Astrology: ಈ ರಾಶಿಯ ಜನರು ಮಕ್ಕಳಂತೆ ವರ್ತಿಸುತ್ತಾರೆ..ನಿಮ್ಮ ರಾಶಿ ಕೂಡ ಇದೆಯಾ? ನೋಡಿ..

Childish Zodiac Sign: ರಾಶಿಯವರ ಅನುಗುಣವಾಗಿ ಅವರು ವರ್ತನೆ ಮಾಡುತ್ತಾರೆ. ಯಾವ ರಾಶಿಯವರು ಹೆಚ್ಚು ಮಕ್ಕಳಂತೆ ವರ್ತಿಸುತ್ತಾರೆ ಎಂಬುದು ಇಲ್ಲಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಕೆಲವರನ್ನು ಗಮನಿಸಿ ನೋಡಿ, ಅವರು ಎಷ್ಟೇ ವಯಸ್ಸಾದರೂ ಹಾಗೂ ಯಾವುದೇ ದೊಡ್ಡ ಹುದ್ದೆಯಲ್ಲಿದ್ದರೂ ಸಹ ಮಕ್ಕಳಂತೆ ವರ್ತಿಸುತ್ತಾರೆ. ಅವರನ್ನು ಹಲವಾರು ಜನ ಯಾಕೆ ನೀನು ಮಗುವಿನಂತೆ ಆಡುತ್ತೀಯಾ, ಸ್ವಲ್ಪನೂ ಜವಾಬ್ದಾರಿ ಇಲ್ಲದಂತೆ ವರ್ತನೆ ಮಾಡುತ್ತೀಯಾ ಎಂದು ಪ್ರಶ್ನೆ ಮಾಡಿರುತ್ತಾರೆ. ನಾವು ಇಂಥಹ ಹಲವಾರು ಜನರನ್ನು ನೋಡಿರುತ್ತೇವೆ. ಅವರಿಗೆ ಜವಾಬ್ದಾರಿ ಅಂದರೆ ಆಗುವುದಿಲ್ಲ. ಅವರಿಗೆ ದೊಡ್ಡವರ ರೀತಿ ವರ್ತಿಸುವುದು ಇಷ್ಟವಾಗುವುದಿಲ್ಲ.  ಇದು ಕೆಲ ರಾಶಿಯವರಲ್ಲಿ ಹೆಚ್ಚು ಕಂಡು ಬರುತ್ತದೆ. ಈ ರಾಶಿಯವರ ಅನುಗುಣವಾಗಿ ಅವರು ವರ್ತನೆ ಮಾಡುತ್ತಾರೆ. ಯಾವ ರಾಶಿಯವರು ಹೆಚ್ಚು ಮಕ್ಕಳಂತೆ ವರ್ತಿಸುತ್ತಾರೆ ಎಂಬುದು ಇಲ್ಲಿದೆ.

ಮೀನ ರಾಶಿ

ಮೀನ ರಾಶಿಯಲ್ಲಿ ಜನಿಸಿದ ಜನರು ಹೆಚ್ಚು ಮಕ್ಕಳಂತೆ ವರ್ತಿಸುತ್ತಾರೆ. ಅವರು ತಮ್ಮದೇ ಲೋಕದಲ್ಲಿ ಇರಲು ಇಷ್ಟಪಡುತ್ತಾರೆ. ಅವರು ಯಾರ ಬಗ್ಗೆ ಹೆಚ್ಚು ತಲೆ ಕೆಡೆಸಿಕೊಳ್ಳುವುದಿಲ್ಲ, ಅಲ್ಲದೇ ಅವರ ಬಗ್ಗೆ ಯಾರು ಏನು ಯೋಚನೆ ಮಾಡುತ್ತಾರೆ  ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುವುದು ಇಷ್ಟವಾಗುವುದಿಲ್ಲ.  ಪ್ರತಿಯೊಂದು ಕಷ್ಟಕರ ಎಂದು ಅವರಿಗೆ ಅನಿಸುತ್ತದೆ. ಈ ರಾಶಿಯ ಜನರಿಗೆ ಜನರು ಕೂಡ ಕೆಲಸ ಹೇಳಲು ಹಿಂದೆ ಮುಂದೆ ನೋಡುತ್ತಾರೆ.

ಕಟಕ ರಾಶಿ

ಕಟಕ ರಾಶಿಯವರ ಮನಸ್ಸು ಚಂಚಲವಾಗಿರುತ್ತದೆ. ಅವರಲ್ಲಿ ಮೂಡ್ ಸ್ವಿಂಗ್ ಜಾಸ್ತಿ.  ಅವರ ನಡುವಳಿಕೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ.  ಅವರು ಮಾಡುವ ಕೆಲವೊಂದು ಕೆಲಸಗಳು ಒಮ್ಮೊಮ್ಮೆ ಬಾಲಿಶ ಎನಿಸುತ್ತದೆ. ಅಲ್ಲದೇ ಈ ರಾಶಿಯವರು ಬೇಗ ಕೋಪ ಮಾಡಿಕೊಳ್ಳುತ್ತಾರೆ.  ಹಾಗೆಯೇ ಈ ರಾಶಿಯವರು ತುಂಬಾ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ.  ಎಷ್ಟು ಬೇಗ ಕೋಪ ಮಾಡಿಕೊಳ್ಳುತ್ತಾರೋ ಅಷ್ಟು ಬೇಗ ನೋವನ್ನು ಅನುಭವಿಸುತ್ತಾರೆ. ಈ ರಾಶಿಯ ಜನರು ನೇರ ಸ್ವಭಾವದವರಾಗಿರುತ್ತಾರೆ, ಅವರು ಆಡುವ ಮಾತುಗಳು ಬೇರೆ ಅವರಿಗೆ ನೋವಾಗುತ್ತದೆ ಎಂಬುದನ್ನ ಯೋಚನೆ ಮಾಡದೆ ಮಾತನಾಡುತ್ತಾರೆ.

ವೃಷಭ ರಾಶಿ

ಈ ರಾಶಿಯವರು ಹೆಚ್ಚು ವಿಭಿನ್ನವಾಗಿರುತ್ತಾರೆ.  ಇವರನ್ನು ಅರ್ಥ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಈ ರಾಶಿಯವರು ಎಲ್ಲರಿಗಿಂತ ಹೆಚ್ಚು ಮಕ್ಕಳಂತೆ ವರ್ತಿಸುತ್ತಾರೆ. ಅಲ್ಲದೇ, ತಮ್ಮ ಸುತ್ತಲಿನ ಜನರಿಂದ ಮಗುವಿನಂತೆಯೇ ಪ್ರೀತಿ ಪಡೆಯುವ ಬಯಕೆಯನ್ನು ಹೊಂದಿರುತ್ತಾರೆ. ಈ ರಾಶಿಯವರು ಸಹ ತುಂಬಾ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಇವರು  ಜವಾಬ್ದಾರಿ ಎಂದರೆ ಓಡಿ ಹೋಗುತ್ತಾರೆ.

ವೃಷಭ ರಾಶಿಯವರು ಕಲ್ಪನೆಯ ಲೋಕವನ್ನು ಇಷ್ಟಪಡುತ್ತಾರೆ. ಜನರು ಅವರನ್ನು ನಿರ್ಲಕ್ಷಿಸಿದಾಗ ಅಥವಾ ಅವರ ಬಗ್ಗೆ ಕಾಳಜಿವಹಿಸಿದಾಗ ಅದನ್ನು ಮತ್ತು ಆ ವ್ಯಕ್ತಿಗಳನ್ನು ಸಂಪೂರ್ಣವಾಗಿ ದ್ವೇಷಿಸುತ್ತಾರೆ. ಇನ್ನು ಈ ರಾಶಿಯವರು ಕೆಲ ವಿಚಾರಗಳಿಗೆ ಬೇಗನೆ ಬೇಸರ ಮಾಡಿಕೊಳ್ಳುತ್ತಾರೆ. ಅದು  ನೋಡಲು ಸಣ್ಣ ವಿಚಾರ ಎಂದು ಅನಿಸುತ್ತದೆ. ಆದರೆ ಅವರಿಗೆ ಅದು ದೊಡ್ಡ ವಿಚಾರವಾಗುತ್ತದೆ. ಒಮ್ಮೊಮ್ಮೆ ತಮಾಷೆ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ.

ಇದನ್ನೂ ಓದಿ: ಸರಿಯಾಗಿ ನಿದ್ದೆ ಬರುತ್ತಿಲ್ಲವಾ? ಮಲಗುವ ಕೋಣೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿ ನೋಡಿ!



ಮೇಷ ರಾಶಿ

ಮೇಷ ರಾಶಿಯಲ್ಲಿ ಹುಟ್ಟಿದ ಜನರಿಗೆ ಕೆಲಸಗಳನ್ನು ಹೇಗೆ ಮಾಡಬೇಕು ಎಂಬುದು  ತಿಳಿದಿದೆ. ಆದರೆ ಇವರದ್ದು ಸಿಡುಕು ಸ್ವಭಾವ.  ಕೋಪ, ಕಿರುಚಾಟ, ಕೂಗಾಟ ಜಾಸ್ತಿ. ಬೇರೆ ವ್ಯಕ್ತಿಗಳಿಗೆ ಒಂದು ವಿಚಾರವನ್ನು ಅರ್ಥ ಮಾಡಿಸಲು ಕುಳಿತರೆ ಬಿಡುವುದಿಲ್ಲ. ಮಕ್ಕಳಂತೆ ಹಠ ಮಾಡುತ್ತಾರೆ. ಈ ರಾಶಿಯ ಜನರು ಜವಾಬ್ದಾರಿಯನ್ನು ನಿರ್ವಹಿಸಲು ಮುಂದೆ ಬರುತ್ತಾರೆ, ಆದರೆ ಅವರ ಹುಡುಗಾಟದ ಬುದ್ದಿಯಿಂದ ಅದನ್ನು ಹಾಳು ಮಾಡುವುದು ಜಾಸ್ತಿ. ಕೆಲವೊಮ್ಮೆ ಪ್ರಬುದ್ಧರಂತೆ ವರ್ತಿಸಿದರೆ, ಇನ್ನು ಕೆಲವೊಮ್ಮೆ ಚಿಕ್ಕ ಮಗುವಿನಂತೆ ನಡೆದುಕೊಳ್ಳುತ್ತಾರೆ.
Published by:Sandhya M
First published: