Astrology: ಈ ರಾಶಿಗಳು ಪ್ರೀತಿಯಲ್ಲಿ ಬದ್ಧತೆಗೆ ಇನ್ನೊಂದು ಹೆಸರು .. ಯಾವುದು ಆ ರಾಶಿಗಳು?

Zodiac Sign: ಜ್ಯೋತಿಷ್ಯದ ಪ್ರಕಾರ, 4 ರಾಶಿಯ ಜನರು ಹೆಚ್ಚು ಬದ್ಧತೆಯನ್ನು ಹೊಂದಿರುವ ಪ್ರೇಮಿಗಳಾಗಿರುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಂಬಂಧಗಳು ನಂಬಿಕೆ ಮತ್ತು ಬದ್ಧತೆಯ ಬುನಾದಿಯ ಮೇಲೆ ನಿಂತಿರುತ್ತದೆ. ಬದ್ಧತೆ ಇಲ್ಲದ ಸಂಬಂಧ ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ಕೆಲವು ಜನರು ಈ ಬದ್ಧತೆಗೆ ಹೆದರುತ್ತಾರೆ. ಅವರಿಗೆ ಯಾರಿಗಾದರೂ ಉತ್ತರದಾಯಿಗಳಾಗುವುದು ಅಥವಾ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದು ಇಷ್ಟವಾಗುವುದಿಲ್ಲ. ಇಂಥಹ ಜನರು ಪ್ರೀತಿಯ ವಿಚಾರದಲ್ಲಿ ಸಹ ಬದ್ಧತೆಯನ್ನು ಹೊಂದಿರುವುದಿಲ್ಲ. ಮತ್ತೊಂದೆಡೆ, ನಿಜವಾದ ಪ್ರೀತಿಯನ್ನು ನಂಬುವ ಮತ್ತು ನಿಷ್ಠಾವಂತ, ಬದ್ಧತೆಯಿರುವ ಇತರ ಜನರು ಸಹ ಇದ್ದಾರೆ. ಕೆಲವೊಮ್ಮೆ ಅವರ ಬದ್ಧತೆ ಅವರ ರಾಶಿಗಳ ಅನುಸಾರವಾಗಿ ನಿರ್ಧಾರವಾಗುತ್ತದೆ. ಕೆಲವೊಂದು ರಾಶಿಯ ಜನರು ಹೆಚ್ಚು ಬದ್ಧತೆಯನ್ನು ಹೊಂದಿರುತ್ತಾರೆ. ಪ್ರೀತಿಯ ಸಂಬಂಧಗಳ ಬಗ್ಗೆ ಹೆಚ್ಚು ಜವಾಬ್ದಾರಿಯುತವಾಗಿ ಇರುತ್ತಾರೆ.

ಅವರು ತಮ್ಮ ಪ್ರೀತಿಯನ್ನು ಹೃದಯದಿಂದ ನೀಡುತ್ತಾರೆ. ಅಲ್ಲದೇ ಯಾರೂದರೂ ಸರಿ ಅವರೊಂದಿಗೆ ಬದ್ಧತೆಯಿಂದ ನಡೆದುಕೊಳ್ಳುತ್ತಾರೆ. ಇಂಥಹ ಜನರು ಅತ್ಯಂತ ದುರ್ಬಲ ವ್ಯಕ್ತಿಯಾಗಬಹುದು. ಆದರೆ ಅವರಿಗೆ, ಯಾರೊಂದಿಗಾದರೂ ವಿಶೇಷ ಬಾಂಧವ್ಯ ಹೊಂದಿವುದು ಮುಖ್ಯವಾಗಿದೆ. ಜ್ಯೋತಿಷ್ಯದ ಪ್ರಕಾರ, ಇಂಥಹ 4 ರಾಶಿಗಳಿವೆ, ಈ ರಾಶಿಯ ಜನರು ಹೆಚ್ಚು ಬದ್ಧರಾಗಿರುತ್ತಾರೆ. ಇವರು ಹೆಚ್ಚು ಬದ್ಧತೆಯನ್ನು ಹೊಂದಿರುವ ಪ್ರೇಮಿಗಳಾಗಿರುತ್ತಾರೆ.

ಹಾಗಾದರೇ ಯಾವ ರಾಶಿಯ ಜನರು ಪ್ರೀತಿಯಲ್ಲಿ ಹೆಚ್ಚು ಬದ್ಧರಾಗಿರುತತಾರೆ ಎಂಬ ಮಾಹಿತಿ ಇಲ್ಲಿದೆ.

ಕಟಕ ರಾಶಿ
ಕರ್ಕಾಟಕ ರಾಶಿಯವರು ಎಲ್ಲಾ ನಿರ್ಧಾರಗಳನ್ನು ಭಾವನೆಗಳ ಆಧಾರದ ಮೆಲೆ ತೆಗೆದುಕೊಳ್ಳುವುದು ಹೆಚ್ಚು. ಭಾವನೆಗಳು ಮತ್ತು ಬದ್ಧತೆ ಅವರಿಗೆ ಹೆಚ್ಚು ಮುಖ್ಯವಾಗುತ್ತದೆ. ಇವರಿಗೆ ಇತರ ವ್ಯಕ್ತಿಗಳ ಭಾವನೆಗೆ ನೋವು ಮಾಡುವುದು ಇಷ್ಟವಾಗುವುದಿಲ್ಲ. ಈ ರಾಶಿಯವರು ಒಬ್ಬ ವ್ಯಕ್ತಿಯನ್ನು ನಮ್ಮವರು ಎಂದು ಭಾವಿಸಿದರೆ ಅವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ.
ಪ್ರೀತಿಯಲ್ಲಿರುವಾಗ, ಕರ್ಕಾಟಕ ರಾಶಿಯವರು ಅತ್ಯಂತ ಸಮರ್ಪಿತ, ಬದ್ಧ ಮತ್ತು ನಿಷ್ಠಾವಂತ ವ್ಯಕ್ತಿತ್ವದವರಾಗಿರುತ್ತಾರೆ. ಅಲ್ಲದೇ ಇವರು ಒಬ್ಬರಿಗೆ ಮನಸ್ಸು ನೀಡಿದರೇ ಅವರ ಇಷ್ಟ ಕಷ್ಟಗಳಲ್ಲಿ ಪಾಲುದಾರರಾಗಿರುತ್ತಾರೆ.

ಇದನ್ನೂ ಓದಿ: ಕುಂಭರಾಶಿಯವರು ಇಂದು ತಪ್ಪದೇ ಗಣೇಶನ ಆರಾಧಿಸಿ; ಇಲ್ಲಿದೆ 12 ರಾಶಿಗಳ ದಿನಭವಿಷ್ಯ

ಧನು ರಾಶಿ

ಧನು ರಾಶಿಯವರು ತಮ್ಮ ಭಾವನೆಗಳನ್ನು ಮಾತಿನಲ್ಲಿ ಹೇಳುವುದಿಲ್ಲ ಮತ್ತು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಾಗ ಹೆಚ್ಚು ನಾಚಿಕೆಪಡುತ್ತಾರೆ. ತಮ್ಮ ಮನಸಿನ ಮಾತುಗಳನ್ನು ಇನ್ನೊಬ್ಬರ ಮುಂದೆ ಹೇಳಿಕೊಳ್ಳಲು ಸಾವಿರ ಬಾರಿ ಯೋಚನೆ ಮಾಡುತ್ತಾರೆ. ಅದರಲ್ಲೂ ಪ್ರೀತಿಯ ವಿಚಾರ ಬಂದಾಗ ಸಹ. ಅವರು ಯಾರನ್ನಾದರೂ ಇಷ್ಟಪಟ್ಟಲ್ಲಿ ಅವರ ಬಳಿ ಪ್ರೀತಿಯನ್ನು ಹೇಳಿಕೊಳ್ಳಲು ಪರದಾಡುತ್ತಾರೆ. ಆದರೆ, ಅವರು ಪ್ರೀತಿಯಲ್ಲಿ ಬಿದ್ದಾಗ ಮಾತ್ರ ಅವರು ಅತ್ಯಂತ ನಿಷ್ಠಾವಂತ, ವಿಶ್ವಾಸಾರ್ಹ ಮತ್ತು ಬದ್ಧ ಪ್ರೇಮಿಗಳಲ್ಲಿ ಒಬ್ಬರಾಗುತ್ತಾರೆ.

ಮೀನ ರಾಶಿ

ಕಟಕ ಮತ್ತು ಧನು ರಾಶಿಯ ನಂತರ ಮೀನಾ ರಾಶಿಯ ಜನರು ಪ್ರೀತಿಯಲ್ಲಿ ಹೆಚ್ಚು ಬದ್ಧರಾಗಿರುತ್ತಾರೆ. ಮೀನರಾಶಿಯಲ್ಲಿ ಜನಿಸಿದವರು ನಿಜವಾದ ಸಂಬಂಧ ಮತ್ತು ಶುದ್ಧ ಪ್ರೀತಿಯನ್ನು ಬಯಸುತ್ತಾರೆ. ಅವರು ತಮ್ಮ ವಿಶೇಷ ವ್ಯಕ್ತಿಯನ್ನು ಅಂದರೆ ತಾವು ಇಷ್ಟಪಡುವ ವ್ಯಕ್ತಿಯನ್ನು ಕಂಡುಕೊಂಡಾಗ, ಅವರಿಗಾಗಿ ಪ್ರಪಂಚವನ್ನೇ ತಲೆಕೆಳಗೆ ಮಾಡಲು ಸಿದ್ಧರಿರುತ್ತಾರೆ. ತಮ್ಮ ಪ್ರೀತಿಗಾಗಿ ಮೀನಾ ರಾಶಿಯವರು ಸಮಾಜದ ವಿರುದ್ಧ ಹೋರಾಡಲು ಸಿದ್ಧರಾಗಿರುತ್ತಾರೆ.

ಕನ್ಯಾರಾಶಿ

ಕನ್ಯಾ ರಾಶಿಯವರು ಹೊರನೋಟಕ್ಕೆ  ಒರಟು ಸ್ವಭಾವದವರು ಎಂದು ಅನಿಸುತ್ತದೆ. ಅವರಿಗೆ ಯಾವುದೇ ಭಾವನೆಗಳಿಲ್ಲ ಎಂದು ಅನಿಸುವುದು ಸಹಜ. ಆದರೆ ಕನ್ಯಾ ರಾಶಿಯವರು ಅತ್ಯಂತ ದುರ್ಬಲ ಜನರಲ್ಲಿ ಒಬ್ಬರಾಗಿದ್ದು ನಿಜವಾದ ಪ್ರೀತಿಯನ್ನು ಬಯಸುತ್ತಾರೆ ಮತ್ತು ವಿಶೇಷ ವ್ಯಕ್ತಿಯೊಂದಿಗೆ ಅಂದರೆ ತಾವು ಪ್ರೀತಿಸುವ ವ್ಯಕ್ತಿಯೊಂದಿಗೆ ಮುರಿಯಲಾಗದ ಬಂಧವನ್ನು ಹೊಂದಿದ್ದಾರೆ. ಅವರಿಗೆ ತಾವು ಪ್ರಿತಿಸುವ ವ್ಯಕ್ತಿಯ ಪ್ರೀತಿ ಸಿಕ್ಕಾಗ ಅವರಿಗೆ ಯಾವುದೇ ನೋವಾಗದಂತೆ , ಆ ಪ್ರೀತಿ ದೂರ ಹೋಗದಂತೆ ನಾಜೂಕಿನಿಂದ ನೋಡಿಕೊಳ್ಳುತ್ತಾರೆ.
Published by:Sandhya M
First published: