂತೆ ಬೆಳೆಸುತ್ತಾರೆ.


3. ಸಿಂಹ


ಸಿಂಹ ರಾಶಿಯವರು ತಮ್ಮ ಮಕ್ಕಳ ಪಾಲನೆಯ ವಿಷಯಕ್ಕೆ ಬಂದಾಗ ಬೆಲೆಬಾಳುವ ಮತ್ತು ಅಮೂಲ್ಯವಾದ ಎಲ್ಲವನ್ನೂ ನೀಡಲು ಪ್ರಯತ್ನಿಸುತ್ತಾರೆ. ಸಿಂಹ ರಾಶಿಯ ಪೋಷಕರು ತಮ್ಮ ಮಕ್ಕಳಿಗೆ ಜೀವನದಲ್ಲಿ ಏನನ್ನೂ ನಿರಾಕರಿಸುವುದಿಲ್ಲ ಮತ್ತು ಅಗತ್ಯವಿರಲಿ ಅಥವಾ ಇಲ್ಲದಿರಲಿ ಅವರು ಕೇಳಿದ್ದನ್ನು ಒದಗಿಸಲು ತಮ್ಮ ಶಕ್ತಿ ಮೀರಿ ಎಲ್ಲವನ್ನೂ ಮಾಡುತ್ತಾರೆ.


ಇದನ್ನೂ ಓದಿ: ಶರದ್ ಪೂರ್ಣಿಮೆ ಸಂದರ್ಭದಲ್ಲಿ ಯಾರಿಗೆ ಶುಭ, ಯಾರಿಗೆ ಅಶುಭ? ಇಲ್ಲಿದೆ ಓದಿ ವಾರ ಭವಿಷ್ಯ


4. ವೃಶ್ಚಿಕ


ತಮ್ಮ ಮಕ್ಕಳ ನಿರೀಕ್ಷೆಗಳು, ಅಗತ್ಯಗಳು ಮತ್ತು ಕನಸುಗಳನ್ನು ಪೂರೈಸುವ ವಿಷಯಕ್ಕೆ ಬಂದಾಗ, ವೃಶ್ಚಿಕ ರಾಶಿಯ ಪೋಷಕರು ಯಾವುದಕ್ಕೂ ಇಲ್ಲ ಎನ್ನುವುದೇ ಇಲ್ಲ.


ವಿಪರೀತ ಉತ್ಸಾಹ ಮತ್ತು ಈ ವರ್ತನೆ ಅವರ ಮಕ್ಕಳಿಗೆ ನಕಾರಾತ್ಮಕವಾಗಿ ಪರಿಣಾಮ ಬೀರಬಹುದು. ವೃಶ್ಚಿಕ ರಾಶಿಯವರು ಐಷಾರಾಮಿ ಜೀವನಶೈಲಿಯನ್ನು ಇಷ್ಟಪಡುತ್ತಾರೆ ಮತ್ತು ಅವರ ಮಕ್ಕಳು ಅದೇ ರೀತಿ ಬದುಕಬೇಕೆಂದು ಬಯಸುತ್ತಾರೆ.

Published by:Sandhya M
First published: