ದಂಪತಿ, ಪ್ರೇಮಿಗಳು (Couple) ಅನ್ಯೋನ್ಯವಾಗಿರಲು, ಸಂಬಂಧದಲ್ಲಿ (Relationship) ಗಟ್ಟಿಯಾಗಿರಲು ಪರಸ್ಪರ ಗೌರವ, ಪ್ರೀತಿ, ಕಾಳಜಿ, ಸಮಾನತೆಗಳು ಮುಖ್ಯವಾಗಿ ಬೇಕು. ಹಾಗೆಯೇ ಸಂಬಂಧದಲ್ಲಿ ಪರಸ್ಪರ ಪ್ರೀತಿ ಮತ್ತು ಸಂತೋಷವನ್ನು (Love And Happy) ಹೆಚ್ಚಿಸಲು ವಿಶ್ವಾಸವಿದ್ದವರಿಗೆ ವಾಸ್ತು ಶಾಸ್ತ್ರ (Vastu Shastra) ಸಹ ನಿರ್ಣಾಯಕವಾಗಿದೆ. ಪ್ರೀತಿ, ಸಂಬಂಧ ಕೆಲವೊಮ್ಮೆ ದಿಕ್ಕುಗಳನ್ನು (Directions) ಸಹ ಆಧಾರಿಸಿರುತ್ತವೆ. ತಪ್ಪು ದಿಕ್ಕಿನಲ್ಲಿ ಆಗುವ ತಪ್ಪು ಅಂಶಗಳು ಜೀವನದಲ್ಲಿ ಅಪಶ್ರುತಿಯನ್ನು ಉಂಟು ಮಾಡಬಹುದು ಮತ್ತು ಸರಿಯಾದ ದಿಕ್ಕಿನಲ್ಲಿ ಕೈಗೊಳ್ಳುವ ಸರಿಯಾದ ಕ್ರಮ, ವ್ಯಕ್ತಿಗಳಲ್ಲಿ ಸಾಮರಸ್ಯ ಮತ್ತು ಆಕರ್ಷಣೆಯ ಶಕ್ತಿಯನ್ನು ಹೆಚ್ಚಿಸುತ್ತದೆ.
ವಾಸ್ತು ಶಾಸ್ತ್ರಜ್ಞರು ಹೇಳುವ ಪ್ರಕಾರ, ನೈಋತ್ಯ ಪ್ರೀತಿ ಮತ್ತು ಸಂಬಂಧಗಳಿಗೆ ಸಂಬಂಧಿಸಿದ ದಿಕ್ಕು ಮತ್ತು ವಾಯುವ್ಯವು ಆಕರ್ಷಣೆಯ ದಿಕ್ಕಾಗಿದೆ. ಹೀಗಾಗಿ ಈ ದಿಕ್ಕುಗಳಿಗೆ ಪ್ರೀತಿ-ಸಂಬಂಧದ ವಿಚಾರವಾಗಿ ಪ್ರಾಮುಖ್ಯತೆ ನೀಡಬೇಕು
ವಾಸ್ತು ಶಾಸ್ತ್ರವು ಸುಖ ಜೀವನಕ್ಕಾಗಿ ದಂಪತಿ ಮತ್ತು ಪ್ರೇಮಿಗಳ ನಡುವಿನ ನಿಮ್ಮ ಪ್ರೀತಿಯ ಸಂಬಂಧವನ್ನು ಅಥವಾ ಸಂಗಾತಿ ಹುಡುಕುತ್ತಿರುವವರಿಗೆ ಸಂಗಾತಿ ಸಿಗಲು ಕೆಲವು ಸಲಹೆಗಳ ಬಗ್ಗೆ ಹೇಳುತ್ತದೆ, ಆ ಸಲಹೆಗಳನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಸಿಂಗಲ್ಸ್ಗಳಿಗೆ ವಾಸ್ತು ಸಲಹೆ
ಸಂಗಾತಿಯನ್ನು ಹುಡುಕಿ ಹುಡುಕಿ ಬೇಸತ್ತಿದ್ದರೆ ಅಥವಾ ಸಿಕ್ಕ ಸಂಗಾತಿ ಜೊತೆ ಉತ್ತಮ ಸಂಬಂಧ ಕಾಪಾಡಿಕೊಳ್ಳಲು ಈ ಸಲಹೆ ಪಾಲಿಸಿ
*ನಿಮ್ಮ ಮನೆ ಅಥವಾ ಕೋಣೆಯ ನೈಋತ್ಯ ಗೋಡೆಯ ಮೇಲೆ ಡಬಲ್ ಸಂತೋಷದ ಚಿಹ್ನೆ ಅಥವಾ ಪಿಯೋನಿ ಹೂವುಗಳ ವರ್ಣಚಿತ್ರವನ್ನು ಇರಿಸಿ.
*ನಿಮ್ಮ ಹಾಸಿಗೆಯ ಪಕ್ಕದಲ್ಲಿ ನೀವು ಒಂದು ಜೋಡಿ ಮ್ಯಾಂಡರಿನ್ ಬಾತುಕೋಳಿಗಳು ಅಥವಾ ಒಂದು ಜೋಡಿ ಹಂಸಗಳ ಪ್ರತಿಮೆಯನ್ನು ಇರಿಸಿಕೊಳ್ಳಿ
*ನಿಮ್ಮ ಕೋಣೆಯ ಉತ್ತರ ಮತ್ತು ವಾಯುವ್ಯದ ನಡುವೆ ಮನ್ಮಥನ ಪ್ರತಿಮೆಯನ್ನು ಇರಿಸಿ.
*ನಿಮ್ಮ ನೈಋತ್ಯ ಗೋಡೆ ನೀಲಿ ಬಣ್ಣದಲ್ಲಿದ್ದರೆ ಅದನ್ನು ಕೆನೆ ಅಥವಾ ಬಿಳಿ ಬಣ್ಣಕ್ಕೆ ಬದಲಾಯಿಸಿ. ಏಕೆಂದರೆ ನೀಲಿ ಬಣ್ಣವು ಪ್ರೀತಿಯ ಹರಿವನ್ನು ಅಡ್ಡಿಪಡಿಸುತ್ತದೆ. ಹೀಗಾಗಿ ಆ ಬಣ್ಣವನ್ನು ನೈಋತ್ಯ ದಿಕ್ಕಿಗೆ ಬಳಿಯಬೇಡಿ.
*ಕೋಣೆಯಲ್ಲಿ ಒಂದೇ ಮೊಲ ಅಥವಾ ಏಕಾಂಗಿ ಬಾತುಕೋಳಿ ಅಥವಾ ಒಂದೇ ಟೆಡ್ಡಿ ಬಿಯರ್ ಇರುವ ಏಕ ಗುರುತು ಅಲಂಕಾರಿಕ ವಸ್ತುಗಳನ್ನು ಇಡುವುದನ್ನು ತಪ್ಪಿಸಿ. ಬದಲಾಗಿ ಅವುಗಳನ್ನು ಜೋಡಿಯಾಗಿ ಇರಿಸಿ.
ವಿವಾಹಿತ ದಂಪತಿಗೆ ತಮ್ಮ ಸಂಬಂಧದಲ್ಲಿ ಪ್ರೀತಿ ಹೆಚ್ಚಿಸಲು ವಾಸ್ತು ಸಲಹೆ
ಕುಟುಂಬದ ಫೋಟೋಗಳನ್ನು ಯಾವಾಗಲು ನೈಋತ್ಯದಲ್ಲಿ ಇರಿಸಿ. ನಿಮ್ಮ ಕುಟುಂಬದ ಛಾಯಾಚಿತ್ರಗಳು ಮತ್ತು ನಿಮ್ಮ ಪ್ರೀತಿಪಾತ್ರರ ಫೋಟೋಗಳು ಯಾವಾಗಲೂ ಧೂಳು-ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಿ.
*ಉತ್ತರ ಮತ್ತು ವಾಯುವ್ಯ ನಡುವಿನ ದಿಕ್ಕು ಆಕರ್ಷಣೆಯ ದಿಕ್ಕು. ನೀವು ಇಲ್ಲಿ ಒಂದು ಜೋಡಿ ಬಿಳಿ ಕುದುರೆಗಳ ಶಿಲ್ಪವನ್ನು ಇರಿಸಬಹುದು. ಈ ರೀತಿಯಾಗಿ ನೀವು ನಿಮ್ಮ ಸಂಗಾತಿಯೊಂದಿಗೆ ಅತ್ಯುನ್ನತ ಮಟ್ಟದ ಅನ್ಯೋನ್ಯತೆಯನ್ನು ಆನಂದಿಸಬಹುದು.
*ನಿಮ್ಮ ಮಲಗುವ ಕೋಣೆಯಲ್ಲಿ ತಾಜಾ ಹೂವುಗಳನ್ನು ಇರಿಸಲು ಪ್ರಯತ್ನಿಸಿ. ಗುಲಾಬಿಗಳು, ದಾಸವಾಳ ಮತ್ತು ಲಿಲ್ಲಿಗಳಂತಹ ಹೂವುಗಳು ಪ್ರೀತಿ ಮತ್ತು ಫಲವತ್ತತೆಯನ್ನು ಸಂಕೇತಿಸುತ್ತವೆ. ನಿಮ್ಮ ಮನೆಯ ನೈಋತ್ಯದ ಮೂಲೆಯಲ್ಲಿ ಮೇಣದಬತ್ತಿಗಳು ಮತ್ತು ಅಲಂಕಾರಿಕಾ ದೀಪಗಳನ್ನು ಅಳವಡಿಸಿ.
*ಮಲಗುವ ಕೋಣೆಯಲ್ಲಿ ಕನ್ನಡಿಗಳ ಸ್ಥಾನವು ಬಹಳ ಮುಖ್ಯವಾಗಿದೆ. ಹಾಸಿಗೆಯ ಎದುರು ಕನ್ನಡಿಗಳನ್ನು ಇರಿಸುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಇದು ದಾಂಪತ್ಯ ಕಲಹಕ್ಕೆ ಕಾರಣವಾಗಬಹುದು.
ಇದನ್ನೂ ಓದಿ: Vastu Tips: ಕಸದ ಬುಟ್ಟಿಯನ್ನು ಈ ದಿಕ್ಕಿನಲ್ಲಿಟ್ಟರೆ ಮನೆಯಲ್ಲಿ ಜಗಳಗಳು ಜಾಸ್ತಿ ಆಗುತ್ತವೆ, ಎಚ್ಚರ!
*ಮಲಗುವ ಕೋಣೆಯಲ್ಲಿ ನಿಮ್ಮ ಬೆಡ್ ಶೀಟ್ಗಳು, ಕರ್ಟನ್ಗಳು ಮತ್ತು ಕುಶನ್ಗಳಿಗೆ ಮೃದುವಾದ ಬಣ್ಣಗಳನ್ನು ಬಳಸಿ. ನಿಮ್ಮ ಪ್ರೀತಿಯ ಜೀವನದಲ್ಲಿ ಉತ್ಸಾಹವನ್ನು ಹೆಚ್ಚಿಸಲು ಕೆಂಪು ಬಣ್ಣವನ್ನು ಸೇರಿಸಬಹುದು.
*ಮಲಗುವ ಕೋಣೆಯಲ್ಲಿ ದೇವತೆಗಳು ಮತ್ತು ತೀರಿದವರ ಫೋಟೋಗಳನ್ನು ಛಾಯಾಚಿತ್ರಗಳನ್ನು ಇರಿಸಬಾರದು.
(Disclaimer:ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ