Zodiac sign: ಈ 3 ರಾಶಿಯವರನ್ನು ಒಮ್ಮೆ ಭೇಟಿ ಮಾಡಿದ್ರೆ ಸಾಕು ಎಂದಿಗೂ ಮರೆಯಲು ಆಗಲ್ಲ!

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಮೂರು ರಾಶಿಯವರು ನೈಸರ್ಗಿಕವಾಗಿ ಜನರನ್ನು ಆಕರ್ಷಿಸುವ ವಿಶೇಷ ಗುಣಗಳನ್ನು ಹೊಂದಿದ್ದಾರೆ. ವ್ಯಕ್ತಿತ್ವ ಸ್ವಭಾವ ಒಳ್ಳೆಯ ಗುಣ ಅದ್ಭುತವಾಗಿದ್ದು ಜನರು ಒಂದೇ ಭೇಟಿಯಲ್ಲಿ ಆಕರ್ಷಿತರಾಗುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮನುಷ್ಯನ ಹುಟ್ಟಿನಿಂದ (Born) ಸಾಯುವವರೆಗೆ (Death) ಆತನ ಮೇಲೆ ರಾಶಿ (Zodiac sign) ಮತ್ತು ಗ್ರಹಗತಿಗಳು ಪರಿಣಾಮ (Effect) ಮತ್ತು ಪ್ರಭಾವ (Influence) ಬೀರುತ್ತವೆ. ಇದಕ್ಕೆ ಜ್ಯೋತಿಷ್ಯಶಾಸ್ತ್ರ (Astrology) ಪರಿಣಾಮಕಾರಿ. ಜ್ಯೋತಿಷ್ಯಶಾಸ್ತ್ರವನ್ನು ಅರಿತು ನಡೆದಾಗ ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರವೂ ಸಿಗುತ್ತದೆ ಅಂತ ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ವಾಸ್ತು, ವೃಕ್ಷ, ಆಯುರ್ವೇದ ಶಾಸ್ತ್ರಗಳು ಇವೆ. ಪ್ರತಿಯೊಬ್ಬರಿಗೆ ತಮ್ಮ ಪೂರ್ವ ಜನ್ಮದ ಪಾಪ, ಪುಣ್ಯದ ಆಧಾರದ ಮೇಲೆ ಕರ್ಮಫಲ ದೊರೆತಿರುತ್ತದೆ. ಇದನ್ನು ಸರಿಯಾಗಿ ಅರ್ಥೈಸಿ, ಜನರಿಗೆ ಗ್ರಹಗತಿ, ರಾಶಿಗಳ ಬಗ್ಗೆ ತಿಳಿಸಿ ಕೊಡುವುದೇ ಜ್ಯೋತಿಷ್ಯಶಾಸ್ತ್ರವಾಗಿದೆ. ಜಾತಕ ನೋಡಿ, ಮದುವೆ, ಉದ್ಯೋಗ, ದಾಂಪತ್ಯ ಕಲಹ ಇತ್ಯಾದಿಗಳ ಬಗ್ಗೆ ಜ್ಯೋತಿಷ್ಯಶಾಸ್ತ್ರ ತಿಳಿಸಿ ಕೊಡುತ್ತದೆ. ಹಾಗೆಯೇ ಯಾವ ರಾಶಿಯವರು ಅದೃಷ್ಟವಂತರು, ಯಾವ ರಾಶಿಯವರು ಹೆಚ್ಚು ಆಕರ್ಷಿಸಲ್ಪಡುತ್ತಾರೆ ಎಂಬುದನ್ನು ಜ್ಯೋತಿಷ್ಯಶಾಸ್ತ್ರ ಹೇಳಿದೆ.

    ಹಾಗಾದರೆ ನಾವೀಗ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯವರು ಬಹುಬೇಗನೇ ಜನರ ಮನಸ್ಸನ್ನು ಗೆಲ್ಲುತ್ತಾರೆ ಎಂಬುದನ್ನು ನೋಡೋಣ. ಈ ಕೆಳಗಿನ ರಾಶಿಯವರು ಕೇವಲ ಒಂದೇ ಭೇಟಿಯಲ್ಲಿ ಜನರನ್ನು ಆಕರ್ಷಿಸುತ್ತಾರಂತೆ. ಅಂಥವರನ್ನು ಮರೆಯಲು ಇಚ್ಛಿಸಿದರೂ ಸಾಧ್ಯವಾಗುವುದಿಲ್ಲವಂತೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಮೂರು ರಾಶಿಯವರು ನೈಸರ್ಗಿಕವಾಗಿ ಜನರನ್ನು ಆಕರ್ಷಿಸುವ ವಿಶೇಷ ಗುಣಗಳನ್ನು ಹೊಂದಿದ್ದಾರೆ.

    ಜನರು ಅವರ ಕಡೆಗೆ ಬಹುಬೇಗ ಸೆಳೆಯಲ್ಪಡುತ್ತಾರೆ. ಅವರ ವ್ಯಕ್ತಿತ್ವ, ಸ್ವಭಾವ, ಒಳ್ಳೆಯ ಗುಣ ಅದ್ಭುತವಾಗಿದ್ದು, ಜನರು ಒಂದೇ ಭೇಟಿಯಲ್ಲಿ ಆಕರ್ಷಿತರಾಗುತ್ತಾರೆ. ಒಮ್ಮೆ ಈ ರಾಶಿಯವರನ್ನು ಯಾರಾದರೂ ಭೇಟಿಯಾದರೆ ಅವರನ್ನು ಮರೆಯಲು ಸಾಧ್ಯವಿಲ್ಲವಂತೆ. ಆ ಮೂರು ರಾಶಿಗಳು ಹೀಗಿವೆ.

    ಇದನ್ನೂ ಓದಿ: ಈ ಐದು Vastu ಸಲಹೆಗಳನ್ನು ನಿರ್ಲಕ್ಷ್ಯ ಮಾಡುವ ಮುನ್ನ ಯೋಚಿಸಿ

    ವೃಷಭ ರಾಶಿವೃಷಭ ರಾಶಿಯ ಮಂದಿ ಅದ್ಭುತ ಆಕರ್ಷಣೆಯ ಗುಣ ಹೊಂದಿರುತ್ತಾರೆ. ವಿಶೇಷವಾಗಿ ವೃಷಭ ರಾಶಿಯ ಹುಡುಗರ ವ್ಯಕ್ತಿತ್ವವು ತುಂಬಾ ಚೆನ್ನಾಗಿರುತ್ತದೆ. ಜನರು ಅವರನ್ನು ತುಂಬಾ ಸುಲಭವಾಗಿ ಪ್ರೀತಿಸುತ್ತಾರೆ. ಈ ಜನರು ಸ್ನೇಹ ಮತ್ತು ಪ್ರೀತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಚೆನ್ನಾಗಿ ಮಾತನಾಡುತ್ತಾರೆ ಮತ್ತು ಯಾವಾಗಲೂ ದುಬಾರಿ ವಸ್ತುಗಳನ್ನು ಬಳಸುತ್ತಾರೆ. ಒಟ್ಟಾರೆಯಾಗಿ, ಜೀವನವನ್ನು ಅರ್ಥಪೂರ್ಣವಾಗಿ ಜೀವಿಸುತ್ತಾರೆ. ಎಲ್ಲಿ ಹೋದರೂ ತಮ್ಮ ವರ್ಚಸ್ಸನ್ನು ಹರಡುತ್ತ ಹೋಗುತ್ತಾರೆ.

    ಮಿಥುನ ರಾಶಿ: ಮಿಥುನ ರಾಶಿಯ ಜನರು ಕೂಡ ತುಂಬಾ ಆಕರ್ಷಕ ಮತ್ತು ಬೇಗ ಸೆಳೆಯಲ್ಪಡುತ್ತಾರೆ. ಈ ರಾಶಿಯ ಹುಡುಗರ ಜೊತೆಗೆ ಇತರರು ಬಹು ಬೇಗ ಸ್ನೇಹ ಸಂಪಾದಿಸುತ್ತಾರೆ. ಇವರ ಜೊತೆ ಸ್ನೇಹಿತರಾಗಲು ಮತ್ತು ಭಾವನೆಗಳನ್ನು ಹಂಚಿಕೊಳ್ಳ ಬಯಸುತ್ತಾರೆ. ಅವರು ಮಾತನಾಡುವ ಶೈಲಿ, ಜೀವನಶೈಲಿ ಆಕರ್ಷಣೆಗೆ ಮತ್ತು ಜನರನ್ನು ಹತ್ತಿರ ಸೆಳೆಯುತ್ತದೆ. ಈ ಕಾರಣಗಳಿಂದಾಗಿ, ಅವರು ಬಹುಬೇಗ  ಎಲ್ಲರಿಗೂ ಅಚ್ಚುಮೆಚ್ಚಿನವರಾಗುತ್ತಾರೆ. ಈ ಜನರು ವ್ಯಾಪಾರ ವೃತ್ತಿ, ಇತರೆ ಬ್ಯುಸಿನೆಸ್ ನಲ್ಲಿ ಸಕ್ರಿಯರಾಗಿದ್ದರೆ ಅವರು ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ.

    ಇದನ್ನೂ ಓದಿ: ಕನ್ಯಾರಾಶಿಯವರಿಗೆ ಸುಖ-ದುಃಖದ ಮಿಶ್ರಣವಾಗಿರಲಿದೆ ಈ ದಿನ; ಉಳಿದ ರಾಶಿಗಳಿಗೆ ಹೇಗಿರಲಿದೆ?

    ಸಿಂಹ ರಾಶಿ: ಸಿಂಹ ರಾಶಿಯ ಜನರು ಆಕರ್ಷಕ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಈ ರಾಶಿಯವರು ಎತ್ತರದ ಶರೀರ, ಸುಂದರವಾದ ಅಂಗಸೌಷ್ಟ ಹೊಂದಿರುತ್ತಾರೆ. ಈ ಜನರು ತುಂಬಾ ಪ್ರೀತಿ, ವಿಶ್ವಾಸ ಮತ್ತು ಸ್ನೇಹವನ್ನು ಸಂಪಾದನೆ ಮಾಡಿದ್ದಾರೆ. ಇತರರೊಂದಿಗೆ ಬೇಗನೇ ಬೆರೆಯುತ್ತಾರೆ. ಇತರರ ಕಷ್ಟ, ಸುಖ ಕೇಳುತ್ತಾರೆ. ತಮ್ಮ ಕೈಲಾದ ಸಹಾಯ ಮಾಡುವ ಸ್ವಭಾವ ಇವರದ್ದು ಆಗಿರುತ್ತದೆ. ಧೈರ್ಯ, ನಿರ್ಭಯ, ನಿರ್ಭೀಡೆಯಿಂದ ಇರುತ್ತಾರೆ. ಈ ಎಲ್ಲಾ ಕಾರಣಗಳಿಂದಾಗಿ ಅವರು ಯಾರ ಹೃದಯವನ್ನು ಬೇಕಾದರೂ ಕ್ಷಣಾರ್ಧದಲ್ಲಿ ಗೆದ್ದು ಬಿಡುತ್ತಾರೆ. ಪ್ರೀತಿಯಿಂದ ಅವರೊಡನೆ ಹೊಂದಿಕೊಳ್ಳುವ ಸ್ವಭಾವ ಸಿಂಹ ರಾಶಿಯವರ ಪ್ಲಸ್ ಪಾಯಿಂಟ್ ಆಗಿದೆ.
    Published by:renukadariyannavar
    First published: