• ಹೋಂ
 • »
 • ನ್ಯೂಸ್
 • »
 • ಭವಿಷ್ಯ
 • »
 • Planetary Conjunction: ಒಂದೇ ಸಾಲಿನಲ್ಲಿ ಕಾಣಿಸಿಕೊಳ್ಳಲಿವೆ ಮಂಗಳ, ಶನಿ, ಗುರು, ಚಂದ್ರ! ಗ್ರಹಗಳ ಸಂಯೋಗವನ್ನ ವೀಕ್ಷಿಸುವುದೇಗೆ?!

Planetary Conjunction: ಒಂದೇ ಸಾಲಿನಲ್ಲಿ ಕಾಣಿಸಿಕೊಳ್ಳಲಿವೆ ಮಂಗಳ, ಶನಿ, ಗುರು, ಚಂದ್ರ! ಗ್ರಹಗಳ ಸಂಯೋಗವನ್ನ ವೀಕ್ಷಿಸುವುದೇಗೆ?!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಂಗಳ, ಶುಕ್ರ ಮತ್ತು ಶನಿಯು ಸೂರ್ಯನ ಸುತ್ತ ತಮ್ಮದೇ ಆದ ಕಕ್ಷೆಯಲ್ಲಿ ಸುತುತ್ತಿರುವಾಗ ಚಂದ್ರನು ಏಪ್ರಿಲ್‌ನ ಉತ್ತರಾರ್ಧದಲ್ಲಿ ಮೂರು ಗ್ರಹಗಳೊಂದಿಗೆ ನಿಕಟವಾಗಿ ಮುಖಾಮುಖಿಯನ್ನು ಹೊಂದುತ್ತಾನೆ.

 • Share this:

ಶನಿವಾರ (ಏಪ್ರಿಲ್ 9) ಸೂರ್ಯೋದಯಕ್ಕೆ ಮುನ್ನ ಆಕಾಶವನ್ನು ನೋಡುವುದನ್ನು ಮೆರೆಯಬೇಡಿ ಏಕೆಂದರೆ ಮೂರು ಗ್ರಹಗಳು ( Planets), ಡಬಲ್ ಸ್ಟಾರ್ ಮತ್ತು ಚಂದ್ರ (Moon) ತನ್ನ ಮುಂದಿನ ಹಂತವನ್ನು ಪ್ರವೇಶಿಸುವುದನ್ನು ನೀವು ನೋಡಬಹುದು. ನಕ್ಷತ್ರ ನೋಡುವ ವೀಕ್ಷಕರು (Stargazers) ಏಪ್ರಿಲ್ ತಿಂಗಳು ಪೂರ್ಣ ಚಂದ್ರ ವಿವಿಧ ಗ್ರಹಗಳೊಂದಿಗೆ ಸೇರುವ ಪ್ರಕ್ರಿಯನ್ನು ನೋಡಬಹುದು. ಚಂದ್ರನು ಈ ತಿಂಗಳು ಮೂರು ವಿಭಿನ್ನ ಗ್ರಹಗಳೊಂದಿಗೆ ಸೇರಿಕೊಳ್ಳುತ್ತಾನೆ, ಸ್ಪಷ್ಟವಾದ ಆಕಾಶ ಹಾಗೂ ಎತ್ತರದ ಆಕಾಶದಲ್ಲಿ ನಡೆಯುವ ಈ ಪ್ರಕ್ರಿಯನ್ನು ಭೂಮಿಯಿಂದ ನೋಡುವುದು ವೀಕ್ಷಕರಿಗೆ ಹೆಚ್ಚು ಮಜವನ್ನು ತಂದುಕೊಡುತ್ತದೆ.


ಮಂಗಳ, ಶುಕ್ರ ಮತ್ತು ಶನಿಯು ಸೂರ್ಯನ ಸುತ್ತ ತಮ್ಮದೇ ಆದ ಕಕ್ಷೆಯಲ್ಲಿ ಸುತುತ್ತಿರುವಾಗ ಚಂದ್ರನು ಏಪ್ರಿಲ್‌ನ ಉತ್ತರಾರ್ಧದಲ್ಲಿ ಮೂರು ಗ್ರಹಗಳೊಂದಿಗೆ ನಿಕಟವಾಗಿ ಮುಖಾಮುಖಿಯನ್ನು ಹೊಂದುತ್ತಾನೆ.


ಶನಿಯೊಂದಿಗೆ  ಉದಯಿಸುವ ಚಂದ್ರ


ಏಪ್ರಿಲ್ 15 ಮತ್ತು 16 ರಂದು ವಿಶ್ವದಾದ್ಯಂತ ಆಕಾಶದಲ್ಲಿ ರಿಂಗ್(ಉಂಗರು ಆಕಾರದ) ಗ್ರಹವಾದ ಶನಿಯೊಂದಿಗೆ ಚಂದ್ರನು ಉದಯಿಸುತ್ತಾನೆ. ಸೂರ್ಯೋದಯಕ್ಕೆ ಒಂದೆರಡು ಗಂಟೆಗಳಲ್ಲಿ ಆಗ್ನೇಯ ಆಕಾಶದಲ್ಲಿ ಗುರು, ಚಂದ್ರ ಗ್ರಹಗಳ ಪ್ರಕಾಶಮಾನವು ಕಡಿಮೆಯಾಗುತ್ತದೆ. ನಂತರ ಚಂದ್ರನು ಭೂಮಿಯಿಂದ ಕಾಣುವ ಆಕಾಶದಲ್ಲಿ ಗೋಚರಿಸುವ ಅತ್ಯಂತ ಪ್ರಕಾಶಮಾನವಾದ ಗ್ರಹವಾದ ಶುಕ್ರವನ್ನು ಸೇರಲು ಆರಂಭಿಸುತ್ತಾನೆ.


ಇದನ್ನೂ ಓದಿ: Unlucky Zodiac Sign: ಎರಡು ಗ್ರಹಗಳ ಸಂಯೋಗ, ಈ ರಾಶಿಯವರಿಗೆ ನುಂಗಲಾರದ ತುಪ್ಪ


ಶುಕ್ರದಿಂದ ದೂರವಾಗಿ ಮಂಗಳನನ್ನು ಸೇರುವ ಚಂದ್ರ


ಚಂದ್ರ ಮತ್ತು ಶುಕ್ರವು ಏಪ್ರಿಲ್ 23 ರ ಸಂಜೆ ಮುಖಮುಖಿ ಆಗಲಿದ್ದು ಮತ್ತು ಸೂರ್ಯಾಸ್ತದ ನಂತರ, ತೆಳ್ಳಗಿನ ಅರ್ಧಚಂದ್ರಾಕಾರದಲ್ಲಿ ಶುಕ್ರನ ಮೇಲೆ ಕೇವಲ ಐದು ಡಿಗ್ರಿಗಳಷ್ಟು ತೂಗುಹಾಕುವ ರೀತಿಯಲ್ಲಿ ಕಾಣಿಸಿಕೊಳ್ಳಲಿದೆ. ನಂತರ ಚಂದ್ರನು ಶುಕ್ರದಿಂದ ದೂರ ಸರಿಯುತ್ತಾನೆ ಮತ್ತು ಮಂಗಳನ ಹತ್ತಿರ ಸಾಗುತ್ತಾನೆ. ಕತ್ತಲೆಯ ನಂತರ, ಕೆಂಪು ಗ್ರಹವು ಚಂದ್ರನ ಕೆಳಗೆ ಸಾಗುತ್ತದೆ.


26 ಮತ್ತು 27 ರ ಸುಮಾರಿಗೆ, ಚಂದ್ರನು ತನ್ನ ಮೊದಲ ತ್ರೈಮಾಸಿಕ ಹಂತವನ್ನು ಪ್ರವೇಶಿಸುತ್ತಾನೆ.  ಕತ್ತಲೆಯ ನಂತರ ಆಕಾಶದಲ್ಲಿ  "ಅರ್ಧ ಚಂದ್ರ", ಗ್ರಹಗಳ ಚಲನೆ ಮತ್ತು ಜೋಡಣೆಯನ್ನು ಟ್ರ್ಯಾಕ್ ಮಾಡಲಾಗುವುದು ಎಂದು ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ವರದಿಯನ್ನು ಪ್ರಕಟಿಸಿದೆ.


ಹಗಲು/ರಾತ್ರಿಯ ಗಡಿಯ ಸಮಯವು ಚಂದ್ರನ ಮೇಲಿನ ಕುಳಿಗಳು ಮತ್ತು ಪರ್ವತಗಳನ್ನು ವೀಕ್ಷಿಸಲು ಸೂಕ್ತವಾದ ಸಮಯವೆಂದು ವರದಿಯಲ್ಲಿ ತಿಳಿಸಲಾಗಿದೆ.
ಆಕಾಶದಲ್ಲಿ ಗೋಚರಿಸಲಿರುವ ಬುಧ


ಚಂದ್ರನೊಂದಿಗೆ ಜೋಡಿಯಾಗಿರುವ ಮೂರು ಗ್ರಹಗಳ ಜೊತೆಗೆ, ಏಪ್ರಿಲ್ ನಲ್ಲಿ ಸೌರವ್ಯೂಹದ ಚಿಕ್ಕ ಮತ್ತು ವೇಗವಾಗಿ ಚಲಿಸುವ ಗ್ರಹಗಳಲ್ಲಿ ಒಂದಾದ ಬುಧ ಗ್ರಹವನ್ನು ನೋಡಬಹುದು.


ಈ ವರ್ಷ ರಾತ್ರಿ ಆಕಾಶದಲ್ಲಿ ಅದು ಅತ್ಯುನ್ನತ ಮತ್ತು ಹೆಚ್ಚು ಗೋಚರ ಸ್ಥಾನವನ್ನು ತಲುಪುವುದನ್ನು ನೋಡಬಹುದು. ಏಪ್ರಿಲ್ 11 ರಿಂದ, ಬುಧವು ಮೂರರಿಂದ ನಾಲ್ಕು ವಾರಗಳವರೆಗೆ ಆಕಾಶದಲ್ಲಿ ಗೋಚರಿಸಲಿದ್ದಾನೆ.


ಈ ಸಮಯದಲ್ಲಿ ಬುಧವು ಹೆಚ್ಚು ಪ್ರಕಾಶಮಾನವಾಗಿರುತ್ತದೆ, ಏಕೆಂದರೆ ಅದು ಆಕಾಶದಲ್ಲಿ ಸೂರ್ಯನಿಗೆ ತುಂಬಾ ಹತ್ತಿರದಲ್ಲಿದೆ ಮತ್ತು ವರ್ಷದ ಉಳಿದ ಸಮಯದಲ್ಲಿ ಪ್ರಕಾಶಮಾನವಾದ ಪ್ರಜ್ವಲಿಸುವಿಕೆಯು ತೀರಾ ಕಡಿಮೆ ಇರುತ್ತದೆ.


ಬುಧ ಗ್ರಹವು ಸೂರ್ಯನಿಗೆ ತುಂಬಾ ಹತ್ತಿರದಲ್ಲಿ ಪರಿಭ್ರಮಿಸುವ ಕಾರಣ, ಅದು ಯಾವಾಗಲೂ ಆಕಾಶದಲ್ಲಿ ಸೂರ್ಯನಿಗೆ ಹತ್ತಿರದಲ್ಲಿರುತ್ತದೆ, ಸೂರ್ಯಾಸ್ತದ ನಂತರ ಅಥವಾ ಸೂರ್ಯೋದಯದ ಮೊದಲು ಒಂದು ಅಥವಾ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಹಾರಿಜಾನ್ ಬಳಿ ಕಾಣಿಸಿಕೊಳ್ಳುತ್ತದೆ ಎಂದು ಜೆಪಿಎಲ್ ವರದಿಯಲ್ಲಿ ತಿಳಿಸಿದೆ.


ಬುಧ, ಗುರು, ಶುಕ್ರ, ಯುರೇನಸ್ ಮತ್ತು ಮಂಗಳ ಗ್ರಹಗಳು ಚಂದ್ರನೊಂದಿಗೆ ಜೋಡಿಗೊಳ್ಳುತ್ತವೆ. ಆದರೆ, ಜೋಡಣೆಯು ನೇರ ಸಾಲಿನಲ್ಲಿ ಇರುವುದಿಲ್ಲ ಎಂದು ಜೆಪಿಎಲ್ ತಿಳಿಸಿದೆ.


ನಿಮ್ಮ ಮನೆಯಿಂದಲೇ ನೋಡಬಹುದು

top videos


  ಈ ದಿನಗಳಲ್ಲಿ ರಾತ್ರಿಯ ಆಕಾಶವು ನೋಡುವುದು ಒಂದು ಸೊಗಸಾಗಿದೆ, ಮತ್ತು ಯಾವುದೇ ಮಾಲಿನ್ಯವಿಲ್ಲದಿದ್ದರೆ, ಈ ತಿಂಗಳು, ಅಪರೂಪದ ಆಕಾಶ ವಿದ್ಯಮಾನಗಳು ಮತ್ತು ಘಟನೆಗಳನ್ನು ನಿಮ್ಮ ತಾರಸಿಯಿಂದ ಅಥವಾ ನಿಮ್ಮ ಮನೆಯ ಬಾಲ್ಕನಿಯಿಂದ ಆಕಾಶದಲ್ಲಿ ನಡೆಯುವ ಗ್ರಹಗಳ ಪ್ರಕ್ರಿಯನ್ನು ನೋಡುವ ಏಕೈಕ ಅವಕಾಶವಾಗಿದೆ. ಈಗ ಗ್ರಹಗಳ ಪ್ರಕ್ರಿಯೆಗಳನ್ನು ನೋಡಲು ವಿಶೇಷವಾಗಿ ಪರ್ವತಗಳಿಗೆ ಹೋಗಬೇಕಾಗಿಲ್ಲ ನಿಮ್ಮ ಮನೆಯಿಂದನೇ ನೋಡಬಹುದು!

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು