Vaastu Tips: ಅಪ್ಪಿ ತಪ್ಪಿ ಈ ವಸ್ತುಗಳನ್ನು ಮನೆಯಲ್ಲಿಟ್ಟುಕೊಂಡ್ರೆ ಮನೆಯ ನೆಮ್ಮದಿ ಹಾಳಾಗುವುದು ಗ್ಯಾರೆಂಟಿ..

Objects Which Attract Negative Energy: ಪ್ರಕೃತಿಯು ಯಾವಾಗಲೂ ಸಂತೋಷದ ಅಂಶ.  ಮನೆಗಳಲ್ಲಿ, ಹೂವುಗಳು ಅಥವಾ ಸಸ್ಯಗಳನ್ನು ಬೆಳೆಸುವುದು ಸಾಮಾನ್ಯ. ಆದರೆ  ಒಣಗಿದ ಅಥವಾ  ಕೃತಕ ಹೂವುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ, ಮನೆಯ ನಿವಾಸಿಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಾಸ್ತು ಶಾಸ್ತ್ರದ ಪ್ರಕಾರ, ಸಂತೋಷ, ಸಕಾರಾತ್ಮಕತೆ ಮತ್ತು ಯಶಸ್ಸು ಮನೆಯಲ್ಲಿರಲು, ಮನೆಯಲ್ಲಿರುವ ಕೆಲವು ನಕಾರಾತ್ಮಕ ವಸ್ತುಗಳನ್ನು  ತೆಗೆದುಹಾಕುವುದು ಅತ್ಯಗತ್ಯ. ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಕೆಲವು ವಸ್ತುಗಳು, ಕಲಾಕೃತಿಗಳು ಅಥವಾ ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳಬಾರದು. ಯಾವ ವಸ್ತುಗಳನ್ನು ಮನೆಯಲ್ಲಿಟ್ಟುಕೊಳ್ಳಬಾರದು ಎಂಬುದು ಇಲ್ಲಿದೆ. 

ಮುರಿದ ವಸ್ತುಗಳು

ಅನೇಕ ಮನೆಗಳಲ್ಲಿ, ಒಡೆದ ಗಾಜು, ಒಡೆದ ಪಾತ್ರೆಗಳು, ಮುರಿದ ಟ್ರೇಗಳು ಮತ್ತು ಇತರ ರೀತಿಯ ವಸ್ತುಗಳನ್ನು ದೂರವಿಡಲಾಗುತ್ತದೆ. ಬಳಕೆ ಮಾಡುವುದಿಲ್ಲ. ನಂತರ ಅದನ್ನು ಮರೆತುಬಿಡಲಾಗುತ್ತದೆ. ಕೆಲವರು ಅವನ್ನು ಮರುಬಳಕೆ ಮಾಡುವ ಯೋಚನೆಯಲ್ಲಿ ತೆಗೆದಿಟ್ಟು ಮರೆತಿದ್ದರೆ, ಮತ್ತೆ ಕೆಲವರು ಅದನ್ನೇ ಬಳಸುತ್ತಿರುತ್ತಾರೆ. ಇನ್ನು  ಕೆಲವರಿಗೆ ಅದರ ಮೇಲೆ ಏನೋ ಸೆಂಟಿಮೆಂಟ್. ಆದರೆ, ಈ ವಸ್ತುಗಳು ನಕಾರತ್ಮಕತೆಯನ್ನು ಹೆಚ್ಚು ಮಾಡುತ್ತದೆ ಹಾಗೂ ಮನೆಯಲ್ಲಿನ ಜನರಲ್ಲಿ , ದುಃಖ ಮತ್ತು ಹತಾಶತೆಯ ಭಾವನೆಯನ್ನು ಉಂಟುಮಾಡುತ್ತವೆ. ಹಾಗಾಗಿ ನೀವು ಬಳಸುವ ವಸ್ತುಗಳಲ್ಲಿ  ಯಾವುದೇ ಬಿರುಕುಗಳಿಲ್ಲ, ಹಾಗೂ ನಿಮ್ಮ ಹಾಳೆಗಳಿಗೆ ಯಾವುದೇ ಕಲೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ ಮತ್ತು ಏನಾದರೂ ಒಡೆದರೆ, ಅದನ್ನು ತಕ್ಷಣವೇ ಸರಿಪಡಿಸಬೇಕು  ಅಥವಾ ಮನೆಯಿಂದ ಹೊರಹಾಕಬೇಕು.

ನಕಾರಾತ್ಮಕ ಅಂಶವಿರುವ  ಕಲಾಕೃತಿಗಳು

ಅಳುತ್ತಿರುವ ಮಗುವಿನ ಚಿತ್ರ, ಹಡಗು ಕುಸಿಯುತ್ತಿರುವ ಚಿತ್ರ, , ಗೊಂದಲ ಸೃಷ್ಟಿಸುವ ಕಲಾಕೃತಿಗಳು, ಸೂರ್ಯ ಮುಳುಗುವುದು ಇತ್ಯಾದಿ  ನಕಾರಾತ್ಮಕ ಅಂಶವಿರುವ  ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು , ಆ ಮನೆಯಲ್ಲಿ ನೋವು ಮತ್ತು ದುಃಖದ ವಾತಾವರಣವನ್ನು ಸೃಷ್ಟಿ ಮಾಡುತ್ತದೆ.  ಹಾಗೆಯೆ , ಮಲಗುವ ಕೋಣೆಯಲ್ಲಿ ಜಲಪಾತ, ಸಾಗರ, ಮಳೆ, ಅಕ್ವೇರಿಯಂ ಅಥವಾ ಕಾರಂಜಿ ಚಿತ್ರಗಳು ಹಣಕಾಸಿನ ಸಮಸ್ಯೆಗಳು ಮತ್ತು ಭಾವನಾತ್ಮಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಏಕೆಂದರೆ ನೀರು ಅಸ್ಥಿರವಾದ ಅಂಶ ಎಂದು ಪರಿಗಣಿಸಲಾಗುತ್ತದೆ ಮತ್ತು  ಇದು ಮನೆಯಲ್ಲಿ ಅಸ್ಥಿರವಾದ ವಾತಾವರಣವನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ: ಸಿಂಹರಾಶಿಯವರಿಗೆ ಈ ವಾರ ಶುಭ ಸುದ್ಧಿಗಳು ಹೆಚ್ಚು, ನಿಮ್ಮ ರಾಶಿಯ ಈ ವಾರದ ಭವಿಷ್ಯ ಏನಿದೆ ನೋಡಿ?..

ಒಣಗಿದ  ಹೂವು ಅಥವಾ ಕೃತಕ ಹೂವುಗಳು

ಪ್ರಕೃತಿಯು ಯಾವಾಗಲೂ ಸಂತೋಷದ ಅಂಶ.  ಮನೆಗಳಲ್ಲಿ, ಹೂವುಗಳು ಅಥವಾ ಸಸ್ಯಗಳನ್ನು ಬೆಳೆಸುವುದು ಸಾಮಾನ್ಯ. ಆದರೆ  ಒಣಗಿದ ಅಥವಾ  ಕೃತಕ ಹೂವುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ, ಮನೆಯ ನಿವಾಸಿಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ಇವುಗಳು ಶಕ್ತಿಯ ಹರಿವನ್ನು ತಡೆಯುತ್ತವೆ. ಇದನ್ನು ಹೊರಾಂಗಣದಲ್ಲಿ, ತೋಟದಲ್ಲಿ ಅಥವಾ ಟೆರೇಸ್‌ನಲ್ಲಿ ಬೆಳೆಯಬಹುದು. ಮುಳ್ಳುಗಳನ್ನು ಹೊಂದಿರುವ ಸಸ್ಯಗಳು ಮನೆಯ ಸದಸ್ಯರಲ್ಲಿ ಸಮಸ್ಯೆಗಳನ್ನು ಸೃಷ್ಟಿಸುವುದರಿಂದ ಅವುಗಳನ್ನು ಮನೆಯ ಒಳಗೆ ಬೆಳೆಸಬಾರದು.

ಹರಿದ ಬಟ್ಟೆಗಳು

ಹಾಳಾದ ಹಾಗೂ ಹರಿದ ಬಟ್ಟೆಗಳು ಮತ್ತು ಪ್ಯಾಚ್‌  ಆಗಿರುವ ವಸ್ತುಗಳು ನಿಮ್ಮ ಪ್ರೇಮ ಜೀವನದಲ್ಲಿ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ. ತಿಂಗಳಿಗೊಮ್ಮೆ, ನಿಮ್ಮ ಬೀರುಗಳಲ್ಲಿ ಹಾಳಾದ ಅಥವಾ ಹರಿದ ಬಟ್ಟೆಗಳನ್ನು ತೆಗೆದು ಮನೆಯಿಂದ ಹೊರಹಾಕಿ. ಹರಿದ ಬಟ್ಟೆಗಳು ಮನೆಯಲ್ಲಿ ಕೆಟ್ಟ ಶಕ್ತಿಗಳನ್ನು ಸೃಷ್ಟಿ ಮಾಡುತ್ತದೆ ಹಾಗೂ ಒಳ್ಳೆಯ ಶಕ್ತಿಯ ಹರಿವನ್ನು ತಡೆಯುತ್ತದೆ.

ಸತ್ತ ಪ್ರಾಣಿಗಳು

ಟ್ಯಾಕ್ಸಿಡರ್ಮಿ ಪ್ರಾಣಿಗಳು, ಹುಲಿ ಮತ್ತು ಪ್ಯಾಂಥರ್ ಚರ್ಮ, ದಂತಗಳು, ಚಿಪ್ಪುಗಳು, ಬಸವನ ಹುಳುಗಳು ಅಥವಾ ಕೊಂಬುಗಳು ನಿಶ್ಚಲ ಶಕ್ತಿಯನ್ನು ಹೊಂದಿವೆ, ಅವುಗಳು ಸಾವಿನ ಸಂಕೇತ. ವಾಸ್ತು ಪ್ರಕಾರ, ಅಸಹಜವಾದ  ಈ ವಸ್ತುಗಳು ಯಾವುದನ್ನೂ ಮನೆಯಲ್ಲಿ ಇಡಬಾರದು. ಬೊನ್ಸಾಯ್‌ಗಳನ್ನು ಇಟ್ಟುಕೊಳ್ಳದಂತೆ ವಾಸ್ತು ಸಲಹೆ ನೀಡಲು ಇದೇ ಪ್ರಮುಖ  ಕಾರಣವಾಗಿದೆ. ಈ ವಸ್ತುಗಳು ಮನೆಯ ನೆಮ್ಮದಿಯನ್ನು ಹಾಳು ಮಾಡುತ್ತದೆ.

ಇದನ್ನೂ ಓದಿ: ಈ ರಾಶಿಯವರಿಗೆ ಸಾಹಸ ಮಾಡುವುದು ಅಂದ್ರೆ ಬಹಳ ಇಷ್ಟ.. ನಿಮ್ಮದೂ ಇದೇ ರಾಶಿನಾ?

ವಾಸ್ತು ಶಾಸ್ತ್ರದ ಪ್ರಕಾರ ಈ ವಸ್ತುಗಳು ಮನೆಯ ಶಾಂತಿಯನ್ನು ಕೆಡಿಸುವುದರ ಜೊತೆಗೆ ಬದುಕಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸಾಧ್ಯತೆ ಹೆಚ್ಚಿರುತ್ತದೆ.
Published by:Sandhya M
First published: