Astrology: ವೃಷಭ ರಾಶಿಯ ಹೆಣ್ಣು ಮಕ್ಕಳು ಲವ್ ಮ್ಯಾರೇಜ್ ಆಗೋದು ಪಕ್ಕಾ ಅಂತೆ- ನಿಮ್ಮ ರಾಶಿ ಪ್ರಕಾರ ಮದುವೆ ಬಗ್ಗೆ ತಿಳಿದುಕೊಳ್ಳಿ

Marriage Secret:ಮೇಷ ರಾಶಿಯವರ ವಿಷಯದಲ್ಲಿ, ಇವರು ಹೆಚ್ಚು ಸೂಕ್ತವಾಗುವ ಮತ್ತು ಅವರನ್ನು ಅರ್ಥ ಮಾಡಿಕೊಳ್ಳುವ ಸಂಗಾತಿಯನ್ನು ಮದುವೆಯಾಗುವುದು ಒಳ್ಳೆಯದು. ಈ ರಾಶಿಯ ಹೆಣ್ಣು ಮಕ್ಕಳು ಹೆಚ್ಚಾಗಿ ಲವ್​ ಮ್ಯಾರೇಜ್ ಆಗುತ್ತಾರೆ. ಅಲ್ಲದೇ ಆ ಮದುವೆ ಯಶಸ್ವಿಯಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಗಮನಿಸಿ ನೋಡಿ ಸಧ್ಯ ಮದುವೆ ಸೀಸನ್ (Marriage Season)ಆರಂಭವಾಗಿದೆ. ಭಾರತದಲ್ಲಿ(India) ಮೊದಲೆಲ್ಲ ಜೀವನ ಸಂಗಾತಿಯನ್ನು ಹಿರಿಯರು ಆಯ್ಕೆ ಮಾಡಿದ ಹುಡುಗನನ್ನ ಹೆಣ್ಣು ಮಕ್ಕಳು ಇಷ್ಡವಿರಲಿ, ಇಲ್ಲದೆ ಇರಲಿ ಮದುವೆಯಾಗುತ್ತಿದ್ದರು. ಆದರೆ ಕಾಲ ಬದಲಾಗಿದೆ. ಅರೇಂಜ್ಡ್ ಮ್ಯಾರೇಜ್ (Arranged Marriage)ಎಂಬ ಪರಿಕಲ್ಪನೆ ನಮ್ಮ ದೇಶದಲ್ಲಿ ಈಗಲೂ ಇದೆ. ಆದರೆ ಹೆಚ್ಚಿನ ಜನರು, ತಮ್ಮ ಜೀವನ ಸಂಗಾತಿಯನ್ನು ತಾವಾಗಿಯೇ ಆಯ್ಕೆ ಮಾಡುತ್ತಾರೆ. ಈಗಿನ ಹೆಣ್ಣು ಮಕ್ಕಳಿಗೆ ಸಂಗಾತಿಯ ಬಗ್ಗೆ ಹಲವಾರು ಕನಸುಗಳಿರುತ್ತವೆ. ಅವರನ್ನು ಅರ್ಥ ಮಾಡಿಕೊಳ್ಳಬೇಕು, ಪ್ರತಿ ಕ್ಷಣದಲ್ಲೂ ಜೊತೆಯಾಗಿರಬೇಕು ಹೀಗೆ ಹಲವಾರು. ಇನ್ನು ನಮ್ಮ ರಾಶಿ ಚಕ್ರಗಳು ಸಹ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕೆಲವರು ಲವ್​ ಮಾರೇಜ್(Love Marriage)​ ಆಗುವುದು ಅವರ ರಾಶಿಯ ಮೇಲೆ ನಿರ್ಧಾರವಾಗುತ್ತದೆ.

ಹಾಗೆಯೆ ಯಾವ ರಾಶಿಯ ಹೆಣ್ಣು ಮಕ್ಕಳು ಲವ್ ಮ್ಯಾರೇಜ್ ಆಗುತ್ತಾರೆ ಎಂಬುದು ಇಲ್ಲಿದೆ.

ಮೇಷ ರಾಶಿ:  ಮೇಷ ರಾಶಿಯವರು ತುಂಬಾ ಭಾವನಾತ್ಮಕ ಮತ್ತು ಅವರು ಇಷ್ಟಪಡುವ ಜನರ ಬಗ್ಗೆ ಹೆಚ್ಚು ನಂಬಿಕೆ ಇಡುತ್ತಾರೆ ಮತ್ತು ಅವರನ್ನು ಹೆಚ್ಚು ಪ್ರೀತಿ ಮಾಡುತ್ತಾರೆ. ಅಲ್ಲದೇ ಅವರ ಬಗ್ಗೆ ಹೆಚ್ಚು ಕಾಳಜಿಯನ್ನು ಹೊಂದಿರುತ್ತಾರೆ. ಇವರ ಅನೇಕ ಒಳ್ಳೆಯ ಸ್ನೇಹಿತರು ಸಂಗಾತಿಯಾಗಿ ಬದಲಾಗುವ ಸಾಧ್ಯತೆ ಇದೆ. ಮೇಷ ರಾಶಿಯವರ ವಿಷಯದಲ್ಲಿ, ಇವರು ಹೆಚ್ಚು ಸೂಕ್ತವಾಗುವ ಮತ್ತು ಅವರನ್ನು ಅರ್ಥ ಮಾಡಿಕೊಳ್ಳುವ ಸಂಗಾತಿಯನ್ನು ಮದುವೆಯಾಗುವುದು ಒಳ್ಳೆಯದು. ಈ ರಾಶಿಯ ಹೆಣ್ಣು ಮಕ್ಕಳು ಹೆಚ್ಚಾಗಿ ಲವ್​ ಮ್ಯಾರೇಜ್ ಆಗುತ್ತಾರೆ. ಅಲ್ಲದೇ ಆ ಮದುವೆ ಯಶಸ್ವಿಯಾಗುತ್ತದೆ.

ಇದನ್ನೂ ಓದಿ: ಈ ರಾಶಿಯವರ ಜೊತೆ ಎಚ್ಚರಿಕೆಯಿಂದಿರಬೇಕು-12 ರಾಶಿಗಳ ಬಗ್ಗೆ ಯಾರಿಗೂ ತಿಳಿಯದ ರಹಸ್ಯ ಇಲ್ಲಿದೆ

 ಮಿಥುನ ರಾಶಿ : ಅವರು ಸ್ವಭಾವತಃ ಬಹಳ ಬಬ್ಲಿ. ಇವರು ಎಲ್ಲರೊಂದಿಗೆ ಬೆರೆಯುವ ಗುಣವನ್ನು ಹೊಂದಿರುತ್ತಾರೆ. ಸ್ವಾಭಾವಿಕವಾಗಿ, ಅನೇಕ ಜನರು ಅವರ ಕಡೆಗೆ ಆಕರ್ಷಿತರಾಗುತ್ತಾರೆ. ಈ ಆಕರ್ಷಣೆಗಳಲ್ಲಿ ಅವರು ತಮ್ಮ ಜೀವನವನ್ನು ಕಳೆಯಲು ಬಯಸುವ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ಈ ರಾಶಿಯವರ ಹೆಣ್ಣು ಮಕ್ಕಳು ಲವ್ ಮ್ಯಾರೇಜ್ ಆಗುತ್ತಾರೆ. ಅಲ್ಲದೇ ಇವರು ಒಮ್ಮೆ ಸಂಬಂಧವನ್ನು ಆರಂಭಿಸಿದರೆ ಅದನ್ನು ಮುಂದುವರೆಸಿಕೊಂಡು ಹೋಗುತ್ತಾರೆ.

ಧನು ರಾಶಿ: ಈ ರಾಶಿಯವರು ಸ್ವಲ್ಪ ಹಠಮಾರಿ ಸ್ವಭಾವ  ಮತ್ತು ಸಂಪ್ರದಾಯವನ್ನು ಮುರಿಯಲು ಇಷ್ಟಪಡುತ್ತಾರೆ. ಮದುವೆ ವಿಚಾರಕ್ಕೆ ಬಂದಾಗ ಅವರು ತುಂಬಾ ಕಠಿಣರಾಗಿದ್ದಾರೆ, ಆದ್ದರಿಂದ ಅವರು ತಮ್ಮ ಆಯ್ಕೆಗೆ ಅಂಟಿಕೊಳ್ಳುತ್ತಾರೆ. ಹಾಗಾಗಿ ಈ ರಾಶಿಯ ಹೆಣ್ಣು ಮಕ್ಕಳು ಕೂಡ ಹಾಗೆಯೇ, ಸಂಗಾತಿಯನ್ನು ತಾವೇ ಹುಡುಕಿಕೊಳ್ಳುತ್ತಾರೆ, ಆದರೆ ಒಮ್ಮೆ ಅವರಿಂದ ದೂರ ಸರಿಯಲು ನಿರ್ಧಾರ ಮಾಡಿದರೆ,ಯಾರಿಂದಲೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ.

ಮಕರ: ಅವರು ತಮ್ಮ ಬಾಲ್ಯದಲ್ಲಿ ಮೋಹವನ್ನು ಹೊಂದಿರುವ ಜನರು ಎಂದರೆ ತಪ್ಪಾಗಲಾರದು. ಅವರ ಈ ಗುಣ ವೈವಾಹಿಕ ಜೀವನದಲ್ಲಿ ಸಹ  ಮುಂದುವರಿಯುತ್ತದೆ. ಅವರು ನಿಷ್ಠಾವಂತರು ಮತ್ತು ಅವರ ಆಯ್ಕೆಗಳಿಗೆ ಬಂದಾಗ ಯಾವುದೇ ಬದಲಾವಣೆಯನ್ನು ಇಷ್ಟಪಡುವುದಿಲ್ಲ. ಆದ್ದರಿಂದ  ಈ ರಾಶಿಯ ಹೆಣ್ಣು ಮಕ್ಕಳು ಪ್ರೀತಿಸುವವರನ್ನು ಹಠ ಹಿಡಿದಾದರೂ ಸರಿ ಮದುವೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಕೂಷ್ಮಾಂಡ ದೇವಿಯನ್ನು ಈ ರೀತಿ ಆರಾಧನೆ ಮಾಡಿದರೆ ಜೀವನದಲ್ಲಿ ಶಾಂತಿ ನೆಲೆಸುತ್ತದೆ

ವೃಷಭ ರಾಶಿ: ಈ ರಾಶಿಯ ಜನರು ತಮಗಾಗಿ ಕೆಲಸಗಳನ್ನು ಮಾಡಲು ಇಷ್ಟಪಡುತ್ತಾರೆ. ಈ ರಾಶಿಯ ಹೆಣ್ಣು ಮಕ್ಕಳು ಹೆಚ್ಚಾಗಿ ಲವ್ ಮಾಡಿ ಮದುವೆ ಆಗುತ್ತಾರೆ.ಈಗಾಗಲೇ ತಿಳಿದಿರುವವರನ್ನು ಮದುವೆಯಾಗುವುದು ಅರ್ಥಪೂರ್ಣವಾಗಿದೆ ಏಕೆಂದರೆ ಪರಿಚಿತತೆಯು  ಸಂಬಂಧವನ್ನು ಉತ್ತಮಗೊಳಿಸುತ್ತದೆ.
Published by:Sandhya M
First published: