Vastu Tips: ಮಲಗುವ ಮಂಚದ ಬಳಿ ಈ 5 ವಸ್ತುಗಳು ಇರಲೇಕೂಡದು..! ವಾಸ್ತು ಶಾಸ್ತ್ರ ಏನು ಹೇಳುತ್ತೆ ನೋಡಿ.

ವಾಸ್ತುಶಾಸ್ತ್ರವು ಯಾವ ಕೋಣೆಯಲ್ಲಿ ಮತ್ತು ಯಾವ ದಿಕ್ಕಿನಲ್ಲಿ ಯಾವ ವಸ್ತುಗಳನ್ನು ಇಡಬೇಕು ಮತ್ತು ಇಡಬಾರದು ಎಂದು ಸಹ ತಿಳಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಬಹುತೇಕ ಜನರು ತಮ್ಮ ಕನಸಿನ ಮನೆಯನ್ನು (Home) ನಿರ್ಮಿಸುವಾಗ ವಾಸ್ತು ಶಾಸ್ತ್ರವನ್ನು ಅನುಸರಿಸಿ ತುಂಬಾನೇ ಕಟ್ಟುನಿಟ್ಟಾಗಿ ನಿರ್ಮಿಸುವುದುಂಟು. ಏಕೆಂದರೆ ಈ ವಾಸ್ತು ಶಾಸ್ತ್ರದ (Vastu Shastra) ಅನುಸರಣೆಯಿಂದ ಅವರ ಆರೋಗ್ಯ (Health) ಮತ್ತು ಸಂಪತ್ತು ವೃದ್ದಿಸುತ್ತದೆ ಮತ್ತು ಮನೆಗೆ ಹಾಗೂ ಮನಸ್ಸಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ದೂರವಾಗುತ್ತವೆ ಎಂಬುದು ಬಹುತೇಕರ ನಂಬಿಕೆಯಾಗಿರುತ್ತದೆ. ಆದರೂ, ವಾಸ್ತು ಶಾಸ್ತ್ರ ಎಂದರೆ ಬರಿ ಮನೆಯ ವಿನ್ಯಾಸ, ಗೋಡೆಯ ಅಳತೆಗಳು, ಮನೆಯನ್ನು ನಿರ್ಮಿಸುವಾಗ ಕಟ್ಟಡದ ಉದ್ದ ಮತ್ತು ಅಗಲಗಳ ಗಣಿತವನ್ನು ಅನುಸರಿಸಲು ಸೀಮಿತವಾಗಿಲ್ಲ. ಇದು ಯಾವ ಕೋಣೆಯಲ್ಲಿ ಮತ್ತು ಯಾವ ದಿಕ್ಕಿನಲ್ಲಿ ಯಾವ ವಸ್ತುಗಳನ್ನು ಇಡಬೇಕು ಮತ್ತು ಇಡಬಾರದು ಎಂದು ಸಹ ತಿಳಿಸುತ್ತದೆ. ಇದು ಕೆಲವರಿಗೆ ಆಶ್ಚರ್ಯಕರವಾಗಿ ಅವರ ಆರೋಗ್ಯ ಪರಿಸ್ಥಿತಿಗಳನ್ನು ಸುಧಾರಿಸುತ್ತದೆ ಮತ್ತು ಅವರ ಮನೆಗೆ ಅದೃಷ್ಟವನ್ನು ತರುತ್ತದೆ ಎಂದು ವಿಶ್ವಾಸವನ್ನು ಹೊಂದಿರುತ್ತಾರೆ.

ಈಗ ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಅಂಶವೆಂದರೆ ಉತ್ತಮ ನಿದ್ರೆ, ಆರೋಗ್ಯಕರ ಮನಸ್ಸು. ದೇಹಕ್ಕೆ ನೀವು ಚೆನ್ನಾಗಿ ನಿದ್ರೆ ಮಾಡುವುದು ತುಂಬಾ ಮುಖ್ಯವಾಗುತ್ತದೆ. ನಿದ್ರೆಯು ನಮ್ಮ ದೈಹಿಕ ಮತ್ತು ಮಾನಸಿಕ ನೋವನ್ನು ಗುಣಪಡಿಸಲು ಸಹಾಯ ಮಾಡುತ್ತದೆ, ಇದು ನಮ್ಮ ದೇಹದಲ್ಲಿ ಆರೋಗ್ಯಕರ ರಕ್ತದ ಹರಿವನ್ನು ಸಹ ನೋಡಿಕೊಳ್ಳುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಉತ್ತಮ ನಿದ್ರೆಯನ್ನು ಮಾಡಲು ಸಾಧ್ಯವಾಗುತ್ತಿದೆಯೇ? ವಾಸ್ತು ಆಚಾರ್ಯ ಮನೋಜ್ ಶ್ರೀವಾಸ್ತವ ಅವರ ಪ್ರಕಾರ, ನಾವು ನಿದ್ರಿಸುತ್ತಿರುವಾಗ ನಮ್ಮ ಸುಪ್ತ ಪ್ರಜ್ಞಾ ಮನಸ್ಸು ಹೆಚ್ಚು ಸಕ್ರಿಯವಾಗಿರುತ್ತದೆ. ಆದ್ದರಿಂದ, ನಮ್ಮ ನಿದ್ರೆಯ ಸಮಯದಲ್ಲಿ ನಾವು ನಮ್ಮ ಮನಸ್ಸನ್ನು ಯಾವ ಶಕ್ತಿಗಳಿಂದ ಪೋಷಿಸುತ್ತಿದ್ದೇವೆ ಎಂಬುದರ ಬಗ್ಗೆ ತಿಳಿದಿರುವುದು ಮುಖ್ಯ ಎಂದು ಹೇಳುತ್ತಾರೆ.

ವಾಸ್ತುವು ನಮ್ಮನ್ನು ಸುತ್ತುವರಿದಿರುವ ಎಲ್ಲಾ ವಸ್ತುಗಳ ಬಗ್ಗೆ ಕಾಳಜಿ ವಹಿಸುವುದು. ವಿಶೇಷವಾಗಿ ನಾವು ಮಲಗಿದಾಗ, ನಮ್ಮ ಮನಸ್ಸು, ಮನಸ್ಥಿತಿ, ನಡವಳಿಕೆ ಮತ್ತು ದೇಹದ ಅಂಗಗಳ ಮೇಲೂ ಪರಿಣಾಮ ಬೀರಬಹುದು. ವಾಸ್ತು ಶಾಸ್ತ್ರದ ಪ್ರಕಾರ, ನೀವು ಮಲಗುವ ಕೋಣೆಯಲ್ಲಿ ಈ ಐದು ವಸ್ತುಗಳನ್ನು ಇಟ್ಟುಕೊಳ್ಳಲೇ ಬೇಡಿ ಅಂತ ಹೇಳುತ್ತದೆ.

ಇದನ್ನೂ ಓದಿ: Astrology: ವೃಶ್ಚಿಕ ರಾಶಿಯವರೇ ನಿಮಗಾಗಿ ಕೊಂಚ ಸಮಯ ಮೀಸಲಿಡಿ; ಇಲ್ಲಿದೆ ಈ ದಿನದ ಭವಿಷ್ಯ

ಮಲಗುವ ಕೋಣೆಯಲ್ಲಿ ಈ ವಸ್ತುಗಳನ್ನು ಇಟ್ಟಿಕೊಳ್ಳಬೇಡಿ:

1. ಮೊಬೈಲ್ ಫೋನ್‌ಗಳು:

ಈಗಂತೂ ಈ ಮೊಬೈಲ್ ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ, ಏಕೆಂದರೆ ನಾವು ಮಲಗಿದಾಗಲೂ ಅದನ್ನು ನಮ್ಮಿಂದ ದೂರವಿಡುವುದು ಕಷ್ಟ. ಆದರೂ, ನಾವು ಮಾಡಬಹುದಾದ ಕನಿಷ್ಠ ಕೆಲಸವೆಂದರೆ ನಾವು ಮಲಗುವಾಗ ಅದನ್ನು ನಮ್ಮ ದಿಂಬಿನ ಕೆಳಗೆ ಇಡದಿರುವುದು. ಮೊಬೈಲ್ ಫೋನ್‌ಗಳು ನಿರಂತರವಾಗಿ ಮೊಬೈಲ್ ಟವರ್‌ನೊಂದಿಗೆ ಸಂಪರ್ಕದಲ್ಲಿರುವುದರಿಂದ, ಇದು ಸಾಕಷ್ಟು ವಿದ್ಯುತ್ಕಾಂತೀಯ ವಿಕಿರಣವನ್ನು ಉತ್ಪಾದಿಸುತ್ತದೆ ಎಂಬುದು ಗಮನದಲ್ಲಿಟ್ಟುಕೊಳ್ಳಬೇಕು.

ಫೋನ್ ಚಾರ್ಜ್‌ನಲ್ಲಿರುವಾಗ ಅಥವಾ ನೀವು ಕಳಪೆ ನೆಟ್‌ವರ್ಕ್ ಪ್ರದೇಶದಲ್ಲಿದ್ದಾಗ ಪರಿಸ್ಥಿತಿ ಇನ್ನೂ ಹದಗೆಡುತ್ತದೆ. ಫೋನ್ ಅನ್ನು ಸುತ್ತುವರೆದಿರುವ ವಿಕಿರಣವು ನಮ್ಮ ಮೆದುಳನ್ನು ಹಾನಿಗೊಳಿಸಬಹುದು ಮತ್ತು ಮಕ್ಕಳ ಬೆಳವಣಿಗೆಯ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು. ಫೋನ್‌ಗಳು ಮತ್ತು ಟ್ಯಾಬ್‌ಗಳಂತಹ ಸಾಧನಗಳಿಂದ ಹಾನಿಕಾರಕ ಪರಿಣಾಮಗಳನ್ನು ತಪ್ಪಿಸಲು, ನೀವು ಮಲಗುವಾಗ ಅದನ್ನು ಸ್ವಿಚ್ ಆಫ್ ಮಾಡಿ ಅಥವಾ ಏರೋಪ್ಲೇನ್ ಮೋಡ್‌ನಲ್ಲಿ ಇರಿಸಿ. ಆದರೂ, ಅದನ್ನು ಆಫ್ ಮಾಡಲು ಸಾಧ್ಯವಾಗದಿದ್ದರೆ, ಕನಿಷ್ಠ ಅದನ್ನು ನಿಮ್ಮ ಮಲಗುವ ಸ್ಥಾನದಿಂದ 7 ಅಡಿಗಳಿಗಿಂತ ಹೆಚ್ಚು ದೂರದಲ್ಲಿ ಇರಿಸಿ.

2. ವೈ-ಫೈ ರೂಟರ್‌ಗಳು:

ಈ ಮನೆಯಲ್ಲಿ ಬಳಸುವ ವೈ-ಫೈ ರೂಟರ್‌ಗಳು ಮೊಬೈಲ್ ಫೋನ್‌ಗಳಿಗಿಂತಲೂ ಸುರಕ್ಷಿತವಲ್ಲ. ವಾಸ್ತವವಾಗಿ ಅವು ಫೋನ್‌ಗೆ ಹೋಲಿಸಿದರೆ ಹೆಚ್ಚು ವಿಕಿರಣವನ್ನು ಉತ್ಪಾದಿಸುತ್ತವೆ. ಆದ್ದರಿಂದ, ಮಲಗುವ ಕೋಣೆಗಳಲ್ಲಿ ವೈ-ಫೈ ರೂಟರ್‌ಗಳನ್ನು ಇರಿಸಿಕೊಳ್ಳಬೇಡಿ. ಆದರೂ, ಬೇರೆ ಯಾವುದೇ ಆಯ್ಕೆ ಇಲ್ಲದಿದ್ದರೆ, ಕನಿಷ್ಠ ರಾತ್ರಿಯಲ್ಲಿ ಅದನ್ನು ಆಫ್ ಮಾಡಿ ಇರಿಸಿ.

3. ಆಟಿಕೆ ಸಾಮಾನುಗಳು:

ನಿಮ್ಮ ಮಲಗುವ ಕೋಣೆಯನ್ನು ಮೃದುವಾದ ಆಟಿಕೆಗಳಿಂದ ಅಲಂಕರಿಸುವುದು ಉತ್ತಮ ಉಪಾಯವೆಂದು ತೋರಿದರೂ, ವಾಸ್ತು ಶಾಸ್ತ್ರದಲ್ಲಿ ಇದನ್ನು ನಿಜವಾಗಿಯೂ ಕಳಪೆ ಯೋಜನೆ ಎಂದು ಪರಿಗಣಿಸಲಾಗಿದೆ. ನಿಮ್ಮ ಮೃದುವಾದ ಆಟಿಕೆಯು ಎಂತದ್ದು ಅನ್ನುವುದು ಮುಖ್ಯವಲ್ಲ. ಈ ಮೃದುವಾದ ಆಟಿಕೆಗಳು ಪರಿಸರದಿಂದ ತೇವಾಂಶ, ಕೊಳಕು ಮತ್ತು ಧೂಳನ್ನು ಹೀರಿಕೊಳ್ಳುವುದು ಮಾತ್ರವಲ್ಲದೆ, ಇದು ನಕಾರಾತ್ಮಕ ಭಾವನೆಗಳಿಗೆ ಕಾರಣವಾಗುತ್ತದೆ. ನಿಮ್ಮ ಮಲಗುವ ಕೋಣೆಯಲ್ಲಿ ಇದನ್ನು ಇರಿಸುವುದರಿಂದ ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ದುಃಸ್ವಪ್ನಗಳು ಬೀಳುತ್ತವೆ.

ಇದನ್ನೂ ಓದಿ: Ugadi 2022: ಹಿಂದೂ ಹೊಸ ವರ್ಷ ಆಚರಣೆ ಬಗ್ಗೆ ಅಗತ್ಯವಾಗಿ ತಿಳಿದುಕೊಳ್ಳಬೇಕಿರುವ ಅಂಶ ಇದು

4. ಬಾಕ್ಸ್ ಬೆಡ್:

ಬಾಕ್ಸ್ ಬೆಡ್‌ಗಳು ಆಧುನಿಕ ಆವಿಷ್ಕಾರವಾಗಿದ್ದು, ಇದು ಇಂದಿನ ಆಧುನಿಕ ಅಪಾರ್ಟ್ಮೆಂಟ್‌ಗಳಲ್ಲಿ ಸೂಕ್ತವಾದ ಸ್ಥಳವಕಾಶವಿಲ್ಲದೆ, ಜನರು ಬಾಕ್ಸ್ ಬೆಡ್‌ಗಳನ್ನು ಮಾಡಿಸಿಕೊಳ್ಳುತ್ತಾರೆ. ಆದ್ದರಿಂದ, ಹಾಸಿಗೆಯ ಕೆಳಗೆ ಗಾಳಿಯು ಮುಕ್ತವಾಗಿ ಚಲಿಸಲು ಸಾಧ್ಯವಾಗದ ಅಂತಹ ಆವಿಷ್ಕಾರಗಳ ಮೇಲೆ ಮಲಗುವುದನ್ನು ನಿಲ್ಲಿಸಬೇಕು. ಭಾರವಾದ ಮತ್ತು ಗೊಂದಲಮಯವಾದ ಸ್ಥಳವು ನೀವು ಎಚ್ಚರವಾದಾಗ ನಿಮ್ಮ ಸುಪ್ತಪ್ರಜ್ಞೆಯ ಮೇಲೆ ಮಂದ ಭಾವನೆಯನ್ನು ಬೀರುತ್ತದೆ.

5. ಡಾರ್ಕ್ ಪೇಂಟಿಂಗ್‌ಗಳು:

ಹೆಚ್ಚಿನ ಜನರು ತಮ್ಮ ಹಾಸಿಗೆಯ ಹಿಂದೆ ಅಥವಾ ತಮ್ಮ ಮಲಗುವ ಕೋಣೆಯಲ್ಲಿ ಎಲ್ಲಿಯಾದರೂ ದೊಡ್ಡ ಪೇಂಟಿಂಗ್ ಅನ್ನು ನೇತು ಹಾಕಲು ಇಷ್ಟ ಪಡುತ್ತಾರೆ. ವರ್ಣಚಿತ್ರವು ಪ್ರಕಾಶಮಾನ ಮತ್ತು ಆನಂದದಾಯಕವಾಗಿದ್ದರೆ, ಅದು ನಿಮಗೆ ಉತ್ತಮ ರಾತ್ರಿ ನಿದ್ರೆಯನ್ನು ಆನಂದಿಸಲು ಸಹಾಯ ಮಾಡುತ್ತದೆ. ಆದರೆ ಡಾರ್ಕ್ ಪೇಂಟಿಂಗ್ ಅನ್ನು ನೇತು ಹಾಕುವುದರಿಂದ ನಿಮ್ಮ ಮನಸ್ಥಿತಿ ಮತ್ತು ಉತ್ಸಾಹವನ್ನು ಕುಗ್ಗಿಸುತ್ತದೆ. ವಾಸ್ತವವಾಗಿ ನಿಮ್ಮ ಹಾಸಿಗೆಯ ಹಿಂದೆ ಯಾವುದೇ ವರ್ಣಚಿತ್ರವನ್ನು ನೇತು ಹಾಕದಿರುವುದು ಉತ್ತಮ.
Published by:shrikrishna bhat
First published: