Zodiac signs: ಅಪಾಯ ಸವಾಲುಗಳಿಗೆ ಹೆದರದ ಧೈರ್ಯವಂತರು ಈ ಐದು ರಾಶಿಯವರು

Zodiac signs: ಸಿಂಹ ರಾಶಿಯವರು ಬಯಸಿದ್ದನ್ನು ಸಾಧಿಸುವ ಛಲ ಉಳ್ಳವರು. ಸವಾಲುಗಳು ಅಪಾಯಗಳೆಂದರೆ ಇವರಿಗೆ ಚಳ್ಳೆ ಹಣ್ಣು ತಿನ್ನಂತೆ. ಅಪಾಯಗಳನ್ನು ನಿವಾರಿಸುವಲ್ಲಿ ಇವರಿಗೆ ಎಲ್ಲಿಲ್ಲದ ಉತ್ಸಾಹ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿಯೊಬ್ಬರೂ ಜೀವನದಲ್ಲಿ ಅಪಾಯಗಳನ್ನು(Risks in life) ಎದುರಿಸಲು ಸಿದ್ಧರಾಗಿರುವುದಿಲ್ಲ. ಕೆಲವರು(Embrace) ಸುರಕ್ಷಿತರಾಗಿ ಹಾಗೂ ತಮಗೆ ಗೊತ್ತಿರುವಂತಹ ಜೀವನ (Life)ವಿಧಾನದಲ್ಲಿ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಇಂದಿನ ಲೇಖನದಲ್ಲಿ ನಾವು ನೀಡಲಿರುವ ಐದು ರಾಶಿಯರು ಜೀವನದಲ್ಲಿ ಬರುಂತಹ ಎಂತಹದ್ದೇ ಅಪಾಯಗಳನ್ನು ಸವಾಲುಗಳನ್ನು(problems) ಸ್ವೀಕರಿಸುವವರು. ಹಾಗಿದ್ದರೆ ಆ ಐದು ರಾಶಿಯವರು ಯಾರು ಎಂಬುದನ್ನು ನೋಡೋಣ. ಹೌದು ಇಂದಿನ ಲೇಖನದಲ್ಲಿ ನಾವು ನೀಡಿರುವ ಈ ಐದು ರಾಶಿಯವರು ತಮ್ಮ ವಿಭಿನ್ನ ಹಾಗೂ ಧೈರ್ಯದ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ ಮತ್ತು ಯಾವುದೇ ಸವಾಲುಗಳನ್ನು ಕ್ಷಣಮಾತ್ರದಲ್ಲಿ ನಿವಾರಿಸುವ (challenges momentarily) ಛಾತಿಯುಳ್ಳವರಾಗಿದ್ದಾರೆ.

ಇದನ್ನೂ ಓದಿ: ಪ್ರೀತಿಯ ಸುಳಿಗೆ ಬೇಗ ಸಿಲುಕುತ್ತಾರೆ ಈ ರಾಶಿಯ ಹುಡುಗಿಯರು

ಮಿಥುನ ರಾಶಿ
ಮಿಥುನ ರಾಶಿಯವರು ತಮ್ಮ ದ್ವಂದ್ವ ವ್ಯಕ್ತಿತ್ವಕ್ಕೆ ಖ್ಯಾತರಾಗಿದ್ದಾರೆ. ಇದು ಅವರ ಮನಸ್ಥಿತಿಯ ಮೇಲೂ ಪ್ರತಿಫಲನವನ್ನುಂಟು ಮಾಡುತ್ತದೆ. ಇವರು ಯಾವುದಾದರೂ ನಿರ್ಧಾರ ಮಾಡಿದರೆ ಅದನ್ನು ನಿರಾಯಾಸವಾಗಿ ಕೈಗೊಳ್ಳುವಲ್ಲಿ ದೃಷ್ಟಿ ನೆಡುತ್ತಾರೆ ಹಾಗಾಗಿ ಅವರಿಗೆ ಸವಾಲು ಎಂದರೆ ತುಂಬಾ ಸರಳ. ಅದೇ ರೀತಿ ಇವರು ಮುನ್ನುಗ್ಗುವ ಸ್ವಭಾವವನ್ನು ಹೊಂದಿದವರಾಗಿದ್ದಾರೆ.

ಸಿಂಹ ರಾಶಿ
ಈ ರಾಶಿಯವರು ಬಯಸಿದ್ದನ್ನು ಸಾಧಿಸುವ ಛಲ ಉಳ್ಳವರು. ಸವಾಲುಗಳು ಅಪಾಯಗಳೆಂದರೆ ಇವರಿಗೆ ಚಳ್ಳೆ ಹಣ್ಣು ತಿನ್ನಂತೆ. ಅಪಾಯಗಳನ್ನು ನಿವಾರಿಸುವಲ್ಲಿ ಇವರಿಗೆ ಎಲ್ಲಿಲ್ಲದ ಉತ್ಸಾಹ. ಧೈರ್ಯವಂತರಾಗಿರುವ ಸಿಂಹ ರಾಶಿಯವರು ಕ್ಷಣಮಾತ್ರದಲ್ಲಿ ತಾವು ಅಂದುಕೊಂಡಿದ್ದನ್ನು ಸಾಧಿಸುವ ವಿಶ್ವಾಸ ಹೊಂದಿದವರು. ಸಿಂಹದಂತಹ ದೃಢ ಮನೋಭಾವನೆ ಇವರದ್ದಾಗಿರುವುದರಿಂದ ಯಾವುದೇ ಸವಾಲುಗಳನ್ನು ಸ್ವೀಕರಿಸಲು ಹಿಂಜರಿಯುವುದಿಲ್ಲ ಮತ್ತು ಜೀವನದಲ್ಲಿ ಬರುವ ಯಾವುದೇ ಕಷ್ಟವನ್ನು ನಿವಾರಿಸುವಲ್ಲಿ ಹೆಚ್ಚು ಪ್ರಯತ್ನಪಡುತ್ತಾರೆ ಮತ್ತು ಅದನ್ನು ನಿವಾರಿಸುತ್ತಾರೆ.

ವೃಶ್ಚಿಕ ರಾಶಿ
ಇವರು ಧೈರ್ಯವಂತರು. ಸವಾಲನ್ನು ಸ್ವೀಕರಿಸುವಲ್ಲಿ ಇವರು ಯಾವಾಗಲೂ ಮೇಲುಗೈ ಸಾಧಿಸುತ್ತಾರೆ. ಜೀವನದಲ್ಲಿ ಸವಾಲುಗಳನ್ನು ಸ್ವೀಕರಿಸಲು ತುಂಬಾ ಜಾಣ್ಮೆಯಿಂದ ಮುಂದುವರಿಯುತ್ತಾರೆ. ಹೊಸದನ್ನು ಕಲಿಯಬೇಕೆಂಬ ಉಮೇದು ಇವರಲ್ಲಿ ಸದಾ ಕಾಲ ಇರುತ್ತದೆ. ಅವರು ಉತ್ಸಾಹ ಮತ್ತು ವೈವಿಧ್ಯತೆಯನ್ನು ಪ್ರೀತಿಸುತ್ತಾರೆ. ಸವಾಲುಗಳೆಂದರೆ ಇವರಿಗೆ ನೀರು ಕುಡಿದಷ್ಟು ಸುಲಭವಾಗಿರುತ್ತದೆ ಹಾಗೂ ಜೀವನದಲ್ಲಿ ಬರುವ ಕಷ್ಟಗಳನ್ನು ನಿವಾರಿಸುವ ಜಾಣ್ಮೆ ಕೂಡ ಇವರಲ್ಲಿರುತ್ತದೆ.

ಧನು ರಾಶಿ
ಇವರು ಸಾಹಸಮಯ ವ್ಯಕ್ತಿತ್ವವುಳ್ಳವರು. ಹೊಸ ವಿಷಯಗಳನ್ನು ಕಲಿಯುವುದು ಎಂದರೆ ಇವರಿಗೆ ತುಂಬಾ ಇಷ್ಟ. ಜೀವನಕ್ಕೆ ಹೊಸ ವಿಭಿನ್ನ ಅನುಭವಗಳನ್ನು ಸೇರಿಸುವ ಆಸೆಯುಳ್ಳವರು. ಸವಾಲಿನ ಅಪಾಯಕಾರಿ ಮಾರ್ಗಗಳನ್ನು ನಿರಾಯಾಸವಾಗಿ ಪರಿಹರಿಸುತ್ತಾರೆ. ಅನುಭವಗಳಿಂದ ಕಲಿತ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಛಾತಿ ಕೂಡ ಇವರದ್ದಾಗಿದೆ.

ಕುಂಭ ರಾಶಿ
ಯಾವುದೇ ಕೆಲಸವನ್ನು ಮಾಡಲು ಯಾರೂ ಸಿದ್ಧರಿಲ್ಲ ಎಂದಾಗ ಇವರು ತಾವಾಗಿಯೇ ಮುಂದುವರಿದು ಆ ಕೆಲಸವನ್ನು ಮಾಡಿ ಮುಗಿಸುತ್ತಾರೆ. ಇವರ ವ್ಯಕ್ತಿತ್ವ ಕೂಡ ಸೋಜಿಗಲ್ಲಿನಂತೆ ಸೆಳೆಯುವಂತಹದ್ದು. ಈ ಹಿಂದೆ ಯಾರೂ ತುಳಿಯದ ಹಾದಿಯಲ್ಲಿ ನಡೆಯಲು ಇವರು ಹೆದರುವುದಿಲ್ಲ.

ಇದನ್ನೂ ಓದಿ: Zodiac Sign: ಇತರರನ್ನು ನೋಡಿ ಹೊಟ್ಟೆ ಕಿಚ್ಚು ಪಡುವುದು ಈ ರಾಶಿಯವರ ಗುಣವಂತೆ

12 ಭಾಗಗಳಾಗಿ ವಿಂಗಡನೆ
ಖಗೋಲವೃತ್ತದ 360ಡಿಗ್ರಿಗಳನ್ನು ಅಶ್ವಿನಿ ನಕ್ಷತ್ರದ ಆರಂಭದ ಬಿಂದು 0 ಡಿಗ್ರಿಯಿಂದ ಆರಂಭಿಸಿ 30 ಡಿಗ್ರಿಗಳಂತೆ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ, (ಇವು ಸೌರಮಾನ ತಿಂಗಳುಗಳ ಹೆಸರುಗಳೂ ಆಗಿವೆ) ಹೀಗೆ, ಪ್ರತಿ 30 ಡಿಗ್ರಿಗಳ 12 ರಾಶಿಗಳಾಗಿ ವಿಂಗಡಿಸಿರುವುದೇ ಸೌರಮಾನ ತಿಂಗಳು. ಈ ಮೇಷಾದಿ ರಾಶಿಗಳಿಗೆ ಪ್ರತಿಯೊಂದಕ್ಕೂ ಒಂದೊಂದು ನಕ್ಷತ್ರಗಳ ಪುಂಜ ಇದೆ. ಅದನ್ನು ಆಕಾಶದಲ್ಲಿ ಸುಲಭವಾಗಿ ಗುರುತಿಸಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಆಕಾಶದಲ್ಲಿ ಸೂರ್ಯನ ಪಥವನ್ನು 12 ಭಾಗಗಳಾಗಿ ವಿಂಗಡಿಸಲಾಗುತ್ತದೆ. ಈ ವಿಂಗಡನೆಗಳೇ ರಾಶಿಗಳು.
Published by:vanithasanjevani vanithasanjevani
First published: