Zodiac Sign: ಒಬ್ಬರಿಗೆ ಒಬ್ಬರು ತಿಳಿಯದಂತೆ ಪರಸ್ಪರ ಪ್ರೀತಿಸುವ ರಾಶಿ ಇವರದಂತೆ

ಪರಸ್ಪರ ವಿರೋಧ ವ್ಯಕ್ತಿತ್ವ ಹೊಂದಿದ್ದರೂ, ರಹಸ್ಯವಾಗಿ ಒಬ್ಬರನ್ನೊಬ್ಬರು ಇಷ್ಟಪಡುವ ಅಂತಹ 4 ಜೋಡಿ ರಾಶಿಗಳ ಕುರಿತ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮನ್ನು ಯಾರು ಇಷ್ಟಪಡುತ್ತಿದ್ದಾರೆ (Like) ಎಂದು ಹೇಗೆ ತಿಳಿಯುವುದು..? ಇಲ್ಲ, ನಮ್ಮನ್ನು ಕಂಡರೆ ಯಾರಿಗಾದರು ಇಷ್ಟವಿದೆಯೇ ಅಥವಾ ಇಲ್ಲವೇ ಎಂದು ಅರ್ಥ ಮಾಡಿಕೊಳ್ಳುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಎಷ್ಟೋ ಸಂದರ್ಭದಲ್ಲಿ , ನಾವು ಒಬ್ಬರೆಡೆಗೆ ಆಕರ್ಷಿತರಾಗುವುದನ್ನು ಒಂದು ರೀತಿಯ ಕಹಿ ಸತ್ಯ (Bitter Truth) ಎನ್ನಬಹುದು. ಏಕೆಂದರೆ, ನಾವು ಯಾರೆಡೆಗೆ ಆಕರ್ಷಿರಾಗಿದ್ದೇವೋ (Attract) , ಅವರಿಗೆ ನಾವು ಅವರನ್ನು ಇಷ್ಟಪಡುತ್ತಿರುವುದು ಗೊತ್ತೇ ಇರುವುದಿಲ್ಲ.

ಕೆಲವೊಮ್ಮೆ ಬೇರೆಯವರೆಡೆಗಿನ ನಮ್ಮ ಆಕರ್ಷಣೆ ಬಹಳಷ್ಟು ಗೊಂದಲಗಳಿಗೆ ಕೂಡ ಕಾರಣವಾಗಬಹುದು. ಹಾಗಾಗಿ, ಏನಾದರೂ ಆಗಲಿ ಎಂದುಕೊಂಡು, ಎಷಾಗುತ್ತದೋ ಅಷ್ಟು ಧೈರ್ಯದಿಂದ, ಮೊದಲೇ ನಿಮ್ಮ ಭಾವನೆಗಳನ್ನು ಹೇಳಿ ಬಿಡುವುದು ಉತ್ತಮ ಮಾರ್ಗವೇನೋ ಸರಿ. ಆದರೆ, ಹಾಗೆ ಮಾಡುವುದು ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ ಬಿಡಿ. ಹಾಗಾದರೆ ಏನು ಮಾಡಬಹುದು..? ರಾಶಿ ಚಿಹ್ನೆಗಳ ಸಹಾಯ ಪಡೆಯಬಹುದು. ಅಂದರೆ, ಯಾವ ರಾಶಿಯವರು ಯಾವ ರಾಶಿಯವರನ್ನು ರಹಸ್ಯವಾಗಿ ಇಷ್ಟಪಡುತ್ತಾರೆ ಎಂಬುದನ್ನು ತಿಳಿಯಲು ಸಾಧ್ಯವಿದೆ. ಪರಸ್ಪರ ವಿರೋಧ ವ್ಯಕ್ತಿತ್ವ ಹೊಂದಿದ್ದರೂ, ರಹಸ್ಯವಾಗಿ ಒಬ್ಬರನ್ನೊಬ್ಬರು ಇಷ್ಟಪಡುವ ಅಂತಹ 4 ಜೋಡಿ ರಾಶಿಗಳ ಕುರಿತ ಮಾಹಿತಿ ಇಲ್ಲಿದೆ. ನಿಮ್ಮ ರಾಶಿಯೂ ಇದರಲ್ಲಿರಬಹುದೇ ನೋಡಿ.

1. ಮೀನ ಮತ್ತು ಧನು ರಾಶಿ
ಮೀನ ಮತ್ತು ಧನು ರಾಶಿಯದ್ದು ಒಂದು ರೀತಿಯಲ್ಲಿ ಯಾರೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲದ ಜೋಡಿ. ಮೀನ ರಾಶಿಯವರು ತುಂಬಾ ಸಂವೇದನಶೀಲರಾಗಿರುತ್ತಾರೆ. ಆದರೆ ಧನು ರಾಶಿಯವರ ಕಥೆಯೇ ಬೇರೆ. ಅವರು ಸ್ವಾತಂತ್ರ್ಯ ಪ್ರಿಯರು, ಸದಾ ಪ್ರಯಾಣ ಮತ್ತು ಸಾಹಸದ ಬಗ್ಗೆ ಕಾಳಜಿ ಉಳ್ಳವರು. ಈ ಎರಡೂ ರಾಶಿಗಳವರಲ್ಲಿ ಇರುವ ಸಾಮಾನ್ಯವಾದ ಗುಣ ಎಂದರೆ, ತಮ್ಮ ಆತ್ಮೀಯ ಬಳಗದವರ ಮೇಲೆ ತೋರುವ ಪ್ರೀತಿ. ಇಬ್ಬರೂ ತುಂಬಾ ಸೂಕ್ಷ್ಮ ಸ್ವಭಾವದವರು ಮತ್ತು ಪ್ರೀತಿಗೆ ತುಂಬಾ ಗೌರವ ನೀಡುತ್ತಾರೆ. ಈ ಇಬ್ಬರೂ ಪರಸ್ಪರರ ಸೃಜನಶೀಲತೆಯನ್ನು ಚೆನ್ನಾಗಿ ಹೊಗಳುತ್ತಾರೆ.

2. ವೃಷಭ ಮತ್ತು ಮಕರ ರಾಶಿ
ಈ ಎರಡೂ ರಾಶಿಯವರು ತುಂಬಾ ಹಠಮಾರಿಗಳು ಮತ್ತು ಕೊಂಚ ಮಟ್ಟಿಗೆ ಪರಸ್ಪರ ವಿರೋಧ ವ್ಯಕ್ತಿತ್ವ ಉಳ್ಳವರು ಎನ್ನಬಹುದು. ಆದರೆ, ಅವರಿಬ್ಬರು ಮಹತ್ವಾಕಾಂಕ್ಷಿಗಳು. ಪರಸ್ಪರ ಇದೇ ಗುಣವನ್ನು ಅವರು ಇಷ್ಟಪಡುತ್ತಾರೆ. ವೃಷಭ ರಾಶಿಯವರು ದೊಡ್ಡ ದೊಡ್ಡ ಕನಸುಗಳನ್ನು ಕಾಣುವುದರಲ್ಲಿ ನಿಸ್ಸೀಮರು, ಆದರೆ ಮಕರ ರಾಶಿಯವರು ಹೆಚ್ಚು ಪ್ರಾಯೋಗಿಕವಾಗಿರುತ್ತಾರೆ ಮತ್ತು ವಾಸ್ತವವಾದಿಗಳಾಗಿರುತ್ತಾರೆ. ಎರಡರ ನಡುವೆ ಸಮತೋಲನ ಕಾಪಾಡಿಕೊಳ್ಳಬಲ್ಲರು. ವೃಷಭ ಮತ್ತು ಮಕರ ರಾಶಿಯವರು ಪರಸ್ಪರರನ್ನು ರಹಸ್ಯವಾಗಿ ಇಷ್ಟಪಟ್ಟರೆ ಅಚ್ಚರಿ ಏನಿಲ್ಲ.

3. ಮೇಷ ಮತ್ತು ಕುಂಭ
ಮೇಷ ಮತ್ತು ಕುಂಭ ರಾಶಿಯವರು ಪರಸ್ಪರ ಸಂಪೂರ್ಣ ವಿರುದ್ಧ ವ್ಯಕ್ತಿತ್ವ ಉಳ್ಳವರು. ಮೇಷ ರಾಶಿಯವರದ್ದು ಆವೇಶ ಮತ್ತು ದಂಗೆ ಏಳುವ ಮನೋಭಾವದ ವ್ಯಕ್ತಿತ್ವ. ಆದರೆ ಕುಂಭ ರಾಶಿಯವರು ಅಂತರ್ಮುಖಿ ವ್ಯಕ್ತಿತ್ವದವರು. ಆದರೆ, ಅವರಲ್ಲಿರುವ ಒಂದೇ ರೀತಿಯ ಗುಣವೆಂದರೆ, ದುಃಖ ತುಂಬಿದ ಪ್ರಾಪಂಚಿಕ ಜೀವನಕ್ಕಿಂತ ತಮ್ಮದಾಗಿಸಿಕೊಳ್ಳುವುದಕ್ಕಿಂತ, ಜೀವನದಲ್ಲಿನ ಅಪಾಯಗಳನ್ನು ಭಯಪಡದೆ ಎದುರಿಸಲು ಬಯಸುವ ಗುಣ. ಈ ಎರಡೂ ರಾಶಿಯವರು ಕೈಜೋಡಿಸಿದರೆ, ಬಹಳಷ್ಟುವ ಸಾಧಿಸಬಲ್ಲರು.

4. ಮಿಥುನ ಮತ್ತು ಕರ್ಕಾಟಕ
ಮಿಥುನ ಮತ್ತು ಕರ್ಕಾಟಕ ರಾಶಿಯವರದ್ದು ಕೂಡ ಅನಿರೀಕ್ಷಿತ ಜೋಡಿ. ಆದರೂ ಇಬ್ಬರು ಕೂಡ ಸ್ನೇಹ ಮತ್ತು ಪ್ರೀತಿಯನ್ನು ಒಂದು ಬೇರೆಯೇ ಮಟ್ಟದಲ್ಲಿ ಗೌರವಿಸುತ್ತಾರೆ, ಅದೇ ಕಾರಣಕ್ಕೆ ಜೋಡಿಯಾಗಬಲ್ಲರು. ಕರ್ಕಾಟಕ ರಾಶಿಯವರು ಮಿಥುನ ರಾಶಿವರಿಗೆ ತಾಳ್ಮೆಯಿಂದ ಮತ್ತು ಸಂವೇದನಾಶೀಲರಾಗಿರಲು ಕಲಿಸಿದರೆ, ಮಿಥುನ ರಾಶಿಯವರು ಕರ್ಕಾಟಕ ರಾಶಿಯವರಿಗೆ ಎಲ್ಲರೊಡನೆ ಬೆರೆಯುವುದನ್ನು ಕಲಿಸುತ್ತಾರೆ. ಈ ರಾಶಿಗಳ ಮಂದಿ ಪರಸ್ಪರರ ವ್ಯಕ್ತಿತ್ವವನ್ನು ರಹಸ್ಯವಾಗಿ ಪ್ರೀತಿಸುತ್ತಾರೆ ಮತ್ತು ಮೆಚ್ಚುತ್ತಾರೆ.
Published by:Seema R
First published: