• ಹೋಂ
 • »
 • ನ್ಯೂಸ್
 • »
 • ಭವಿಷ್ಯ
 • »
 • Zodiac Signs: ಈ ರಾಶಿಯವರನ್ನ ಹೆದರಿಸುವುದು ತುಂಬಾನೆ ಸುಲಭವಂತೆ! ಇದರಲ್ಲಿ ನಿಮ್ಮ ರಾಶಿ ಇದೆಯಾ ನೋಡಿ

Zodiac Signs: ಈ ರಾಶಿಯವರನ್ನ ಹೆದರಿಸುವುದು ತುಂಬಾನೆ ಸುಲಭವಂತೆ! ಇದರಲ್ಲಿ ನಿಮ್ಮ ರಾಶಿ ಇದೆಯಾ ನೋಡಿ

 ಭವಿಷ್ಯ

ಭವಿಷ್ಯ

ಅನೇಕ ಜನರು ಮೃದುವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ, ಅಂಥವರು ಯಾರೂ ಏನೇ ಅಂದರೂ ಸಹಿಸಿಕೊಂಡು ಹೋಗುತ್ತಾರೆ. ಹೀಗೆ ಹೆದರಿಸಲು ಸುಲಭವಾದ 4 ರಾಶಿಚಕ್ರ ಚಿಹ್ನೆಗಳು ಇಲ್ಲಿವೆ. ನೀವು ಅವರಲ್ಲಿ ಒಬ್ಬರೇ? ಎಂಬುದನ್ನು ಒಮ್ಮೆ ತಿಳಿದುಕೊಳ್ಳಿ.

 • Share this:

  ಕೆಲವರು ತುಂಬಾನೇ ಶಾಂತ ರೀತಿಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.  ಅವರು ಬೇರೆಯವರನ್ನ ಬೆದರಿಸೋದು, ಬೇರೆಯವರ ಜೊತೆ ತಮಾಷೆ (Comedy) ಮಾಡಿ ಅವರ ಕಾಲು ಎಳೆಯುವುದಾಗಲಿ (Bullying) ಮತ್ತು ದೊಡ್ಡ ಧ್ವನಿಯಲ್ಲಿ ಮಾತಾಡುವ ಮುಂಚೆ ಸಹ ಅವರು ಒಂದೆರಡು ಬಾರಿ ಯೋಚನೆ ಮಾಡುತ್ತಾರೆ. ಆದರೆ ಇನ್ನೂ ಕೆಲವರು ಇದಕ್ಕೆ ತದ್ವಿರುದ್ಧವಾಗಿ ಎಲ್ಲರನ್ನೂ ಬೆದರಿಸುತ್ತಾ, ಎಲ್ಲರೊಂದಿಗೆ ತಮಾಷೆ ಮಾಡುತ್ತಾ ಅವರ ಕಾಲು ಎಳೆಯುತ್ತಾ ಸಂಭ್ರಮಿಸುತ್ತಾರೆ. ಆದರೆ ಮೃದು ಸ್ವಭಾವದವರು (Soft Personality) ಎದುರಿಗಿರುವವರು ಏನೇ ಹೇಳಿದರೂ ಅದನ್ನು ಕೇಳುವ ತಾಳ್ಮೆಯನ್ನು ಈ ಮೃದು ಸ್ವಭಾವದ ಜನರು ಹೊಂದಿರುತ್ತಾರೆ, ಯಾರಾದರೂ ಅವರನ್ನು ಬೆದರಿಸಿದರೂ ಸಹ ತುಟಿ ಬಿಚ್ಚಿ ಒಂದು ಕೆಟ್ಟ ಮಾತನ್ನು ಸಹ ಅವರಿಗೆ ಆಡುವುದಿಲ್ಲ.


  ಅನೇಕ ಜನರು ಮೃದುವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ, ಅಂಥವರು ಯಾರೂ ಏನೇ ಅಂದರೂ ಸಹಿಸಿಕೊಂಡು ಹೋಗುತ್ತಾರೆ.  ಹೀಗೆ ಹೆದರಿಸಲು ಸುಲಭವಾದ 4 ರಾಶಿಚಕ್ರ ಚಿಹ್ನೆಗಳು ಇಲ್ಲಿವೆ. ನೀವು ಅವರಲ್ಲಿ ಒಬ್ಬರೇ? ಎಂಬುದನ್ನು ಒಮ್ಮೆ ತಿಳಿದುಕೊಳ್ಳಿ.


  ಮೀನ ರಾಶಿ


  ಈ ರಾಶಿಚಕ್ರ ಚಿಹ್ನೆಯ ಜನರು ಸಹಾನುಭೂತಿಗೆ ಹೆಸರುವಾಸಿಯಾಗಿರುವ ಜನರಾಗಿದ್ದಾರೆ. ಇವರು ತುಂಬಾನೇ ಸಂವೇದನಾಶೀಲರು ಆಗಿದ್ದು, ಅವರು ತಮ್ಮನ್ನು ತುಂಬಾನೇ ಬೇಸರಗೊಳಿಸುವ ತನಕ ಇತರ ವ್ಯಕ್ತಿಯನ್ನು ಬೆದರಿಸಲು ಬಿಡುತ್ತಾರೆ. ಇವರಲ್ಲಿ ಆಕ್ರಮಣ ಮಾಡುವ ಬುದ್ದಿ ತುಂಬಾನೇ ವಿರಳವಾಗಿರುತ್ತದೆ. ಆದ್ದರಿಂದ ಇವರನ್ನು ಜನರು ಬೆದರಿಸುತ್ತಾರೆ.


  ಕರ್ಕಾಟಕ ರಾಶಿ


  ಈ ರಾಶಿಚಕ್ರ ಚಿಹ್ನೆಯ ಜನರು ತುಂಬಾನೇ ಕಾಳಜಿ ಉಳ್ಳವರು ಮತ್ತು ಸೂಕ್ಷ್ಮವಾಗಿರುತ್ತಾರೆ. ಅವರು ಎಲ್ಲರ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ನೀವು ದೊಡ್ಡ ಪೀಡಕರಾಗಿದ್ದಷ್ಟೂ, ಅವರು ನಿಮ್ಮ ಬಗ್ಗೆ ಹೆಚ್ಚು ಸಹಾನುಭೂತಿ ಹೊಂದುತ್ತಾರೆ, ಏಕೆಂದರೆ ಜನರನ್ನು ಬೆದರಿಸುವ ಈ ಪ್ರಚೋದನೆ ನಿಮ್ಮಲ್ಲಿ ಎಲ್ಲಿಂದ ಬರುತ್ತದೆ ಎಂದು ಅವರು ಬೇಗನೆ ಅರಿತುಕೊಳ್ಳುತ್ತಾರೆ.


  ಅವರು ಬಲವಾದ ಮನಸ್ಥಿತಿ  ಮತ್ತು ತುಂಬಾ  ಕೋಪವನ್ನು ಹೊಂದಿರಬಹುದು. ಆದರೆ ಅವರು ನಿರ್ಣಾಯಕ ಸಂದರ್ಭಗಳಲ್ಲಿ ತಮ್ಮನ್ನು ತಾವು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ನೀವು ಏನು ಮಾಡುತ್ತಿದ್ದೀರಿ ಮತ್ತು ಈ ಇಡೀ ಪ್ರಕ್ರಿಯೆಯಲ್ಲಿ ಅವರ ಪಾತ್ರವೇನು ಎಂಬುದನ್ನು ನೀವೇ ಅರಿತುಕೊಳ್ಳುವವರೆಗೆ ನೀವು ಅವರನ್ನು ಬೆದರಿಸುವಾಗ ಅವರು ಪ್ರತಿ ಬಾರಿಯೂ ನಿಮ್ಮ ಎದುರು ಶರಣಾಗುತ್ತಾರೆ.


  ತುಲಾ ರಾಶಿ


  ಮೇಲಿನ ಎರಡು ರಾಶಿಚಕ್ರ ಚಿಹ್ನೆಗಳಿಗೆ ಹೋಲಿಸಿದರೆ ಈ ತುಲಾ ರಾಶಿಯ ಜನರನ್ನು ಬೆದರಿಸುವುದು ತುಂಬಾನೇ ಸುಲಭ. ಏಕೆಂದರೆ ಅವರು ತಮ್ಮ ಮೃದು ಸ್ವಭಾವವನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲ. ತಮ್ಮಲ್ಲಿ ಆಕ್ರಮಣಶೀಲ ಗುಣವಿದ್ದರೂ ಸಹ ಅದನ್ನು ಹೊರಗೆ ತೋರಿಸುವುದೇ ಇಲ್ಲ.


  ತುಲಾ ರಾಶಿಯವರು ಎದುರಿಗಿರುವವರ ಬೆದರಿಕೆಗೆ ಉತ್ತರಿಸದಿರಬಹುದು ಮತ್ತು ಪೀಡಕನ ಮುಂದೆ ಹಾಗೆಯೇ ನಿಲ್ಲಬಹುದು, ಏಕೆಂದರೆ ಅವರು ತುಂಬಾನೇ ಶಾಂತ ಸ್ವಭಾವದವರು ಆಗಿರುತ್ತಾರೆ. ಇವರನ್ನು ಬೆದರಿಸುವವರ ಬಲಿಪಶು ಎಂದು ಲೇಬಲ್ ಮಾಡಲಾಗುತ್ತದೆ.


  ವೃಶ್ಚಿಕ ರಾಶಿ


  ವೃಶ್ಚಿಕ ರಾಶಿಯವರು ಸುಲಭವಾಗಿ ಇನ್ನೊಬ್ಬರ ಮೇಲೆ ಪ್ರಾಬಲ್ಯ ಸಾಧಿಸಬಹುದು ಮತ್ತು ಬೆದರಿಸಬಹುದು. ಆದರೆ ಇವರು ಹಾಗೆ ಮಾಡುವುದಿಲ್ಲ ಮತ್ತು ಅವರಲ್ಲಿರುವ ಆ ಕೋಪವು ನೋವಾಗಿ ಬದಲಾಗುತ್ತದೆ. ಅವರ ಒಳಗೆ ತುಂಬಾನೇ ದ್ವೇಷವಿರುತ್ತದೆ ಆದರೆ ಬೆದರಿಸುವಿಕೆ ತುಂಬಾನೇ ಹೆಚ್ಚಾದಾಗ ಮತ್ತು ಕೊನೆಗೆ ಬಂದಾಗ ಅವರು ಅದನ್ನು ಬಹಳ ಸಮಯದ ನಂತರ ಆಚೆಗೆ ಹಾಕುತ್ತಾರೆ.


  ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ


  ಆದರೆ ಈ ರೀತಿ ಒಬ್ಬರನ್ನು ಸುಮ್ಮನೆ ಬೆದರಿಸುವುದು ಒಳ್ಳೆಯದಲ್ಲ ಬಿಡಿ. ನಿಮ್ಮ ಸುತ್ತಲಿನ ಯಾರಾದರೂ ಬೆದರಿಸುವಿಕೆಗೆ ಬಲಿಯಾದರೆ, ಅವರಿಗೆ ಎದುರಿಸಲು ಸಾಧ್ಯವಾಗದಿದ್ದರೆ ಅವರ ಪರವಾಗಿ ನಿಲ್ಲಿರಿ. ಎದುರಿಗಿರುವವರ ಆ ಬೆದರಿಸುವಿಕೆಯನ್ನು ನಿಲ್ಲಿಸಲು ಹೇಳುವುದು ಬಹಳ ಮುಖ್ಯ, ಏಕೆಂದರೆ ಈ ರೀತಿಯ ಕಿರುಕುಳವು ಸೌಮ್ಯ ಸ್ವಭಾವದ ವ್ಯಕ್ತಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.


  ಮೇಷ, ವೃಷಭ, ಮಿಥುನ, ಸಿಂಹ, ಕನ್ಯಾ, ಧನು, ಮಕರ ಮತ್ತು ಕುಂಭ ರಾಶಿಯವರನ್ನು ಅಷ್ಟು ಸುಲಭವಾಗಿ ಬೆದರಿಸಲು ಸಾಧ್ಯವಿಲ್ಲ. ಆದರೆ ಅವರು ಇದ್ದರೆ ಅದನ್ನು ಅಲ್ಲಿಯೇ ನಿಲ್ಲಿಸಲು ಸಾಧ್ಯವಾಗುತ್ತದೆ. ಅವರು ಬೆದರಿಸುವ ಗುಂಪಿನಲ್ಲಿದ್ದಾರೆ ಎಂದರೆ  ಆಶ್ಚರ್ಯಪಡುವ ಅವಗ್ಯವಿಲ್ಲ.

  Published by:Rajesha M B
  First published: