Swastik Mark: ಹಿಂದೂಗಳ ಪಾಲಿನ ಪವಿತ್ರ ಚಿಹ್ನೆ ಸ್ವಸ್ತಿಕ್ ನ ಅರ್ಥ ಏನು ಗೊತ್ತಾ..?

Swastik symbol Meaning: ಸ್ವಸ್ತಿಕ್ ಚಿಹ್ನೆಯನ್ನು ಚೀನಾದಲ್ಲಿ ವಾನ್, ಜಪಾನ್’ನಲ್ಲಿ ಮಂಜಿ, ಇಂಗ್ಲೆಂಡ್’ನಲ್ಲಿ ಪೈಫಾಟ್, ಜರ್ಮನಿಯಲ್ಲಿ ಹಕೇಂಕ್ ರಿಜ್, ಗ್ರೀಕ್ ನಲ್ಲಿ ಟೆಟ್ರಾಸ್ಕೆಲಿಯನ್ ಎಂದು ಕರಯಲಾಗುತ್ತದೆ

ಸ್ವಸ್ತಿಕ್

ಸ್ವಸ್ತಿಕ್

  • Share this:
    ಸ್ವಸ್ತಿಕ(Swastik) ಎಂಬುದು ಹಿಂದೂಗಳ(Hindu) ಧಾರ್ಮಿಕ ಪದ. ಇದನ್ನು ಹಿಂದೂ ಧರ್ಮದ (Hindu Religion) ಪ್ರಾಚೀನ ಸಂಕೇತ ಎಂದು ಪರಿಗಣಿಸಿದೆ. ಶುಭ ಸಂಗತಿಯನ್ನು ಸೂಚಿಸುವ ಈ ಚಿಹ್ನೆಯು ವೈದಿಕ ಕಾಲದಿಂದಲೂ ಬಳಸಲಾಗುತ್ತಿದೆ. ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ, ಸ್ವಸ್ತಿಕ ಸಂಕೇತವನ್ನು ಬಹಳ ಶುಭವೆಂದು(Luck) ಪರಿಗಣಿಸಲಾಗುತ್ತದೆ. ಹೀಗಾಗಿಯೇ ಪ್ರತಿಯೊಂದು ಮಂಗಳಕರ ಮತ್ತು ಶುಭ ಕಾರ್ಯಗಳಲ್ಲಿ ನಾವು ಈ ಚಿಹ್ನೆಯನ್ನು ಕಾಣುತ್ತೇವೆ. ಸ್ವಸ್ತಿಕ ಚಿಹ್ನೆಯನ್ನ ಇಭಗವಾನ್ ಗಣೇಶನ(Lord Ganesha) ಚಿಹ್ನೆ ಎಂದು ಸಹ ಕರೆಯಲಾಗುವುದು. ಜಗತ್ತಿನ ಕೆಲವೆಡೆ ಸ್ವಸ್ತಿಕವನ್ನು ನಕ್ಷತ್ರ ಪುಂಜಗಳ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಭಾರತೀಯರು ಮನೆಯಲ್ಲಿ ಇದ್ದರೆ ಮಾಡುವ ಕೆಲಸಗಳು ಶುಭಪ್ರದವಾಗುತ್ತದೆ ಎಂಬ ನಂಬಿಕೆ ಇಟ್ಟಿದ್ದಾರೆ.. ಆಗಿದ್ರೆ ಸ್ವಸ್ತಿಕ ಚಿಹ್ನೆ ಅಂದ್ರೆ ಏನು..? ಇದರ ಪ್ರಯೋಜನ ಏನು ಎನ್ನುವ ಮಾಹಿತಿ ಇಲ್ಲಿದೆ

    ಸ್ವಸ್ತಿಕ ಚಿಹ್ನೆ ಅಂದ್ರೆ ಏನು..?

    ಸ್ವಸ್ತಿಕ ಲಾಂಛನವೆಂದರೆ ಅದನ್ನು ವಿಘ್ನನಿವಾರಕ ಗಣಪನ ರೂಪದಲ್ಲಿ ನೋಡುತ್ತಾರೆ. ಸ್ವಸ್ತಿಕ ಚಿಹ್ನೆಯ ಎಡಕ್ಕೆ ಇರುವ ಭಾಗವನ್ನು ಗಂ ಬೀಜ ಮಂತ್ರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಗಣಪತಿಯನ್ನು ಸ್ಥಾಪಿಸಿದಂತಾಗುತ್ತದೆ. ಸ್ವಸ್ತಿಕ ಲಾಂಛನದ ನಾಲ್ಕೂ ದಿಕ್ಕುಗಳಲ್ಲಿ ಇಡುವ ಬಿಂದಿ ಅಥವಾ ಚುಕ್ಕಿಗಳು ತಾಯಿ ಗೌರಿ, ಭೂ ತಾಯಿ ಮತ್ತು ಕೂರ್ಮಾ ಮತ್ತು ದೇವಾನುದೇವತೆಗಳ ಆವಾಸ ಸ್ಥಾನ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ ಸ್ವಸ್ತಿಕ ಲಾಂಛನಕ್ಕೆ ವಿಶೇಷ ಮಹತ್ವ ಇರುವುದು. ಪವಿತ್ರವಾದ ಸ್ವಸ್ತಿಕ ಆಕಾರದಲ್ಲಿ ದೇವಾನುದೇವತೆಗಳು ವಾಸಿಸುತ್ತಾರೆ ಎಂಬ ನಂಬಿಕೆಯಿದೆ. ಸ್ವಸ್ತಿಕ ಲಾಂಛನ ಇದ್ದೆಡೆ ನಕಾರಾತ್ಮಕತೆ ದೂರವಾಗುತ್ತದೆ. ವಾಸ್ತಯು ಶಾಸ್ತ್ರದ ಪ್ರಕಾರವು ಸ್ವಸ್ತಿಕಕ್ಕೆ ಮಹತ್ವ ಇದೆ. ಸ್ವಸ್ತಿಕ ಲಾಂಛನದ ನಾಲ್ಕು ಬಾಹುಗಳು 90 ಡಿಗ್ರಿಯಲ್ಲಿ ಬಾಗಿರುತ್ತವೆ.

    ಇದನ್ನೂ ಓದಿ: ಈ ವಾರ ಯಾವ ರಾಶಿಗೆ ಯಾವ ಫಲ? ಡಿ.13 ರಿಂದ ಡಿ.19ರವರೆಗೆ ದ್ವಾದಶ ರಾಶಿಗಳ ವಾರ ಭವಿಷ್ಯ ಹೀಗಿದೆ

    ವಿವಿಧ ಧರ್ಮಗಳಲ್ಲೂ ಸ್ವಸ್ತಿಕ ಚಿಹ್ನೆಗಿದೆ ಮಹತ್ವ

    ಸ್ವಸ್ತಿಕ್ ಚಿಹ್ನೆಯನ್ನು ಚೀನಾದಲ್ಲಿ ವಾನ್, ಜಪಾನ್’ನಲ್ಲಿ ಮಂಜಿ, ಇಂಗ್ಲೆಂಡ್’ನಲ್ಲಿ ಪೈಫಾಟ್, ಜರ್ಮನಿಯಲ್ಲಿ ಹಕೇಂಕ್ ರಿಜ್, ಗ್ರೀಕ್ ನಲ್ಲಿ ಟೆಟ್ರಾಸ್ಕೆಲಿಯನ್ ಎಂದು ಕರಯಲಾಗುತ್ತದೆ. ಪುರಾತನ ಕಾಲದಲ್ಲಿ ಕ್ರಶ್ಚಿಯನ್ನರು ಕ್ರಿಸ್ತನನ್ನು ಪ್ರತಿನಿಧಿಸಲು ಸ್ವಸ್ತಿಕ್ ಚಿಹ್ನೆಯನ್ನು ಬಳಸುತ್ತಿದ್ದರು. ಅದನ್ನು ಡಿಸ್’ಗೈಸ್ಡ್ ಕ್ರಾಸ್ ಎಂದು ಕರೆಯುತ್ತಿದ್ದರು. ಅಮೆರಿಕದ ಪೈಲಟ್’ಗಳು ಮೊದಲು ಮಹಾ ಸಮರದ ವೇಳೆ ವಿಮಾನದ ಮೇಲಿನ ಸಂಕೇತವಾಗಿ ಸ್ವಸ್ತಿಕ್ ಅನ್ನು ಬಳಸುತ್ತಿದ್ದರು. ಜೊತೆಗೆ ಹಿಂದೂ ಧರ್ಮದಲ್ಲಿ ಗಣೇಶ ಮಾತ್ರವಲ್ಲದೆ ಈ ಚಿಹ್ನೆಯನ್ನ ಅದೃಷ್ಟ, ಸೂರ್ಯ, ಬ್ರಹ್ಮ, ಸೃಷ್ಟಿಕರ್ತ ಹೀಗೆ ಹಲವಾರು ವಸ್ತುಗಳ ಸಂಕೇತವೆಂದು ಕೂಡ ಕರೆಯಲಾಗುತ್ತೆ.. ಜೊತಗೆ ಹಿಂದೂ ಧರ್ಮದಂತೆ ಬೌದ್ಧ , ಜೈನ, ಕ್ರಿಶ್ಚಿಯನ್ ಧರ್ಮಗಳಲ್ಲಿ ಸ್ವಸ್ತಿಕ್ ಚಿಹ್ನೆಗೆ ಸಾಕಷ್ಟು ಮಹತ್ವ ಇದೆ.

    ಬೌದ್ಧ ಧರ್ಮ: ಬೌದ್ಧಧರ್ಮದಲ್ಲಿ ಸ್ವಸ್ತಿಕ್ ತ್ಯಾಗದ ಸಂಕೇತವಾಗಿದೆ. ಬುದ್ಧನ ಚಿತ್ರಗಳಲ್ಲಿ ಆತನ ಎದೆ. ಅಂಗೈ ಮತ್ತು ಪಾದದ ಮೇಲೆ ಸಾಮಾನವಾಗಿ ಕಂಡುಬರುತ್ತದೆ. ಸ್ವಸ್ತಿಕ್, ಬುದ್ಧನ ಹೆಜ್ಜೆಗುರುತಿನ ಸಂಕೇತವಾಗಿದೆ.

    ಜೈನಧರ್ಮ: ಸ್ವಸ್ತಿಕ್ ಜೈನಧರ್ಮದ 7ನೇ ಸಂತನ ಬಗ್ಗೆ ಹೇಳುತ್ತದೆ. ಸ್ವಸ್ತಿಕ್’ನ ನಾಲ್ಕು ತೋಳುಗಳನ್ನು ಪ್ರದಕ್ಷಿಣ ಮುಖದಲ್ಲಿ ಇರಿಸಿದಾಗ ಅದು ಪುನರ್ಜನ್ಮದ ನಾಲ್ಕು ಸಂಭವನೀಯ ಸ್ಥಳಗಳಾದ ಪ್ರಾಣಿ ಅಥವಾ ಸಸ್ಯ, ಪ್ರಪಂಚ, ನರಕ, ಭೂಮಿ ಅಥವಾ ಆಧ್ಯಾತ್ಮಿಕ ಜಗತ್ತನ್ನು ಪ್ರತಿನಿಧಿಸುತ್ತದೆ.

    ಹಿಂದೂ ಧರ್ಮದಲ್ಲಿ ಸ್ವಸ್ತಿಕ್ ಚಿನ್ನೆಯ ಮಹತ್ವ

    *ಸ್ವಸ್ತಿಕ ಚಿಹ್ನೆಯನ್ನು ಮನೆ ಮುಂಭಾಗಿಲಿನಲ್ಲಿ ಹಾಕಿದರೆ, ದುಷ್ಟ ಶಕ್ತಿಗಳು ಮನೆಯೊಳಗೆ ಬರೋದಿಲ್ಲ ಎನ್ನಲಾಗುತ್ತದೆ.

    * ಸ್ವಸ್ತಿಕ ಲಾಂಛನವು ಸಕಾರಾತ್ಮಕತೆಯ ಪ್ರತೀಕ

    *  ಸ್ವಸ್ತಿಕ ಸ್ತಿಲಾಂಛನವನ್ನು ಮನೆಯ ಮುಂದೆ ಇಟ್ಟರೆ ಹೊರಗಿನಿಂದ ನಕಾರಾತ್ಮಕ ಭಾವನೆಗಳು ಒಳನುಸುಳುವುದಿಲ್ಲ.

    *ಸ್ವಸ್ತಿಕ್ ಲಾಂಛನವು ಮನೆಯಲ್ಲಿ ಸುಖ, ಸಂತೋಷ, ಶಾಂತಿ, ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ದೇವರು ಎಲ್ಲೆಡೆಯೂ ಇದ್ದಾನೆಯಾದರೂ ದೇವಸ್ಥಾನಕ್ಕೆ ಏಕೆ ಹೋಗಬೇಕು ಗೊತ್ತಾ?

    *ಸ್ವಸ್ತಿಕ್ ಚಿನ್ನೆಯು ಆರ್ಥಿಕ ಬಿಕ್ಕಟ್ಟಿನಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.

    *ಸ್ವಸ್ತಿಕ್ ಚಿಹ್ನೆ ನಿಮ್ಮ ಮನೆಗೆ ಅಂಟಿಕೊಂಡಿರುವ ದರಿದ್ರತನವನ್ನು ಹೋಗಲಾಡಿಸುತ್ತದೆ

    *ಮನೆಯಲ್ಲಿನ ಜನರ ಆರೋಗ್ಯ ಕಾಪಾಡಲು ಸ್ವಸ್ತಿಕ್ ಚಿನ್ನೆ ಸಹಾಯ ಮಾಡುತ್ತದೆ

    *ವ್ಯಾಪಾರ ಮಾಡುವ ಸ್ಥಳದಲ್ಲಿ ಸ್ವಸ್ತಿಕ್ ಲಾಂಛನ ಬಳಸಿದ್ರೆ ವ್ಯಾಪಾರದಲ್ಲಿ ವೃದ್ಧಿಯಾಗಲಿದೆ
    Published by:ranjumbkgowda1 ranjumbkgowda1
    First published: