Vastu Tips: ಹೊಸ ವರ್ಷದಲ್ಲಿ ನಿಮ್ಮ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲು ಹೀಗೆ ಮಾಡಿ

Home Vastu: ಹೊಸವರ್ಷದಲ್ಲಿ ಹೊಸತನ ನಿಮ್ಮದು ಆಗಬೇಕು ಎಂದರೆ ಮನೆಯ ಮುಖ್ಯ ಬಾಗಿಲು ಸ್ವಚ್ಛವಾಗಿರಬೇಕು. ಮನೆಯ ಮುಖ್ಯ ಬಾಗಿಲಿನ ಎಲ್ಲಾ ಒಳ್ಳೆಯತನ ಪ್ರವೇಶ ಮಾಡುವುದರಿಂದ ಆ ಬಾಗಿಲನ್ನು ಸದಾಕಾಲ ಸ್ವಚ್ಛವಾಗಿಡಬೇಕು.ಬಾಗಿಲಿನ ಮೇಲೆ ಕೊಳಕು ಇರದಂತೆ ನೋಡಿಕೊಳ್ಳಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    2021 ಮುಕ್ತಾಯವಾಗಲು(End) ಕೇವಲ ಒಂದೇ ಒಂದು ವಾರ ಬಾಕಿ ಇದೆ.ಹಳೆಯ ವರ್ಷದ(Old Year) ನೋವು ಸಂಕಷ್ಟ ಎಲ್ಲವೂ ಮರೆತು ಹೊಸ ವರ್ಷದಲ್ಲಿ(New Year) ಹೊಸ ಬದುಕು ನಮ್ಮದಾಗಲಿ ಎಂದುಕೊಳ್ಳುತ್ತಿರುವ ಸಂಖ್ಯೆ ಅಧಿಕವಾಗಿದೆ.. ಹೀಗಾಗಿ ಎಷ್ಟೋ ಜನ ಹೊಸ ವರ್ಷದಲ್ಲಿ ಹಲವಾರು ಬದಲಾವಣೆಗಳನ್ನು(Changes) ಮಾಡಿಕೊಳ್ಳಲು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. 2022 ರಲ್ಲಿ ಆದರೂ ನಮ್ಮ ಸಮಸ್ಯೆಗಳು(Problems) ತೊಂದರೆಗಳು ನಿವಾರಣೆಯಾಗಿ ಹೊಸ ಬದುಕು ನಮ್ಮದಾಗಬಹುದು ಎಂಬ ಆಶಾಭಾವನೆ ಯಲ್ಲಿ ಇದ್ದಾರೆ. ಆದರೆ ನಾವು ಏನೇ ನಿರೀಕ್ಷೆಯಿಟ್ಟುಕೊಂಡು ಮಾಡುವ ಕೆಲವು ತಪ್ಪುಗಳಿಂದ ನಮ್ಮ ಹೊಸವರ್ಷ ನಮಗೆ ಸಂಕಷ್ಟ ತಂದಿಡಬಹುದು. ಹೀಗಾಗಿ ಹೊಸ ವರ್ಷದಲ್ಲಿ ನಿಮಗೆ ನಿಮ್ಮದೇ ಆಯಸ್ಸು, ಶಾಂತಿ, ಹಣ ಲಭಿಸಬೇಕು ಎಂದರೆ ಇವುಗಳನ್ನು ಆ ತಪ್ಪದೇ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ವಾಸ್ತುದೋಷ ಹೋಗಿ ಹೊಸವರ್ಷ ನಿಮಗೆ ಹೊಸತನ ನೀಡಬಹುದು.

    1) ಮನೆಯ ಮುಖ್ಯ ಬಾಗಿಲನ್ನು ಸ್ವಚ್ಛವಾಗಿಡಿ: ಹೊಸವರ್ಷದಲ್ಲಿ ಹೊಸತನ ನಿಮ್ಮದು ಆಗಬೇಕು ಎಂದರೆ ಮನೆಯ ಮುಖ್ಯ ಬಾಗಿಲು ಸ್ವಚ್ಛವಾಗಿರಬೇಕು. ಮನೆಯ ಮುಖ್ಯ ಬಾಗಿಲಿನ ಎಲ್ಲಾ ಒಳ್ಳೆಯತನ ಪ್ರವೇಶ ಮಾಡುವುದರಿಂದ ಆ ಬಾಗಿಲನ್ನು ಸದಾಕಾಲ ಸ್ವಚ್ಛವಾಗಿಡಬೇಕು.ಬಾಗಿಲಿನ ಮೇಲೆ ಕೊಳಕು ಇರದಂತೆ ನೋಡಿಕೊಳ್ಳಬೇಕು. ಅದೇ ಮನೆಯ ಮುಖ್ಯ ಬಾಗಿಲು ಹೊಡೆಯದಂತೆ ಮುರಿದು ಹೋಗದಂತೆ ನೋಡಿಕೊಳ್ಳಬೇಕು.. ಕೊಂಚ ಬಿರುಕು ಬಿಟ್ಟ ಕೂಡಲೇ ಸರಿಪಡಿಸುವುದು ಸೂಕ್ತ.

    ಇದನ್ನೂ ಓದಿ: ನೀವು ಮನೆಯ ಈ ಜಾಗದಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡ್ತಿದ್ರೆ ಕೂಡಲೇ ನಿಲ್ಲಿಸಿ..!

    2) ಮುರಿದ ಹಾಸಿಗೆ: ನಿಮ್ಮ ಮನೆಯಲ್ಲಿ ಉಂಟಾಗುವ ದಾಂಪತ್ಯ ಕಲಹಕ್ಕೆ ಮುರಿದ ಹಾಸಿಗೆಗಳು ಕಾರಣ. ಹೀಗಾಗಿ ಹೊಸ ವರ್ಷದ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಮುರಿದ ಹಾಸಿಗೆ ಇದ್ದರೆ ಅದನ್ನು ಹೊರಗೆ ಹಾಕುವುದು ಸೂಕ್ತ.. ವಾಸ್ತು ಶಾಸ್ತ್ರದ ಪ್ರಕಾರ ಮುರಿದ ಹಾಸಿಗೆಯನ್ನ ಅಶುಭ ಎಂದು ಪರಿಗಣಿಸಲಾಗಿದೆ.ಮುರಿದ ಹಾಸಿಗೆ ಮನೆಯಲ್ಲಿ ಇದ್ದರೆ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ.. ಹೀಗಾಗಿ ನಿಮಗೆ ಹಣಕಾಸಿನ ಸಮಸ್ಯೆ ಉಂಟಾಗಲಿದೆ. ಹೊಸ ವರ್ಷ ಬರುವ ಮೊದಲು ಅದನ್ನು ಸರಿಪಡಿಸಿ ಅಥವಾ ಸಾಧ್ಯವಾದರೆ, ಮುರಿದ ಹಾಸಿಗೆಯನ್ನು ತೆಗೆದು ಹೊಸ ಹಾಸಿಗೆಯನ್ನು ಖರೀದಿಸಿ.

    3)ಗಾಜಿನ ವಸ್ತು: ಮುಂಚಿನಿಂದಲೂ ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಗಾಡು ಹೊಡೆದರೆ ಅವರ ಮನೆಯಲ್ಲಿ ಸಂಕಷ್ಟ ತಪ್ಪಿದ್ದಲ್ಲ ಎಂದು ಹೇಳಲಾಗುತ್ತದೆ.. ಮನೆಯಲ್ಲಿ ಗಾಜಿನ ವಸ್ತುಗಳು ಒಡೆಯುವುದರಿಂದ ವಾಸ್ತುದೋಷ ಉಂಟಾಗಿ ಹಲವು ಅಶುಭ ಗಳಿಗೆ ಕಾರಣ ಆಗಬಹುದು. ಹೀಗಾಗಿ ಹೊಸ ವರ್ಷದ ಸಂದರ್ಭದಲ್ಲಿ ನಿಮ್ಮ ಮನೆಯಲ್ಲಿ ಒಡೆದ ಗಾಜಿನ ವಸ್ತುಗಳು ಇದ್ದರೆ ಅದನ್ನು ಕೂಡಲೇ ಹೊರತೆಗೆ ಎಸೆಯುವುದು ಸೂಕ್ತ. ಹೊರಗೆ ಎಸೆದ ಗಾಜಿನ ವಸ್ತುಗಳ ಸ್ಥಳಕ್ಕೆ ಮನೆಗೆ ಕೆಲವು ಹೊಸ ವಸ್ತುಗಳನ್ನು ತನ್ನಿ. ಹೊಸ ವಸ್ತುಗಳನ್ನು ತರುವ ಸ್ಥಿತಿಯಲ್ಲಿ ಇಲ್ಲದಿದ್ದರೂ ಒಡೆದ ಗಾಜನ್ನು ಮನೆಯಿಂದ ಹೊರಹಾಕಿ.

    4)ಕೆಟ್ಟ ಎಲೆಕ್ಟ್ರಾನಿಕ್ ವಸ್ತು: ಮನೆಯಲ್ಲಿ ಫೋಟೋ ಫ್ರೇಮ್ ಅಥವಾ ಯಾವುದಾದರೂ ಕೆಟ್ಟ ಎಲೆಕ್ಟ್ರಾನಿಕ್ ವಸ್ತು ಇದ್ದರೆ, ಹೊಸ ವರ್ಷ ಬರುವ ಮೊದಲು ಅದನ್ನು ಮನೆಯಿಂದ ಹೊರಹಾಕುವುದು ಉತ್ತಮ.

    ಇದನ್ನೂ ಓದಿ: ಉಪ್ಪು ಲಕ್ಷ್ಮಿ ಸ್ವರೂಪ: ಕಲ್ಲುಪ್ಪಿನಿಂದ ಹೀಗೆ ಮಾಡಿದ್ರೆ ನಿಮ್ಮ ಮನೆಯಲ್ಲಿ ಸುಖ-ಸಂತೋಷ-ಸಂಪತ್ತು ನೆಲೆಸಲಿದೆ

    5)ಹಾಳಾದ ವಿದ್ಯುತ್ ತಂತಿ: ಅನೇಕ ಬಾರಿ ಮನೆಯ ಹಾಳಾದ ವೈಯರಿಂಗ್ ಸರಿಪಡಿಸಿದ ನಂತರ ಉಳಿದ ವಿದ್ಯುತ್ ತಂತಿಯನ್ನು ಜನರು ಇಟ್ಟುಕೊಳ್ಳುತ್ತಾರೆ. ವಾಸ್ತು ಪ್ರಕಾರ, ಹಾಳಾದ ಅಥವಾ ಎಡ ವಿದ್ಯುತ್ ತಂತಿಯನ್ನು ಮನೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಹೊಸ ವರ್ಷದ ಆರಂಭದ ಮೊದಲು, ಮನೆಯಿಂದ ಹೊರಹಾಕಲು ಯತ್ನಿಸಿ
    Published by:ranjumbkgowda1 ranjumbkgowda1
    First published: