Superstitions: ಈ ಮೂಢನಂಬಿಕೆಗಳ ಹಿಂದಿದೆಯಂತೆ ವೈಜ್ಞಾನಿಕ ತರ್ಕ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಮ್ಮ ಹಿರಿಯರು ಹೇಳಿದಂತಹ ಕೆಲವು ನಂಬಿಕೆಗಳ ಮತ್ತು ಆಚರಣೆಗಳ ಹಿಂದಿರುವ ವೈಜ್ಞಾನಿಕ ತರ್ಕವನ್ನು ಅರಿತುಕೊಳ್ಳುವುದು ತುಂಬಾನೇ ಮುಖ್ಯವಾಗಿದೆ.

  • News18 Kannada
  • 2-MIN READ
  • Last Updated :
  • Karnataka, India
  • Share this:

ನಮ್ಮಲ್ಲಿ ಇಂದಿಗೂ ರೂಢಿಯಲ್ಲಿರುವ ಅನೇಕ ರೀತಿಯ ಮೂಢನಂಬಿಕೆಗಳು (Superstitions) ಅನೇಕ ಜನರ ತಲೆಯಲ್ಲಿ ಪ್ರತಿ ನಿಮಿಷ ಗಿರಕಿ ಹೊಡೆಯುತ್ತ ಮನಸ್ಸನ್ನು ಗೊಂದಲದ ಗೂಡಾಗಿಸುತ್ತವೆ. ಎಷ್ಟೋ ವಿಚಾರಗಳನ್ನು, ಆಚರಣೆಗಳನ್ನು ನಮ್ಮ ಹಿರಿಯರು ಹೇಳಿರುತ್ತಾರೆ. ಅದರಲ್ಲಿ ಎಷ್ಟೋ ವಿಷಯಗಳಿಗೆ ವೈಜ್ಞಾನಿಕವಾದ ತರ್ಕ (Scientific Reasoning) ಇರುತ್ತದೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗದೆ ನಾವು ಅವುಗಳನ್ನೆಲ್ಲವನ್ನೂ ಮೂಢನಂಬಿಕೆ ಅಂತ ಪಟ್ಟ ಕಟ್ಟಿ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತೇವೆ ಎಂದು ಹೇಳಬಹುದು.


ನಮ್ಮ ಹಿರಿಯರು ಹೇಳಿದಂತಹ ಕೆಲವು ನಂಬಿಕೆಗಳ ಮತ್ತು ಆಚರಣೆಗಳ ಹಿಂದಿರುವ ವೈಜ್ಞಾನಿಕ ತರ್ಕವನ್ನು ಅರಿತುಕೊಳ್ಳುವುದು ತುಂಬಾನೇ ಮುಖ್ಯವಾಗಿದೆ. ಆದರೆ ಈಗ ದುರದೃಷ್ಟವಶಾತ್, ಇವುಗಳಲ್ಲಿ ಅನೇಕ ವಿಷಯಗಳು ಮೂಢನಂಬಿಕೆಗಳ ಮಟ್ಟಕ್ಕೆ ಈಗಾಗಲೇ ತಳ್ಳಲ್ಪಟ್ಟಿವೆ, ಗೇಲಿ ಮಾಡಲ್ಪಟ್ಟಿವೆ ಮತ್ತು ಅಪಹಾಸ್ಯಕ್ಕೊಳಗಾಗಿವೆ ಅಂತ ಹೇಳಬಹುದು.


ವೈಜ್ಞಾನಿಕ ತರ್ಕ ಇರಬಹುದು!
ಆದರೂ ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವುಗಳ ಹಿಂದೆ ಹೆಚ್ಚು ಆಳವಾದ ವೈಜ್ಞಾನಿಕ ತರ್ಕವಿದೆ. ಕೆಲವು 'ಮೂಢನಂಬಿಕೆಗಳು' ಇಲ್ಲಿವೆ ನೋಡಿ, ಅವುಗಳ ಹಿಂದಿರುವ ಬಲವಾದ ವೈಜ್ಞಾನಿಕ ತರ್ಕವನ್ನು ಅರ್ಥ ಮಾಡಿಕೊಳ್ಳಿ.


ರಾತ್ರಿ ಅರಳಿ ಮರದ ಕೆಳಗೆ ನಿಲ್ಲಬಾರದು
ಈ ಮಾತನ್ನು ಅನೇಕರು ಹೇಳುವುದನ್ನು ನಾವೆಲ್ಲಾ ಕೇಳಿರುತ್ತೇವೆ. ಇದನ್ನು ಏಕೆ ಹೇಳುತ್ತಾರೆ ಎಂದರೆ ಬೆಳಗ್ಗೆ ದ್ಯುತಿಸಂಶ್ಲೇಷಣೆ ಸಂಭವಿಸಿದಾಗ, ಮರಗಳು ಮತ್ತು ಇತರ ಸಸ್ಯಗಳು ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳುತ್ತವೆ. ಅದನ್ನು ಶಕ್ತಿಯಾಗಿ ಪರಿವರ್ತಿಸುತ್ತವೆ ಮತ್ತು ನಾವು ಉಸಿರಾಡುವ ಗಾಳಿಯಲ್ಲಿ ಆಮ್ಲಜನಕವನ್ನು ನೀಡುತ್ತವೆ.


ಆದರೆ ರಾತ್ರಿ ಹೊತ್ತಿನಲ್ಲಿ ಸೂರ್ಯನ ಬೆಳಕಿನ ಕೊರತೆಯಿದ್ದಾಗ ಸಸ್ಯಗಳು ಇಂಗಾಲದ ಡೈ ಆಕ್ಸೈಡ್ ಅನ್ನು ಹೊರಹಾಕುತ್ತವೆ. ಇದು ಮನುಷ್ಯರಿಗೆ ಮಾರಕವೆಂದು ಹೇಳಲಾಗುತ್ತದೆ. ಅದಕ್ಕಾಗಿಯೇ ರಾತ್ರಿ ಹೊತ್ತಿನಲ್ಲಿ ಅರಳಿ ಮರದ ಕೆಳಗೆ ನಿಲ್ಲಬಾರದು ಅಂತ ಹೇಳುತ್ತಾರೆ.


ಬಾಗಿಲಿಗೆ ನಿಂಬೆ ಮತ್ತು ಹಸಿ ಮೆಣಸಿನಕಾಯಿಗಳನ್ನು ನೇತು ಹಾಕುವುದು
ಇದರ ಹಿಂದೆ ಸಹ ಒಂದು ವೈಜ್ಞಾನಿಕ ತರ್ಕವಿದೆ. ಅನೇಕರು ನಿಂಬೆ ಮತ್ತು ಹಸಿ ಮೆಣಸಿನಕಾಯಿಗಳನ್ನು ಬಾಗಿಲಿಗೆ ನೇತು ಹಾಕುತ್ತಾರೆ. ಇದರಿಂದಾಗಿ ದೇವಿಯು ತನ್ನ ನೆಚ್ಚಿನ ಆಹಾರವನ್ನು ತಿನ್ನುತ್ತಾಳೆ ಮತ್ತು ಅಲ್ಲಿಂದ ಸಂಪೂರ್ಣವಾಗಿ ತೃಪ್ತಿಯಿಂದ ಹಿಂತಿರುಗುತ್ತಾಳೆ ಅಂತ ಹೇಳುತ್ತಾರೆ.


ಕಪ್ಪು ಬೆಕ್ಕು ಮಾರ್ಗಗಳನ್ನು ದಾಟುವುದು
ಕಪ್ಪು ಬೆಕ್ಕು ನಿಮ್ಮ ಹಾದಿಯನ್ನು ದಾಟುವುದನ್ನು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ, ಇದು ಭಾರತಕ್ಕೆ ಮಾತ್ರವಲ್ಲದೆ ಪಾಶ್ಚಿಮಾತ್ಯ ದೇಶಗಳಲ್ಲಿಯೂ ಜನಪ್ರಿಯವಾಗಿದೆ. ಈ ಮೂಢನಂಬಿಕೆ ಈಜಿಪ್ಟ್​ನಲ್ಲಿ ಹುಟ್ಟಿಕೊಂಡಿತು. ಅಲ್ಲಿ ಕಪ್ಪು ಬೆಕ್ಕುಗಳು ದುಷ್ಟ ಜೀವಿಗಳು ಮತ್ತು ಅವು ದುರಾದೃಷ್ಟವನ್ನು ತರುತ್ತವೆ ಎಂದು ನಂಬಲಾಗಿತ್ತು.


ಭಾರತದಲ್ಲಿ ಕಪ್ಪು ಬಣ್ಣವು ಹೆಚ್ಚಾಗಿ ಶನಿ ದೇವರಿಗೆ ಸಂಬಂಧಿಸಿದೆ. ಕಪ್ಪು ಬೆಕ್ಕು ನಿಮ್ಮ ಮಾರ್ಗವನ್ನು ದಾಟಿದರೆ, ನೀವು ಬೇರೆಯವರು ಆ ದಾರಿಯನ್ನು ದಾಟುವವರೆಗೂ ಕಾಯುತ್ತೀರಿ. ಇದು ಅತ್ಯಂತ ಸ್ವಾರ್ಥ ಮನೋಭಾವನೆಯನ್ನು ತೋರಿಸುತ್ತದೆ.


ಉತ್ತರ ದಿಕ್ಕಿಗೆ ಮುಖ ಮಾಡಿ ಮಲಗಬೇಡಿ
ಭೂಮಿಯ ಕಾಂತಕ್ಷೇತ್ರ ಮತ್ತು ಮಾನವ ದೇಹದ ಕ್ಷೇತ್ರದ ನಡುವಿನ ಸಂಬಂಧದ ಬಗ್ಗೆ ಬಹುಶಃ ನಮ್ಮ ಹಿರಿಯರಿಗೆ ತಿಳಿದಿತ್ತು. ರಕ್ತದೊತ್ತಡ ಮತ್ತು ಭೂಮಿಯ ಕಾಂತಕ್ಷೇತ್ರದೊಂದಿಗಿನ ಅಸಮಾನತೆಯು ಉಂಟು ಮಾಡುವ ಇತರ ಕಾಯಿಲೆಗಳಿಗೆ ಸಂಬಂಧಿಸಿದ ಹಾನಿಕಾರಕ ಪರಿಣಾಮಗಳನ್ನು ತಪ್ಪಿಸಲು ಅವರು ದಕ್ಷಿಣ ದಿಕ್ಕಿನೆಡೆಗೆ ತಲೆ ಮಾಡಿ ಮಲಗುವ ಈ ನಿಯಮವನ್ನು ಮಾಡಿದರು. ಆದಾಗ್ಯೂ ನಾವು ಉತ್ತರದ ಕಡೆಗೆ ಮುಖ ಮಾಡಿ ಮಲಗಿದರೆ, ನಾವು ಸಾಯುತ್ತೇವೆ ಎಂಬ ಮೂಢನಂಬಿಕೆಗಳು ಇವೆ.


ಒಡೆದ ಕನ್ನಡಿಗಳು ದುರಾದೃಷ್ಟವನ್ನು ತರುತ್ತವೆ
ಹಿಂದಿನ ಕಾಲದಲ್ಲಿ, ಕನ್ನಡಿಗಳು ತುಂಬಾ ದುಬಾರಿಯಾಗಿದ್ದವು, ಅವುಗಳನ್ನು ಒಡೆಯಬಾರದು ಎಂಬ ಕಾರಣಕ್ಕೆ ಹೀಗೆ ಹೇಳಲಾಗುತ್ತಿತ್ತು. ಅಂತಹ ನಿರ್ಲಕ್ಷ್ಯವನ್ನು ತಪ್ಪಿಸಲು, ಪ್ರಾಚೀನ ರೋಮ್ ಜನರು ಕನ್ನಡಿಗಳನ್ನು ಒಡೆದರೆ ನಿಮಗೆ 7 ವರ್ಷಗಳ ದುರಾದೃಷ್ಟ ಅಂಟಿಕೊಳ್ಳುತ್ತದೆ ಎಂಬ ವದಂತಿಯನ್ನು ಹರಡಿದರು. 7 ಸಂಖ್ಯೆಯ ಹಿಂದಿನ ತರ್ಕವೆಂದರೆ ರೋಮನ್ ನಂಬಿಕೆಗಳ ಪ್ರಕಾರ, ಜೀವನವನ್ನು ನವೀಕರಿಸಲು 7 ವರ್ಷಗಳು ಹಿಡಿಯುತ್ತವೆ ಎಂಬುದಾಗಿತ್ತು.


ನಡುಗುತ್ತಿರುವ ಕಣ್ಣುಗಳು
ಇದು ವಿಭಿನ್ನ ಸಂಸ್ಕೃತಿಗಳಲ್ಲಿ ವಿಭಿನ್ನ ಅರ್ಥವನ್ನು ಹೊಂದಿದೆ. ಇದಕ್ಕೆ ವೈಜ್ಞಾನಿಕ ಕಾರಣವೆಂದರೆ ಈ ಸೆಳೆತವು ಆಲ್ಕೋಹಾಲ್, ಒತ್ತಡ, ಅಲರ್ಜಿ ಅಥವಾ ಒಣಗಿದ ಕಣ್ಣುಗಳಿಂದ ಉಂಟಾಗುತ್ತದೆ.


ದೃಷ್ಟಿ ತೆಗೆಯುವುದು
ಮಗುವಿನ ಕುತ್ತಿಗೆಯ ಮೇಲೆ ಅಥವಾ ಹಣೆಯ ಮೇಲೆ ತಾಯಂದಿರು ಕಾಡಿಗೆಯಿಂದ ಒಂದು ಸಣ್ಣ ಚುಕ್ಕೆಯನ್ನು ಹಾಕುವುದನ್ನು ನಾವೆಲ್ಲಾ ಆಗಾಗ್ಗೆ ನೋಡುತ್ತಿರುತ್ತೇವೆ. ಇದನ್ನು 'ದೃಷ್ಟಿ ತೆಗೆಯುವುದು' ಎಂದು ಕರೆಯಲಾಗುತ್ತದೆ.


ಇದು ಮಗುವಿನ ಕಡೆಗೆ ಬರುವ ಎಲ್ಲಾ ನಕಾರಾತ್ಮಕ ಕಂಪನಗಳನ್ನು ತಡೆಯುತ್ತದೆ. ಇಲ್ಲಿನ ತರ್ಕವೆಂದರೆ ಹೀಗೆ ಮಾಡುವುದು ಮಗುವನ್ನು ಕೆಟ್ಟದಾಗಿ ಕಾಣುವಂತೆ ಮಾಡುತ್ತದೆ ಮತ್ತು ಯಾರೂ ಮಗುವಿನ ಬಗ್ಗೆ ಕೆಟ್ಟದಾಗಿ ಯೋಚಿಸುವುದಿಲ್ಲ.


ಉಡುಗೊರೆ ಮೊತ್ತಕ್ಕೆ ಒಂದು ರೂಪಾಯಿ ಸೇರಿಸುವುದು
ನಾವು ಯಾರಿಗಾದರೂ ಹಣವನ್ನು ಉಡುಗೊರೆಯಾಗಿ ನೀಡಿದಾಗಲೆಲ್ಲಾ ಅದಕ್ಕೆ 1 ರೂಪಾಯಿ ನಾಣ್ಯವನ್ನು ಸೇರಿಸಿ ಕೊಡುತ್ತೇವೆ ಮತ್ತು ಮದುವೆಯಲ್ಲಿ ಒಂದು ಕವರ್ ನಲ್ಲಿ ಒಂದು ನಾಣ್ಯವನ್ನು ಸೇರಿಸಿ ಕೊಡುತ್ತೇವೆ.


ಇದು ಏಕೆ ಮತ್ತು ಯಾವ ತರ್ಕದಿಂದ ಮಂಗಳಕರವಾಗಿದೆ ಎಂದು ಎಂದಾದರೂ ಯೋಚಿಸಿದ್ದೀರಾ? ಆ ಹೆಚ್ಚುವರಿ ನಾಣ್ಯವನ್ನು ಸೇರಿಸಲು ಮುಖ್ಯ ಕಾರಣವೆಂದರೆ ಇಡೀ ಮೊತ್ತವನ್ನು ಬೆಸ ಸಂಖ್ಯೆಯನ್ನಾಗಿ ಮಾಡುವುದು, ಅದು ಅವಿಭಾಜ್ಯವಾಗುತ್ತದೆ. ಆದ್ದರಿಂದ ಇದು ವ್ಯಕ್ತಿಗೆ ಅಥವಾ ಹೊಸದಾಗಿ ಮದುವೆಯಾದ ದಂಪತಿಗೆ ಒಳ್ಳೆಯದು. ಆ ತರ್ಕದಿಂದ ಸಂಖ್ಯೆಯು ಸಮವಾಗಿದ್ದರೆ, ಮೊತ್ತವು ಶೂನ್ಯದಲ್ಲಿ ಕೊನೆಗೊಳ್ಳುತ್ತದೆ, ಅಂದರೆ 'ಅಂತ್ಯ' ಅಂತ ಅರ್ಥ.


ಗ್ರಹಣ ಸಮಯದಲ್ಲಿ ಹೊರಗೆ ಕಾಲಿಡುವಂತಿಲ್ಲ
ಗ್ರಹಣದ ಸಮಯದಲ್ಲಿ ನಮ್ಮನ್ನು ಹೊರಗೆ ಹೋಗದಂತೆ ಮನೆಯಲ್ಲಿ ಇರುವ ಹಿರಿಯರು ಹೇಳುತ್ತಾರೆ. ಏಕೆ ಹೋಗಬಾರದು? ಹೋದರೆ ಏನಾಗುತ್ತದೆ ಅನ್ನೋ ಪ್ರಶ್ನೆಗಳನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ. ಇದಕ್ಕೆ ಏಕೈಕ ಕಾರಣವೆಂದರೆ ಆ ಸಮಯದಲ್ಲಿನ ಕಿರಣಗಳು ರೆಟಿನಾ ಸುಟ್ಟಗಾಯಗಳಿಗೆ ಕಾರಣವಾಗಬಹುದು ಅಂತ. ಇದನ್ನು ಹೊರತುಪಡಿಸಿ ಬೇರೇನೂ ಇಲ್ಲ.


ಶ್ರಾದ್ಧದವರೆಗೂ ಅಡುಗೆ ಮಾಡಬೇಡಿ
ಅನೇಕರು ಇದನ್ನು ಅನುಸರಿಸುತ್ತಾರೆ, ಆದರೆ ಯಾರೂ ಸಹ ಇದರ ಹಿಂದಿರುವ ನಿಜವಾದ ಅರ್ಥವನ್ನು ಅರಿತುಕೊಳ್ಳಲು ಹೋಗಿರುವುದಿಲ್ಲ. ಇದು ಅಶುಭ ಅಂತ ಅನ್ನೋದಕ್ಕೆ ಸಾಧ್ಯವಿಲ್ಲ.
ಇದರ ಹಿಂದಿನ ಸರಳವಾದ ತಾರ್ಕಿಕ ವಿಷಯ ಏನೆಂದರೆ ಸತ್ತವರ ಆತ್ಮವನ್ನು ಸುಡುವುದನ್ನು ತಡೆಯಲು ಇದು ಎಂದು ಮೂಢನಂಬಿಕೆ ಹೇಳುತ್ತದೆ. ಆದರೂ ತಾರ್ಕಿಕವಾಗಿ ಇದು ಸತ್ತವರ ಮನೆಯಲ್ಲಿರುವ ಕುಟುಂಬ ಸದಸ್ಯರ ಶೋಕ ಸಮಯವಾಗಿರುತ್ತದೆ.


ಅಂತ್ಯಕ್ರಿಯೆ ಮಾಡಿದ ನಂತರ ಸ್ನಾನ ಮಾಡುವುದು
ಇದು ಅಗಲಿದ ಆತ್ಮದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ, ಆದರೆ ಇಲ್ಲಿನ ತರ್ಕವೆಂದರೆ ಹಿಂದಿನ ಜನರು ಹಲವಾರು ಕಾಯಿಲೆಗಳಿಗೆ ಲಸಿಕೆ ಹಾಕಿಸುತ್ತಿರಲಿಲ್ಲವಾದ್ದರಿಂದ, ಮನೆಗೆ ಬಂದು ಚೆನ್ನಾಗಿ ಸ್ನಾನ ಮಾಡುವುದು ಉತ್ತಮ ಅಂತ ಹೇಳಿದರು.


ಏಕೆಂದರೆ ಅನೇಕ ಜನರು ಭೇಟಿ ನೀಡಿದ ಸ್ಥಳದಲ್ಲಿ ಮೃತ ದೇಹವನ್ನು ಇಡಲಾಗಿರುತ್ತದೆ. ಯಾವ ಸೋಂಕುಗಳು ಮೃತ ದೇಹದ ಮೇಲೆ ಅಡಗಿರಬಹುದು ಎಂದು ತಿಳಿದಿರುವುದಿಲ್ಲ. ಆದ್ದರಿಂದ ಅಂತ್ಯಕ್ರಿಯೆಯ ನಂತರ ಎಲ್ಲರೂ ಸ್ನಾನ ಮಾಡುವ ಆಚರಣೆ ಹುಟ್ಟಿದ್ದು.


ಸೂರ್ಯಾಸ್ತದ ನಂತರ ಕಸ ಗುಡಿಸಬೇಡಿ


ಸೂರ್ಯಾಸ್ತದ ನಂತರ ನೀವು ಕಸ ಗುಡಿಸಿದರೆ ಲಕ್ಷ್ಮಿ ದೇವಿಯು ನಿಮ್ಮ ಮನೆಯಿಂದ ಹೊರ ಹೋಗುತ್ತಾಳೆ ಎಂದು ಅನೇಕರು ಹೇಳುತ್ತಾರೆ. ಈಗ ಇಲ್ಲಿ ಕಾರಣವೆಂದರೆ ದೇವಿಯು ಸಾಮಾನ್ಯವಾಗಿ ಸೂರ್ಯಾಸ್ತದ ನಂತರ ಭೇಟಿ ನೀಡುತ್ತಾಳೆ, ಆದ್ದರಿಂದ, ಸೂರ್ಯಾಸ್ತದ ನಂತರ ನೀವು ನಿಮ್ಮ ಸ್ಥಳವನ್ನು ಸ್ವಚ್ಛಗೊಳಿಸಿದರೆ, ಅವಳು ಒಳಗೆ ಬರುವುದಿಲ್ಲ ಅಂತ.


ಸೂರ್ಯಾಸ್ತದ ನಂತರ ಉಗುರು ಕತ್ತರಿಸಬಾರದು
ಉಗುರು ಕ್ಲಿಪ್ಪರ್ ಗಳು ಬ್ಲೇಡ್​ಗಳಂತೆ ಚೂಪಾದ ಅಂಚುಗಳನ್ನು ಹೊಂದಿರುತ್ತವೆ.  ಬೆಳಕು ಸಾಕಷ್ಟು ಇಲ್ಲದೆ ಇದ್ದಾಗ ನಿಮ್ಮ ಉಗುರುಗಳ ಬದಲಿಗೆ ಕೈಯ ತೊಗಲನ್ನು ಕತ್ತರಿಸಿಕೊಂಡು ನೋವು ಅನುಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಅಂತ ಹೀಗೆ ಹೇಳುತ್ತಾರೆ.


ಇದನ್ನೂ ಓದಿ: Money Mantra: ಈ 2 ರಾಶಿಯವರಿಗೆ ರಾಜಯೋಗ ಶುರು, ಕೆಲಸವಿಲ್ಲದವರಿಗೆ ಹೊಸ ಉದ್ಯೋಗ ಪ್ರಾಪ್ತಿ!


ಭಾರತದಲ್ಲಿ ವಿದ್ಯುಚ್ಛಕ್ತಿ ಇಲ್ಲದ ಹಳೆಯ ದಿನಗಳಲ್ಲಿ, ವ್ಯಕ್ತಿಗಳು ಅದನ್ನು ಹಗಲಿನಲ್ಲಿ ಮಾಡಬೇಕಾಗಿತ್ತು. ಆ ತರ್ಕವು ಈಗ ಮೂಢನಂಬಿಕೆಗೆ ತಿರುಗಿದೆ ಮತ್ತು ವಿಲಕ್ಷಣ ವಿವರಣೆಗಳೊಂದಿಗೆ ಅದನ್ನು ಬೆಂಬಲಿಸುತ್ತಾರೆ.


ಮುಟ್ಟಿನ ಸಮಯದಲ್ಲಿ ಮಹಿಳೆಯರು ಕೆಲಸಗಳನ್ನು ಮಾಡದಂತೆ ನಿರ್ಬಂಧಿಸುವುದು
ಮುಟ್ಟಿನ ಸಮಯದಲ್ಲಿ ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್ ಅನ್ನು 1896 ರಲ್ಲಿ ಕಂಡು ಹಿಡಿಯಲಾಯಿತು. ಆದರೆ ನೋವು ನಿವಾರಕಗಳು 20ನೇ ಶತಮಾನದ ಮೊದಲು ಲಭ್ಯವಿರಲಿಲ್ಲ.


ಈ ನಂಬಿಕೆಯ ಹಿಂದಿರುವ ತರ್ಕವೆಂದರೆ, ಮುಟ್ಟಿನ ಸಮಯದ ಆ 5 ದಿನಗಳು ಮಹಿಳೆಯರಿಗೆ ಅತ್ಯಂತ ನೋವಿನಿಂದ ಕೂಡಿರುತ್ತವೆ ಮತ್ತು ಒತ್ತಡದಿಂದ ಕೂಡಿರುತ್ತವೆ ಮತ್ತು ಅವರಿಗೆ ವಿಶ್ರಾಂತಿ ನೀಡುವ ಬಗ್ಗೆ ಇತ್ತು. ಪ್ರಾಯಶಃ ಆ ದಿನಗಳಲ್ಲಿ ಅಸೌಖ್ಯದಿಂದಾಗಿ ಮಹಿಳೆಯರು ಕೆಲಸ ಮಾಡುತ್ತಿರಲಿಲ್ಲ, ಇದು ನಿಧಾನವಾಗಿ ಒಂದು ಆಚರಣೆಯಾಗಿ ಮಾರ್ಪಟ್ಟಿತು ಮತ್ತು ನಂತರ ಮೂಢನಂಬಿಕೆಯ ರೂಪಕ್ಕೆ ಇಳಿಯಿತು.


ಅದೃಷ್ಟಕ್ಕಾಗಿ ಮೊಸರು ಮತ್ತು ಸಕ್ಕರೆ ತಿನ್ನಿ
ಇಲ್ಲ, ಇದಕ್ಕೂ ಅದೃಷ್ಟಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಅಂತ ಹೇಳಬಹುದು. ಇಲ್ಲಿನ ತರ್ಕವೆಂದರೆ ಮೊಸರು ಮತ್ತು ಸಕ್ಕರೆಯ ಈ ಸಂಯೋಜನೆಯು ನಿಮ್ಮನ್ನು ಶಾಂತವಾಗಿರಿಸುತ್ತದೆ.


ಇದನ್ನೂ ಓದಿ: Astrology: ತುಳಸಿ ತೀರ್ಥ ಈ ರೀತಿ ಬಳಸಿ, ಮಹಾಲಕ್ಷ್ಮೀ ನಿಮ್ಮ ಮನೆಯಲ್ಲೇ ನೆಲೆಸುತ್ತಾಳೆ!


ಆದ್ದರಿಂದ ಶಾಂತ ಮತ್ತು ತಂಪಾದ ತಲೆ ಯಾವಾಗಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸರಿಯಾಗಿ ಗಮನ ಹರಿಸಲು ನಿಮಗೆ ಸಹಾಯ ಮಾಡುತ್ತದೆ ಅಂತ ಹೇಳಲಾಗುತ್ತದೆ.


ತುಳಸಿ ಎಲೆಗಳನ್ನು ನುಂಗಿ, ಎಂದಿಗೂ ಜಗಿಯಬೇಡಿ
ತುಳಸಿ ಲಕ್ಷ್ಮಿ ದೇವಿಯ ಅವತಾರವಾಗಿದೆ. ಆದ್ದರಿಂದ ಎಲೆಗಳನ್ನು ಜಗಿಯಬಾರದು, ಅಗೌರವ ತೋರಿಸಬಾರದು ಎಂಬುದು ಜನಪ್ರಿಯ ನಂಬಿಕೆಯಾಗಿದೆ.


ಆದರೆ ಇಲ್ಲಿ ತರ್ಕವೆಂದರೆ ತುಳಸಿ ಎಲೆ ಆರೋಗ್ಯಕರವಾಗಿದ್ದರೂ, ಅದು ಸ್ವಲ್ಪ ಪ್ರಮಾಣದ ಆರ್ಸೆನಿಕ್ ಅನ್ನು ಸಹ ಹೊಂದಿರುತ್ತದೆ. ಆದ್ದರಿಂದ, ನಿಮ್ಮ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗದಂತೆ ಉಳಿಸಿಕೊಳ್ಳಲು ಮತ್ತು ದಂತಕವಚವನ್ನು ಹಾಳಾಗದಂತೆ ಉಳಿಸಿಕೊಳ್ಳಲು ಹೀಗೆ ನುಂಗುತ್ತಾರೆ.


ಹಾವನ್ನು ಕೊಂದ ನಂತರ ಅದರ ತಲೆಯನ್ನು ಪುಡಿ ಮಾಡಿ
ಮೂಢನಂಬಿಕೆಯ ಪ್ರಕಾರ ಹಾವನ್ನು ಕೊಂದ ನಂತರ ಅದರ ತಲೆಯನ್ನು ಪುಡಿ ಮಾಡದಿದ್ದರೆ, ಅದರ ಸಂಬಂಧಿ ಹಾವುಗಳು ಅದರ ಕಣ್ಣುಗಳಲ್ಲಿ ನಿಮ್ಮ ಚಿತ್ರವನ್ನು ನೋಡಿಕೊಂಡು ಸೇಡು ತೀರಿಸಿಕೊಳ್ಳಬಹುದು. ಈಗ ನಿಜವಾದ ಕಾರಣವೆಂದರೆ, ಬೇರ್ಪಡಿಸಿದ ತಲೆಯಿಂದಲೂ ಹಾವು ಮನುಷ್ಯನನ್ನು ಕಚ್ಚಬಹುದು. ಆದ್ದರಿಂದ ತಲೆಯನ್ನು ಸಂಪೂರ್ಣವಾಗಿ ತಟಸ್ಥಗೊಳಿಸಲು ನೀವು ಅದನ್ನು ಪುಡಿ ಮಾಡಬೇಕು ಎಂದು ಹೇಳುತ್ತಾರೆ.


ಹಸುವಿನ ಸಗಣಿಯಿಂದ ನೆಲವನ್ನು ಸಾರಿಸುವುದು ಮಂಗಳಕರ
ಹಸುವಿನ ಸಗಣಿಯ ಕಟು ವಾಸನೆಯಿಂದ ಹಿಮ್ಮೆಟ್ಟಿಸುವ ಕೀಟಗಳು ಮತ್ತು ಸರೀಸೃಪಗಳಿಂದ ಹಸುವಿನ ಸಗಣಿ ರಕ್ಷಿಸುತ್ತದೆ ಎಂಬುದು ಇಲ್ಲಿನ ತರ್ಕವಾಗಿದೆ. ಹಿಂದಿನ ದಿನಗಳಲ್ಲಿ, ನಮ್ಮ ಪೂರ್ವಜರು ಇಂದಿನಂತೆ ನಿವಾರಕಗಳು ಮತ್ತು ಸೋಂಕು ನಿವಾರಕಗಳನ್ನು ಹೊಂದಿರಲಿಲ್ಲವಾದ್ದರಿಂದ, ಅವರು ಹಸುವಿನ ಸಗಣಿಯನ್ನು ತಮ್ಮ ಮನೆಯ ಮುಂದೆ ಇರುವ ಅಂಗಳವನ್ನು ಸಾರಿಸಲು ಬಳಸುತ್ತಿದ್ದರು.

Published by:ಗುರುಗಣೇಶ ಡಬ್ಗುಳಿ
First published: