Zodiac signs: ಈ ರಾಶಿಚಕ್ರ ಚಿಹ್ನೆ ಹೊಂದಿರುವ ವ್ಯಕ್ತಿಗಳು ತಮ್ಮಷ್ಟಕ್ಕೆ ತಾವು ಇರಲು ಇಷ್ಟಪಡುವ ಜನರು!

ಈ ಜನರು ಸಂತೋಷ ಮತ್ತು ನಗುವಿರುವ ಬೆಚ್ಚಗಿನ, ಸಾಮಾಜಿಕ ಜೀವನದಿಂದ ದೂರ ಉಳಿಯಲು ಹೆಚ್ಚು ಇಷ್ಟಪಡುತ್ತಾರೆ ಮತ್ತು ತಮ್ಮನ್ನು ತಾವು ಒಂಟಿಯಾಗಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇಂತಹ ವ್ಯಕ್ತಿತ್ವ ಇರುವ ಅಂತರ್ಮುಖಿಗಳ ರಾಶಿಚಕ್ರ ಚಿಹ್ನೆಗಳನ್ನು ನೋಡೋಣ ಬನ್ನಿ.

ಅಂತರ್ಮುಖಿಗಳ ರಾಶಿಚಕ್ರ ಚಿಹ್ನೆಗಳು

ಅಂತರ್ಮುಖಿಗಳ ರಾಶಿಚಕ್ರ ಚಿಹ್ನೆಗಳು

  • Share this:
ಕೆಲವು ಜನರು (People) ಯಾರನ್ನಾದರೂ ಭೇಟಿ (Meet) ಆದ ಕೆಲವೇ ನಿಮಿಷಗಳಲ್ಲಿ ಅವರೊಂದಿಗೆ ತುಂಬಾನೇ ಸಲುಗೆ ಬೆಳೆಸಿಕೊಂಡು ಬಿಡುತ್ತಾರೆ ಮತ್ತು ಅವರೊಂದಿಗೆ ತಮ್ಮ ಕಷ್ಟ ಸುಖಗಳನ್ನು ಎಲ್ಲವನ್ನೂ ಹಂಚಿಕೊಳ್ಳಲು (Sharing) ಇಷ್ಟಪಡುತ್ತಾರೆ. ಆದರೆ ಕೆಲವರು ಮಾತ್ರ ಯಾರೊಂದಿಗೆ ಹೆಚ್ಚಾಗಿ ಬೇರೆಯದೇ ತಮ್ಮಷ್ಟಕ್ಕೆ ತಾವು ಇರುವುದನ್ನು ಸಹ ನಾವು ನೋಡಿರುತ್ತೇವೆ. ಕೆಲವರು ತಮ್ಮ ಭಾವನೆಗಳನ್ನು (Emotion) ಬೇಗನೆ ತೋರಿಸಿಕೊಳ್ಳುತ್ತಾರೆ, ಇನ್ನೂ ಕೆಲವರು ತಮ್ಮ ಭಾವನೆಗಳನ್ನು ಅಷ್ಟಾಗಿ ತೋರಿಸಿಕೊಳ್ಳುವುದಿಲ್ಲ ಎಂದು ಹೇಳಬಹುದು. ಅವರ ಹತ್ತಿರದವರಿಗೂ ಸಹ ಕೆಲವರು ತಮ್ಮ ಭಾವನೆಗಳನ್ನು ತೋರಿಸಿ ಕೊಡುವುದಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈ ಜನರು ಸಂತೋಷ ಮತ್ತು ನಗುವಿರುವ ಬೆಚ್ಚಗಿನ, ಸಾಮಾಜಿಕ ಜೀವನದಿಂದ ದೂರ ಉಳಿಯಲು ಹೆಚ್ಚು ಇಷ್ಟಪಡುತ್ತಾರೆ ಮತ್ತು ತಮ್ಮನ್ನು ತಾವು ಒಂಟಿಯಾಗಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಇಂತಹ ವ್ಯಕ್ತಿತ್ವವನ್ನು ಹೊಂದಿರುವ ಜನರು ಬೇರೆ ಜನರಿಂದ ಮನಸ್ಸಿಗೆ ಬೇಸರ ಮಾಡಿಕೊಳ್ಳುವುದನ್ನು ತಪ್ಪಿಸಿಕೊಳ್ಳುತ್ತಾರೆ. ಏಕೆಂದರೆ ಅವರು ಯಾರ ಜೊತೆಗೂ ಅಷ್ಟಾಗಿ ಬೆರೆಯುವುದೇ ಇಲ್ಲ. ಅಂತಹ ಜನರು ತಮ್ಮ ಸಂಗಾತಿಯ ಬಗ್ಗೆ ಸಂಪೂರ್ಣ ನಂಬಿಕೆ ಮತ್ತು ಬದ್ಧತೆಯನ್ನು ಹೊಂದಿರುವಾಗ ಮಾತ್ರ ಅವರ ಬಳಿ ತಮ್ಮ ಮನಸ್ಸಿನ ಭಾವನೆಗಳನ್ನು ತೆರೆದಿಡುತ್ತಾರೆ. ಇಂತಹ ವ್ಯಕ್ತಿತ್ವ ಇರುವ ಅಂತರ್ಮುಖಿಗಳ ರಾಶಿಚಕ್ರ ಚಿಹ್ನೆಗಳನ್ನು ನೋಡೋಣ ಬನ್ನಿ.

ಇದನ್ನೂ ಓದಿ: Numerology: ನಷ್ಟ ಆಗದೇ ಇರಲು ಹೀಗೆ ಮಾಡಿ ಅನ್ನುತ್ತೆ ಸಂಖ್ಯಾಶಾಸ್ತ್ರ!

1. ವೃಷಭ ರಾಶಿ
ವೃಷಭ ರಾಶಿಯ ಜನರು ಸಾಮಾನ್ಯವಾಗಿ ತುಂಬಾನೇ ಹಠಮಾರಿಗಳು ಮತ್ತು ಅವರು ಸಂಪೂರ್ಣವಾಗಿ ಒಳ್ಳೆಯ ಕಾರಣವನ್ನು ಕಂಡು ಕೊಳ್ಳುವವರೆಗೂ ಯಾರ ಬಗ್ಗೆಯೂ ಮತ್ತು ಯಾವುದರ ಬಗ್ಗೆಯೂ ತೀರ್ಮಾನಕ್ಕೆ ಬರುವುದಿಲ್ಲ. ಅವರು ತುಂಬಾ ಅಹಂಕಾರಿಗಳು ಮತ್ತು ಇತರರ ಭಾವನೆಗಳನ್ನು ಒಪ್ಪಿಕೊಳ್ಳಲು ಅವರು ನಿರಾಕರಿಸುತ್ತಾರೆ. ಅವರು ತಮ್ಮ ಯಶಸ್ಸು ಮತ್ತು ಅದೃಷ್ಟದ ಹಾದಿಯಲ್ಲಿ ಯಾರೇ ಬಂದರೂ ಅವರನ್ನು ಸೋಲಿಸಲು ಇಷ್ಟಪಡುವ ವ್ಯಕ್ತಿತ್ವ ಇವರದು ಎಂದು ಹೇಳಬಹುದು.

2. ಕರ್ಕಾಟಕ ರಾಶಿ
ಈ ರಾಶಿಯವರು ಪ್ರೀತಿಯಿಲ್ಲದೆ ಬದುಕಲು ಸಾಧ್ಯವಿಲ್ಲದ ಭಾವನಾತ್ಮಕ ಜೀವಿಗಳು. ಆದರೆ ಅದೇ ಸಮಯದಲ್ಲಿ, ಅವರು ಹೃದಯವಿದ್ರಾವಕ ಅಥವಾ ದ್ರೋಹದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಎಲ್ಲರಿಂದ ದೂರವಿರಿಸಿಕೊಳ್ಳುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರ ಸೂಕ್ಷ್ಮ ಸ್ವಭಾವವು ಅಪಾರವಾದ ನೋವನ್ನು ನಿಭಾಯಿಸಲು ಸಾಧ್ಯವಿಲ್ಲ, ಆದ್ದರಿಂದ ಕರ್ಕಾಟಕ ರಾಶಿಯವರು ದಯೆ ಉಳ್ಳವರು ಮತ್ತು ಉತ್ತಮವಾಗಿ ವರ್ತಿಸುವ ಜನರು. ಆದರೆ ಅವರು ವ್ಯಕ್ತಿಯ ಬಗ್ಗೆ ನೂರು ಪ್ರತಿಶತ ಖಚಿತವಾಗದ ಹೊರತು ಅವರು ಎಂದಿಗೂ ಯಾರ ಬಳಿಯೂ ತಮ್ಮ ಭಾವನೆಗಳನ್ನು ತೆರೆದಿಡುವುದಿಲ್ಲ.

3. ಕನ್ಯಾ ರಾಶಿ
ಅವರು ಯಾರೊಂದಿಗಾದರೂ ಮೊಂಡು ಮತ್ತು ಒರಟಾಗಿ ವರ್ತಿಸಲು ಹೆದರುವುದಿಲ್ಲ. ಅವರು ಇತರರನ್ನು ಸಂತೋಷಪಡಿಸುವುದನ್ನು ದ್ವೇಷಿಸುತ್ತಾರೆ. ಅವರು ಎಲ್ಲದರ ಮೇಲೆ ನಿಯಂತ್ರಣ ಸಾಧಿಸಲು ಬಯಸುತ್ತಾರೆ. ಅವರು ಅಧಿಕಾರ ಮತ್ತು ಅಧಿಕಾರ ಚಲಾಯಿಸುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಇವರು ತಾವು ಇಷ್ಟಪಡದವರೊಂದಿಗೆ ತುಂಬಾನೇ ನೀಚ ಮತ್ತು ಭಯಾನಕರಾಗುತ್ತಾರೆ ಎಂದು ಹೇಳಲಾಗುತ್ತದೆ.

4. ವೃಶ್ಚಿಕ ರಾಶಿ
ಈ ರಾಶಿಯವರು ತುಂಬಾನೇ ನಿಗೂಢ, ಕುತೂಹಲಕಾರಿ ಮತ್ತು ಕೂಲ್ ಹೃದಯದ ಜನರು, ಅವರು ಯಾರಿಂದಲೂ ನೋವು ತಿನ್ನಲು ಬಯಸುವುದಿಲ್ಲ ಮತ್ತು ನೋಯಿಸಲು ಸಹ ಇಷ್ಟಪಡುವುದಿಲ್ಲ. ಅವರು ಯಾರನ್ನಾದರೂ ಕುಶಲತೆಯಿಂದ ನಿರ್ವಹಿಸಬಹುದು ಮತ್ತು ಕೆಲವು ವಿಷಯಗಳು ಅವರಿಗೆ ಅಸಹ್ಯ ಎನಿಸಿದಾಗ ಅವರು ಹಗೆತನವನ್ನು ಸಹ ಸಾಧಿಸಬಹುದು. ವೃಶ್ಚಿಕ ರಾಶಿಯವರು ಕೋಪಗೊಳ್ಳುವುದು ತುಂಬಾನೇ ವಿರಳ ಎಂದು ಹೇಳಬಹುದು.

ಇದನ್ನೂ ಓದಿ: Astrology: ಈ ರಾಶಿಯವರು ಮುತ್ತು-ಬೆಳ್ಳಿ ಆಭರಣ ಧರಿಸದಿರುವುದು ಒಳಿತು; ಸಮಸ್ಯೆ ಇನ್ನಷ್ಟು ಹೆಚ್ಚತ್ತೆ

5. ಧನುಸ್ಸು ರಾಶಿ
ಅವರು ಯಾರಿಗೂ ಸುಲಭವಾಗಿ ಪ್ರೀತಿಯನ್ನು ತೋರಿಸುವುದಿಲ್ಲ. ಅವರು ನೋವು ಅನುಭವಿಸಬಹುದು ಎಂಬ ಭಯದಿಂದ ತಮ್ಮ ಹೃದಯವನ್ನು ತುಂಬಾ ಅಮೂಲ್ಯವಾಗಿ ಕಾಪಾಡಿಕೊಳ್ಳುತ್ತಾರೆ. ಪ್ರೀತಿ ಮತ್ತು ಭಾವನೆಗಳ ವಿಷಯಕ್ಕೆ ಬಂದಾಗ ಅವರು ತುಂಬಾ ಸಂವೇದನಾಶೀಲರು ಎಂದು ಅವರಿಗೆ ತಿಳಿದಿದೆ, ಆದ್ದರಿಂದ ಅವರು ಯಾರೊಂದಿಗೂ ಹೆಚ್ಚಾಗಿ ಬೇರೆಯದೇ ಇರುವುದು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅತ್ಯುತ್ತಮ ಮಾರ್ಗ ಎಂದು ಅವರು ಭಾವಿಸುತ್ತಾರೆ.
Published by:Ashwini Prabhu
First published: