Mobile Checking Lovers: ಈ 3 ರಾಶಿಯವರು ತುಂಬಾ ಅನುಮಾನಾಸ್ಪದರು! ಗುಟ್ಟಾಗಿ ಸಂಗಾತಿಯ ಫೋನ್ ಚೆಕ್ ಮಾಡುತ್ತಾರೆ

ಒಟ್ಟಿನಲ್ಲಿ ಆಕೆ ವಿಶ್ವಾಸಾರ್ಹವಾದ ವ್ಯಕ್ತಿಯೇ ಎಂದು ಪತ್ತೆ ಹಚ್ಚುವ ಸಲುವಾಗಿ ಸಂಗಾತಿಯ ಫೋನ್​ ಚೆಕ್​​ ಮಾಡುತ್ತಾರೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಅಭ್ಯಾಸವು ಮೂರು ರಾಶಿಚಕ್ರ ಚಿಹ್ನೆಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಈ ರಾಶಿಚಕ್ರದ ಚಿಹ್ನೆಗಳನ್ನು ಹೊಂದಿದ್ದವರು ನಿಮ್ಮ ಲವ್ವರ್ ಆಗಿದ್ದರೆ, ಅವರು ನಿಮ್ಮ ಮೇಲೆ ಅನುಮಾನವನ್ನು ಇಟ್ಟುಕೊಂಡಿರುತ್ತಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ಸ್ಮಾರ್ಟ್​ಫೋನ್​ನಲ್ಲೇ ಎಲ್ಲಾ ಮಾಹಿತಿ ಒಳಗೊಂಡಿರುವ ಕಾರಣ ಮತ್ತು ವೈಯ್ಯಕ್ತಿಕ ಮಾಹಿತಿಯನ್ನು ಸ್ಮಾರ್ಟ್​ಫೋನ್​ನಲ್ಲಿ (Smart Phone) ಇರಿಸಿಕೊಳ್ಳುವ ಕಾರಣ, ಬೇರೆಯವರಿಗೆ ಫೋನನ್ನು ಕೊಡಲು ಕೆಲವರು ಹಿಂದೇಟು ಹಾಕುತ್ತಾರೆ. ಅದರಲ್ಲೂ ವಿಶೇಷವಾಗಿ ಸಂಗಾತಿ (Lover) ತಮ್ಮ ಫೋನ್ ಅನ್ನು ಪರಿಶೀಲಿಸಲು ಒಪ್ಪುವುದಿಲ್ಲ. ಆದರೆ ಕೆಲವರು ತಮ್ಮ ಸಂಗಾತಿಯ ಫೋನ್ ಅನ್ನು ಪರಿಶೀಲಿಸಿಯೇ ಪರಿಶೀಲಿಸುತ್ತಾರೆ. ಅಂದರೆ ಅವರಿಗಿರುವ ಅನುಮಾನವನ್ನು ಪತ್ತೆ ಹಚ್ಚಲು ಮತ್ತು ಸಂಗಾತಿ ಪ್ರಾಮಾಣಿಕವಾಗಿ ಪ್ರೀತಿ (Love) ಮಾಡುತ್ತಾಳೆಯೇ? ಅಥವಾ ಮೋಸ (cheating) ಮಾಡುತ್ತಿದ್ದಾಳೆಯೇ? ಎಂದು ತಿಳಿಯಲು ಹೀಗೆ ಮಾಡುತ್ತಾರೆ.

    ಒಟ್ಟಿನಲ್ಲಿ ಆಕೆ ವಿಶ್ವಾಸಾರ್ಹವಾದ ವ್ಯಕ್ತಿಯೇ ಎಂದು ಪತ್ತೆ ಹಚ್ಚುವ ಸಲುವಾಗಿ ಸಂಗಾತಿಯ ಫೋನ್​ ಚೆಕ್​​ ಮಾಡುತ್ತಾರೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಅಭ್ಯಾಸವು ಮೂರು ರಾಶಿಚಕ್ರ ಚಿಹ್ನೆಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಈ ರಾಶಿಚಕ್ರದ ಚಿಹ್ನೆಗಳನ್ನು ಹೊಂದಿದ್ದವರು ನಿಮ್ಮ ಲವ್ವರ್ ಆಗಿದ್ದರೆ, ಅವರು ನಿಮ್ಮ ಮೇಲೆ ಅನುಮಾನವನ್ನು ಇಟ್ಟುಕೊಂಡಿರುತ್ತಾರೆ. ಮಾತ್ರವಲ್ಲದೆ, ನಿಮ್ಮ ಸ್ಮಾರ್ಟ್​ಫೋನನ್ನು ಚೆಕ್​ ಮಾಡುತ್ತಾರೆ. ಅಂದಹಾಗೆಯೇ, ಅನುಮಾನ ಪಡುವ ಆ ಮೂರು ರಾಶಿಚಕ್ರ ಯಾವುದು ಎಂದು ಮೊದಲಿಗೆ ತಿಳಿಯೋಣ.

    ವೃಶ್ಚಿಕ ರಾಶಿ

    ವೃಶ್ಚಿಕ ರಾಶಿಯವರು ಯಾವುದನ್ನೂ ಕುರುಡಾಗಿ ನಂಬುವುದಿಲ್ಲ. ಅವರು ಎಲ್ಲವನ್ನೂ ತಮ್ಮ ಕಣ್ಣುಗಳಿಂದ ನೋಡಿದ ನಂತರವೇ ನಂಬುತ್ತಾರೆ. ಆದರೆ ಸಂಗಾತಿಯ ವಿಚಾರದಲ್ಲಿ ಅನುಮಾನನವಿದ್ದರೆ ರಹಸ್ಯ ಭೇದಿಸಲು ಮುಂದಾಗುತ್ತಾರೆ. ಅಂದಹಾಗೆಯೇ ಈ ರಾಶಿಯವರು ಇತರರಿಗಿಂತ ಹೆಚ್ಚು ಅನುಮಾನಾಸ್ಪದರು. ಈ ಅನುಮಾನದಿಂದಲೇ ತಮ್ಮ ಪ್ರೇಮಿಯ ಸಂದೇಶ ಅಥವಾ ಇ-ಮೇಲ್ ಗಳನ್ನು ಆಗಾಗ ಪರಿಶೀಲಿಸುತ್ತಾರೆ. ಅವರಿಗೆ ತಮ್ಮ ಪ್ರೇಮಿಯಲ್ಲಿ ಮೇಲೆ ಹೆಚ್ಚಿನ ನಂಬಿಕೆ ಇರುವುದಿಲ್ಲ. ಆದ್ದರಿಂದ ವೃಶ್ಚಿಕ ರಾಶಿಯವರು ಅನುಮಾನ ಪಡುವುದು ಹೆಚ್ಚು.

    ಮೀನ ರಾಶಿ

    ಮೀನ ರಾಶಿಯವರು ತಮ್ಮ ಜೀವನ ಸಂಗಾತಿಯಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿರುತ್ತಾರೆ. ಮಾತ್ರವಲ್ಲದೆ, ಅವರಿಗೆ ಕುತೂಹಲವು ತುಂಬಾ ಹೆಚ್ಚಾಗಿರುತ್ತದೆ. ಹಾಗಾಗಿ ಕುತೂಹಲತೆಯಿಂದಾದರೂ ಅವರು ತಮ್ಮ ಗೆಳೆಯ ಅಥವಾ ಗೆಳತಿಯ ಫೋನ್ ಚಾಟ್‌ಗಳನ್ನು ರಹಸ್ಯವಾಗಿ ವೀಕ್ಷಿಸುತ್ತಾರೆ. ಅದರಲ್ಲೂ ಸಂಗಾಥಿಯ ಫೋನ್​ ಪರಿಶೀಲಿಸದೇ ಬಿಡಲಾರರು.

    ಇದನ್ನೂ ಓದಿ: Real Story: ಅತಿಯಾದ ಜಿಮ್​ ಅಪಾಯಕ್ಕೆ ಆಹ್ವಾನ! ಈತನ ಕೈ ಕತ್ತರಿಸಲು ಆ ಒಂದು ವರ್ಕೌಟ್​ ಕಾರಣ!

    ಸಿಂಹ ರಾಶಿ

    ಸಿಂಹ ರಾಶಿಯವರು ಇತರರಿಂದ ಬಹಳಷ್ಟು ಗೌಪ್ಯತೆಯನ್ನು ಬಯಸುತ್ತಾರೆ. ಅವರು ತನ್ನ ಫೋನ್ ಅನ್ನು ಲಾಕ್ ಮಾಡುತ್ತಾರೆ ಮತ್ತು ಫೋಲ್ಡರ್‌ಗಳಿಗೆ ಪಾಸ್‌ವರ್ಡ್ ಅನ್ನು ಹಾಕಿರುತ್ತಾರೆ. ಫೋನ್‌ನಲ್ಲಿ ತಮ್ಮ ವೈಯಕ್ತಿಕ ವಿವರಗಳನ್ನು ಯಾರೂ ನೋಡದಂತೆ ಎಚ್ಚರಿಕೆ ವಹಿಸುತ್ತಾರೆ ಮತ್ತು ಇತರರ ವೈಯಕ್ತಿಕ ವಿವರಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಾರೆ.

    ಮಾತ್ರವಲ್ಲದೆ, ಸಂಗಾತಿ ಬಳಿ ನೇರವಾಗಿ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳಲು ಬಯಸುತ್ತಾರೆ. ಆಕೆ ನೀಡಲು ನಿರಾಕರಿಸಿದರೆ ಆಕೆಯ ಫೊನನ್ನು ಕದ್ದು, ವೀಕ್ಷಿಸಲು ಅಥವಾ ಅನುಮಾನವನ್ನು ಬಗೆಹರಿಸಲು ಬಯಸುತ್ತಾರೆ. ಒಂದು ವೇಳೆ ಸಂಗಾತಿ ಪಾಸ್​ವರ್ಡ್​ ಅಥವಾ ಫೋನ್​ ನಿರಾಕರಿಸಿದರೆ ಮೋಸ ಮಾಡುತ್ತೀಯಾ ಎಂದು ಗದರಿಸುತ್ತಾರೆ. ಸಿಂಹ ರಾಶಿಯವರಿಗೆ ಅವಕಾಶ ಸಿಕ್ಕರೆ ಸಂಗಾತಿಯ ರಹಸ್ಯಗಳನ್ನು ಕಂಡುಹಿಡಿಯಲು ಮತ್ತು ಆಕೆಯ ಫೋನ್ ಅನ್ನು ಸಂಪೂರ್ಣವಾಗಿ ಪರಿಶೀಲಿಸುತ್ತಾರೆ.

    ಇದನ್ನೂ ಓದಿ: Best Parenting Apps: ಪೋಷಕರೇ, ಮಕ್ಕಳ ಪಾಲನೆಯ ಬಗ್ಗೆ ಚಿಂತೆ ಮಾಡ್ಬೇಡಿ? ಈ 5 ಅಪ್ಲಿಕೇಶನ್‌ಗಳು ನಿಮಗೆ ಸಹಾಯ ಮಾಡುತ್ತೆ ನೋಡಿ

    ಮೇಲಿನ ರಾಶಿವರು ಮಾತ್ರವಲ್ಲದೆ, ವೃಷಭ ರಾಶಿಯವರು ತಮ್ಮ ಸಂಗಾತಿಯ ಬಗ್ಗೆ ರಹಸ್ಯಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಕರ್ಕಾಟಕ ರಾಶಿಯವರು ತಮ್ಮ ಸಂಗಾತಿಗೆ ತುಂಬಾ ನಿಷ್ಠರಾಗಿರುತ್ತಾರೆ. ಅವರು ತಮ್ಮ ಸಂಗಾತಿಯಿಂದ ಅದೇ ನಂಬಿಕೆಯನ್ನು ನಿರೀಕ್ಷಿಸುತ್ತಾರೆ. ಈ ನಿಷ್ಠೆಯನ್ನು ಪರೀಕ್ಷಿಸಲು ಅವರು ಸಾಂದರ್ಭಿಕವಾಗಿ ತಮ್ಮ ಸಂಗಾತಿಯ ರಹಸ್ಯವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಾರೆ. ಮೇಷ ಮತ್ತು ಮಕರ ರಾಶಿಗಳು ಸಹ ಅನುಮಾನ ಪಡುವ ರಾಶಿಗಳಾಗಿವೆ. ಆದ್ದರಿಂದ, ಅವರು ಕೂಡ ಸಂಗಾತಿಯ ಮೊಬೈಲ್ ಪರಿಶೀಲಿಸಲು ಸಾಧ್ಯವಿದೆ.
    Published by:Harshith AS
    First published: