• Home
  • »
  • News
  • »
  • astrology
  • »
  • Garuda Purana: ನೀವ್ ಮಾಡೋ ಈ 4 ತಪ್ಪು ನಿಮ್ಮ ಲೈಫ್​ ಹಾಳಾಗೋಕೆ ಕಾರಣವಂತೆ

Garuda Purana: ನೀವ್ ಮಾಡೋ ಈ 4 ತಪ್ಪು ನಿಮ್ಮ ಲೈಫ್​ ಹಾಳಾಗೋಕೆ ಕಾರಣವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Garuda Purana: ಹಿಂದೂ ಧರ್ಮದಲ್ಲಿರುವ 18 ಪುರಾಣಗಳಲ್ಲಿ ಒಂದಾದ ಗರುಡ ಪುರಾಣಕ್ಕೆ ವಿಶೇಷ ಮಹತ್ವವಿದೆ. ಜೀವನವನ್ನು ನಡೆಸಲು ಸರಿಯಾದ ಮಾರ್ಗಗಳ ಬಗ್ಗೆ ಗರುಡ ಪುರಾಣದಲ್ಲಿ ಹೇಳಲಾಗಿದೆ. ಹಾಗೆಯೇ ಇದರ ಪ್ರಕಾರ ನಾವು ಜೀವನದಲ್ಲಿ ಮಾಡುವ ಕೆಲ ತಪ್ಪುಗಳು ನಮ್ಮ ಬದುಕು ಹಾಳಾಗಲು ಕಾರಣವಾಗುತ್ತದೆ. ಹಾಗಾದ್ರೆ ಈ ಗರುಡ ಪುರಾಣದ ಪ್ರಕಾರ ಯಾವ ತಪ್ಪು ಮಾಡಬಾರದು ಎಂಬುದು ಇಲ್ಲಿದೆ.

ಮುಂದೆ ಓದಿ ...
  • Share this:

ಗರುಡ ಪುರಾಣದಲ್ಲಿನ ಎಲ್ಲಾ ನೀತಿಗಳನ್ನು ಚಾಚೂತಪ್ಪದೆ ಪಾಲಿಸಿದರೆ ಮನುಷ್ಯರ ಜೀವನ ಉತ್ತುಂಗದತ್ತ ಸಾಗುತ್ತದೆ. ಗರುಡ ಪುರಾಣ ಮನುಷ್ಯ ಬದುಕಿದ್ದಾಗ ಆತ ಮಾಡುವ ಕರ್ಮಗಳು ಆತ ಸತ್ತ ನಂತರ ಯಾವ ರೀತಿಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂಬುದನ್ನು ಸವಿಸ್ತಾರವಾಗಿ ವಿವರಣೆ ನೀಡುತ್ತದೆ


ಹಾಗೆಯೇ ಗರುಡ ಪುರಾಣದ ಮೂಲಕ ನಾವು ಮಾಡುವ ಕೆಲ ತಪ್ಪುಗಳು ನಮ್ಮ ಜೀವನವನ್ನು ಹಾಳು ಮಾಡುತ್ತದೆಯಂತೆ. ಕೆಲವೊಮ್ಮೆ ನಾವು ನಮಗೆ ತಿಳಿಯದೇ ಮಾಡುವ ತಪ್ಪುಗಳು ನಮ್ಮವರಿಂದ ನಮ್ಮನ್ನ ದೂರ ಮಾಡುತ್ತದೆ.


ಈ ಗರುಡ ಪುರಾಣದ ಪ್ರಕಾರ ಮನುಷ್ಯ ತನ್ನ ಅಭ್ಯಾಸ ಅದು ಅಂದುಕೊಂಡಿರುವ ಕೆಲ ವಿಚಾರಗಳು ಬದುಕಿನ ಹಾದಿಯನ್ನು ತಪ್ಪಿಸುತ್ತವೆ. ಇದರಿಂದ ನಮಗೆ ಅರಿವಿಲ್ಲದೇ ಗುಂಡಿಯಲ್ಲಿ ಬೀಳುತ್ತೇವೆ.


ಅಹಂಕಾರ: ಅಹಂಕಾರ ತೋರಿಸುವುದು ನಮ್ಮಿಂದ ಕುಟುಂಬ ಮತ್ತು ಸ್ನೇಹಿತರನ್ನು ದೂರ ಮಾಡುತ್ತದೆ. ಈ ಅಹಂ ಭಾವನೆಯೂ ನಮಗೆ ಗೊತ್ತಿಲ್ಲದೇ ನಮ್ಮ ಬದುಕಿನ ವಿನಾಶಕ್ಕೆ ಕಾರಣವಾಗುತ್ತದೆ. ಹಾಗಾಗಿ ಆಸ್ತಿ, ಸಂಪತ್ತು ಹಾಗೂ ಸೌಂದರ್ಯದ ಬಗ್ಗೆ ಅಹಂ ಇರಬಾರದು.


ದುರಾಸೆ: ದುರಾಸೆ ನಮ್ಮ ಜೀವನವನ್ನು ಹಾಳು ಮಾಡುವ ಮೊದಲ ವಿಚಾರ ಎಂದರೆ ತಪ್ಪಲ್ಲ. ಬದುಕಿನಲ್ಲಿ ಆಸೆ ಇರಬೇಕು, ಆದರೆ ದುರಾಸೆಯಲ್ಲ. ಇದರಿಂದ ನಾವು ನಮ್ಮ ಸಂತೋಷ ಹಾಗೂ ನೈಜ ಬದುಕನ್ನ ಕಳೆದುಕೊಳ್ಳುತ್ತೇವೆ.


ಶೋಷಣೆ ಮಾಡುವುದು: ಯಾವಾಗಲೂ ಕಷ್ಟದಲ್ಲಿರುವವರ ಹಾಗೂ ನಿಮಗಿಂತ ಕೆಳ ಸ್ಥಾನದಲ್ಲಿರುವವರ ಶೋಷಣೆ ಮಾಡಿದರೆ ನಿಮ್ಮ ಜೀವನದಲ್ಲಿ ನೆಮ್ಮದಿ ಎನ್ನುವುದು ಇರುವುದಿಲ್ಲ. ಗರುಡ ಪುರಾಣದ ಪ್ರಕಾರ ಈ ರೀತಿ ಮಾಡುವುದರಿಂದ ನಿಮ್ಮ ಬದುಕು ಸಹ ಹಅಳಾಗುತ್ತದೆ.


(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

Published by:Sandhya M
First published: