• ಹೋಂ
 • »
 • ನ್ಯೂಸ್
 • »
 • ಭವಿಷ್ಯ
 • »
 • Dating Zodiac Signs: ಡೇಟಿಂಗ್ ಮಾಡಲು ಈ 4 ರಾಶಿಯವರು ಬೆಸ್ಟ್ ಅಂತೆ; ಅಟ್ರಾಕ್ಟಿವ್ ಪರ್ಸನಾಲಿಟಿ ಇವರದ್ದು

Dating Zodiac Signs: ಡೇಟಿಂಗ್ ಮಾಡಲು ಈ 4 ರಾಶಿಯವರು ಬೆಸ್ಟ್ ಅಂತೆ; ಅಟ್ರಾಕ್ಟಿವ್ ಪರ್ಸನಾಲಿಟಿ ಇವರದ್ದು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಡೇಟಿಂಗ್ ಆ್ಯಪ್‌ಗಳನ್ನು ಬಳಸುವ ಮುನ್ನ ರಾಶಿ ಚಕ್ರಗಳ ಗುಣಸ್ವಭಾವವನ್ನು ಅರಿತುಕೊಂಡು ಮುಂದುವರಿದರೆ ಇನ್ನೂ ಅನುಕೂಲಕರವಾಗಿರುತ್ತದೆ. ಹಾಗಿದ್ದರೆ ಡೇಟಿಂಗ್ ಆ್ಯಪ್‌ಗಳಿಗೆ ಸೂಕ್ತವಾಗಿರುವ ರಾಶಿಗಳು ಹಾಗೂ ಅವುಗಳ ಸ್ವಭಾವಗಳನ್ನು ತಿಳಿದುಕೊಳ್ಳೋಣ.

 • Trending Desk
 • 2-MIN READ
 • Last Updated :
 • Share this:

  ವಿವಾಹವಾಗುವ (Marriage) ಮುನ್ನ ಜೀವನ ಸಂಗಾತಿಗಳನ್ನು (Life Partner)  ಅರಿತುಕೊಳ್ಳುವುದು ಮುಖ್ಯವಾಗಿರುತ್ತದೆ. ವಿವಾಹದ ನಂತರ ನಿಮ್ಮ ಕಷ್ಟ, ಸುಖ, ಸಂತೋಷ, ದುಃಖಗಳಲ್ಲಿ ಭಾಗಿಯಾಗುವ ಲೈಫ್ ಪಾರ್ಟ್‌ನರ್ ಸಿಗಬೇಕು ಎಂಬುದು ಎಲ್ಲರ ಬಯಕೆಯಾಗಿರುತ್ತದೆ. ಉತ್ತಮ ಜೀವನ ಸಂಗಾತಿಯನ್ನು ಹುಡುಕುವುದು ಜವಬ್ದಾರಿಯುತ ಕೆಲಸವಾಗಿದ್ದರೂ ಕೆಲವೊಂದು ಆನ್‌ಲೈನ್ ವೇದಿಕೆಗಳ ಸಹಾಯವನ್ನು ಪಡೆದುಕೊಳ್ಳಬಹುದು.


  ಡೇಟಿಂಗ್ ಆ್ಯಪ್‌ಗಳು ಹೇಗೆ ನೆರವು ನೀಡುತ್ತವೆ


  ನೀವು ಆರಿಸುವ ವ್ಯಕ್ತಿ ನೋಟದಲ್ಲಿ ಸುಂದರನಾಗಿದ್ದರೂ ಆತನ ಹಾಗೂ ಆಕೆಯ ಗುಣ ಕೂಡ ಪರಿಶುದ್ಧವಾಗಿರಬೇಕು. ನಿಮ್ಮನ್ನು ಅರ್ಥಮಾಡಿಕೊಳ್ಳುವ ಗುಣದವರಾಗಿರಬೇಕು. ಇಂದಿನ ದಿನಗಳಲ್ಲಿ ಡೇಟಿಂಗ್ ಆ್ಯಪ್‌ಗಳು ನಿಮಗೆ ಸೂಕ್ತ ಸಂಗಾತಿಯನ್ನು ಹುಡುಕುವಲ್ಲಿ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ. ಈ ಆ್ಯಪ್‌ಗಳಿಂದ ನಿಮ್ಮ ಹವ್ಯಾಸಗಳಿಗೆ ಸೂಕ್ತವಾಗಿರುವ ಹಾಗೂ ನಿಮಗೆ ಸೂಕ್ತ ಎಂದೆನಿಸುವ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಅವರನ್ನು ನೇರವಾಗಿ ಭೇಟಿಯಾಗುವ ಮೂಲಕ ಅವರ ಬಗ್ಗೆ ಇನ್ನಷ್ಟು ವಿವರಗಳನ್ನು ತಿಳಿದುಕೊಳ್ಳಬಹುದಾಗಿದೆ.


  ಸೂಕ್ತ ವ್ಯಕ್ತಿಯ ಆಯ್ಕೆ


  ಮೊದಲಿಗೆ ಡೇಟಿಂಗ್ ಆ್ಯಪ್‌ಗಳಲ್ಲಿ ಈ ವ್ಯಕ್ತಿಗಳನ್ನು ಪರಿಚಯಿಸಿಕೊಂಡು ನಂತರ ಅವರೊಂದಿಗೆ ಸಂವಾದಗಳನ್ನು ನಡೆಸಬಹುದಾಗಿದೆ. ಪ್ರೀತಿಯಲ್ಲಿ ಅನುರಕ್ತವಾಗುವುದು ಸುಲಭವಾಗಿದ್ದರೂ ನೀವು ಆಯ್ಕೆಮಾಡುವ ವ್ಯಕ್ತಿ ಸೂಕ್ತವಾಗಿರಬೇಕು.  ರಾಶಿಗೆ ಅನುಸಾರವಾಗಿ ಜೀವನ ಸಂಗಾತಿಯ ಆಯ್ಕೆ


  ಡೇಟಿಂಗ್ ಆ್ಯಪ್‌ಗಳಲ್ಲಿ ಪ್ರೀತಿಯನ್ನು ಹುಡುಕುವುದು ಇಂದಿನ ದಿನಗಳಲ್ಲಿ ಸುಲಭವಾದರೂ ರಾಶಿಗಳಿಗೆ ಅನುಸಾರವಾಗಿ ಈ ಆ್ಯಪ್‌ಗಳಲ್ಲಿ ನಿಮ್ಮ ಪ್ರೀತಿಯನ್ನು ಅನ್ವೇಷಿಸುವುದು ನಿಮ್ಮ ಜೀವನ ಸಂಗಾತಿಯ ಆಯ್ಕೆಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ಡೇಟಿಂಗ್ ಆ್ಯಪ್‌ಗಳ ನೆರವನ್ನು ಪಡೆದುಕೊಳ್ಳದೆಯೇ ಈ ರಾಶಿಯವರನ್ನು ನೀವು ಪ್ರೀತಿಯಲ್ಲಿ ನಂಬಬಹುದು ಹಾಗೂ ಅವರು ನಿಮಗೆ ಜೀವನ ಪೂರ್ತಿ ಖುಷಿ ಸಂತೋಷವನ್ನು ತರುತ್ತಾರೆ ಎಂಬುದರಲ್ಲಿ ಸಂದೇಹವೇ ಇಲ್ಲ ಎಂಬುದು ಜ್ಯೋತಿಷ್ಯಗಳ ಅಭಿಪ್ರಾಯವಾಗಿದೆ.


  ಇದಕ್ಕೂ ಮುನ್ನ ನಿಮ್ಮ ಪ್ರೀತಿಯನ್ನು ಹುಡುಕುವಲ್ಲಿ ರಾಶಿಗಳ ಪಾತ್ರವೇನು ಎಂಬುದನ್ನು ಅರಿತುಕೊಳ್ಳಲೇಬೇಕು.


  ಇದನ್ನೂ ಓದಿ: Budh Gochar: ಫೆ.7ರ ನಂತರ ಈ 5 ರಾಶಿಯವರಿಗೆ ಹಣವೋ ಹಣ, ಮುಟ್ಟಿದ್ದೆಲ್ಲಾ ಚಿನ್ನ

  ಡೇಟಿಂಗ್ ಆ್ಯಪ್‌ಗಳಿಗೆ ಸೂಕ್ತವಾಗಿರುವ ರಾಶಿಗಳು


  ಡೇಟಿಂಗ್ ಆ್ಯಪ್‌ಗಳನ್ನು ಬಳಸುವ ಮುನ್ನ ರಾಶಿ ಚಕ್ರಗಳ ಗುಣಸ್ವಭಾವವನ್ನು ಅರಿತುಕೊಂಡು ಮುಂದುವರಿದರೆ ಇನ್ನೂ ಅನುಕೂಲಕರವಾಗಿರುತ್ತದೆ. ಹಾಗಿದ್ದರೆ ಡೇಟಿಂಗ್ ಆ್ಯಪ್‌ಗಳಿಗೆ ಸೂಕ್ತವಾಗಿರುವ ರಾಶಿಗಳು ಹಾಗೂ ಅವುಗಳ ಸ್ವಭಾವಗಳನ್ನು ತಿಳಿದುಕೊಳ್ಳೋಣ.


  1) ಕುಂಭ ರಾಶಿ


  ಈ ರಾಶಿಯವರು ಹೃದಯದಲ್ಲಿ ಪ್ರೀತಿ ತುಂಬಿರುವವರು ಎಂಬುದು ತಿಳಿಯುತ್ತದೆ. ಮುಕ್ತವಾಗಿ ಮಾತನಾಡುವುದು ಈ ರಾಶಿಯವರು ಗುಣಲಕ್ಷಣವಾಗಿದೆ. ಕರ್ಕಾಟಕ ರಾಶಿಯವರು ಪ್ರಣಯಕ್ಕೆ ಹೆಸರುವಾಸಿಯಾಗಿದ್ದರೂ ಕುಂಭ ರಾಶಿಯವರು ಉತ್ತಮವಾಗಿ ಹೊಂದಿಕೊಳ್ಳುತ್ತಾರೆ ಹಾಗೂ ಪ್ರೀತಿಯ ಆರಾಧಕರಾಗಿದ್ದಾರೆ.  2. ಮೀನ ರಾಶಿ


  ಮೀನ ರಾಶಿಯವರು ಹೆಚ್ಚು ಭಾವನಾತ್ಮಕ, ಸಹಾನುಭೂತಿ, ಪ್ರಣಯಿಗಳು ಹಾಗೂ ಸಂತೋಷ ಹುಡುಕುವ ವ್ಯಕ್ತಿತ್ವದವರಾಗಿದ್ದಾರೆ. ಈ ರಾಶಿಯವರಿಗೆ ನೀವು ಡೇಟಿಂಗ್ ಆ್ಯಪ್‌ಗಳ ಮೂಲಕವೇ ಅನುರಕ್ತರಾಗಿರಬೇಕು ಎಂದಾಗಿಲ್ಲ ಆ ರಾಶಿಯವರ ಸಂಪರ್ಕದಿಂದ ಭೇಟಿಯಿಂದ ಕೂಡ ನೀವು ಅವರಿಂದ ಅನುರಕ್ತರಾಗುವುದು ಖಂಡಿತ.


  3. ವೃಶ್ಚಿಕ ರಾಶಿ


  ಶಾರುಖ್ ಖಾನ್, ರಿಯಾನ್ ರೆನಾಲ್ಡ್, ಐಶ್ವರ್ಯಾ ರೈಯನ್ನು ಮೊದಲ ನೋಟದಲ್ಲಿಯೇ ಮೆಚ್ಚಲು ಕಾರಣ ಇವರ ರಾಶಿಯಾಗಿದೆ. ವೃಶ್ಚಿಕ ರಾಶಿ ಉಳಿದ ಎಲ್ಲಾ ರಾಶಿಗಳಿಗಿಂತಲೂ ಹೆಚ್ಚು ಪ್ರಣಯಿಗಳು ಹಾಗೂ ಅನುರಕ್ತರು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಡೇಟಿಂಗ್ ಆ್ಯಪ್‌ಗಳಲ್ಲಿಯೂ ಈ ರಾಶಿ ಮೊದಲ ಸ್ಥಾನದಲ್ಲಿದೆ. ನಿಮ್ಮ ಸಂಭಾವ್ಯ ಸಂಗಾತಿಯು ವೃಶ್ಚಿಕ ರಾಶಿಯವರಾದರೆ ನೀವು ಅದೃಷ್ಟವಂತರೇ ಸರಿ!


   


  4. ತುಲಾ ರಾಶಿ


  ತುಲಾ ರಾಶಿಯವರು ಕೊಂಚ ವೃಶ್ಚಿಕ ರಾಶಿಯವರ ಅದೇ ಗುಣ ಸ್ವಭಾವಗಳನ್ನು ಹೊಂದಿದರವಾಗಿದ್ದಾರೆ. ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಿಂದಲೇ ಅವರು ಇನ್ನೊಬ್ಬರನ್ನು ಆಕರ್ಷಿಸುತ್ತಾರೆ. ವೈಯಕ್ತಿಕ ಹಾಗೂ ವೃತ್ತಿಪರ ಜೀವನವನ್ನು ಹೇಗೆ ನಿರ್ವಹಿಸಬೇಕು ನಿಭಾಯಿಸಬೇಕು ಎಂಬುದನ್ನು ಅರಿತುಕೊಂಡಿದ್ದಾರೆ.


  ಈ ರಾಶಿಯವರು ತಮ್ಮ ಆಕರ್ಷಕ ವ್ಯಕ್ತಿತ್ವಗಳಿಂದ ಹೃದಯಗಳನ್ನು ಗೆಲ್ಲುತ್ತಾರೆ ಹಾಗೂ ಬಂಧನಗಳನ್ನು ನಿರ್ಮಿಸುತ್ತಾರೆ.

  Published by:Kavya V
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು