Zodiac Signs: ಸತ್ತವರೇ ದಾಳಿ ಮಾಡಿದ್ರೂ ತರ್ಕಬದ್ಧವಾಗಿ ಯೋಚಿಸುತ್ತಾರಂತೆ ಈ 5 ರಾಶಿಯವರು..!

ವಾಸ್ತವದಲ್ಲಿ ಜೋಂಬಿ ಆಕ್ರಮಣ ಎನ್ನುವುದರ ತಾತ್ಪರ್ಯ ಅತ್ಯಂತ ಕಠಿಣ ಪರಿಸ್ಥಿತಿ ಬಂದಿದೆ ಎಂಬುದಾಗಿದೆ. ಅಂದರೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮನುಷ್ಯರಾದವರು ವಿವಿಧ ರೀತಿಯಲ್ಲಿ ವರ್ತಿಸುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸತ್ತವರೇ ದಾಳಿ ಮಾಡಿದ್ರೂಜೋಂಬಿ ದಾಳಿ ಎಂಬುದು ಒಂದು ಫ್ಯಾಂಟಸಿ ಪರಿಕಲ್ಪನೆ. ಸಾಮಾನ್ಯವಾಗಿ ಇಂತಹ ಜೋಂಬಿಗಳನ್ನು (zombie) ನಾವು ಈಗಾಗಲೇ ಹಾಲಿವುಡ್ ನ (Hollywood) ಅನೇಕ ಚಿತ್ರಗಳಲ್ಲಿ (Movies) ಕಂಡಿದ್ದೇವೆ. ಜೋಂಬಿಗಳು ಜೀವಂತ ಶವಗಳು, ಅವುಗಳಿಗೆ ಯಾವುದೇ ರೀತಿಯ ಸ್ಮರಣೆಯಾಗಲಿ, ಭಾವನೆಗಳಾಗಲಿ ಇರುವುದಿಲ್ಲ, ಅವುಗಳಿಗೆ ಗೊತ್ತಿರುವ ಒಂದೇ ವಿಷಯವೆಂದರೆ ಜೀವಂತ ಇರುವವರ ಮೇಲೆ ಆಕ್ರಮಣ ಮಾಡಿ ಅವರನ್ನು ಬಾಯಿಯಿಂದ ಕಚ್ಚಿ, ಉಗುರುಗಳಿಂದ ಪರಚಿ ಅವರ ರಕ್ತ ಹೀರುವುದು ಹಾಗೂ ಅವರನ್ನು ತಮ್ಮಂತೆಯೇ ಪರಿವರ್ತಿಸುವುದು. ಅವರಿಗೆ ಯಾವ ಭಯವೂ ಇಲ್ಲ, ಸಾವಿನ ಆತಂಕವೂ ಇಲ್ಲ, ನೋವಂತೂ ಉಂಟಾಗುವುದೇ ಇಲ್ಲ. ಇಷ್ಟೆಲ್ಲ ಪೀಠಿಕೆ ಯಾತಕ್ಕೆ ಎನ್ನುತ್ತಿದ್ದೀರಾ..? ವಾಸ್ತವದಲ್ಲಿ ಜೋಂಬಿ ಆಕ್ರಮಣ ಎನ್ನುವುದರ ತಾತ್ಪರ್ಯ ಅತ್ಯಂತ ಕಠಿಣ ಪರಿಸ್ಥಿತಿ ಬಂದಿದೆ ಎಂಬುದಾಗಿದೆ. ಅಂದರೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮನುಷ್ಯರಾದವರು ವಿವಿಧ ರೀತಿಯಲ್ಲಿ ವರ್ತಿಸುತ್ತಾರೆ.

ಕೆಲವರು ಗೊಂದಲಗೊಂಡರೆ ಕೆಲವರು ಅಕ್ಷರಶಃ ಆಘಾತಕ್ಕೆ ಒಳಗಾಗುತ್ತಾರೆ. ಆದರೆ, ಜೋತಿಷ್ಯ ಶಾಸ್ತ್ರದ ಪ್ರಕಾರ ಕೆಲವರ ವ್ಯಕ್ತಿತ್ವಗಳನ್ನು ಅವರ ರಾಶಿಯ ಆಧಾರದ ಮೇಲೆ ಯಾವ ರೀತಿ ಎಂದು ಹೇಳಬಹುದಾಗಿದ್ದು, ಈ ಕೆಳಗೆ ನೀಡಿರುವ ಆ 5 ರಾಶಿಯ ಜನರು ಕಠಿಣ ಸಂದರ್ಭದಲ್ಲೂ ಯಾವುದೇ ಆತಂಕಕ್ಕೆ ಒಳಗಾಗದೆ ತರ್ಕಬದ್ಧವಾಗಿ ಯೋಚಿಸುವ ಸಾಮರ್ಥ್ಯ ಹೊಂದಿರುತ್ತಾರೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ಆ ರಾಶಿಗಳು ಯಾವುವು ಎಂಬುದು ನೋಡೋಣ ಬನ್ನಿ.

ಆತಂಕಕ್ಕೆ ಒಳಗಾಗದ 5 ರಾಶಿಗಳು:

1. ಮಿಥುನ:

ಈ ರಾಶಿಯ ಜನರು ಚುರುಕು ಬುದ್ಧಿಯುಳ್ಳವರು. ಸಮಯೋಚಿತವಾಗಿ ಕಲ್ಪನೆ ಮಾಡುವ ಸಾಮರ್ಥ್ಯ ಹಾಗೂ ನಡೆ ಇಡುವ ಕೌಶಲ್ಯ ಹೊಂದಿದ್ದು ಕಠಿಣ ಸಂದರ್ಭದಲ್ಲಿಯೂ ಗಟ್ಟಿಯಾಗಿ ನಿಲ್ಲುತ್ತಾರೆ. ವಾಸ್ತವದಲ್ಲಿ ಒಂದು ವೇಳೆ ಜೋಂಬಿಗಳೇನಾದರೂ ಕಂಡು ಬಂದರೆ ಈ ರಾಶಿಯ ಜನರು ಸಕ್ರಿಯರಾಗಿ ಅವರಿಂದ ಹೇಗೆ ತಪ್ಪಿಸಿಕೊಳ್ಳಬಹುದೆಂಬುದರ ಬಗ್ಗೆ ಯೋಚಿಸುವಲ್ಲಿ ಸಮರ್ಥರಾಗಿರುತ್ತಾರೆ.

ಇದನ್ನೂ ಓದಿ: Zodiac Sign: ಸಿಕ್ಕಾಪಟ್ಟೆ ಬೋರಿಂಗ್​ ಸ್ವಭಾವದವರಂತೆ ಈ ರಾಶಿಯವರು

2. ಸಿಂಹ:

ಈ ರಾಶಿಯ ಜನರನ್ನು ಸಾಮಾನ್ಯವಾಗಿ ಹುಟ್ಟು ನಾಯಕರೆಂದೇ ಪರಿಗಣಿಸಲಾಗುತ್ತದೆ. ಆ ನಾಯಕನ ಗುಣ ಅಡಗಿರುವುದರಿಂದ ಇವರು ಕಠಿಣ ಪರಿಸ್ಥಿತಿಯಲ್ಲಿ ಕಾಲ್ಕಿತ್ತದೆ ಅದನ್ನು ಎದುರಿಸಿ ನಿಲ್ಲುವ ಜಾಯಮಾನದವರಾಗಿರುತ್ತಾರೆ. ಜೋಂಬಿಗಳ ಆಕ್ರಮಣದ ಸಂದರ್ಭದಲ್ಲಿ ಜೋಂಬಿಗಳನ್ನು ಹೇಗೆ ದೂರವಿಡಬಹುದು ಎಂಬುದರ ಮೇಲೆ ಅವರು ತರ್ಕಬದ್ಧವಾಗಿ ಯೋಚಿಸುವ ಸಾಮರ್ಥ್ಯ ಹೊಂದಿದ್ದು, ತಮ್ಮೊಂದಿಗೆ ಇತರರನ್ನೂ ಸಹ ಜೋಂಬಿಗಳಿಂದ ರಕ್ಷಿಸುವ ಸಾಮರ್ಥ್ಯ ಹೊಂದಿರುತ್ತಾರೆ ಮತ್ತು ಇತರರು ಸಹ ಹೋರಾಡಲು ಪ್ರೋತ್ಸಾಹ ನೀಡುವ ಗುಣ ಹೊಂದಿರುತ್ತಾರೆ.

3. ಕನ್ಯಾ:

ಈ ರಾಶಿಯ ಜನರು ಚಿಕ್ಕ ಚಿಕ್ಕ ವಿಷಯಗಳಿಗೂ ಗಮನ ನೀಡುವ ಗುಣ ಹೊಂದಿದವರಾಗಿದ್ದಾರೆ. ಜೋಂಬಿಗಳ ದಾಳಿಯನ್ನು ತಡೆಯಲು ಪರಿಣಾಮಕಾರಿಯಾದ ಮಾರ್ಗವನ್ನೂ ಸಹ ಅವರು ಕಂಡು ಹಿಡಿದರೆ ಅಚ್ಚರಿಪಡಬೇಕಾಗಿಲ್ಲ. ಅವರಲ್ಲಿ ಬುದ್ಧಿಮತ್ತೆ ಮತ್ತು ಜ್ಞಾನ ಅಪಾರವಾಗಿರುವುದರಿಂದ ಕಠಿಣ ಪರಿಸ್ಥಿತಿಗಳಿಗೆ ಅನುಕೂಲಕರ ಪರಿಹಾರಗಳನ್ನು ಹುಡುಕುವ ಸಾಮರ್ಥ್ಯ ಇರುತ್ತದೆ.

ಇದನ್ನೂ ಓದಿ: Astrology: ಏಪ್ರಿಲ್​​ 30ರಂದು ಸೂರ್ಯಗ್ರಹಣ: ಈ 5 ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ

4. ಧನು:

ಜೋಂಬಿ ಆಕ್ರಮಣದಂತಹ ಪರಿಸ್ಥಿತಿಯಲ್ಲೂ ಬದುಕುಳಿಯಬಹುದಾದಂತಹ ಅದೃಷ್ಟವಂತರು ಈ ರಾಶಿಯವರು. ಅವರಲ್ಲಿರುವ ಸ್ಥಳಗಳ ಜ್ಞಾನವು ಅವರನ್ನು ಸುರಕ್ಷಿತ ಸ್ಥಳಗಳನ್ನು ಅರಸಿ ಹೋಗುವಂತೆ ಸಹಕರಿಸುತ್ತದೆ. ಅವರು ಒಂದೇ ಸ್ಥಳದಲ್ಲಿ ಬಹು ದೀರ್ಘವಾಗಿ ಉಳಿಯುವುದಿಲ್ಲ, ನಿರಂತರ ಚಲಿಸುತ್ತಲೇ ಇರುತ್ತಾರೆ ಹಾಗೂ ಇದರಿಂದಗಿಯೇ ಅವರು ಬದುಕುಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ.

5. ಮಕರ:

ಕಠಿಣ ಪರಿಸ್ಥಿತಿಗಳು ತಲೆದೋರಿದಾಗ ಯಾವ ಸಮಯದಲ್ಲಿ ಎಂತಹ ನಡೆ ಅನುಸರಿಸಬೇಕು ಎಂಬುದರ ಬಗ್ಗೆ ಸಾಮರ್ಥ್ಯವನ್ನು ಈ ರಾಶಿಯವರು ಸಾಮಾನ್ಯವಾಗಿ ಹೊಂದಿರುತ್ತಾರೆ. ಹಾಗಾಗಿ ಜೋಂಬಿ ಆಕ್ರಮಣ ಅವರ ಕೂದಲನ್ನೂ ಸಹ ಮಣಿಸಲಾರದು. ಅವರು ತ್ವರಿತವಾಗಿ ಪರಿಹಾರ ಹುಡುಕುತ್ತಾರೆ ಮತ್ತು ಅದನ್ನು ಅನುಷ್ಠಾನಕ್ಕೂ ತರುತ್ತಾರೆ. ಜೋಂಬಿ ವಿರುದ್ಧ ಹೋರಾಡಬೇಕೆಂದಿರುವ ಯಾವುದೇ ಗುಂಪಿನಲ್ಲಿ ಇವರ ಉಪಸ್ಥಿತಿ ಆ ಗುಂಪಿಗೆ ಒಂದು ವರದಾನ ಎಂದೇ ಹೇಳಬಹುದು.
Published by:shrikrishna bhat
First published: