Zodiac Sign: ಸಿಕ್ಕಾಪಟ್ಟೆ ಸ್ಟ್ರಾಂಗ್​ ಆಗಿರುತ್ತಾರೆ ಈ ರಾಶಿಯ ಮಹಿಳೆಯರು

ಜ್ಯೋತಿಷ್ಯ ಮತ್ತು ಈ ರಾಶಿಚಕ್ರ ಚಿಹ್ನೆಗಳು (Zodiac Sign) ತಮ್ಮ ಮನಸ್ಸಿನ ಶಕ್ತಿಯೊಂದಿಗೆ ಬಹಳಷ್ಟು ಸಂಬಂಧ ಹೊಂದಿವೆ ಎಂದು ನಂಬಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಮಹಿಳೆಯರು (Women) ಭಾವನಾತ್ಮಕವಾಗಿ ನೋಡುಗರ ಕಣ್ಣಿಗೆ ಆಕೆಯು ಮೃದು ಸ್ವಭಾವದವಳಂತೆ (Soft Nature) ಕಂಡರೂ ಸಹ ಜೀವನದಲ್ಲಿ ಎಂತಹದೇ ಕಠಿಣ ಪರಿಸ್ಥಿತಿಯನ್ನು ಪ್ರಬಲವಾಗಿ ಎದುರಿಸುವ ಶಕ್ತಿ ಆಕೆಗೆ ಇರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೆಲವರಂತೂ ತಮ್ಮ ಜೀವನದಲ್ಲಿ ಅನೇಕ ಕಷ್ಟಗಳನ್ನು ಪ್ರಬಲವಾಗಿ ಎದುರಿಸಿ ಮುನ್ನಡೆದು ಸಾಧನೆ ಮಾಡಿರುತ್ತಾರೆ. ಇಂದು ಮಹಿಳೆಯರು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಬಹುತೇಕವಾಗಿ ಎಲ್ಲಾ ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಜ್ಯೋತಿಷ್ಯ ಮತ್ತು ಈ ರಾಶಿಚಕ್ರ ಚಿಹ್ನೆಗಳು (Zodiac Sign) ತಮ್ಮ ಮನಸ್ಸಿನ ಶಕ್ತಿಯೊಂದಿಗೆ ಬಹಳಷ್ಟು ಸಂಬಂಧ ಹೊಂದಿವೆ ಎಂದು ನಂಬಲಾಗಿದೆ. ಪ್ರಬಲ ನಾಯಕರಾಗಿ ಹೊರಹೊಮ್ಮುವ ರಾಶಿಚಕ್ರ ಚಿಹ್ನೆಗಳ ಪಟ್ಟಿ ಇಲ್ಲಿದೆ ನೋಡಿ.

1. ಮೇಷ ರಾಶಿಯ ಮಹಿಳೆಯರು ಅತ್ಯಂತ ಶಕ್ತಿಶಾಲಿ
ಸಾಮಾನ್ಯವಾಗಿ ಮೇಷ ರಾಶಿಯ ಮಹಿಳೆಯರನ್ನು ಮಹತ್ವಾಕಾಂಕ್ಷೆಯುಳ್ಳವರು ಮತ್ತು ಬಲವುಳ್ಳವರು ಎಂದು ಹೇಳಲಾಗುತ್ತದೆ. ಈ ರಾಶಿಯವರು ಒಳಗಡೆಯಿಂದ ಬೆಂಕಿ ಇದ್ದಂತೆ ಮತ್ತು ತುಂಬಾನೇ ಬಲಶಾಲಿಗಳಾಗಿರುತ್ತಾರೆ. ಆದ್ದರಿಂದ, ಇವರು ಯಾವುದೇ ಕಷ್ಟದ ಸಮಯವನ್ನು ಸಹ ತುಂಬಾನೇ ಸುಲಭವಾಗಿ ನಿಭಾಯಿಸುತ್ತಾರೆ. ಯಾವುದೂ ಇವರನ್ನು ತಡೆಯುವುದಿಲ್ಲ, ಏಕೆಂದರೆ ನೀವು ಯಾವುದೇ ಬೆಲೆ ತೆತ್ತಾದರೂ ಕೆಲಸ ಮುಗಿಸಲು ಪ್ರಯತ್ನ ಪಡುತ್ತೀರಿ ಮತ್ತು ಈ ಗುಣಲಕ್ಷಣಗಳ ಆಧಾರದ ಮೇಲೆ ಮೇಷ ರಾಶಿಯ ಮಹಿಳೆಯರು ಅತ್ಯಂತ ಶಕ್ತಿಶಾಲಿಗಳು ಎಂದು ಹೇಳಬಹುದು.

2. ಕರ್ಕಾಟಕ ರಾಶಿಯ ಮಹಿಳೆಯರು ಇತರರ ಬಗ್ಗೆ ಕಾಳಜಿ ಇರುವವರು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಶಿಯ ಮಹಿಳೆಯರು ಇತರರ ಬಗ್ಗೆ ತುಂಬಾನೇ ಕಾಳಜಿಯನ್ನು ಹೊಂದಿರುತ್ತಾರೆ ಮತ್ತು ಇವರು ತಾವು ಕಾಳಜಿ ವಹಿಸುವವರನ್ನು ರಕ್ಷಿಸುವ ಬಗ್ಗೆ ಉಗ್ರವಾಗಿರುತ್ತಾರೆ. ನಿಮ್ಮ ವ್ಯಕ್ತಿತ್ವದಿಂದ, ನಿಮ್ಮನ್ನು ತಾಯಿ ಕರಡಿಗೆ ಹೋಲಿಸಲಾಗುತ್ತಿದೆ, ಅದು ತನ್ನ ಮರಿಗಳನ್ನು ನೋಡಿಕೊಳ್ಳುತ್ತದೆ ಮತ್ತು ಮರಿಗಳಿಗೆ ಏನಾದರೂ ಸಮಸ್ಯೆ ಬಂದರೆ ಉಗ್ರವಾಗುತ್ತದೆಯೋ ಹಾಗೆ ಇವರು ಸಹ ಎಂದು ಹೇಳಬಹುದು. ಕರ್ಕಾಟಕ ರಾಶಿಯ ಮಹಿಳೆ ತನ್ನ ಸ್ವಂತ ಭಾವನೆಗಳನ್ನು ಆರೋಗ್ಯಕರ ರೀತಿಯಲ್ಲಿ ಹೇಗೆ ನಿರ್ವಹಿಸಬೇಕೆಂದು ತಿಳಿದಿರುತ್ತಾಳೆ.

3. ವೃಶ್ಚಿಕ ರಾಶಿ ಮಹಿಳೆಯರು ಒಳ್ಳೆಯ ತಂತ್ರಗಾರಿಕೆ ಮಾಡುವವರು
ಚೇಳುಗಳು ಹೇಗೆ ತಂತ್ರಗಳೊಂದಿಗೆ ಸಂಬಂಧ ಹೊಂದಿವೆ, ಹಾಗೆಯೇ ವೃಶ್ಚಿಕ ರಾಶಿಯ ಮಹಿಳೆಯರು ತುಂಬಾ ಬಲಶಾಲಿಯಾಗಿರುತ್ತಾರೆ. ಮೇಷ ಮತ್ತು ಕರ್ಕಾಟಕದಂತಹ ಇತರ ಯಾವುದೇ ಪ್ರಬಲ ಸೂರ್ಯ ಚಿಹ್ನೆಗಳಿಗಿಂತ ಭಿನ್ನವಾಗಿ, ವೃಶ್ಚಿಕ ರಾಶಿಯ ಮಹಿಳೆ ಯೋಜನೆಯ ವಿಷಯದಲ್ಲಿ ಮೌನ ಮನಸ್ಸಿನ ವ್ಯಕ್ತಿ ಎಂದು ತಿಳಿದುಬಂದಿದೆ. ಈ ರಾಶಿಯ ಮಹಿಳೆಯರು ಬಲವಾದ ಆಸೆಗಳನ್ನು ಹೊಂದಿರುವ ತಂತ್ರಗಾರ್ತಿಯಾಗಿರುತ್ತಾರೆ.  ಅವರ ಆಸೆಗಳನ್ನು ಈಡೇರಿಸಿಕೊಳ್ಳುವ ವಿಷಯದಲ್ಲಿ ತುಂಬಾನೇ ಹಠಮಾರಿ ಆಗಿರುತ್ತಾರೆ.

ಇದನ್ನು ಓದಿ:  ಅಕ್ಷಯ ತೃತೀಯ ಯಾವಾಗ; ಈ ದಿನದ ಧಾರ್ಮಿಕ ಮಹತ್ವ ಗೊತ್ತಾ?

4. ಮಕರ ರಾಶಿಯ ಮಹಿಳೆಯರು ಉತ್ಸಾಹಿಗಳು
ಈ ರಾಶಿಯ ಮಹಿಳೆಯರು ಕಡಿಮೆ ಭಯ ಮತ್ತು ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರುವವರು. ಒಳ್ಳೆಯ ಕೆಲಸಗಳನ್ನು ಮಾಡುವಾಗ ಇವರು ಎಂದಿಗೂ ವಿಫಲರಾಗುವುದಿಲ್ಲ. ಮಕರ ರಾಶಿಯ ಸ್ತ್ರೀ ಅತ್ಯಂತ ಯಶಸ್ವಿ ಮಹಿಳೆಯರಲ್ಲಿ ಒಬ್ಬಳು ಎಂದು ತಿಳಿದಿದೆ. ಏಕೆಂದರೆ ಅವಳು ಯಾವುದೇ ಪರಿಸ್ಥಿತಿಯಲ್ಲಿಯೂ ಹಿಂದೇಟು ಹಾಕುವುದಿಲ್ಲ. ಮುಂದೆ ಹೆಜ್ಜೆ ಹಾಕುವ ಮೊದಲು ಎರಡು ಬಾರಿ ಯೋಚಿಸುವುದಿಲ್ಲ. ಇವರು ಬಯಸಿದ್ದನ್ನು ಪಡೆಯಲು ಅವಿರತವಾಗಿ ಕೆಲಸ ಮಾಡುತ್ತಾರೆ ಮತ್ತು ಸ್ವಭಾವದಿಂದ ಅತ್ಯಂತ ಪ್ರಾಯೋಗಿಕ ಮತ್ತು ಉತ್ಸಾಹಿಯಾಗಿರುತ್ತಾರೆ.

ಇದನ್ನು ಓದಿ: Vastu Tips: ಫೋನ್, ಡೋರ್ ಬೆಲ್ ಹಾಗೂ ಗಡಿಯಾರ ಸದ್ದಿನ ಬಗ್ಗೆ ನಿರ್ಲಕ್ಷ್ಯ ಬೇಡ

5. ಸಿಂಹ ರಾಶಿಯ ಮಹಿಳೆಯರಿಗೆ ಹೆಚ್ಚು ಜನ ಫಾಲೋವರ್ಸ್
ಸಿಂಹ ರಾಶಿಯ ಮಹಿಳೆಯರು ಇತರರನ್ನು ಹೆಚ್ಚು ಗೌರವಿಸುತ್ತಾರೆ ಮತ್ತು ಈ ರಾಶಿಯ ಮಹಿಳೆ ಯಾವುದೇ ವಿಷಯದ ಮೇಲೆ ಅತ್ಯುತ್ತಮ ಗಡಿಗಳನ್ನು ಮತ್ತು ಮಿತಿಗಳನ್ನು ನಿಗದಿಪಡಿಸುತ್ತಾಳೆ. ಇವರು ಆಶಾವಾದಿ ಸ್ವಭಾವವನ್ನು ಹೊಂದಿರುವವರು ಮತ್ತು ಯಾವುದೇ ಸ್ವಯಂ-ಸಂದೇಹಗಳಿಲ್ಲದವರು. ಇವರಲ್ಲಿರುವ ಉತ್ಸಾಹವು ಅವರಿಗೆ ಕೆಲಸ ಮಾಡಲು ಮತ್ತು ಅತ್ಯುತ್ತಮ ಫಲಿತಾಂಶಗಳನ್ನು ತರಲು ಸಹಾಯ ಮಾಡುತ್ತದೆ. ಈ ಗುಣದಿಂದಲೇ ಹೆಚ್ಚು ಜನರು ನಿಮ್ಮ ಫಾಲೋವರ್‌ಗಳಾಗುತ್ತಾರೆ.

6. ಮೀನು ರಾಶಿಯ ಮಹಿಳೆಯರು ಕನಸುಗಾರ್ತಿಯರು
ಮೀನಿನ ರಾಶಿಚಕ್ರದ ಮಹಿಳೆಯರು ಭಾವನೆಗಳು ಮತ್ತು ಸಹಾನುಭೂತಿಯಿಂದ ತುಂಬಿದ ಆತ್ಮವನ್ನು ಹೊಂದಿರುತ್ತಾರೆ. ಆದರೆ ನಾವು ಶಕ್ತಿಯ ಬಗ್ಗೆ ಮಾತನಾಡುವಾಗ ಇವರು ದುರ್ಬಲರಲ್ಲ. ಇವರು ತುಂಬಾ ಬಲಶಾಲಿಗಳಾಗಿರದೆ ಇರಬಹುದು, ಆದರೆ ಇವರನ್ನು ಸುಲಭವಾಗಿ ಬೆದರಿಸಲು ಪ್ರಯತ್ನಿಸುವವರಿಂದ ಇವರು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಈ ರಾಶಿಯ ಮಹಿಳೆಯರು ಅವರಿಗೆ ಬೇಕಾದವರ ಪರವಾಗಿ ಸದಾ ನಿಲ್ಲುತ್ತಾರೆ. ಜ್ಯೋತಿಷ್ಯಶಾಸ್ತ್ರದ ಇತರ ರಾಶಿಗಳಿಗೆ ಹೋಲಿಸಿದರೆ ಅಂತಹ ಗುಣಲಕ್ಷಣಗಳು ನಿಮ್ಮನ್ನು ಕಡಿಮೆ ದುರ್ಬಲ ಮತ್ತು ಬಲಶಾಲಿಯನ್ನಾಗಿ ಮಾಡುತ್ತವೆ. ಆದ್ದರಿಂದ, ನಿಮ್ಮಲ್ಲಿರುವ ಬುದ್ಧಿವಂತಿಕೆ ನಿಮ್ಮನ್ನು ಸದಾ ಎಚ್ಚರವಾಗಿರಿಸುತ್ತದೆ.
Published by:Seema R
First published: