Bad Omen: ನಿಮ್ಮ ಮನೆಯಲ್ಲಿ ಪದೇಪದೇ ಈ ರೀತಿಯ ಘಟನೆಗಳು ನಡೆಯುತ್ತಿದ್ರೆ ಅದು ಅಶುಭ ಎಂದೇ ಅರ್ಥ

Bad omen In Home: ಮನೆಯಿಂದ ಹೊರಗೆ ಹೋಗುವಾಗ ಸೀನುವುದು ಕೆಟ್ಟ ಶಕುನ. ಇದರೊಂದಿಗೆ ಪ್ರಯಾಣಕ್ಕೆ ಹೊರಡುವಾಗ ಯಾರಾದರೂ ಸೀನಿದರೆ ಸ್ವಲ್ಪ ಹೊತ್ತು ಅಲ್ಲೇ ನಿಲ್ಲಬೇಕು ಎಂದು ಹೇಳಲಾಗುತ್ತದೆ. ಸ್ವಲ್ಪ ಹೊತ್ತು ಕುಳಿತ ನಂತರ ಅಥವಾ ನೀರು ಕುಡಿದ ನಂತರ ಮನೆಯಿಂದ ಹೊರಬರಬೇಕು ಎಂದು ಹಿರಿಯರು ಸೂಚಿಸುತ್ತಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಒಳ್ಳೆಯ ಶಕುನಗಳು(Shakuna) ಮತ್ತು ಕೆಟ್ಟ ಶಕುನಗಳ(Bad Omen) ನಂಬಿಕೆಗಳು ಪ್ರಾಚೀನ ಕಾಲದಿಂದಲೂ ನಡೆಯುತ್ತಿವೆ. ಅನೇಕ ಜನರು(People) ಶಕುನಗಳಲ್ಲಿ ನಂಬಿಕೆ ಇಡುತ್ತಾರೆ. ಕಲವರು ಶಕುನಗಳನ್ನು ನಂಬುವುದಿಲ್ಲ. ಅದು ಅವರವ ನಂಬಿಕೆಗೆ ಬಿಟ್ಟದ್ದು ಎಂದು ಸುಮ್ನನೆ ಆಗುತ್ತಾರೆ.ಇನ್ನು
    ಕೆಲವೊಂದು ಅನಿರೀಕ್ಷಿತ ಸಂಗತಿಗಳು(Incident), ಘಟನೆಗಳು ನಡೆದಾಗ ಶುಭ , ಅಶುಭ  ಶಕುನವೆಂದು ಪರಿಗಣಿಸುತ್ತೇವೆ. ವಾಸ್ತವವಾಗಿ, ಒಳ್ಳೆಯದು(Good) ಅಥವಾ ಕೆಟ್ಟದು(Bad) ಏನಾದರೂ ಆಗಲಿದೆ ಎಂದು ನಮಗೆ ಮುನ್ಸೂಚನೆ ನೀಡುವ ಕೆಲವು ಸೂಚನೆಗಳು ಅಥವಾ ಚಿಹ್ನೆಗಳು(Sign) ಇವೆ.

    ಹಿರಿಯರ ಪ್ರಕಾರ, ಕೆಲವೊಂದು ಘಟನೆಗಳು ನಡೆಯಲೇ ಬಾರದು. ಯಾಕೆಂದರೆ ಅದು ಅಪಶಕುನ. ಎಲ್ಲಾ ಘಟನೆಗಳನ್ನು ಶಕುನಗಳಲ್ಲಿ ನೋಡುವವರು ಇದ್ದಾರೆ. ಕೆಲವೊಂದು ಕೆಲಸಗಳಿರುತ್ತವೆ ಅವುಗಳನ್ನು ಮಾಡಿದರೆ ಎಂಥ ಕೆಲಸಗಳು ಕೂಡ ಕೈಗೂಡುತ್ತವೆ. ಅವುಗಳನ್ನು  ಶುಭ ಶಕುನ ಎನ್ನುತ್ತೇವೆ. ಆದರೆ  ಅದೇ ಕೆಲವು ಕೆಲಸಗಳಿರುತ್ತವೆ. ಅವು ಕೆಲಸಗಳೆಲ್ಲವನ್ನೂ ಕೆಡಿಸಿ ಬಿಡುತ್ತವೆ .  ಹೀಗಾಗಿ ಆ ರೀತಿಯ ಅಶುಭಶಕುನಗಳುಯಾವುವು ಎನ್ನುವುದನ್ನು ನೋಡೋಣ

    1) ಹಾಲಿಗೆ ಸಂಬಂಧಿಸಿದ ಶಕುನ: ಸಮಾನವಾಗಿ ಗೃಹಪ್ರವೇಶದ ಸಮಯದಲ್ಲಿ ವಾಸ್ತುಶಾಸ್ತ್ರದ ಪ್ರಕಾರ ಹಾಲುಕ್ಕಿಸುವುದು ಶುಭ ಎಂದು ಪರಿಗಣಿಸಲಾಗುತ್ತದೆ..
    ಆದರೆ ಕೆಲವರ ಪ್ರಕಾರ ಅಡುಗೆ ಮನೆಯಲ್ಲಿ ಹಾಲು ಕುಡಿಯುವಾಗ ಅದು ನೆಲಕ್ಕೆ ಉಕ್ಕರಿಸಿ ಬಂದರೆ, ಅಥವಾ ಹಾಲು ಚೆಲ್ಲಿದರೆ ಕೆಟ್ಟ ಶಕುನ ಎಂದು ಹೇಳಲಾಗುತ್ತದೆ.ಮನೆಯಲ್ಲಿ ಹಾಲು ಚೆಲ್ಲಿದರೆ ದೊಡ್ಡ ಅವಗಡ ಸಂಭವಿಸುವುದು ಎಂದು ಹೇಳಲಾಗುತ್ತದೆ.

    ಇದನ್ನೂ ಓದಿ: ಕನ್ನಡಿ ಒಡೆದರೆ, ಹಾಲು ಚೆಲ್ಲಿದರೆ ಅಪಶಕುನವೇ? ಅದಕ್ಕೆ ಏನು ಪರಿಹಾರ?

    2)ಒಡೆದ ಗಾಜು : ಗಾಜಿಗೆ ಸಂಬಂಧಿಸಿದಂತೆ ಕೂಡಾ ಶಕುನವನ್ನು ನೋಡಲಾಗುತ್ತದೆ. ಶಕುನ ಶಾಸ್ತ್ರದ ಪ್ರಕಾರ ಗಾಜು ಒಡೆಯುವುದು ಕೆಟ್ಟ ಶಕುನ. ಕೆಲವೊಮ್ಮೆ ನಮ್ಮ ನಿಷ್ಕಾಳಜಿಯಿಂದ ಅಥವಾ ಅನಿರೀಕ್ಷಿತ ಕಾರಣಗಳಿಂದಾಗಿ ಗಾಜಿನ ವಸ್ತು ಯಾವುದೇ ದೋಷ ವಿಲ್ಲದೆ ಇದ್ದಕ್ಕಿದ್ದಂತೆ ಒಡೆಯಬಹುದು. ಗಾಜಿನ ವಸ್ತು, ಕನ್ನಡಿ ಸೇರಿದಂತೆ ಯಾವುದೇ ಬಗೆಯ ಗಾಜಿನ ವಸ್ತು ಒಡೆದರೆ ಅದು ಕುಟುಂಬದಲ್ಲಿ ಬಿಕ್ಕಟ್ಟು ಉಂಟಾಗುವುದು ಎನ್ನುವ ಸಂದೇಶವನ್ನು ಸಾರುವುದು. ಇಂತಹ ಸಂಗತಿಗಳು ಸಂಭವಿಸಿದಾಗ ದೇವರಿಗೆ ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡಬೇಕು. ಜೊತೆಗೆ ಸಂಜೆ ಸಮಯದಲ್ಲಿ ದೇವರಿಗೆ ಬೆಳಗುವ ಆರತಿಯಲ್ಲಿ ಲವಂಗವನ್ನು ಸೇರಿಸಿ ಬೆಳಗಬೇಕು. ದೇವರಿಗೆ ಆಹಾರವನ್ನು ಅರ್ಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಬೇಕು.

    3)ಪೊರಕೆ: ಪೊರಕೆಯಲ್ಲಿ ಮಹಾಲಕ್ಷ್ಮಿ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. ಆದುದರಿಂದಲೇ ಹೆಂಗಸರು ಅಥವಾ ಮನೆಯ ಹಿರಿಯರು ಪೊರಕೆಯ ಮೇಲೆ ಕಾಲಿಡದಂತೆ ಹೇಳುತ್ತಿರುತ್ತಾರೆ. ಅಲ್ಲದೆ, ಸೂರ್ಯಾಸ್ತದ ಸಮಯದಲ್ಲಿ ಮನೆಯಿಂದ ಕಸವನ್ನು ಹೊರ ಹಾಕುವುದು ಕೂಡಾ ಅಶುಭ ಎಂದೇ ಹೇಳಲಾಗುತ್ತದೆ. ಪೊರಕೆಯನ್ನು ಯಾರಿಗೂ ಕಾಣದ ಜಾಗದಲ್ಲಿ ಇಡಬೇಕು.

    4) ನಾಯಿ ಬೆಕ್ಕು ಅಳುವುದು: ಮನೆಯ ಆವರಣದಲ್ಲಿ ಅಥವಾ ಮನೆಯ ಅಂಗಳದಲ್ಲಿ ನಾಯಿಗಳು ಒಂದೇಸಮನೆ ಅಳುವುದನ್ನೂ ಕೆಟ್ಟ ಶಕುನ ಎಂದು ಕರೆಯಲಾಗುತ್ತದೆ. ಈ ರೀತಿ ನಾಯಿ ಹಾಗೂ ಬೆಕ್ಕು ಮನೆಯ ಅಂಗಳದಲ್ಲಿ ಪದೇ ಪದೇ ಹೇಳುತ್ತಿದ್ದರು ಯಾರಿಗಾದರೂ ಪ್ರಾಣಾಪಾಯ ಸಂಭವಿಸಬಹುದು.

    ಇದನ್ನೂ ಓದಿ: ಬಲಗಣ್ಣು ಅದುರಿದರೆ ಕೆಡುಕಾ, ಅದೃಷ್ಟವಾ?; ಏನು ಹೇಳುತ್ತೆ ಶಕುನ ಶಾಸ್ತ್ರ

    5) ಬೆಕ್ಕು ಅಡ್ಡ ಬಂದರೆ: ನಾವು ಮನೆಯಿಂದ ಯಾವುದೇ ಕಾರ್ಯಕ್ಕೆ ಹೊರಡುವಾಗ ಬೆಕ್ಕು ಅಡ್ಡ ಬಂದರೆ ಅದು ಅಶುಭ ಎಂದು ಪರಿಗಣನೆ ಮಾಡಲಾಗುತ್ತದೆ.. ಹೀಗಾಗಿಯೇ ಬೇಕು ಹೋದ ಬಳಿಕ ಕೆಲವೊಂದು ಸಮಯ ನಿಂತು ಮುಂದಕ್ಕೆ ಹೋಗುವುದು ಒಳಿತು ಎಂದು ಹಿರಿಯರು ಹೇಳುತ್ತಾರೆ.

    6)ಸೀನು: ಮನೆಯಿಂದ ಹೊರಗೆ ಹೋಗುವಾಗ ಸೀನುವುದು ಕೆಟ್ಟ ಶಕುನ. ಇದರೊಂದಿಗೆ ಪ್ರಯಾಣಕ್ಕೆ ಹೊರಡುವಾಗ ಯಾರಾದರೂ ಸೀನಿದರೆ ಸ್ವಲ್ಪ ಹೊತ್ತು ಅಲ್ಲೇ ನಿಲ್ಲಬೇಕು ಎಂದು ಹೇಳಲಾಗುತ್ತದೆ. ಸ್ವಲ್ಪ ಹೊತ್ತು ಕುಳಿತ ನಂತರ ಅಥವಾ ನೀರು ಕುಡಿದ ನಂತರ ಮನೆಯಿಂದ ಹೊರಬರಬೇಕು ಎಂದು ಹಿರಿಯರು ಸೂಚಿಸುತ್ತಾರೆ
    Published by:ranjumbkgowda1 ranjumbkgowda1
    First published: