Lord Shiva: ಈ ರಾಶಿಯವರ ಮೇಲೆ ಸದಾ ಇರಲಿದೆ ಶಿವನ ಆಶೀರ್ವಾದ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ರಾಶಿಗಳ ಮೇಲೆ ಶಿವನ ವಿಶೇಷ ಆಶೀರ್ವಾದ ಇದೆಯಂತೆ. ಕೆಲ ರಾಶಿಯವರು ಶಿವನ ಕೃಪೆಗೆ ಪಾತ್ರರಾಗಿದ್ದಾರಂತೆ. ದಿನವೂ ಶಿವನ ಧ್ಯಾನ, ಜಪ ಮಾಡಿದರೆ ಸುಖ ಸಂತೋಷ ನೆಲೆಯಾಗುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೈಲಾಸವಾಸಿ, ಸ್ಮಶಾನವಾಸಿ, ಪಾರ್ವತಿವಲ್ಲಭ ಎಂದೆಲ್ಲ ಕರೆಯಿಸಿಕೊಳ್ಳುವ ಭಗವಂತ ಶಿವನು (Lord Shiva) ತನ್ನ ಭಕ್ತರನ್ನು (Devotees) ಎಂದಿಗೂ ಕೈ ಬಿಡಲಾರ. ಬೇಡಿದ ವರಗಳನ್ನು ತ್ವರಿತವಾಗಿ ಕರುಣಿಸುವ ಕರುಣಾಮಯ ಶಿವ. ಶಿವನೊಲಿದರೆ ಭಯವಿಲ್ಲ, ಶಿವ ಮುನಿದರೆ ಬದುಕಿಲ್ಲ ಎಂಬ ಮಾತು ಭಕ್ತರನ್ನು ಪರವಶವಾಗಿಸುತ್ತದೆ. ಶಿವನ ವ್ರತ, ಭಕ್ತಿ, ಪೂಜೆ ಮಾಡುವವರಿಗೆ ಯಾವುದೇ ರೀತಿಯ ದುಃಖ, ಸಂಕಟಗಳು ಹತ್ತಿರ ಸುಳಿಯಲ್ಲ. ಎಂಥಹುದೇ ತೊಂದರೆಯಿದ್ದರೂ ಅದು ತಾನಾಗೇ ನಿವಾರಣೆ ಆಗುತ್ತದೆ ಎಂಬುದು ಶಿವನ ನಂಬಿದ ಪರಮಾತ್ಮನಲ್ಲಿ ಭಕ್ತಿ, ಶ್ರದ್ಧೆ, ಪೂಜೆ (Pooja) ಮಾಡುವ ಎಲ್ಲರ ಅನುಭವದ (Experience) ಮಾತು. ಏನೇ ಕಷ್ಟ ಎದುರಾದರೂ ಪರಮಾತ್ಮನಲ್ಲಿ ನಂಬಿಕೆಯಿಟ್ಟು, ಮೃತ್ಯುಂಜಯನ ಜಪ ಮಾಡಬೇಕು. ಸದಾಶಿವನ ಆರಾಧನೆ ಇಷ್ಟಾರ್ಥ ಸಿದ್ಧಿಗೆ ಅನುಕೂಲ ಮಾಡಿಕೊಡುತ್ತದೆ. ಬಂದ ಸಂಕಷ್ಟಗಳು ಹಾಗೆಯೇ ಮಾಯವಾಗುತ್ತವೆ ಎಂಬುದು ಭಕ್ತರ ಮಾತು.

    ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ರಾಶಿಗಳ ಮೇಲೆ ಶಿವನ ವಿಶೇಷ ಆಶೀರ್ವಾದ ಇದೆಯಂತೆ. ಕೆಲ ರಾಶಿಯವರು ಶಿವನ ಕೃಪೆಗೆ ಪಾತ್ರರಾಗಿದ್ದಾರಂತೆ. ಈ ರಾಶಿಯವರು ದಿನವೂ ಶಿವನ ಧ್ಯಾನ, ಜಪ ಮಾಡಿದರೆ ಸಕಲ ಸಂಕಷ್ಟಗಳು ದೂರವಾಗಿ, ಬದುಕಲ್ಲಿ ಸುಖ, ಸಂತೋಷ ನೆಲೆಯಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ. ಎಲ್ಲವೂ ಒಂದು ನಂಬಿಕೆ. ನಂಬಿಕೆ ಬಲವಾಗಿದ್ದರೆ ಅದರ ಶಕ್ತಿ ಇದ್ದೇ ಇರುತ್ತದೆ. ಶಿವನ ಪ್ರೀತಿ, ಕರುಣೆ, ಕೃಪೆ ಎಲ್ಲವೂ ಭಕ್ತರ ಮೇಲಿರುತ್ತದೆ.

    ಶಿವನಿಗೆ ಅತ್ಯಂತ ಪ್ರಿಯವಾದ ರಾಶಿಗಳೆಂದರೆ ಮೇಷ ರಾಶಿ, ವೃಷಭ ರಾಶಿ, ಕುಂಭ ರಾಶಿ, ಕರ್ಕ ರಾಶಿ ಹಾಗೂ ಮಕರ ರಾಶಿ.

    ಮೇಷ ರಾಶಿ:

    ಮೇಷ ರಾಶಿಯವರು ವಿಶೇಷವಾಗಿ ಶಿವನ ಆಶೀರ್ವಾದ, ಕೃಪೆಗೆ ಪಾತ್ರರಾಗಿದ್ದಾರೆ. ಜ್ಯೋತಿಷ್ಯಶಾಸ್ತ್ರದ ಹಾಗೂ ನಂಬಿಕೆಗಳ ಪ್ರಕಾರ ಮೇಷ ರಾಶಿಯವರು ಪ್ರತಿದಿನ ಶಿವನನ್ನು ಪೂಜಿಸಬೇಕು. ಮೇಷ ರಾಶಿಯ ಜನರು ನಿಯಮಿತವಾಗಿ ಶಿವಲಿಂಗಕ್ಕೆ ನೀರನ್ನು ಅರ್ಪಿಸಬೇಕು. ಶಿವಲಿಂಗಕ್ಕೆ ನೀರನ್ನು ಅರ್ಪಿಸುವುದರಿಂದ ಶಿವನ ವಿಶೇಷ ಅನುಗ್ರಹ ದೊರೆಯುತ್ತದೆ.

    ಇದನ್ನೂ ಓದಿ:  ವೃಷಭ ರಾಶಿಯವರು ಹಣಕಾಸಿನ ಬಗ್ಗೆ, ಧನು ರಾಶಿಯವರು ಆರೋಗ್ಯದ ಬಗ್ಗೆ ಎಚ್ಚರವಹಿಸಿ

    ವೃಷಭ ರಾಶಿ:

    ವೃಷಭ ರಾಶಿಯ ಜನರು ಶಿವನ ರೂಪಕ್ಕೆ ತುಂಬಾ ಹತ್ತಿರವಾಗಿದ್ದಾರೆ. ಈ ರಾಶಿಯವರು ದುಃಖವಿರಲಿ, ಸಂತೋಷವಿರಲಿ ಎಂಥದ್ದೇ ಸಮಯ ಬಂದರೂ ಭಗವಾನ್ ಶಿವನನ್ನು ಜಪಿಸುತ್ತಲೇ ಇರುತ್ತಾರೆ. ಆದ್ದರಿಂದ ಶಿವನು ಅವರ ಪ್ರತಿಯೊಂದು ಇಚ್ಛೆಯನ್ನು ಪೂರೈಸುತ್ತಾನೆ. ಈ ರಾಶಿಯ ಮಂದಿ ಪ್ರತಿ ಸೋಮವಾರ ಶಿವನ ದೇವಾಲಯಕ್ಕೆ ಹೋಗಿ ಶಿವಲಿಂಗಕ್ಕೆ ಅಭಿಷೇಕ ಮಾಡಿಸುವುದರಿಂದ ಹೆಚ್ಚೆಚ್ಚು ಒಳ್ಳೆಯ ಅಭಿವೃದ್ಧಿ ಹೊಂದಿ, ಒಳ್ಳೆಯದಾಗುತ್ತದೆ.

    ಕರ್ಕ ರಾಶಿ:

    ಕರ್ಕ ರಾಶಿಯವರು ಭಗವಂತ ಶಿವನ ಕರುಣೆಗೆ ಪಾತ್ರರಾಗಿದ್ದಾರೆ. ಇವರಿಗೆ ಶಿವನ ಮೇಲೆ ತುಂಬಾ ಭಕ್ತಿ. ಇವರು ನೀಲಕಂಠ, ಈಶ್ವರನನ್ನು ಹಬ್ಬ-ಹರಿದಿನಗಳಲ್ಲಿ ತುಂಬಾ ನಿಷ್ಠೆ, ಶ್ರದ್ಧೆಯಿಂದ ಪೂಜೆ ಮಾಡುತ್ತಾರೆ, ಉಪವಾಸ, ವ್ರತಾಚರಣೆ ಮಾಡುತ್ತಾರೆ. ಈ ರಾಶಿಯವರ ಮೇಲೆ ಶಿವನಿಗೆ ವಿಶೇಷ ಕರುಣೆಯಿರುತ್ತದೆ.

    ಮಕರ ರಾಶಿ:

    ಮಕರ ರಾಶಿಯವರಿಗೆ ಶಿವನ ವಿಶೇಷ ಆಶೀರ್ವಾದವಿದೆ. ಮಕರ ರಾಶಿಯವರು ಪ್ರತಿದಿನ ಶಿವನ ಆರಾಧನೆ ಮಾಡಬೇಕು. 'ಓಂ ನಮಃ ಶಿವಾಯ' ಜಪವನ್ನು ಮಕರ ರಾಶಿಯವರು ಮಾಡಬೇಕು. ಭಗವಂತ ಸದಾಶಿವನನ್ನು ಭಕ್ತಿಯಿಂದ ಪೂಜಿಸಿದರೆ ಅವನ ಕೃಪೆಯಿಂದ ಈ ರಾಶಿಯವರ ಪ್ರತಿಯೊಂದು ಕಾರ್ಯವೂ ಯಶಸ್ವಿಯಾಗುತ್ತಾರೆ.

    ಇದನ್ನೂ ಓದಿ:  ಶ್ರೀರಾಮಚಂದ್ರನ ಸಹೋದರಿ ಶಾಂತಾಳ ಬಗ್ಗೆ ನಿಮಗೆಷ್ಟು ಗೊತ್ತು?

    ಕುಂಭ ರಾಶಿ:

    ಕುಂಭ ರಾಶಿಯ ಜನರು ಶಿವನಿಗೆ ಅತ್ಯಂತ ಪ್ರಿಯರು. ಕುಂಭ ರಾಶಿಯ ಜನರು ಶಿವಲಿಂಗಕ್ಕೆ ನೀರನ್ನು ಅರ್ಪಿಸಬೇಕು. ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾನ ಮಾಡಬೇಕು. ಧಾರ್ಮಿಕ ನಂಬಿಕೆಗಳ ಪ್ರಕಾರ, ಬಹುದ್ವಾರಿ ದಾನ ಮಾಡುವುದರಿಂದ ಬಹುಮುಖ ಫಲಿತಾಂಶಗಳು ದೊರೆಯುತ್ತವೆ.
    Published by:renukadariyannavar
    First published: