ನೀವು ಗಮನಿಸಿದ್ದೀರಾ, ನಾವು ಯಾವಾಗಾದರೂ ಪ್ರಕೃತ್ತಿ ಸಂಪತ್ತು ಸಮೃದ್ದವಾಗಿರುವ ಸ್ಥಳಗಳಿಗೆ ಭೇಟಿ ಕೊಟ್ಟಾಗ, ಅಲ್ಲಿಂದ ಮರಳಿ ಬರಲು ಮನಸ್ಸಾಗುವುದೇ ಇಲ್ಲ. ಅಲ್ಲಿಯೇ ಇನ್ನೊಂದಿಷ್ಟು ದಿನ ಕಳೆಯೋಣವೆನಿಸುತ್ತಿರುತ್ತದೆ. ಒತ್ತಡದ ಜೀವನದಿಂದ (Stressful Life) ವಿರಾಮ ಪಡೆಯಲು ಪ್ರಕೃತಿಯ ಮಡಿಲಿನಲ್ಲಿ ಸಮಯ ಕಳೆಯುವುದಕ್ಕಿಂತ ಮತ್ತೊಂದು ಮದ್ದಿಲ್ಲ ಎನ್ನಬಹುದು. ನಮಗೆಲ್ಲಾ ಜೀವನದಲ್ಲಿ ಆಗಾಗ್ಗೆ ಈ ಅನುಭವವಾಗುತ್ತಿರುತ್ತದೆ. ಆದರೆ, ಸದಾ ಕಾಲ ಅಲ್ಲೇ ಉಳಿಯಲು ಸಾಧ್ಯವೇ? ಮರಳಿ ಬರಬೇಕು. ಹಾಗಾದಲ್ಲಿ, ಸದಾ ಪರಿಸರದ ಮಧ್ಯೆಯೇ ಇರಲು ನಾವೇನು ಮಾಡಬಹುದು? ಮನೆಯ ಸುತ್ತ-ಮುತ್ತ ಸಾಕಷ್ಟು ಸ್ಥಳವಿರುವವರು ಒಂದು ಸಣ್ಣ ತೋಟವನ್ನೋ, ಹಿತ್ತಲನ್ನೋ ಮಾಡಿಕೊಂಡು ಉತ್ತಮ ಪರಿಸರ (Environment) ನಿರ್ಮಿಸಿಕೊಂಡಿರುತ್ತಾರೆ. ಜಾಗವಿಲ್ಲದವರು? ಹೌದು, ಅವರೇನೂ ಮಾಡಬಹುದು.
ಮನೆಯೊಳಗೆ ಒಂದಷ್ಟು ಒಳಾಂಗಣ ಗಿಡಗಳನ್ನು ಬೆಳೆಸಬಹುದಲ್ಲವೇ?! ಅದರಲ್ಲೂ ಅವು ಅದೃಷ್ಟ ತರುವ ಸಸ್ಯಗಳಾದರೆ, ಬೆಳೆಸದಿರಲು ಕಾರಣವೇನು!?
ಹೌದು, ಮನೆಯಲ್ಲಿ ಹಸಿರು ಇರುವುದು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಗಮನಾರ್ಹ ಪರಿಣಾಮ ಬೀರುತ್ತದೆ. ಶಾಸ್ತ್ರದ ಪ್ರಕಾರ, ಕೆಲವು ಒಳಾಂಗಣ ಸಸ್ಯಗಳು ಗಾಳಿಯನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ, ಹಲವು ವಿಶೇಷವಾದ ಪ್ರಯೋಜನಗಳನ್ನು ನೀಡುತ್ತವೆ.
ನೀವು ಮನೆಯಲ್ಲಿ ಈ ಸಸ್ಯಗಳನ್ನು ವಾಸ್ತುಪ್ರಕಾರವಾಗಿ ಒಂದು ಲೆಕ್ಕಾಚಾರದಲ್ಲಿ ಜೋಡಿಸಿ ಬೆಳೆಸಿದ್ದೇ ಆದಲ್ಲಿ, ಅವು ಸಕಾರಾತ್ಮಕ ಪರಿಣಾಮ ಬೀರುವುದು ಮಾತ್ರವಲ್ಲದೆ, ಆ ಮೂಲಕ ನಿಮ್ಮ ಆರೋಗ್ಯ ಹಾಗೂ ಸಂತೋಷವನ್ನು ಸಹ ಹೆಚ್ಚಿಸಿಕೊಳ್ಳಬಹುದು.
ಇದನ್ನೂ ಓದಿ: ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆ, ಹೊಸ ವ್ಯವಸ್ಥೆ ಮಾಡಿದ ಟಿಟಿಡಿ
ವಾಸ್ತುವಿನ ಪ್ರಕಾರ, ಅದೃಷ್ಟದ ಸಸ್ಯಗಳನ್ನು ಇಡುವುದರಿಂದ ಆಗುವ ಪ್ರಯೋಜನಗಳೇನು?
ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯಲ್ಲಿ ಒಳಾಂಗಣ ಸಸ್ಯಗಳನ್ನು ಬೆಳೆಸುವುದರಿಂದ ಹಲವಾರು ಪ್ರಯೋಜನಗಳಿವೆ. ವಾಸ್ತು ಸಸ್ಯಗಳು ಶಕ್ತಿಯ ಹರಿವು ಮತ್ತು ಪರಿಚಲನೆಯನ್ನು ಸುಧಾರಿಸುವುದರ ಜೊತೆಗೆ ಸಕಾರಾತ್ಮಕತೆ ಮತ್ತು ಸಮತೋಲನವನ್ನು ಉತ್ತೇಜಿಸುತ್ತದೆ ಎಂದು ನಂಬಲಾಗಿದೆ. ಒಟ್ಟಾರೆ ಯೋಗಕ್ಷೇಮ ಮತ್ತು ಸಂತೋಷವನ್ನು ಹೆಚ್ಚಿಸಿಕೊಳ್ಳಲು ಒಳ್ಳೆಯ ಮಾರ್ಗವೇ ಸರಿ.
ಹೌದು, ಈ ಸಸ್ಯಗಳನ್ನು ವಾಸ್ತು ಪ್ರಕಾರವೇ ನಿರ್ದಿಷ್ಟವಾದ ದಿಕ್ಕಿನಲ್ಲಿ ಇಡಬೇಕಾಗುತ್ತದೆ. ಏಕೆಂದರೆ, ಇವನ್ನು ತಪ್ಪು-ತಪ್ಪಾದ ದಿಕ್ಕಿನಲ್ಲಿ ಇಟ್ಟರೆ, ಮನೆಯಲ್ಲಿ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಿ, ದುರದೃಷ್ಟಕ್ಕೆ ಕಾರಣವಾಗಬಹುದು.
ಹಾಗಾದರೆ, ಮನೆಗೆ ಅದೃಷ್ಟ ತರುವ ಆ 10 ಸಸ್ಯಗಳು ಯಾವುವು?
ನಿಮ್ಮ ಮನೆಯಲ್ಲಿ ಸದಾ ಕಾಲ ಧನಾತ್ಮಕ ವಾತಾವರಣವಿರಬೇಕೆಂದು ನೀವು ಬಯಸುವುದಾದರೆ, ನಿಮಗೆ ವಾಸ್ತು ತಜ್ಞರು ಶಿಫಾರಸು ಮಾಡುವ ಕೆಲವು ಉತ್ತಮ ಒಳಾಂಗಣ ಸಸ್ಯಗಳು ಇವೇ ನೋಡಿ. ಈ ಸಸ್ಯಗಳು ಸಮೃದ್ಧಿಯನ್ನು ತರುತ್ತವೆ ಎಂಬುದು ಸಾಮಾನ್ಯ ನಂಬಿಕೆ. ಬನ್ನಿ ಹಾಗಿದ್ದರೆ, ಅದೃಷ್ಟ ತರುವ ಆ ಸಸ್ಯಗಳ ಪರಿಚಯ ಮಾಡಿಕೊಳ್ಳೋಣ.
ದೇಹದಲ್ಲಿನ ವಿಷಕಾರಿ ಅಂಶವನ್ನು ತೆಗೆಯಲು ಇದರ ಎಲೆಯ ಸೇವನೆ ಅತ್ಯಂತ ಪರಿಣಾಮಕಾರಿ ವಿಧಾನವೆಂದು ಪರಿಗಣಿಸಲಾಗಿದೆ.
ತುಳಸಿ ಸಸ್ಯವನ್ನು ಇಡಲು ಉತ್ತಮ ದಿಕ್ಕು - ಈ ಪವಿತ್ರ ಸಸ್ಯವನ್ನು ಮನೆಯ ಉತ್ತರ, ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇಡುವುದು ಸೂಕ್ತ. ಈ ದಿಕ್ಕುಗಳಲ್ಲಿ ತುಳಸಿಯನ್ನು ಇಡುವುದರಿಂದ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗಿರುತ್ತದೆ. ಹಾಗೆಯೇ, ಇದನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ, ನಕಾರಾತ್ಮಕ ಪರಿಣಾಮ ಬೀರಬಹುದು.
ಉತ್ತಮವಾದ ದಿಕ್ಕು - ನಿಮ್ಮ ಪ್ರವೇಶದ್ವಾರದ ಆಗ್ನೇಯ ದಿಕ್ಕಿನಲ್ಲಿ ಜೇಡ್ ಸಸ್ಯವನ್ನು ಇರಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಇದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ಹಾಗೆಯೇ, ಮಲಗುವ ಕೋಣೆ ಅಥವಾ ಸ್ನಾನಗೃಹದಂತಹ ಪ್ರದೇಶಗಳಲ್ಲಿ ಸಸ್ಯವನ್ನು ಇಡಬಾರದೆಂದು ಸಲಹೆ ನೀಡಲಾಗುತ್ತದೆ. ಏಕೆಂದರೆ, ಇದು ನಕಾರಾತ್ಮಕ ಶಕ್ತಿಗೆ ಕಾರಣವಾಗಬಹುದು.
ಅತ್ಯುತ್ತಮ ದಿಕ್ಕು - ವಾಸ್ತು ತತ್ವಗಳ ಪ್ರಕಾರ ಆಗ್ನೇಯ ದಿಕ್ಕು ಸಂಪತ್ತಿನ ದಿಕ್ಕು ಆಗಿರುವುದರಿಂದ ಈ ಗಿಡವನ್ನು ಮನೆಯ ಆಗ್ನೇಯ ಭಾಗದಲ್ಲಿ ಇಡಬೇಕು. ಮನೆಯ ಆಗ್ನೇಯ ಅಥವಾ ಪೂರ್ವ ವಲಯದಲ್ಲಿರುವ ಬಿದಿರಿನ ಸಸ್ಯವು ಗಮನಾರ್ಹ ಧನಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಧನಾತ್ಮಕ ಶಕ್ತಿಯ ಹರಿವನ್ನು ಉತ್ತೇಜಿಸುತ್ತದೆ ಮತ್ತು ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
ಮನೆಯ ಲಿವಿಂಗ್ ರೂಂ ಅಥವಾ ನೀವು ಕೆಲಸ ಮಾಡುವ ಟೇಬಲ್ ಮೇಲೆಯೂ ಇಟ್ಟುಕೊಳ್ಳಬಹುದು. ಎರಡು ಕೊಂಬೆಯ ಬಿದಿರು ದಂಪತಿಗಳಲ್ಲಿ ಪ್ರೀತಿಯನ್ನು ಹೆಚ್ಚಿಸುವುದು ಎಂದೂ ಹೇಳಲಾಗುತ್ತದೆ.
ಇಡಬೇಕಾದ ದಿಕ್ಕು - ವಾಸ್ತು ಅನುಮೋದಿತ ಸಸ್ಯಗಳಲ್ಲಿ ಒಂದಾದ ಮನಿ ಪ್ಲಾಂಟ್ ಅನ್ನು ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿ ಇರಿಸಬಹುದು. ಹಾಗೂ ಈಶಾನ್ಯ ಪ್ರದೇಶದಲ್ಲಿ ಇದನ್ನು ಇಡುವುದು ಅಷ್ಟೇನೂ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಏಕೆಂದರೆ ಇದು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.
ಪೀಸ್ ಲಿಲ್ಲಿಗೆ ಉತ್ತಮವಾದ ದಿಕ್ಕು – ಇದನ್ನು ನಿಮ್ಮ ಮಲಗುವ ಕೋಣೆಯ ಕಿಟಕಿಯ ಬಳಿ ಇರಿಸಿದಲ್ಲಿ, ಮನೆಯಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ.
ಉತ್ತಮ ದಿಕ್ಕು - ಈ ಗಿಡವನ್ನು ಇರಿಸಲು ಕೋಣೆಯ ಪೂರ್ವ ಅಥವಾ ದಕ್ಷಿಣ ದಿಕ್ಕು ಉತ್ತಮ
ರಬ್ಬರ್ ಸಸ್ಯಕ್ಕೆ ಉತ್ತಮ ದಿಕ್ಕು -
ಲಿವಿಂಗ್ ರೂಮಿನ ಆಗ್ನೇಯ ಮೂಲೆಯನ್ನು ರಬ್ಬರ್ ಸಸ್ಯಕ್ಕೆ ಸೂಕ್ತವಾದ ಸ್ಥಳವೆಂದು ಪರಿಗಣಿಸಲಾಗುತ್ತದೆ.
ಜಾಸ್ಮಿನ್ ಸಸ್ಯವನ್ನು ಇಡಲು ಉತ್ತಮ ದಿಕ್ಕು - ವಾಸ್ತು ಸಲಹೆಯ ಪ್ರಕಾರ, ಮಲ್ಲಿಗೆ ಗಿಡವನ್ನು ಒಳಾಂಗಣದಲ್ಲಿ ದಕ್ಷಿಣಾಭಿಮುಖ ಕಿಟಕಿಗಳ ಬಳಿ ಇಡಬೇಕು.
ಲ್ಯಾವೆಂಡರ್ ಸಸ್ಯಕ್ಕೆ ಉತ್ತಮ ದಿಕ್ಕು -
ಲ್ಯಾವೆಂಡರ್ ಸಸ್ಯಗಳನ್ನು ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಬಹುದು. ಸಂಬಂಧಗಳನ್ನು ಸುಧಾರಿಸಲು ಮಲಗುವ ಕೋಣೆಯಲ್ಲಿ ಸೂರ್ಯನ ಬೆಳಕು ಬೀಳುವ ಜಾಗದಲ್ಲಿಯೂ ಸಹ ಇಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ