Zodiac sign: ದುಡ್ಡನ್ನು ನೀರಿನಂತೆ ಖರ್ಚು ಮಾಡುತ್ತಾರೆ ಈ ರಾಶಿಯವರು; ಎಷ್ಟೇ ಸಂಪಾದನೆ ಮಾಡಿದ್ರೂ ಉಳಿಯಲ್ಲ

ಮಿಥುನ ರಾಶಿಯನ್ನು ಬುಧ ಗ್ರಹ ಆಳುತ್ತದೆ. ಬುಧ ಗ್ರಹದ ಪ್ರಭಾವದಿಂದ ಈ ರಾಶಿಯ ಜನರು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಜಗತ್ತಿನಲ್ಲಿರುವ ಸಾವಿರಾರು ಜೀವ ಜಂತುಗಳಲ್ಲಿ ಮಾನವನಿಗೆ ಪ್ರಾಧಾನ್ಯತೆ ಇದೆ. ಮನುಷ್ಯ ಮಾತನಾಡುತ್ತಾನೆ. ನೋವು, ಸಂತೋಷವನ್ನು ಹಂಚಿಕೊಳ್ಳುತ್ತಾನೆ. ಐಷಾರಾಮಿ ಜೀವನವನ್ನು (Luxury life) ಇಷ್ಟಪಡುತ್ತಾನೆ. ತನ್ನ ಗುಣ-ಸ್ವಭಾವಗಳ ಮೂಲಕ ಆಕರ್ಷಿಸಲ್ಪಡುತ್ತಾನೆ. ಮನುಷ್ಯನ ಜೀವನದ (Life) ಮೇಲೆ ಜ್ಯೋತಿಷ್ಯಶಾಸ್ತ್ರ ಹೆಚ್ಚು ಪರಿಣಾಮಕಾರಿಯಾಗಿದೆ ಎಂಬುದು ಜ್ಯೋತಿಷಿಗಳ ಮಾತು. ಒಳ್ಳೆಯ, ಕೆಟ್ಟ ಕೆಲಸಗಳಿಂದ ವಿಭಿನ್ನವಾಗಿ ಗುರುತಿಸಿಕೊಳ್ಳುವ ಮನುಷ್ಯ ಪ್ರತಿ ಹಂತದಲ್ಲೂ ರಾಶಿಯ ಚಿಹ್ನೆಗಳು (Zodiac sign), ನಕ್ಷತ್ರ, ಗ್ರಹಗತಿಗಳ ಪ್ರಭಾವಕ್ಕೆ ಗುರಿಯಾಗುತ್ತಾನೆ ಎಂದು ಜ್ಯೋತಿಷ್ಯ ಶಾಸ್ತ್ರ (Astrology) ಹೇಳುತ್ತದೆ. ಜೀವನದಲ್ಲಿ ದುಡ್ಡು (Money) ಎಂದರೆ ಯಾರಿಗೆ ಬೇಡ. ಎಲ್ಲರೂ ದುಡ್ಡಿಗಾಗಿಯೇ ಒಳ್ಳೆಯ, ಕೆಟ್ಟ ಕೆಲಸ ಮಾಡುತ್ತಾರೆ. ಇಂತಹ ದುಡ್ಡು ಬರಲು ಸಹ ಗ್ರಹಗತಿ, ರಾಶಿ ನಕ್ಷತ್ರಗಳ ಪ್ರಭಾವ ಮನುಷ್ಯನ ಮೇಲೆ ಬೀರುತ್ತದೆ ಎಂಬುದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ.

  ಕೆಲವರು ಯಾವಾಗಲೂ ಹೇಳುತ್ತಿರುತ್ತಾರೆ. ಎಷ್ಟು ದುಡಿದರೂ ಕೈಯಲ್ಲಿ ಒಂದು ರೂಪಾಯಿ ನಿಲ್ತಾ ಇಲ್ಲ. ಸೇವಿಂಗ್ಸ್ ಮಾಡೋಕೆ ಆಗ್ತಾ ಇಲ್ಲ ಅಂತಾ ಅಳಲು ತೋಡಿಕೊಳ್ತಾರೆ. ಇನ್ನು ಕೆಲವರು ಧಾರಾಳವಾಗಿ ನೀರಿನಂತೆ ಹಣವನ್ನು ಖರ್ಚು ಮಾಡುತ್ತಾರೆ. ತಮ್ಮ ಆರ್ಥಿಕ ಸ್ಥಿತಿ ಸರಿಯಿರಲಿ, ಬಿಡಲಿ ಆದರೆ ಅವರು ಮಾತ್ರ ಹಣವನ್ನು ಖರ್ಚು ಮಾಡುತ್ತಲೇ ಇರುತ್ತಾರೆ.  ಅಂತವರ ಮೇಲೆ ಗ್ರಹಗತಿಗಳ ಪರಿಣಾಮ ಕೂಡ ಇದೆ ಅನ್ನುತ್ತೆ ಜ್ಯೋತಿಷ್ಯಶಾಸ್ತ್ರ. ಹಾಗಾದ್ರೆ ಯಾವ ರಾಶಿಯ ಜನರು ಹಣವನ್ನು ಸಾಕಷ್ಟು ಖರ್ಚು ಮಾಡುತ್ತಾರೆ ಎಂಬುದನ್ನು ನೋಡೋಣ.

  ಹಣವನ್ನು ನೀರಿನಂತೆ ಖರ್ಚು ಮಾಡುವ ರಾಶಿಗಳು ಚಿಹ್ನೆಗಳು  

  ಮಿಥುನ ರಾಶಿ (Gemini) :

  ಮಿಥುನ ರಾಶಿಯನ್ನು ಬುಧ ಗ್ರಹ ಆಳುತ್ತದೆ. ಬುಧ ಗ್ರಹದ ಪ್ರಭಾವದಿಂದ ಈ ರಾಶಿಯ ಜನರು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ದುಡ್ಡು ಖರ್ಚು ಮಾಡಲು ಹಿಂದೆ-ಮುಂದೆ ನೋಡುವುದಿಲ್ಲ. ಈ ರಾಶಿಯವರು ಬುದ್ಧಿವಂತರು. ತಮ್ಮ ಜೀವನಶೈಲಿ ಮತ್ತು ಆಹಾರಕ್ಕಾಗಿ ಹಣ ಖರ್ಚು ಮಾಡುತ್ತಾರೆ.

  ಇದನ್ನೂ ಓದಿ: ಕರ್ಣನ ದಾನ ವೀರ ಶೂರ ಕರ್ಣ ಎಂದು ಯಾಕೆ ಕರೆಯಲಾಗುತ್ತೆ ಗೊತ್ತಾ?

  ಸಿಂಹ (Leo) :

  ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ರಾಶಿಯ ಜನರು ರಾಜನಂತೆ ಬದುಕಲು ಇಚ್ಛಿಸುತ್ತಾರೆ.  ಐಶ್ವರ್ಯವಂತರಾಗಿ ಇರಲು ಹಾಗೂ ವಿವಿಧ ರೀತಿಯಲ್ಲಿ ಹಣವನ್ನು ಖರ್ಚು ಮಾಡುತ್ತಾರೆ. ಐಷಾರಾಮಿ  ಬದುಕು ಸಾಗಿಸಲು ಇಷ್ಟಪಡುತ್ತಾರೆ. ಇದರಿಂದಾಗಿ ಅವರು ಸಾಕಷ್ಟು ಖರ್ಚು ಮಾಡುತ್ತಾರೆ. ಕೆಲವೊಮ್ಮೆ ಸಾಲ ಮಾಡಿಯಾದರೂ ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳುತ್ತಾರೆ.

  ತುಲಾ ರಾಶಿ (Libra) :

  ತುಲಾ ರಾಶಿಯ  ಅಧಿಪತಿ ಶುಕ್ರ. ಈ ರಾಶಿಯವರಿಗೆ ಸಾಕಷ್ಟು ಹಣ ಸಿಗುತ್ತದೆ. ಅಧಿಕ ಮೌಲ್ಯದ  ವಸ್ತುಗಳ ಮೇಲೆ ಹೆಚ್ಚು ಒಲವು ಹೊಂದಿರುತ್ತಾರೆ. ವಿವಿಧ ವಸ್ತುಗಳ ಖರೀದಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಈ ರಾಶಿಯ ಜನರು ಹಣ ಖರ್ಚು ಮಾಡಲು ಯೋಚನೆ ಮಾಡುತ್ತ ಕೂರುವುದಿಲ್ಲ. ಯಾರು ಏನಾದರೂ ಅಂದುಕೊಳ್ಳಲಿ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳದೆ ಹಣವನ್ನು ಖರ್ಚು ಮಾಡುತ್ತಾರೆ. ಬೆಲೆ ಬಾಳುವ ವಸ್ತುಗಳ ಖರೀದಿಗೆ ಹಣ ಹೆಚ್ಚು ಖರ್ಚು ಮಾಡುತ್ತಾರೆ. ಹೀಗಾಗಿ ಇವರ ಕೈಯಲ್ಲಿ ಹಣ ನಿಲ್ಲುವುದೇ ಇಲ್ಲ. ಎಷ್ಟೇ ಒತ್ತಡವಿದ್ದರೂ ಹಣ ಖರ್ಚು ಮಾಡೇ ಮಾಡುತ್ತಾರೆ. ಹೀಗಾಗಿ ಆರ್ಥಿಕ ಸಮಸ್ಯೆಗೂ ಗುರಿಯಾಗುತ್ತಾರೆ.

  ಇದನ್ನೂ ಓದಿ: ಗಾಸಿಪ್​ ವಿಚಾರಕ್ಕೆ ಈ ರಾಶಿಯವರು ಕಿವಿಗೊಡಬೇಡಿ; ಇಲ್ಲಿದೆ ಈ ದಿನದ ರಾಶಿ ಭವಿಷ್ಯ

  ವೃಶ್ಚಿಕ ರಾಶಿ (Scorpio) :

  ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಮಂಗಳ ಗ್ರಹದ ಪ್ರಭಾವದಿಂದ ಈ ರಾಶಿಯ ಜನರು ಹಣ ವ್ಯಯ ಮಾಡುವುದರಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆಯೇ ಇರುತ್ತಾರೆ. ತಮ್ಮ ಐಷಾರಾಮಿ ಜೀವನಶೈಲಿಗಾಗಿ ಸಾಕಷ್ಟು ದುಡ್ಡನ್ನು ಖರ್ಚು ಮಾಡುತ್ತಾರೆ. ಯಾವುದಕ್ಕೂ ಲೆಕ್ಕವಿಡದೇ ಖರ್ಚು ಮಾಡುವುದು, ಮುಕ್ತವಾಗಿ ಮಾತನಾಡುವುದು ಹಾಗೂ ಹಣ ಖರ್ಚು ಮಾಡುವ ವಿಚಾರದಲ್ಲಿ ಅವರು ಹಿಂದೆ ಸರಿಯುವುದಿಲ್ಲ.
  Published by:renukadariyannavar
  First published: