Zodiac Sign: ಸಿಕ್ಕಾಪಟ್ಟೆ ಫುಡ್ಡಿ ಈ ರಾಶಿಯವರು; ತಿನ್ನುವುದು ಇವರಿಗೆ ಬಲು ಪ್ರಿಯ ಕೆಲಸ

ಕೆಲವು ಜನರು ಬಾಯಿಗೆ ಸ್ವಲ್ಪವೂ ವಿಶ್ರಾಂತಿ ಕೊಡದೆ ಆಹಾರವನ್ನು ಸೇವಿಸುತ್ತಲೇ ಇರುತ್ತಾರೆ ಎಂದು ಹೇಳಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೆಲವರಿಗೆ ಈ ಊಟ (Food) ಮಾಡುವುದು ಎಂದರೆ ಅದೊಂದು ಕೆಲಸವಿದ್ದಂತೆ, ಅದೊಂದು ಮುಗಿಸಿದರೆ ಸಾಕು ಮನೆಯಲ್ಲಿ ‘ಊಟ ಮಾಡು, ಊಟ ಮಾಡು’ ಅಂತ ಅಮ್ಮ ಪದೇ ಪದೇ ಹೇಳದಿದ್ದರೆ  ತಟ್ಟೆಯಲ್ಲಿ ಹಾಕಿಕೊಂಡಿದ್ದನ್ನು ತಿಂದು ಮುಗಿಸುವುದಿಲ್ಲ. ಆದರೆ ಇನ್ನೂ ಕೆಲವು ಜನರು ತುಂಬಾನೇ ಆಹಾರ ಪ್ರಿಯರಾಗಿರುತ್ತಾರೆ (Foodie) ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅವರಿಗೆ ಯಾವುದೇ ತಿಂಡಿ ತಿನಿಸುಗಳನ್ನು ನೀಡಿದರೂ ಅದನ್ನು ತುಂಬಾನೇ ಇಷ್ಟ ಪಟ್ಟುಕೊಂಡು ತಿನ್ನುತ್ತಾರೆ. ಹೊಟ್ಟೆ ತುಂಬಾ ತಿನ್ನುವುದು ಮತ್ತು ಆಹಾರ ಪ್ರಿಯರಾಗಿರುವುದು ಬೇರೆ ಆದರೆ ಇನ್ನೂ ಕೆಲವು ಜನರು ಬಾಯಿಗೆ ಸ್ವಲ್ಪವೂ ವಿಶ್ರಾಂತಿ ಕೊಡದೆ ಆಹಾರವನ್ನು ಸೇವಿಸುತ್ತಲೇ ಇರುತ್ತಾರೆ ಎಂದು ಹೇಳಬಹುದು. ಇಂಥವರನ್ನು ಇಂಗ್ಲೀಷ್ ಭಾಷೆಯಲ್ಲಿ ‘ಇಂಪಲ್ಸಿವ್ ಈಟರ್ಸ್’ ಅಂತ ಹೇಳುತ್ತಾರೆ.

    ಕೆಲವೊಮ್ಮೆ ಇಂಥವರಿಗೆ ಆಹಾರದ ಮೇಲಿನ ಅತಿಯಾದ ಮೋಹವು ಅನಾರೋಗ್ಯಕ್ಕೆ ಸಹ ದಾರಿಯಾಗಬಹುದು. ಅತಿಯಾದ ದೇಹದ ತೂಕದಿಂದ ಮತ್ತು ಬೊಜ್ಜಿನಿಂದ ಸಹ ಬಳಲುವಂತಹ ಸಾಧ್ಯತೆಗಳು ಸಹ ಹೆಚ್ಚಾಗಿರುತ್ತವೆ. ಇಂತಹ ‘ಇಂಪಲ್ಸಿವ್ ಈಟರ್ಸ್’ ಹೆಚ್ಚಾಗಿ ಯಾವ ರಾಶಿಚಕ್ರ ಚಿಹ್ನೆಯ ಜನರಾಗಿರುತ್ತಾರೆ ಎಂದು ಇಲ್ಲಿ ತಿಳಿಸಲಾಗಿದೆ ನೋಡಿ.

    ಮೇಷ ರಾಶಿ

    ಈ ಮೇಷ ರಾಶಿಚಕ್ರ ಚಿಹ್ನೆಯ ಜನರು ತಿನ್ನುವ ವಿಷಯಕ್ಕೆ ಬಂದಾಗ ಅತಿರೇಕವಾಗಿರುತ್ತದೆ. ಈ ರಾಶಿಚಕ್ರ ಚಿಹ್ನೆಗೆ ಸೇರಿದ ಜನರು ಏನನ್ನಾದರೂ ಮಾಡುವ ಮೊದಲು ಎರಡು ಬಾರಿ ಯೋಚಿಸುವುದಿಲ್ಲ. ಅವರು ಉತ್ತಮ ಆಹಾರ ಪ್ರಿಯರು, ಅವರು ಕೇವಲ ಮೋಜಿಗಾಗಿ ವಿಭಿನ್ನ ವಿಷಯಗಳನ್ನು ಪ್ರಯತ್ನಿಸಲು ಇಷ್ಟಪಡುತ್ತಾರೆ. ಸಮಸ್ಯೆಯೆಂದರೆ, ಅವರು ತಿನ್ನುವುದನ್ನು ನಿಲ್ಲಿಸುವುದೇ ಇಲ್ಲ, ಈ ವರ್ತನೆ ಮುಂದೆ ತುಂಬಾ ಸಮಸ್ಯಾತ್ಮಕ ಸಹ ಆಗಬಹುದು.

    ಇದನ್ನು ಓದಿ: ಶುಭ ಕಾರ್ಯಕ್ಕೆ ಮನೆಯಿಂದ ಹೊರಡುವಾಗ ಈ ಸೂಚನೆ ಕಾಣಿಸಿದ್ರೆ ಏನು ಅರ್ಥ?

    ಸಿಂಹ ರಾಶಿ

    ಈ ರಾಶಿಚಕ್ರ ಚಿಹ್ನೆಯ ಜನರು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ದುಬಾರಿ ಆಹಾರವನ್ನು ಸೇವಿಸುತ್ತಾರೆ. ಸಿಂಹ ರಾಶಿಯವರು ಆಹಾರಕ್ಕಾಗಿ ಎಷ್ಟಾದರೂ ಹಣವನ್ನು ಖರ್ಚು ಮಾಡಲು ಇಷ್ಟಪಡುತ್ತಾರೆ, ಏಕೆಂದರೆ ಅದು ಖಂಡಿತವಾಗಿಯೂ ಅವರನ್ನು ಸಂತೋಷ ಪಡಿಸುತ್ತದೆ ಎಂದು ಅವರಿಗೆ ತಿಳಿದಿದೆ. ಅವರು ಹಠಾತ್ತನೆ ಆಹಾರವನ್ನು ನುಂಗುತ್ತಾರೆ ಮತ್ತು ರುಚಿಕರವಾದ ಊಟವನ್ನು ಸವಿಯಲು ಇತರರನ್ನು ಸಹ ಆಹ್ವಾನಿಸುತ್ತಾರೆ. ಆಹಾರವನ್ನು ಹಂಚಿಕೊಳ್ಳುವ ವಿಷಯಕ್ಕೆ ಬಂದಾಗ ಅವರು ತುಂಬಾ ಉದಾರರಾಗಿರುತ್ತಾರೆ.

    ಇದನ್ನು ಓದಿ: ಅಂಗಾರಕ ಯೋಗ ಈ ರಾಶಿ ಜನರಿಗೆ ಅದೃಷ್ಟ ತಂದರೂ ಎಚ್ಚರ

    ತುಲಾ ರಾಶಿ

    ಈ ತುಲಾ ರಾಶಿಯ ಜನರು ಆರಾಮದಾಯಕವಾಗಿದ್ದಾಗ ಹೆಚ್ಚು ಆಹಾರ ಸೇವಿಸದೆ, ಅವರು ದುಃಖದಲ್ಲಿದ್ದಾಗ, ಏಕಾಂಗಿಯಾಗಿದ್ದಾಗ ಅಥವಾ ನಿರಾಶರಾದಾಗಲೂ ಸಹ ಅವರು ತಮ್ಮ ಮೂಡ್ ಅನ್ನು ಬದಲಾಯಿಸಿಕೊಳ್ಳಲು ಒಳ್ಳೆಯ ಊಟವನ್ನು ಮಾಡಲು ಬಯಸುವ ಜನರು. ಅವರು ಮಧ್ಯರಾತ್ರಿಯಲ್ಲಿ ಎಬ್ಬಿಸಿ ತಿಂಡಿ ಕೊಟ್ಟರೂ ಸಹ ತಿಂದು ಮುಗಿಸುತ್ತಾರೆ. ಚಲನಚಿತ್ರಗಳನ್ನು ನೋಡುವಾಗ ಅಥವಾ ಸ್ನೇಹಿತರೊಂದಿಗೆ ಹರಟೆ ಹೊಡೆಯುವಾಗ ಏನಾದರೊಂದು ತಿನ್ನುತ್ತಲೇ ಇರುತ್ತಾರೆ. ಆಹಾರವು ಅವರ ನಿರಂತರ ಸಂಗಾತಿಯಾಗಿದೆ.

    ಧನುಸ್ಸು ರಾಶಿ

    ಇವರು ಪ್ರಯಾಣಿಸಲು, ಪ್ರಪಂಚದ ವಿವಿಧ ಸ್ಥಳಗಳಿಗೆ ಹೋಗಲು ಇಷ್ಟಪಡುತ್ತಾರೆ.  ಇವರು ಅನನ್ಯ ಆಹಾರ ಪದಾರ್ಥಗಳನ್ನು ಸವಿಯುವುದನ್ನು ಸಹ ಇಷ್ಟಪಡುತ್ತಾರೆ. ಅವರಿಗೆ ಏನನ್ನಾದರೂ ತಿನ್ನಬೇಕು ಎಂದು ಅನ್ನಿಸಿದಾಗ ಅದರ ಬಗ್ಗೆ ಎರಡು ಬಾರಿ ಯೋಚಿಸುವುದಿಲ್ಲ.

    ಮೀನ ರಾಶಿ

    ಆಹಾರದ ಆಯ್ಕೆಗಳ ವಿಷಯಕ್ಕೆ ಬಂದಾಗ ಈ ರಾಶಿಯವರು ತುಂಬಾನೇ ಅವಸರ ಬೀಳುವ ಜನರಾಗಿರುತ್ತಾರೆ. ಅವರು ದುಃಖ ಅಥವಾ ಖಿನ್ನತೆಗೆ ಒಳಗಾದಾಗ ಅವರು ಎಲ್ಲಾ ರೀತಿಯ ಸಿಹಿ ತಿಂಡಿಗಳನ್ನು ತಿನ್ನಬೇಕು ಎಂದು ಅಂದು ಕೊಳ್ಳುತ್ತಾರೆ. ಮೀನ ರಾಶಿಯವರು ತಮ್ಮ ಭಾವನೆಗಳನ್ನು ನಿಭಾಯಿಸಲು ಆಹಾರವನ್ನು ಒಂದು ಮಾರ್ಗವಾಗಿ ಬಳಸುತ್ತಾರೆ. ಇದು ಅವರ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು, ಏಕೆಂದರೆ ಅವರು ಯಾವಾಗಲೂ ಜಂಕ್ ಫುಡ್ ಮತ್ತು ಸಿಹಿ ತಿಂಡಿಗಳನ್ನು ತಿನ್ನುವುದರಿಂದ ತೂಕದ ಸಮಸ್ಯೆಗಳನ್ನು ಎದುರಿಸಬಹುದು.
    Published by:Seema R
    First published: