• Home
  • »
  • News
  • »
  • astrology
  • »
  • Astrology: ಈ ರಾಶಿಯವರಿಗೆ ತಮ್ಮ ಸಂಗಾತಿಗೆ ಸಹಾಯ ಮಾಡೋದು ಅಂದ್ರೆ ಬಹಳ ಇಷ್ಟವಂತೆ

Astrology: ಈ ರಾಶಿಯವರಿಗೆ ತಮ್ಮ ಸಂಗಾತಿಗೆ ಸಹಾಯ ಮಾಡೋದು ಅಂದ್ರೆ ಬಹಳ ಇಷ್ಟವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Best Zodiac Signs: ಗಂಡ-ಹೆಂಡತಿಯ ಸಂಬಂಧದಲ್ಲಿ ತಮ್ಮ ಸಂಗಾತಿಗೆ ಸಹಾಯ ಮಾಡುವುದನ್ನು ತುಂಬಾನೇ ಆನಂದಿಸುವ ಈ 4 ರಾಶಿಚಕ್ರ ಚಿಹ್ನೆಯ ಜನರ ಬಗ್ಗೆ ಮಾಹಿತಿ ಇಲ್ಲಿದೆ.

  • Share this:

ಸಂಸಾರ (Family) ಅನ್ನೋದು ಒಂದು ಎತ್ತಿನ ಬಂಡಿ ಇದ್ದಂತೆ, ಇದಕ್ಕೆ ಗಂಡ-ಹೆಂಡತಿ (Husband And Wife) ಇಬ್ಬರು ಎರಡು ಜೋಡಿ ಎತ್ತುಗಳಿದ್ದಂತೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಎರಡು ಎತ್ತುಗಳು ಸಮಾನವಾಗಿ ಎತ್ತಿನ ಬಂಡಿಯ ತೂಕವನ್ನು ತಮ್ಮ ಹೆಗಲ ಮೇಲೆ ಹೊತ್ತಿಕೊಂಡು ಹೋದರೆ, ಬಂಡಿ ಹೇಗೆ ಆರಾಮಾಗಿ ಮುಂದಕ್ಕೆ ಹೋಗುತ್ತದೆಯೋ, ಅದೇ ರೀತಿ ಸಂಸಾರ ಎಂಬ ಬಂಡಿಯ ಭಾರವನ್ನು ಗಂಡ-ಹೆಂಡತಿ ಸಮನಾಗಿ ತಮ್ಮ ಹೆಗಲ ಮೇಲೆ ಹೊತ್ತಿಕೊಂಡು ನಡೆದರೆ ಎತ್ತಿನ ಬಂಡಿಯಷ್ಟೆ ಸುಗಮವಾಗಿ ಸಂಸಾರದ ಬಂಡಿ ಸಲೀಸಾಗಿ ಮುಂದಕ್ಕೆ ಹೋಗುತ್ತದೆ ಅಂತ ಹೇಳಬಹುದು.


ಒಟ್ಟಿನಲ್ಲಿ ಹೇಳುವುದಾದರೆ, ಗಂಡ-ಹೆಂಡತಿಯ ಸಂಬಂಧದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಬಾಳ್ವೆ ಮಾಡುವುದು ಒಳ್ಳೆಯದು ಅಂತ ಹೇಳಬಹುದು. ಒಬ್ಬ ಸಂಗಾತಿಯು ಇನ್ನೊಬ್ಬರಿಗಾಗಿ ಏನನ್ನಾದರೂ ಮಾಡಿದಾಗ, ಸಮಾನ ಪ್ರಮಾಣದ ವಾತ್ಸಲ್ಯ ಮತ್ತು ಪ್ರೀತಿಯನ್ನು ಮರಳಿ ಪಡೆಯಲು ನಿರೀಕ್ಷೆಗಳನ್ನು ಬೆಳೆಸಿಕೊಳ್ಳುತ್ತಾರೆ.


ಆದರೆ ಇದು ಕೆಲವೊಮ್ಮೆ ಮರಳಿ ಸಿಗುವುದಿಲ್ಲ, ಆದರೆ ಕೆಲವು ರಾಶಿಚಕ್ರ ಚಿಹ್ನೆಯ ಜನರು ತಮ್ಮ ಸಂಗಾತಿಗೆ ಸಹಾಯ ಮಾಡುವುದಕ್ಕೆ ತುಂಬಾನೇ ಖುಷಿ ಪಡುತ್ತಾರೆ ಅಂತ ಹೇಳಬಹುದು.


ಗಂಡ-ಹೆಂಡತಿಯ ಸಂಬಂಧದಲ್ಲಿ ತಮ್ಮ ಸಂಗಾತಿಗೆ ಸಹಾಯ ಮಾಡುವುದನ್ನು ತುಂಬಾನೇ ಆನಂದಿಸುವ ಈ 4 ರಾಶಿಚಕ್ರ ಚಿಹ್ನೆಯ ಜನರ ಬಗ್ಗೆ ತಿಳಿದುಕೊಳ್ಳಿರಿ.


1. ವೃಷಭ ರಾಶಿ


ವೃಷಭ ರಾಶಿಯವರು ತಮ್ಮ ಸಂಗಾತಿಗಳಿಗೆ ಎಲ್ಲಾ ಕೆಲಸಗಳಲ್ಲಿಯೂ ಸಹಾಯ ಮಾಡಲು ಇಷ್ಟಪಡುತ್ತಾರೆ. ತಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಬಂಧವನ್ನು ಹಂಚಿಕೊಳ್ಳಲು ಅವರು ತಮ್ಮ ಸಂಗಾತಿಯ ಬಗ್ಗೆ ಸಂಪೂರ್ಣವಾದ ಗಮನವನ್ನು ನೀಡುತ್ತಾರೆ.


ಇದನ್ನೂ ಓದಿ: ಕನ್ಯಾ ರಾಶಿಯವರ ಹೊಸವರ್ಷ ಹೀಗಿರಲಿದೆಯಂತೆ


ಅವರು ತಮ್ಮ ಸಂಗಾತಿಗಳು ಸಹ ಅವರಷ್ಟೇ ಅವರಿಗೆ ಸಹಾಯ ಮಾಡಲಿ ಮತ್ತು ಪ್ರೀತಿಯನ್ನು ನೀಡಲಿ ಅಂತ ನಿರೀಕ್ಷೆ ಸಹ ಪಡುತ್ತಾರೆ. ಈ ರಾಶಿಚಕ್ರ ಚಿಹ್ನೆಯ ಜನರು ತಮ್ಮ ಸಂಗಾತಿಯನ್ನು ಮೆಚ್ಚಿಸಲು ಏನನ್ನಾದರೂ ಮಾಡುತ್ತಾರೆ ಮತ್ತು ಅವರು ಎಂದಿಗೂ ಅವರಿಂದ ನಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುವುದಿಲ್ಲ.




2. ಕರ್ಕಾಟಕ ರಾಶಿ


ಕರ್ಕಾಟಕ ರಾಶಿಯ ಜನರು ತಮ್ಮ ಸಂಗಾತಿಯನ್ನು ಪೋಷಿಸುವ ಮತ್ತು ಕಾಳಜಿ ವಹಿಸುವವರಾಗಿರುತ್ತಾರೆ. ಅವರು ತಮ್ಮ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ತಮ್ಮ ಸಂಗಾತಿಗೆ ಅನ್ನಿಸುವಂತೆ ಮಾಡಲು ಎಂದಿಗೂ ಬಯಸುವುದಿಲ್ಲ.


ಈ ರಾಶಿಯ ಜನರು ತಮ್ಮ ಸಂಗಾತಿಯನ್ನು ಬೆಂಬಲಿಸಲು ಮತ್ತು ಅವರಿಗೆ ಸಹಾಯ ಮಾಡಲು ಎಂತಹ ಕೆಲಸಕ್ಕೂ ಸಹ ಮುಂದಾಗುತ್ತಾರೆ. ಅವರು ತಮ್ಮ ಸಂಗಾತಿಯ ಬೇಡಿಕೆಗಳನ್ನು ಪೂರೈಸಲು ಸದಾ ಸಿದ್ಧರಿರುತ್ತಾರೆ, ಅದರರ್ಥ ಅವರನ್ನು ಆರಾಮವಾಗಿಡಲು ಅವರ ಕೆಲಸದಲ್ಲಿ ಸಹಾಯ ಮಾಡುತ್ತಾರೆ.


3. ಕನ್ಯಾ ರಾಶಿ


ಕನ್ಯಾ ರಾಶಿಯವರು ತಮ್ಮ ಸಂಗಾತಿಯ ಬಗ್ಗೆ ತುಂಬಾನೇ ಗಮನ ನೀಡುತ್ತಾರೆ ಎಂದು ಹೇಳಬಹುದು. ಅವರು ಯಾವಾಗಲೂ ತಮ್ಮ ಸಂಗಾತಿಗಳನ್ನು ಕೀಳರಿಮೆಯಿಂದ ದೂರವಿಡಲು ಮತ್ತು ಅವರು ನಿರಾಳರಾಗುವಂತೆ ಮಾಡಲು ಅವರಿಗಾಗಿ ಕೆಲಸಗಳಲ್ಲಿ ಸಹಾಯ ಮಾಡಲು ಇಷ್ಟಪಡುವವರಾಗಿರುತ್ತಾರೆ ಎಂದು ಹೇಳಬಹುದು.


ಈ ರಾಶಿಚಕ್ರ ಚಿಹ್ನೆಯ ಜನರು ತಮ್ಮ ಸಂಗಾತಿಯ ಅಗತ್ಯಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳುವುದು ಮತ್ತು ಅವರಿಗೆ ಕೇಳದೆಯೇ ಮನೆಯ ಕೆಲಸಗಳಲ್ಲಿ ಸಹಾಯ ಮಾಡುವುದನ್ನು ಮಾಡುತ್ತಾರೆ.


4. ತುಲಾ ರಾಶಿ


ತುಲಾ ರಾಶಿಯ ಜನರು ತಮ್ಮ ಸಂಗಾತಿಗಳಿಗೆ ತುಂಬಾನೇ ಪ್ರಾಮಾಣಿಕರಾಗಿರುತ್ತಾರೆ. ತಮ್ಮ ಸಂಬಂಧದ ವಿಚಾರಕ್ಕೆ ಬಂದಾಗ ತಮ್ಮನ್ನು ತಾವು ಸುಧಾರಿಸಿಕೊಳ್ಳುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ.


ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲಿ ನಂಬರ್ 7 ಇದ್ರೆ ಹೊಸವರ್ಷದಲ್ಲಿ ನಿಮ್ಮದೇ ಹವಾ


ಇವರು ತಮ್ಮ ಸಂಗಾತಿಗೆ ಪ್ರೀತಿಯನ್ನು ತೋರಿಸುವುದು, ಅವರ ಬಿಲ್ ಗಳನ್ನು ಸಹ ಕೇಳದೆ ಪಾವತಿಸುವುದರಿಂದ ಹಿಡಿದು ಕೆಲವೊಮ್ಮೆ ಅವರಿಗೆ ಹೊರಗೆ ಕರೆದುಕೊಂಡು ಹೋಗಿ ಒಳ್ಳೆಯ ಊಟ ಮಾಡಿಸುವವರೆಗೆ ಎಲ್ಲವನ್ನೂ ಮಾಡುತ್ತಾರೆ.


ಒಟ್ಟಿನಲ್ಲಿ ಹೇಳುವುದಾದರೆ ಈ ರಾಶಿಚಕ್ರ ಚಿಹ್ನೆಗಳ ಜನರು ತಮ್ಮ ಸಂಗಾತಿಗಳಿಗೆ ಸಹಾಯ ಮಾಡುವುದನ್ನು ಆನಂದಿಸುತ್ತಾರೆ ಮತ್ತು ಅವರು ಅವಲಂಬಿತರಾಗಿದ್ದಾಗ ಅವರು ಕೃತಜ್ಞರಾಗಿರುತ್ತಾರೆ. ಅವರು ನಿಜವಾಗಿಯೂ ಅವರ ಬಗ್ಗೆ ಕಾಳಜಿ ವಹಿಸುತ್ತಾರೆ ಮತ್ತು ಅವರನ್ನು ಹೆಚ್ಚುವರಿ ಕಷ್ಟಕ್ಕೆ ಸಿಲುಕಿಸಲು ಬಯಸುವುದಿಲ್ಲ.

Published by:Sandhya M
First published: