• ಹೋಂ
  • »
  • ನ್ಯೂಸ್
  • »
  • ಭವಿಷ್ಯ
  • »
  • Mysterious Zodiac Sign: ತುಂಬಾ ನಿಗೂಢವಂತೆ ಈ ರಾಶಿಯ ಜನರು ! ಇವರ ಇನ್ನೊಂದು ಮುಖ ನಿಜಕ್ಕೂ ಬೆಚ್ಚಿ ಬೀಳಿಸುತ್ತೆ

Mysterious Zodiac Sign: ತುಂಬಾ ನಿಗೂಢವಂತೆ ಈ ರಾಶಿಯ ಜನರು ! ಇವರ ಇನ್ನೊಂದು ಮುಖ ನಿಜಕ್ಕೂ ಬೆಚ್ಚಿ ಬೀಳಿಸುತ್ತೆ

ರಾಶಿ

ರಾಶಿ

ಕೆಲವರು ತುಂಬಾನೇ ನಿಗೂಢವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಅಂತ ಹೇಳಬಹುದು. ಈ ಜನರು ನಿಸ್ಸಂದೇಹವಾಗಿ ರೋಮಾಂಚನಕಾರಿಯಾಗಿರುತ್ತಾರೆ. ಯಾವ ರಾಶಿಯವರು ಹೆಚ್ಚು ನಿಗೂಢ ವ್ಯಕ್ತಿತ್ವ ಹೊಂದಿದ್ದಾರೆ ಎಂಬುದು ಇಲ್ಲಿದೆ.

  • Share this:

ಒಂದೇ ತಾಯಿಯ (Mother) ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು (Kids) ಒಂದೇ ರೀತಿಯ ಸ್ವಭಾವ ಹೊಂದಿರುವುದಿಲ್ಲ, ಅಂತಹದರಲ್ಲಿ ಜಗತ್ತಿನಲ್ಲಿ (World) ಇರುವ ಜನರು ಹೇಗೆ ಒಂದೇ ರೀತಿಯ ಸ್ವಭಾವವನ್ನು ಹೊಂದಿರಲು ಸಾಧ್ಯ ನೀವೇ ಹೇಳಿ? ಕೆಲವರು ಸದಾ ಸಂತೋಷವಾಗಿರುವ (Happy) ವ್ಯಕ್ತಿತ್ವವನ್ನು ಹೊಂದಿದ್ದರೆ, ಇನ್ನೂ ಕೆಲವರು ಸ್ವಲ್ಪ ಗಂಭೀರವಾಗಿಯೇ ಇರುತ್ತಾರೆ ಅಂತ ಹೇಳಬಹುದು. ನ್ನೂ ಕೆಲವರು ತುಂಬಾನೇ ನಿಗೂಢವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಅಂತ ಹೇಳಬಹುದು. ಈ ಜನರು ನಿಸ್ಸಂದೇಹವಾಗಿ ರೋಮಾಂಚನಕಾರಿಯಾಗಿರುತ್ತಾರೆ.


ನಿಗೂಢತೆ ಎಂದರೆ ಯಾರಿಗೂ ಹೇಳದೇ ಕೇಳದೆ ಅನೇಕ ದಿನಗಳವರೆಗೆ ಮನೆಯಿಂದ ಕಣ್ಮರೆಯಾಗುತ್ತಿರುತ್ತಾರೆ. ಅವರು ಸ್ವಲ್ಪಮಟ್ಟಿಗೆ ಅಂತರ್ಮುಖಿಯಾಗಿರಬಹುದು ಮತ್ತು ಇವರು ಮುಂದೆ ಏನು ಮಾಡುತ್ತಾರೆ ಅಂತ ಯಾರಿಗೂ ಊಹಿಸಲು ಸಾಧ್ಯವಾಗುವುದಿಲ್ಲ.


ಜ್ಯೋತಿಷಿಗಳು ಅತ್ಯಂತ ನಿಗೂಢ ರಾಶಿಚಕ್ರ ಚಿಹ್ನೆಯ ಜನರ ಬಗ್ಗೆ ಹೇಳಿದ್ದಾರೆ ನೋಡಿ


ಕರ್ಕಾಟಕ ರಾಶಿ


ಕರ್ಕಾಟಕ ರಾಶಿಯ  ಚಿತ್ರದಲ್ಲಿ ನಾವು ಏಡಿಯನ್ನು ನೋಡಬಹುದು. ಕಷ್ಟದ ಸಮಯದಲ್ಲಿ ಹೋಗಿ ಚಿಪ್ಪಿನಲ್ಲಿ ಹೆಚ್ಚಾಗಿ ಅಡಗಿಕೊಳ್ಳಲು ಈ ರಾಶಿಯವರು ಹೆಸರುವಾಸಿಯಾಗಿರುತ್ತಾರೆ. ಕರ್ಕಾಟಕ ರಾಶಿಯವರು ಉದ್ದೇಶಪೂರ್ವಕವಾಗಿ ಈ ರೀತಿ ನಿಗೂಢತೆಯನ್ನು ಬೆಳೆಸಿಕೊಂಡಿರುವುದಿಲ್ಲ.


"ಕರ್ಕಾಟಕ ರಾಶಿಯವರು ತಮ್ಮ ನಿಜವಾದ ಭಾವನೆಗಳನ್ನು ಮನಸ್ಸಿನ ಒಳಗೆ ಇರಿಸಿಕೊಂಡಿರುತ್ತಾರೆ, ಆದ್ದರಿಂದ ಅವರು ನಿಜವಾಗಿಯೂ ಹೇಗೆ ಭಾವಿಸುತ್ತಾರೆಂದು ಯಾರಿಗೂ ತಿಳಿದಿರುವುದಿಲ್ಲ" ಎಂದು ಫ್ಯೂಚುರಿಯೊ ಅಪ್ಲಿಕೇಶನ್ ನ ಜ್ಯೋತಿಷಿ ಅನಾಸ್ಟಾಸಿಯಾ ಕಿರಿಲ್ಚಿಕ್ ಹೇಳುತ್ತಾರೆ.


ಉದಾಹರಣೆಗೆ, ಕರ್ಕಾಟಕ ರಾಶಿಯ ಜನರು ತಮ್ಮ ಸಂಗಾತಿ ಅಥವಾ ಬಾಸ್ ಬಗ್ಗೆ ತಮ್ಮ ನಿಜವಾದ ಭಾವನೆಗಳನ್ನು ಕೆಲವೊಮ್ಮೆ ಮರೆಮಾಚಬಹುದು.


ಈ ರಾಶಿಯ ಜನರು ಅಂತರ್ಮುಖಿಗಳಾಗಿರುವುದರಿಂದ ಈ ಪಾರ್ಟಿಗಳಿಗೆ ಹೋದಾಗ, ಯಾರಿಗೂ ಹೇಳದೇ ಮನೆಗೆ ಹಿಂದಿರುಗುವ ಸ್ವಭಾವ ಇವರದು ಅಂತ ಹೇಳಬಹುದು.


ಮಿಥುನ ರಾಶಿ


ಮಿಥುನ ರಾಶಿಯ ಜನರು ಬಹಿರ್ಮುಖಿಗಳಾಗಿರುತ್ತಾರೆ, ಯಾವಾಗಲೂ ಜನರ ಜೊತೆ ತುಂಬಾನೇ ಜೋಕ್ ಮಾಡಿಕೊಂಡು ಇರುತ್ತಾರೆ. ಆದರೆ ಇವರಲ್ಲಿ ಒಂದು ನಿಗೂಢ ವ್ಯಕ್ತಿತ್ವವು ಸಹ ಅಡಗಿರುತ್ತದೆ ಅಂತ ಹೇಳಬಹುದು.


"ಮಿಥುನ ರಾಶಿಯ ಜನರಲ್ಲಿ ಎರಡು ರೀತಿಯ ಸ್ವಭಾವಗಳು ಇರುತ್ತವೆ, ಯಾವ ಸಮಯದಲ್ಲಿ ಅವರು ಯಾವ ಸ್ವಭಾವವನ್ನು ನಿಮ್ಮ ಮುಂದೆ ತೋರಿಸುತ್ತಾರೆ ಅಂತ ನಿಮಗೆ ಊಹೆ ಮಾಡುವುದಕ್ಕೂ ಸಹ ಸಾಧ್ಯವಾಗುವುದಿಲ್ಲ" ಎಂದು ಕಿರಿಲ್ಚಿಕ್ ಹೇಳುತ್ತಾರೆ.
ಒಂದು ದಿನ ನೀವು ಅವರೊಂದಿಗೆ ಸುತ್ತಾಡಿದರೆ, ಅವರು ತುಂಬಾನೇ ಕೂಲ್ ಆಗಿ ನಗು ನಗುತಾ ಇರಬಹುದು ಮತ್ತು ನಿಮ್ಮ ಜೊತೆ ಕೂತು ಗಂಟೆಗಟ್ಟಲೆ ಹರಟೆ ಹೊಡೆಯಬಹುದು. ಇನ್ನೊಂದು ದಿನ ಅವರೊಂದಿಗೆ ನೀವು ಸಮಯ ಕಳೆದರೆ, ಅವರು ನಿಮ್ಮ ಜೊತೆ ಸ್ವಲ್ಪ ನಿಗೂಢವಾಗಿದ್ದಾರೆ ಅಂತ ನಿಮಗೆ ಅನ್ನಿಸಬಹುದು.


ಮಕರ ರಾಶಿ


ಈ ರಾಶಿಯ ಜನರು ಕಠಿಣ ಪರಿಶ್ರಮಿಗಳು ಮತ್ತು ಕೆಲವೊಮ್ಮೆ ತುಂಬಾನೇ ನಿಗೂಢವಾಗಿ ಕಾಣುತ್ತಾರೆ. "ಮಕರ ರಾಶಿಯವರು ಜಗತ್ತನ್ನು ಅಷ್ಟು ಸುಲಭವಾಗಿ ನಂಬುವವರಲ್ಲ” ಎಂದು ಜ್ಯೋತಿಷಿ ಅನ್ನಾ ಕೊವಾಚ್ ಹೇಳುತ್ತಾರೆ.


"ವಿಪರ್ಯಾಸವೆಂದರೆ, ಮಕರ ರಾಶಿಯವರು ಪ್ರಾಯೋಗಿಕ ಮತ್ತು ನೇರವಾಗಿದ್ದರೂ ಸಹ ಅವರು ತಮ್ಮ ಮನಸ್ಸಿನಲ್ಲಿ ರಹಸ್ಯ ವಿಷಯಗಳನ್ನು ಅಡಗಿಸಿಟ್ಟುಕೊಂಡಿರುತ್ತಾರೆ.


ಮಕರ ರಾಶಿಯ ಜನರೊಂದಿಗೆ ವ್ಯವಹರಿಸುವಾಗ, ಅವರು ಯಾವುದೋ ಒಂದು ವಿಷಯದ ಬಗ್ಗೆ ತಮ್ಮ ನಿಜವಾದ ಭಾವನೆಗಳನ್ನು ಮರೆಮಾಚುತ್ತಿದ್ದಾರೆ ಅಂತ ನಿಮಗೆ ಅನ್ನಿಸಬಹುದು.


ಆದರೆ ಈ ಜನರು ಅವರು ಏನು ಹೇಳುತ್ತಾರೋ, ಅದನ್ನೇ ಮಾಡುತ್ತಾರೆ ಮತ್ತು ಏನು ಮಾಡುತ್ತಾರೋ ಅದನ್ನೇ ಅವರು ಮಾತಾಡ್ತಾರೆ" ಎಂದು ಅವರು ಹೇಳುತ್ತಾರೆ.


ಇದನ್ನೂ ಓದಿ: ಮೇಷ ರಾಶಿಯಲ್ಲಿ ವಿಚಿತ್ರ ಯೋಗ, ಒಂದಿಲ್ಲೊಂದು ಅಪಾಯ ಕಟ್ಟಿಟ್ಟ ಬುತ್ತಿ


ಮೀನ ರಾಶಿ


ಈ ರಾಶಿಯ ಜನರು ತುಂಬಾನೇ ಸಂವೇದನಾಶೀಲರು, ಕಾಲ್ಪನಿಕ ಮತ್ತು ಭಾವನಾತ್ಮಕವಾಗಿ ಬುದ್ಧಿವಂತರು ಅಂತ ಹೇಳಬಹುದು. ಈ ರಾಶಿಯ ಜನರು ಅವರ ಸಹಜ ಅರ್ಥಗರ್ಭಿತವಾದ ಮಾತುಗಳಿಂದ ನಿಗೂಢವಾಗಿ ಕಾಣಿಸಬಹುದು. "ಹೆಚ್ಚಿನ ಸಮಯದಲ್ಲಿ, ಮೀನ ರಾಶಿಯವರು ತಮ್ಮದೇ ಆದ ಭಾವನೆಗಳಲ್ಲಿ ಮುಳುಗಿರುತ್ತಾರೆ".


ಮೀನ ರಾಶಿಯವರು ನಿಗೂಢವಾಗಿ ವರ್ತಿಸುತ್ತಿದ್ದರೆ, ಅದು ಉದ್ದೇಶಪೂರ್ವಕವಲ್ಲ. "ಮೀನ ರಾಶಿಯ ವ್ಯಕ್ತಿಯ ಸ್ವಭಾವ ಎಂತದ್ದು ಅಂತ ತಿಳಿದುಕೊಳ್ಳುವುದು ಕಷ್ಟವೆಂದು ನಿಮಗೆ ಅನ್ನಿಸಬಹುದು, ಏಕೆಂದರೆ ಅವರು ತಮ್ಮ ಮೂಲ ಆಸೆಗಳು ಮತ್ತು ಭಾವನೆಗಳನ್ನು ಹೊರಗೆ ತೋರಿಸುವುದಿಲ್ಲ" ಎಂದು ಕೋವಾಚ್ ಹೇಳುತ್ತಾರೆ.


ಕುಂಭ ರಾಶಿ


ಇವರು ಹೊಸ ಹೊಸ ಆವಿಷ್ಕಾರ ಮಾಡುವವರು ಮತ್ತು ಬುದ್ಧಿಜೀವಿಗಳು ಆಗಿರುವುದರ ಜೊತೆಗೆ ತಮ್ಮ ಮನಸ್ಸಿನಲ್ಲಿ ತುಂಬಾನೇ ರಹಸ್ಯ ವಿಷಯಗಳನ್ನು ಇಟ್ಟುಕೊಂಡಿರುವವರಾಗಿರುತ್ತಾರೆ ಅಂತ ಹೇಳಬಹುದು. ಅವರು ಮುಂದಿನ ಕ್ಷಣದಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದರ ಬಗ್ಗೆ ನಿಮಗೆ ಊಹಿಸಲು ತುಂಬಾನೇ ಕಷ್ಟವಾಗಬಹುದು.


"ಪ್ರತಿಯೊಬ್ಬರೂ ಅವರನ್ನು ನಂಬುತ್ತಾರೆ, ಏಕೆಂದರೆ ಅವರು ತುಂಬಾ ದಯೆ ಮತ್ತು ತಿಳುವಳಿಕೆಯನ್ನು ಹೊಂದಿರುವವರಾಗಿರುತ್ತಾರೆ" ಎಂದು ಪ್ರಸಿದ್ಧ ಜ್ಯೋತಿಷಿ ಇನ್ಬಾಲ್ ಹೊನಿಗ್ಮನ್ ಹೇಳುತ್ತಾರೆ. ಅವರು ಈ ರಹಸ್ಯಗಳನ್ನು ಕಾಪಾಡಿಕೊಳ್ಳುವುದರಲ್ಲಿ ತುಂಬಾನೇ ನಿಸ್ಸೀಮರು ಅಂತ ಹೇಳಬಹುದು. ಈ ನಡೆ ಬಹುಶಃ ಅನೇಕರಿಗೆ ನಿಗೂಢ ಅಂತ ಅನ್ನಿಸಬಹುದು.


ವೃಶ್ಚಿಕ ರಾಶಿ


ವೃಶ್ಚಿಕ ರಾಶಿಗೆ ಸಂಬಂಧಿಸಿದ ಒಂದು ಮುಖ್ಯವಾದ ಗುಣಲಕ್ಷಣವಿದ್ದರೆ, ಅದು ನಿಗೂಢತೆ ಅಂತ ಹೇಳಬಹುದು. "ಈ ರಾಶಿಚಕ್ರ ಚಿಹ್ನೆಯನ್ನು ಪ್ಲುಟೊ ಆಳುತ್ತದೆ, ಇದು ರಹಸ್ಯ ಮತ್ತು ಗುಪ್ತ ಸತ್ಯಗಳ ಗ್ರಹವಾಗಿದೆ" ಎಂದು ಕೊವಾಚ್ ಹೇಳುತ್ತಾರೆ.


ಆ ಕಾರಣದಿಂದಾಗಿ "ವೃಶ್ಚಿಕ ರಾಶಿಯವರು ತಮ್ಮ ಮನಸ್ಸಿನಲ್ಲಿರುವ ನಿಜವಾದ ಆಸೆಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಎಂದಿಗೂ ಬಿಟ್ಟುಕೊಡದೆ ಇತರರ ಮನಸ್ಸಿನಲ್ಲಿ ಇರುವ ಉದ್ದೇಶಗಳು ಮತ್ತು ವಿಷಯಗಳನ್ನು ಕಂಡು ಹಿಡಿಯಲು ಇಷ್ಟಪಡುತ್ತಾರೆ" ಎಂದು ಅವರು ಹೇಳುತ್ತಾರೆ.


ಇದನ್ನೂ ಓದಿ: ನಿಮ್ಮ ಮನೆಯ ಮುದ್ದುಲಕ್ಷ್ಮಿಗೆ ಈ ದೇವಿಯ ಹೆಸರು ಬಹಳ ಸೂಕ್ತವಂತೆ


"ನೀವು ವೃಶ್ಚಿಕ ರಾಶಿಯವರಿಗೆ ಯಾವುದಾದರೂ ರಹಸ್ಯ ವಿಷಯಗಳನ್ನು ಹೇಳಿದರೆ, ಅವರು ಅದನ್ನು ಯಾರ ಮುಂದೆಯೂ ಬಾಯಿ ಬಿಡುವುದಿಲ್ಲ. ಈ ರಾಶಿಯಲ್ಲಿ ಹುಟ್ಟಿದ ಜನರು ಯಾವುದೇ ಸಮಯದಲ್ಲಿ ಬೇಕಾದರೂ ತಮ್ಮ ಸಂಬಂಧಗಳು ಅಥವಾ ಸ್ನೇಹವನ್ನು ಹಾಳು ಮಾಡಿಕೊಳ್ಳಲು ತಯಾರಾಗಿರುತ್ತಾರೆ, ಆದರೆ ರಹಸ್ಯ ಬಿಟ್ಟು ಕೊಡುವುದಿಲ್ಲ" ಎಂದು ಕೊವಾಚ್ ಹೇಳುತ್ತಾರೆ.

top videos
    First published: