Zodiac Sign: ಈ ರಾಶಿಯವರು ಬಾಯ್ಬಿಟ್ರೆ ಸುಳ್ಳೇ ಹೇಳೋದಂತೆ, ಇವ್ರನ್ನ ನಂಬಲೇ ಬೇಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Liars Zodiac Sign: ಕೆಲವು ಜನರು ಯಾವಾಗಲೂ ಎಲ್ಲದರ ಬಗ್ಗೆ ಸುಳ್ಳು ಹೇಳುತ್ತಾರೆ. ಒಂದರ್ಥದಲ್ಲಿ ಹೇಳಬೇಕು ಎಂದರೆ ಅವರು ಸುಳ್ಳು ಹೇಳುವ ಕಲೆಯನ್ನು ಹೊಂದಿದ್ದಾರೆ ಎನ್ನಬಹುದು.

  • Share this:

ಸಾಮಾನ್ಯವಾಗಿ ನಾವು ನಮ್ಮ ದೈನಂದಿನ ಜೀವನದಲ್ಲಿ (Daily Life)  ಏನಾದರೂ ದೊಡ್ಡ ಅಥವಾ ಸಣ್ಣ ಸುಳ್ಳು (Liars) ಹೇಳುತ್ತೇವೆ. ಕೆಲವೊಮ್ಮೆ ನಾವು ಸುಳ್ಳು ಅನಿವಾರ್ಯ ಕಾರಣಕ್ಕೆ (Reason) ಹೇಳಬೇಕಾಗುತ್ತದೆ. ಆದರೆ ನಾವು ಸುಳ್ಳು ಹೇಳುವುದರಿಂದ ಯಾರಿಗೂ ತೊಂದರೆಯಾಗಬಾರದು (problem) ಎಂಬುದನ್ನ ನಾವು ಮರೆಯಲೇಬಾರದು. ಇತರರಿಗೆ ತೊಂದರೆ ಮಾಡುವ ಸುಳ್ಳು ನಮ್ಮನ್ನ ಸಹ ಹಾಳು ಮಾಡುತ್ತದೆ. ಆದರೆ, ಕೆಲವು ಜನರು ಯಾವಾಗಲೂ ಎಲ್ಲದರ ಬಗ್ಗೆ ಸುಳ್ಳು ಹೇಳುತ್ತಾರೆ. ಒಂದರ್ಥದಲ್ಲಿ ಹೇಳಬೇಕು ಎಂದರೆ ಅವರು ಸುಳ್ಳು ಹೇಳುವ ಕಲೆಯನ್ನು ಹೊಂದಿದ್ದಾರೆ ಎನ್ನಬಹುದು. ಇಷ್ಟೇ ಅಲ್ಲಜನರು ಅವರನ್ನು ಸುಲಭವಾಗಿ ನಂಬುತ್ತಾರೆ. ಈ ರೀತಿ ಸುಳ್ಳು ಹೇಳುವುದರಲ್ಲಿ ನಿಪುಣರಾಗಿರುವ ರಾಶಿಯ ಜನರ ಬಗ್ಗೆ ಕೆಲ ಮಾಹಿತಿ ಇಲ್ಲಿದೆ. ಅಲ್ಲದೇ, ಈ ರಾಶಿಯವರು (Zodiac Sign) ಹೇಳುವ ಮಾತನ್ನು ನಂಬುವ ಮುನ್ನ ಎಚ್ಚರ.


ಮಿಥುನ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಿಥುನ ರಾಶಿಯ ಜನರು ಸುಳ್ಳುಗಳನ್ನು ಸರಾಗವಾಗಿ ಹೇಳುತ್ತಾರೆ ಮತ್ತು ಈ ಸುಳ್ಳಿನ ಮಾತುಗಳಿಂದ ಯಾರನ್ನಾದರೂ ಸುಲಭವಾಗಿ ನಂಬಿಸಿ ಮೋಸ ಮಾಡುತ್ತಾರೆ. ಅಲ್ಲದೇ, ಹೇಳಿದ ಸುಳ್ಳನ್ನು ಚೆನ್ನಾಗಿ ನಿರ್ವಹಿಸುವ ಸಾಮರ್ಥ್ಯ ಸಹ ಇವರಲ್ಲಿದೆ. ಅವರ ಈ ಡಬಲ್ ವ್ಯಕ್ತಿತ್ವದಿಂದಾಗಿ, ಈ ಜನರು ಸತ್ಯವನ್ನು ನಂಬುವುದಿಲ್ಲ, ಅವರು ಹೇಳಿದ ಸುಳ್ಳನ್ನು ಮಾತ್ರ ನಂಬುತ್ತಾರೆ. ಅವರ ಸುಳ್ಳನ್ನು ಯಾರೂ ಕಂಡು ಹಿಡಿಯಲಾರದಷ್ಟು ಮಾತನಾಡುವ ಕಲೆ ಅವರಲ್ಲಿದೆ.


ತುಲಾ ರಾಶಿ: ಈ ತುಲಾ ರಾಶಿಯವರು ತಮ್ಮ ನಡವಳಿಕೆಯಲ್ಲಿ ಬಹಳ ಉದಾರವಾಗಿ ಇರುತ್ತಾರೆ. ಇವರನ್ನು ನಂಬದೇ ಇರಲು ಸಾಧ್ಯವಿಲ್ಲ. ಈ ರಾಶಿಯವರು ತಮ್ಮ ಮಾತಿನಿಂದ ಯಾರಿಗಾದರೂ ನೋವಾಗುವುದಾದರೆ, ಅದನ್ನು ಮರೆಮಾಚಲು ಸತ್ಯ ಹೇಳುವ ಬದಲು ಸುಳ್ಳು ಹೇಳಲು ಹಿಂಜರಿಯುವುದಿಲ್ಲ. ಏಕೆಂದರೆ ಈ ರಾಶಿಯವರು ಯಾರ ಹೃದಯವನ್ನೂ ನೋಯಿಸಲು ಇಷ್ಟ ಪಡುವುದಿಲ್ಲ. ಯಾರಿಗಾದರೂ ಬೇಸರವಾದರೆ ಸತ್ಯ ಹೇಳಿ ತಮ್ಮ ದಿನವನ್ನು ಹಾಳು ಮಾಡಿಕೊಳ್ಳಲು ಇವರು ತಯಾರಿಲ್ಲ. ಹಾಗಾಗಿ ಸುಳ್ಳು ಹೇಳಿ ಅದನ್ನು ನಿರ್ವಹಿಸಿ, ನಂಬಿಸುವ ಗುಣ ಹೊಂದಿದ್ದಾರೆ,


ಇದನ್ನೂ ಓದಿ: ದೇವರಿಗೆ ಪೂಜೆ ಮಾಡುವಾಗ ಅಪ್ಪಿ-ತಪ್ಪಿ ಈ ಮಿಸ್ಟೇಕ್ ಮಾಡ್ಬೇಡಿ


ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಸಹ ನಿಪುಣ ಸುಳ್ಳುಗಾರರು ಎಂದು ಹಲವಾರು ಬಾರಿ ಸಾಬೀತಾಗಿದೆ. ಅವರು ಎಷ್ಟು ಚೆನ್ನಾಗಿ ಸುಳ್ಳು ಹೇಳುತ್ತಾರೆ ಎಂದರೆ, ಅವರು ಸುಳ್ಳಿನ ಅರಮನೆಯನ್ನು ಕಟ್ಟಬಹುದು. ಅಲ್ಲದೇ, ಇವರು ಮಾತಿನ ಮೂಲಕ ಜನರನ್ನು ನಂಬಿಸುತ್ತಾರೆ. ಈ ರಾಶಿಯ ಜನರು ಕಥೆಗಳನ್ನು ರಚಿಸುವಲ್ಲಿ ಎಷ್ಟು ಪ್ರವೀಣರಾಗಿದ್ದಾರೆಂದರೆ ಇತರ ವ್ಯಕ್ತಿಯು ಅವರನ್ನು ತಕ್ಷಣವೇ ನಂಬುತ್ತಾರೆ. ಸುಳ್ಳನ್ನು ಸತ್ಯವೆಂದು ಬಿಂಬಿಸುವ ದೊಡ್ಡ ಕಲೆ ಅವರಲ್ಲಿದೆ.



ಸಿಂಹ: ಸಿಂಹ ರಾಶಿಯವರು ವಿಭಿನ್ನವಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಅದಕ್ಕಾಗಿ ಯಾವುದೇ ಮಟ್ಟದ ಸುಳ್ಳನ್ನು ಸಹ ಹೇಳಲು ಹಿಂದೆ-ಮುಮದೆ ನೋಡುವುದಿಲ್ಲ. ಇವರನ್ನು ಯಾರೂ ಗಮನಿಸದಿದ್ದರೆ ಸ್ವಲ್ಪ ಸುಳ್ಳನ್ನು ಹೇಳಲು ಹಿಂಜರಿಯುವುದಿಲ್ಲ. ಈ ರಾಶಿಯ ಜನರು ಜನರ ಗಮನ ಸೆಳೆಯಲು ಸುಳ್ಳು ಹೇಳುತ್ತಾರೆ. ಅವರ ಸುಳ್ಳುಗಳು ಅನೇಕ ಬಾರಿ ಸಿಕ್ಕಿಬಿದ್ದರೂ, ಅವರು ತಮ್ಮ ವಿಷಯವನ್ನು ಹೇಳುತ್ತಲೇ ಇರುತ್ತಾರೆ. ಅದರಲ್ಲೂ ಎಂದಿಗೂ ಅವರು ತಮ್ಮ ಸುಳ್ಳನ್ನು ಒಪ್ಪಿಕೊಳ್ಳುವುದಿಲ್ಲ.


ಇದನ್ನೂ ಓದಿ: ಈ 3 ರಾಶಿಗಳಿಗೆ ಮಹಾಪುರುಷ ರಾಜಯೋಗ, ನಿಮ್ಮಷ್ಟು ಲಕ್ಕಿ ಬೇರಾರೂ ಇಲ್ಲ ಬಿಡಿ


ಕಟಕ ರಾಶಿ: ಈ ರಾಶಿಯವರಿಗೂ ಸುಳ್ಳು ಹೇಳುವ ಕಲೆ ಇದ್ದು, ಎಲ್ಲರನ್ನೂ ಮೀರಿಸುತ್ತಾರೆ ಎಂದರೆ ತಪ್ಪಲ್ಲ. ಈ ರಾಶಿಯ ಜನರು ಅವರು ಹೇಳುತ್ತಿರುವುದನ್ನು ಇತರ ವ್ಯಕ್ತಿಯು ಸುಲಭವಾಗಿ ನಂಬುವ ರೀತಿಯಲ್ಲಿ ಸುಳ್ಳು ಹೇಳುತ್ತಾರೆ. ಅವರು ಸಾಮಾನ್ಯವಾಗಿ ಸುಳ್ಳು ಹೇಳದಿದ್ದರೂ, ಅವರು ಸುಳ್ಳು ಹೇಳಿದಾಗ ಅದನ್ನು ಕಂಡು ಹಿಡಿಯುವುದು ತುಂಬಾ ಕಷ್ಟ.

Published by:Sandhya M
First published: