ಸಾಮಾನ್ಯವಾಗಿ ಮದುವೆಯಾಗಲು ಗುರುಬಲ (Guru Bala), ಕಂಕಣ ಬಲ (Kankana Bala)ಬಹಳ ಮುಖ್ಯ. ಕೆಲವರು ಮದುವೆಯಾಗಲು (Marriage) ಎಷ್ಟೇ ಪ್ರಯತ್ನಸಿದರೂ ಮದುವೆಯಾಗಲು ಸಾಧ್ಯವಾಗುವುದಿಲ್ಲ. ಇನ್ನೂ ಕೆಲವರು ಮದುವೆಯೇ ಬೇಡ ಎಂದು ದೂರ ಉಳಿದಿರುತ್ತಾರೆ. ಆದರೆ ಅವರಿಗೆ ಬೇಗ ಮದುವೆಯಾಗುತ್ತದೆ. ಇದಕ್ಕೆಲ್ಲಾ ಕಾರಣ ಏನಪ್ಪಾ ಅಂದ್ರೆ ಕಂಕಣ ಭಾಗ್ಯ (Kankana Bhagya). ಒಮ್ಮೆ ಕಂಕಣ ಭಾಗ್ಯ ಒಲಿದು ಬಂದರೆ ಯಾರು, ಹೇಳಿದರು, ಹೇಳದೇ ಇದ್ದರು ಮದುವೆ ನಡೆದೇ ಹೋಗುತ್ತದೆ. ಅದರಲ್ಲಿಯೂ ಹೆಚ್ಚಾಗಿ ಈ ಕೆಳಗೆ ನೀಡಿರುವ ರಾಶಿಯವರಿಗೆ ಬೇಗ ಕಂಕಣ ಭಾಗ್ಯ ಕೂಡಿ ಬರುತ್ತದೆಯಂತೆ.
ಹೌದು, ಅದೆಷ್ಟೋ ಮಂದಿ ಮದುವೆ, ಸಂಸಾರದಲ್ಲಿ ಆಸಕ್ತಿ ಹೊಂದಿರುವುದಿಲ್ಲ. ಸಾಧ್ಯವಾದಷ್ಟು ಈ ವಿಚಾರದಿಂದ ದೂರ ಉಳಿಯಲು ಪ್ರಯತ್ನಿಸುತ್ತಿರುತ್ತಾರೆ. ಇವರಿಗೆ ಏಕಾಂಗಿಯಾಗಿರುವುದರಿಂದ ನೆಮ್ಮದಿಯಿಂದ ಇದ್ದೇವೆ ಎಂದು ಭಾವಿಸಿರುತ್ತಾರೆ. ಒಂದರ್ಥದಲ್ಲಿ ತಮ್ಮದೇ ಲೋಕದಲ್ಲಿ ಮುಳುಗಿರುತ್ತಾರೆ.
ಆದರೆ, ಇನ್ನೂ ಕೆಲವರು ಬೇಗ ಮದುವೆಯಾಗಲು ಬಯಸುತ್ತಾರೆ. ಇದರಿಂದ ಅವರ ಜೀವನ ಬದಲಾಗುತ್ತದೆ. ಜೀವನಕ್ಕೆ ಹೊಸ ತಿರುವು ಸಿಗುತ್ತದೆ. ಮದುವೆ ಜೀವನಕ್ಕೆ ಹೊಸ ಅರ್ಥವನ್ನು ನೀಡುತ್ತದೆ. ಮದುವೆಯಾದರೆ ಜೀವನ ಸರಿಯಾಗುತ್ತದೆ ಎಂದು ನಂಬಿರುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ ಕನ್ಯಾರಾಶಿ, ಮಿಥುನಾ ರಾಶಿ, ತುಲಾ ರಾಶಿ ಹಾಗೂ ಕರ್ಕಾಟಕ ರಾಶಿಯವರು ಬೇಗ ಮದುವೆಯಾಗುತ್ತಾರೆ. ಅಲ್ಲದೇ ಈ ರಾಶಿಯವರು ಮದುವೆಯ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿರುತ್ತಾರೆ.
ಕನ್ಯಾ ರಾಶಿ : ಕನ್ಯಾರಾಶಿಯವರು ಜೀವನದಲ್ಲಿ ಕಷ್ಟ, ಸುಖ ಎರಡನ್ನು ಬಹಳ ಉತ್ತಮವಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ಇವರು ಬಹಳ ಶ್ರಮಜೀವಿಯಾಗಿರುತ್ತಾರೆ. ಯಾವುದೇ ಕಷ್ಟದ ಸಮಯದಲ್ಲಿಯೂ ಕುಗ್ಗುವುದಿಲ್ಲ. ಬದಲಾಗಿ ಎದುರಿಸುತ್ತಾರೆ. ತಮ್ಮನ್ನು ತಮ್ಮ ಸುತ್ತಮುತ್ತಲಿರುವ ಜನ ಸದಾ ಪ್ರೀತಿಸಬೇಕು ಎಂದು ಬಯಸುತ್ತಾರೆ. ತಮ್ಮ ಅಗತ್ಯತೆಗಳನ್ನು ಪೂರೈಸಲು ಸಣ್ಣ ವಯಸ್ಸಿನಲ್ಲಿಯೇ ಬೇಗ ಮದುವೆಯಾಗುತ್ತಾರೆ.
ಮಿಥುನ ರಾಶಿ : ಮಿಥುನಾ ರಾಶಿಯವರು ತಮ್ಮ ಜೀವನದಲ್ಲಿ ಅನೇಕ ಮಂದಿಯನ್ನು ಭೇಟಿಯಾಗುತ್ತಾರೆ. ಇತರರೊಂದಿಗೆ ಬೆರೆಯಲು ಬಹಳ ಇಷ್ಟಪಡುತ್ತಾರೆ. ಇವರು ಕೂಡ ತಮ್ಮನ್ನು ಸುತ್ತಲಿರುವ ಜನ ಇಷ್ಟಪಡಬೇಕು ಎಂದು ಬಯಸುತ್ತಾರೆ. ಮದುವೆ ವಿಚಾರಕ್ಕೆ ಬಂದರೆ ಮದುವೆಯಾಗಲು ಕಾತುರದಿಂದ ಕಾಯುತ್ತಿರುತ್ತಾರೆ.
ತುಲಾ ರಾಶಿ : ಈ ರಾಶಿಯವರು ಎಲ್ಲರೊಂದಿಗೆ ಬಹಳ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ಆದರೆ ತಾವು ಮಾತ್ರ ಸದಾ ಒಂಟಿಯಾಗಿರುತ್ತಾರೆ. ಈ ಒಂಟಿತನದಿಂದ ದೂರ ಸರಿಯುವ ಸಲುವಾಗಿ ಬೇಗನೇ ಮದುವೆಯಾಗಲು ಇಚ್ಛಿಸುತ್ತಾರೆ. ಮದುವೆಯಾಗುವುದರಿಂದ ತಮ್ಮ ಬೇಸರ ಕಳೆದುಕೊಳ್ಳಬೇಕು ಮತ್ತು ಸದಾ ತಮ್ಮನ್ನು ಪ್ರೀತಿಸುವ, ಬೆಂಬಲಿಸುವ, ಪ್ರೋತ್ಸಾಹಿಸುವ, ಕಾಳಜಿ ವಹಿಸುವ ಮತ್ತೊಂದು ಜೀವ ಬೇಕೆಂದು ಬಯಸುತ್ತಾರೆ.
ಕಟಕ ರಾಶಿ : ಈ ರಾಶಿಯವರು ತಮ್ಮ ಜೀವನದಲ್ಲಿ ಭಾವನಾತ್ಮಕವಾಗಿ ಯಾರಾದರು ತಮ್ಮೊಂದಿಗೆ ಇರಬೇಕು ಎಂದು ಇಷ್ಟಪಡುತ್ತಾರೆ. ತಮ್ಮ ಸಂಗಾತಿಯಾಗುವವರು ತಮ್ಮೊಂದಿಗೆ ಎಲ್ಲರಿಗಿಂತಲೂ ಹೆಚ್ಚು ಆತ್ಮೀಯತೆ ಮತ್ತು ನಿಷ್ಠೆಯಿಂದ ಇರಬೇಕು ಎಂದು ಬಯಸುತ್ತಾರೆ. ತಮ್ಮ ವಿವಾಹದ ಬಗ್ಗೆ ಸಾಕಷ್ಟು ಕನಸು, ಆಕಾಂಕ್ಷೆಗಳನ್ನು ಹೊಂದಿರುತ್ತಾರೆ.
ಇದನ್ನೂ ಓದಿ: Kamakhya Temple: ಯೋನಿ ಪೂಜೆ ನಡೆಯುವ ಋತುಸ್ರಾವ ದೇವಿ ದೇವಸ್ಥಾನವಿದು, ಎಲ್ಲಿದೆ? ಇಲ್ಲಿದೆ ಮಾಹಿತಿ
ಹಿಂದಿನ ಕಾಲದಿಂದಲೂ ಮದುವೆ ಎಂದ ತಕ್ಷಣ ಮನೆಯ ಹಿರಿಯರು ಜ್ಯೋತಿಷ್ಯ ಮೊರೆ ಹೋಗುತ್ತಾರೆ. ಇಂದಿಗೂ ಎಷ್ಟೋ ಮನೆಗಳಲ್ಲಿ ಈ ಸಂಪ್ರದಾಯಗಳು ನಡೆದುಕೊಂಡು ಬರುತ್ತಿದೆ. ಕಾಲ ಬದಲಾಗಿದ್ದರೂ ಅದೆಷ್ಟೂ ಮನೆಗಳಲ್ಲಿ ಹಳೆಯ ಆಚಾರ, ವಿಚಾರ, ಸಂಪ್ರದಾಯ, ಪದ್ಧತಿ ಹಾಗೆಯೇ ನಡೆದುಕೊಂಡು ಬಂದಿದೆ. ಮದುವೆಗೂ ಮುಂಚೆ ಗುರುಬಲ, ಕಂಕಣ ಬಲವಿದೆಯೇ ಎಂದು ಜ್ಯೋತಿಷ್ಯರನ್ನು ಸಂಪರ್ಕಿಸಿ ಪರಿಶೀಲಿಸಿ ನಂತರ ವಧು-ವರ ಹುಡುಕುವ ಕಾರ್ಯಕ್ಕೆ ಪೋಷಕರು ಕೈ ಹಾಕುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ