• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Zodiac Signs: ಸ್ವಲ್ಪ ನಿಧಾನ, ಆದ್ರೆ ತುಂಬಾ ಸ್ಟ್ರಾಂಗ್! ಈ ರಾಶಿಯವರು ಒಳ್ಳೆಯ ಸಂಗಾತಿಯಾಗ್ತಾರಂತೆ!

Zodiac Signs: ಸ್ವಲ್ಪ ನಿಧಾನ, ಆದ್ರೆ ತುಂಬಾ ಸ್ಟ್ರಾಂಗ್! ಈ ರಾಶಿಯವರು ಒಳ್ಳೆಯ ಸಂಗಾತಿಯಾಗ್ತಾರಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ರಾಶಿಚಕ್ರ ಚಿಹ್ನೆಯ ಜನರು ಬಲಶಾಲಿ ಮತ್ತು ಸ್ಥಿರವಾಗಿರುವಂತವರು ಆಗಿರುತ್ತಾರೆ. ವೃಷಭ ರಾಶಿಯವರು ಕಷ್ಟಪಟ್ಟು ತಮಗಾಗಿ ಜೋಡಿಗಾರರೊಂದಿಗೆ ಬೇಗನೆ ಸಂಬಂಧದಲ್ಲಿ ಬೀಳಲು ಇಷ್ಟಪಡುವುದಿಲ್ಲ.

  • Share this:

ಒಬ್ಬರೊಟ್ಟಿಗೆ ಸಂಬಂಧ (Relationship) ಬೆಳೆಸೋದು ಎಂದರೆ ಅಷ್ಟೊಂದು ಸುಲಭದ ಮಾತಲ್ಲ ಬಿಡಿ. ಅದರಲ್ಲೂ ಬಾಳ ಸಂಗಾತಿಯನ್ನು (Life Partner) ಆಯ್ಕೆ ಮಾಡಿಕೊಳ್ಳುವಾಗ ಚೆನ್ನಾಗಿ ಅರಿತುಕೊಂಡು ಮುಂದೆ ಹೆಜ್ಜೆ ಇಡುವುದು ಸೂಕ್ತ. ಏಕೆಂದರೆ ಸಂಬಂಧ ಬೆಳೆಸುವಾಗ ಎಲ್ಲವೂ ಸರಿಯಾಗಿಯೇ ಕಾಣುತ್ತದೆ ಮತ್ತು ಹೊಸ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳುವ ಉತ್ಸಾಹದಲ್ಲಿ ಕೆಲವೊಂದು ಅಂಶಗಳನ್ನು ನಾವು ಅಷ್ಟೊಂದು ಗಣನೆಗೆ ತೆಗೆದುಕೊಳ್ಳುವುದಿಲ್ಲ.


ಆದರೆ ಸಂಬಂಧ ಬೆಳೆಯುತ್ತಾ ಹೋದಂಗೆಲ್ಲಾ ವ್ಯಕ್ತಿಯ ಬಗ್ಗೆ ಸಂಪೂರ್ಣವಾಗಿ ಅರ್ಥವಾಗಲು ಶುರುವಾಗುತ್ತದೆ. ಆದ್ದರಿಂದಲೇ ಸಂಬಂಧಗಳು ದಿನ ಕಳೆದಂತೆ ಆ ಪ್ರೀತಿಯನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ.


ಅವಸರ ಮಾಡಲ್ಲ!
ಇದು ಎಲ್ಲರಿಗೂ ಅನ್ವಯಿಸುವುದಿಲ್ಲ ಬಿಡಿ. ಅದಕ್ಕೆ ಕೆಲವರು ಯಾವುದೇ ಸಂಬಂಧ ಬೆಳೆಸಬೇಕಾದರೆ ತುಂಬಾನೇ ಜಾಗೃತರಾಗಿರುತ್ತಾರೆ. ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತಾರೆ, ಅವಸರ ಮಾಡಲು ಹೋಗುವುದಿಲ್ಲ. ಕೆಲವು ಜನರು ತಾವು ಯಾವುದೇ ಸಂಬಂಧ ಮಾಡಿದರೂ, ಅದು ದೀರ್ಘ ಕಾಲದವರೆಗೂ ಉಳಿಯಬೇಕು ಅಂತ ಬಯಸುತ್ತಾರೆ. ಆದ್ದರಿಂದ ಯಾವುದೇ ಸಂಬಂಧದಲ್ಲಿ ಅವಸರ ಮಾಡುವುದು ಒಳ್ಳೆಯದಲ್ಲ.


ಈ ರಾಶಿಚಕ್ರ ಚಿಹ್ನೆಗಳನ್ನು ಗಮನಿಸಿ
ಎದುರಿಗಿರುವ ವ್ಯಕ್ತಿಯನ್ನು ಸರಿಯಾಗಿ ಅರಿತುಕೊಂಡು ಮುಂದೆ ಸಾಗುವುದು ಒಳ್ಳೆಯದು. ಜ್ಯೋತಿಷಿಗಳ ಪ್ರಕಾರ, ಈ ಕೆಳಗಿನ ರಾಶಿಚಕ್ರ ಚಿಹ್ನೆಗಳ ಜನರು ಆತುರಪಡದ ಜನರು ಮತ್ತು ಅವರು ಡೇಟಿಂಗ್ ಅನ್ನು ಆನಂದಿಸುತ್ತಾರೆ. ಆದರೆ ಪ್ರೀತಿಯಲ್ಲಿ ಬೀಳುವ ಮೊದಲು ತಮ್ಮ ಸಮಯವನ್ನು ತೆಗೆದುಕೊಳ್ಳುತ್ತಾರೆ.


ಮಕರ ರಾಶಿ (ಡಿಸೆಂಬರ್ 22-ಜನವರಿ 19)
ಈ ರಾಶಿಗೆ ಸೇರಿದ ಜನರಿಗೆ ಒಳ್ಳೆಯ ವಿಷಯಗಳು ಸರಿಯಾದ ಸಮಯಕ್ಕೆ ಬರುತ್ತವೆ, ಅದಕ್ಕೆ ತಾವು ಕಾಯಬೇಕು ಎಂಬುದು ಚೆನ್ನಾಗಿ ಅರ್ಥವಾಗಿರುತ್ತದೆ. ಈ ರಾಶಿಯ ಜನರು ತುಂಬಾನೇ ಜವಾಬ್ದಾರಿಯುತ ಜನರು, ಅವರು ಒಳ್ಳೆಯದಕ್ಕಾಗಿ ಯಾರಿಗಾದರೂ ಬದ್ಧರಾಗಿರುವುದು ಸೇರಿದಂತೆ ಎಲ್ಲಾ ಪ್ರಮುಖ ನಿರ್ಧಾರಗಳು ಈಡೇರುವುದಕ್ಕೆ ತುಂಬಾನೇ ಸಮಯ ನೀಡುತ್ತಾರೆ.




ಗಂಭೀರವಾದ ಯಾವುದೇ ಸಂಬಂಧದಲ್ಲಿ ಬೀಳುವ ಮುಂಚೆ ಈ ರಾಶಿಯ ಜನರು ಡೇಟಿಂಗ್ ನಲ್ಲಿ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ.


ಕನ್ಯಾ ರಾಶಿ (ಆಗಸ್ಟ್ 23-ಸೆಪ್ಟೆಂಬರ್ 22)
ಈ ರಾಶಿಚಕ್ರ ಚಿಹ್ನೆಗೆ ಸೇರಿದವರು ಬಹುತೇಕವಾಗಿ ಎಲ್ಲಾ ವಿಷಯವನ್ನು ಅತಿಯಾಗಿ ಯೋಚಿಸುತ್ತಾರೆ. ಅವರು ಪ್ರತಿದಿನವನ್ನು ಯೋಜಿಸುತ್ತಾರೆ. ಹೊಸದಾಗಿ ಶುರು ಮಾಡಿಕೊಂಡ ಡೇಟಿಂಗ್ ಅವರಿಗೆ ಒಳ್ಳೆಯದೇ ಅಂತ ಅವರು ಖಂಡಿತವಾಗಿಯೂ ವಿಶ್ಲೇಷಿಸುತ್ತಾರೆ.


ಅವರು ತೃಪ್ತರಾದ ನಂತರವೇ ಅವರು ಸಂಬಂಧಕ್ಕೆ ಮೀಸಲಾದ ಮುದ್ರೆ ಹಾಕುತ್ತಾರೆ. ಇದು ಎಲ್ಲವನ್ನೂ ಸರಿಯಾಗಿ ಮಾಡುವ ಸಹಜ ಅಗತ್ಯದಿಂದ ಸಾಧ್ಯವಾಗುತ್ತದೆ ಅಂತ ಹೇಳಬಹುದು.


ಕರ್ಕಾಟಕ (ಜೂನ್ 21-ಜುಲೈ 22)
ಈ ರಾಶಿಚಕ್ರ ಚಿಹ್ನೆಯ ಜನರು ತಮಗೆ ಸೇರಿದವರಲ್ಲಿ ತುಂಬಾನೇ ಸೂಕ್ಷ್ಮ ಗುಣಲಕ್ಷಣಗಳಿರುವವರಾಗಿರುತ್ತಾರೆ. ಈ ಸಂವೇದನಾಶೀಲ ಕರ್ಕಾಟಕ ರಾಶಿಯವರು ಒಡನಾಟ ಮತ್ತು ಸುರಕ್ಷತೆಯನ್ನು ಪ್ರೀತಿಸುತ್ತಾರೆ.


ಇದನ್ನೂ ಓದಿ: Jaya Ekadashi 2023: ಜಯ ಏಕಾದಶಿಯಂದು ತಪ್ಪದೇ ಈ ಕೆಲಸ ಮಾಡಿ, ಇಷ್ಟಾರ್ಥ ಸಿದ್ಧಿ ಗ್ಯಾರಂಟಿ


ಆದರೆ ಅವರು ನಿಜವಾಗಿಯೂ ಒಂದು ಸಂಬಂಧಕ್ಕೆ ಬೀಳುತ್ತಿದ್ದಾರೆಂದು ತಿಳಿಯುವವರೆಗೆ ಅದನ್ನು ಸುಲಭವಾಗಿ ತೆಗೆದುಕೊಳ್ಳುತ್ತಾರೆ. ಅವರು ತಮ್ಮ ಜೋಡಿದಾರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದನ್ನು ಇಷ್ಟಪಡುತ್ತಾರೆ ಮತ್ತು ಅವರು ಆ ವ್ಯಕ್ತಿಗೆ ಬದ್ಧರಾದ ನಂತರ ಯಾವುದಕ್ಕೂ ಮತ್ತು ಎಲ್ಲದಕ್ಕೂ ಸಿದ್ಧರಿರುತ್ತಾರೆ.


ವೃಷಭ ರಾಶಿ (ಏಪ್ರಿಲ್ 20-ಮೇ 20)
ಈ ರಾಶಿಚಕ್ರ ಚಿಹ್ನೆಯ ಜನರು ಬಲಶಾಲಿ ಮತ್ತು ಸ್ಥಿರವಾಗಿರುವಂತವರು ಆಗಿರುತ್ತಾರೆ. ವೃಷಭ ರಾಶಿಯವರು ಕಷ್ಟಪಟ್ಟು ತಮಗಾಗಿ ಜೋಡಿಗಾರರೊಂದಿಗೆ ಬೇಗನೆ ಸಂಬಂಧದಲ್ಲಿ ಬೀಳಲು ಇಷ್ಟಪಡುವುದಿಲ್ಲ. ಅವರು ಜೋಡಿದಾರರ ಬಗ್ಗೆ ತುಂಬಾನೇ ಪ್ರೀತಿ ಮತ್ತು ಕಾಳಜಿಯನ್ನು ವಹಿಸುತ್ತಾರೆ, ಆದರೆ ಸಂಬಂಧದ ದೃಷ್ಟಿಯಿಂದ ಅವರು ಸ್ವಲ್ಪ ನಿಧಾನವಾಗಿಯೇ ಮುಂದುವರೆಯುತ್ತಾರೆ.


ಇದನ್ನೂ ಓದಿ: Daily Horoscope: ಹಳೆಯ ನೆನಪುಗಳು ಹೆಚ್ಚು ಕಾಡಬಹುದು, ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ


ಅವರು ಪ್ರೀತಿಗೆ ಮುಕ್ತರಾಗಿದ್ದಾರೆ, ಆದರೆ ಅದನ್ನು ಗುರುತಿಸುವಲ್ಲಿ ಮತ್ತು ಸ್ವೀಕರಿಸುವಲ್ಲಿ ನಿಧಾನವಾಗಿರುತ್ತಾರೆ. ಒಮ್ಮೆ ಅವರು ಸಂಬಂಧದಲ್ಲಿ ಬಿದ್ದರೆ, ಅವರು ಅದರಲ್ಲಿ ತನು ಮನದಿಂದ ನಿಭಾಯಿಸುತ್ತಾರೆ.

Published by:ಗುರುಗಣೇಶ ಡಬ್ಗುಳಿ
First published: