Chanakya: ಚಾಣಕ್ಯ ಯಾರು..? ದ್ವೇಷದಿಂದಲೇ ಸಾಮ್ರಾಜ್ಯವನ್ನು ನಿರ್ನಾಮ ಮಾಡಿ ಮತ್ತೊಂದು ಸಾಮ್ರಾಜ್ಯ ನಿರ್ಮಿಸಿದ ಕಥೆ ಗೊತ್ತಾ?

Story Of Chanakya: ಚಾಣಕ್ಯನ ವೇಷಭೂಷಣ, ರೂಪ ನೋಡಿ ಧನನಂದನು ಚಾಣಕ್ಯರನ್ನ ಅವಮಾನಿಸಿದ.. ಇದರಿಂದ ರೊಚ್ಚಿಗೆದ್ದ ಚಾಣಕ್ಯರು ನಂದ ಸಾಮ್ರಾಜ್ಯವನ್ನು ನಿರ್ನಾಮ ಮಾಡಿ ಹೊಸ ಸಾಮ್ರಾಜ್ಯ ಸ್ಥಾಪನೆ ಮಾಡುವ ಪ್ರತಿಜ್ಞೆ ಮಾಡಿದ್ದರು.

ಚಾಣಕ್ಯ

ಚಾಣಕ್ಯ

 • Share this:
  ಆಚಾರ್ಯ ಚಾಣಕ್ಯನನ್ನು(Chanakya) ಕೌಟಿಲ್ಯ,(Kautilya) ವಿಷ್ಣು ಗುಪ್ತ(Vishnu Gupta) ಮತ್ತು ವಾತ್ಸಾಯನ ಎಂದು ಕರೆಯಲಾಗುತ್ತದೆ. ಅರ್ಥಶಾಸ್ತ್ರದ(Economics) ಮೂಲಕ, ಚಾಣಕ್ಯ ನೀತಿಯ ಮೂಲಕ ಇಂದು ವಿಶ್ವಪ್ರಸಿದ್ಧ(World Famous). ಪ್ರತಿಯೊಂದು ವಿಷಯವನ್ನು ಅನುಸರಿಸಿ ಇಂದು ಎಷ್ಟೋ ಜನ ರಾಜಕಾರಣಿಗಳು ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿಯೇ ವಿಶ್ವದಲ್ಲೇ ಮಹಾನ್ ರಾಜಕಾರಣಿ(Politician) ಅಂತಲೂ ಚಾಣಕ್ಯರನ್ನೇ ಬಿಂಬಿಸಲಾಗುತ್ತದೆ. ತನ್ನ ನಿಪುಣತೆ, ರಾಜತಾಂತ್ರಿಕತೆ ಬುದ್ದಿವಂತಿಕೆ(Intelligence), ಛಲವಂತಿಕೆಯಿಂದ, ತನಗೆ ನಂದ ವಂಶದವರು ಮಾಡಿದ ಅಪಮಾನಕ್ಕೆ ಯಾವ ರೀತಿ ಚಾಣಕ್ಯ ಸೇಡು ತೀರಿಸಿಕೊಂಡಿದ್ದರು ಅನ್ನೋದು ಇತಿಹಾಸದ(History) ಪುಟಗಳಲ್ಲಿ ದಾಖಲಾಗಿದೆ. ಅಷ್ಟಕ್ಕೂ ಚಾಣಕ್ಯ ನಂದ ವಂಶದ ಮೇಲೆ ಸೇಡು ತೀರಿಸಿಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆ ಇತಿಹಾಸ ಓದಿದವರಿಗೆ ಗೊತ್ತು.. ಇತಿಹಾಸ ತಿಳಿಯದವರಿಗೆ ನಾವು ಚಾಣಕ್ಯ ಯಾಕೆ ನಂದ ವಂಶದ ಮೇಲೆ ದ್ವೇಷ ತೀರಿಸಿಕೊಂಡು ಮೌರ್ಯ ಸಾಮ್ರಾಜ್ಯ ಉಗಮಕ್ಕೆ ಕಾರಣವಾದರೂ ಎನ್ನುವ ಬಗ್ಗೆ ಮಾಹಿತಿ ನೀಡಿದ್ದೇವೆ.

  ಚಾಣಕ್ಯ ಯಾರು..?

  ಚಾಣಕ್ಯನ ಜೀವನ ಚರಿತ್ರೆಯ ಒಬ್ಬೊಬ್ಬರು ಒಂದೊಂದು ರೀತಿ ಉಲ್ಲೇಖಿಸಿದ್ದಾರೆ.. ಕಾಶ್ಮೀರಿ ಉಲ್ಲೇಖ ಒಂದುಕಡೆಯಾದರೆ ಬೌದ್ಧರ ಉಲ್ಲೇಖ ಹಾಗೂ ಮುದ್ರಾರಾಕ್ಷಸನ ಕೃತಿಗಳಲ್ಲಿ ಚಾಣಕ್ಯ ಹೇಗೆ ನಂದವಂಶ ನಿರ್ನಾಮ ಮಾಡಿ, ಮೌರ್ಯ ಸಾಮ್ರಾಜ್ಯ ಸ್ಥಾಪನೆಗೆ ಕಾರಣವಾದ ಎನ್ನುವುದನ್ನು ಬೇರೆ ಬೇರೆ ರೀತಿಯಾಗಿ ಉಲ್ಲೇಖಿಸಲಾಗಿದೆ. ಬೌದ್ಧ ಧರ್ಮದ ಉಲ್ಲೇಖದ ಪ್ರಕಾರ ಚಾಣಕ್ಯ ಯಾರು..?  ಯಾಕೆ ನಂದವಂಶದ ಮೇಲೆ ಸೇಡು ತೀರಿಸಿಕೊಂಡ ನೀಡುವ ಬಗ್ಗೆ ಮಾಹಿತಿ ಇಲ್ಲಿದೆ..

  ಇದನ್ನೂ ಓದಿ: ಹೊಸ ವರ್ಷ ಆರಂಭಕ್ಕೂ ಮುನ್ನ ಚಾಣಕ್ಯನ ನೀತಿಶಾಸ್ತ್ರದ ಈ ಮಾತುಗಳು ನೆನೆಪಿರಲಿ

  ಕ್ರಿಸ್ತಪೂರ್ವ 371ನೇ ಚಣಕ ಎಂಬ ಹಳ್ಳಿಯಲ್ಲಿ ಚಾಣಕ್ಯನ ಜನನವಾಯಿತು.ಚಾಣಕ್ಯನ ಬಾಲ್ಯದಿಂದಲೇ ಅತ್ಯಂತ ಬುದ್ದಿವಂತರಾಗಿದ್ದರು . ಇದೇ ಬುದ್ದಿವಂತಿಯನ್ನ ಗಮನಿಸಿದ್ದ ಅವರ ತಂದೆ ಅದೇ ಊರಿನಲ್ಲಿ ತಕ್ಷಶಿಲಾ ಗುರುಕುಲಕ್ಕೆ ಚಾಣಾಕ್ಯರನ್ನ ಸೇರಿಸಿದ್ದರು. ಬಳಿಕ ವಿದ್ಯಾಭ್ಯಾಸ ಮುಗಿಸಿದ ಚಾಣಕ್ಯ ಅಲ್ಲೇ ಶಿಕ್ಷಕರಾಗಿಯೂ ಕೆಲಸ ಮಾಡಿದ್ದರು. ಚಾಣಕ್ಯರ ಸಮಯದಲ್ಲಿ ಪಾಟಲಿಪುತ್ರವೆಂಬ ಸ್ಥಳವಿತ್ತು.  ಅಲ್ಲಿ ಬ್ರಾಹ್ಮಣರಿಗಾಗಿ ಮಗಧ ಸಾಮ್ರಾಜ್ಯದ ರಾಜ ಧನನಂದನು ಔತಣಕೂಟ ಆಯೋಜನೆ ಮಾಡಿದ್ದರು.ಔತಣಕೂಟದಲ್ಲಿ ಭಾಗಿಯಾಗಲು ಆಚಾರ್ಯ ಚಾಣಕ್ಯ ಕೂಡ ತೆರಳಿದ್ದರು. ಆದ್ರೆ ಚಾಣಕ್ಯನ ವೇಷಭೂಷಣ ರೂಪ ನೋಡಿ ಧನನಂದನು ಚಾಣಕ್ಯರನ್ನ ಅವಮಾನಿಸಿದ.. ಇದರಿಂದ ರೊಚ್ಚಿಗೆದ್ದ ಚಾಣಕ್ಯರು ನಂದ ಸಾಮ್ರಾಜ್ಯವನ್ನು ನಿರ್ನಾಮ ಮಾಡಿ ಹೊಸ ಸಾಮ್ರಾಜ್ಯ ಸ್ಥಾಪನೆ ಮಾಡುವ ಪ್ರತಿಜ್ಞೆ ಮಾಡಿದ್ದರು. ಆಗ ಧನನಂದನು ಚಾಣಕ್ಯನ ಬಂಧಿಸುವಂತೆ ತನ್ನ ಸೈನಿಕರಿಗೆ ಆದೇಶ ನೀಡಿದನು. ಆದರೆ ಚಾಣಕ್ಯ ಅಲ್ಲಿಂದ ತಪ್ಪಿಸಿಕೊಂಡು ಮಾರುವೇಷದಲ್ಲಿ ಪಾಟಲಿಪುತ್ರ ಹಾಗೂ ಮಗಧದ ಸುತ್ತಮುತ್ತ ಓಡಾಡತೊಡಗಿದರು.

  ಚಾಣಕ್ಯನ ಕಣ್ಣಿಗೆ ಬಿದ್ದ ಚಂದ್ರಗುಪ್ತ..

  ಮಗಧ ಸುತ್ತಮುತ್ತ ತಲೆಮರೆಸಿಕೊಂಡು ನಂದಾ ವಂಶವನ್ನು ನಿರ್ನಾಮ ಮಾಡುವ ಸೂಕ್ತ ವ್ಯಕ್ತಿಗಾಗಿ ಚಾಣಕ್ಯ ಹುಡುಕಾಡುವಾಗ ಆತನ ಕಣ್ಣಿಗೆ ಚಂದ್ರಗುಪ್ತ ಬೀಳುತ್ತಾನೆ.. ಚಂದ್ರಗುಪ್ತನ ತಂದೆ ತಾಯಿಗೆ ಒಂದು ಸಾವಿರ ಚಿನ್ನದ ನಾಣ್ಯ ನೀಡಿ ಚಾಣಕ್ಯ ಚಂದ್ರಗುಪ್ತ ನನ್ನ ತನ್ನೊಂದಿಗೆ ಕರೆದುಕೊಂಡು ಹೋಗುತ್ತಾನೆ.. ಆತನನ್ನ ಕಾಡಿಗೆ ಕರೆದುಕೊಂಡು ಹೋಗಿ ಆತನಿಗೆ ಸಕಲ ಯುದ್ದಕಲೆಗಳನ್ನು ರಾಜನೀತಿ ಕಲಿಸಿ ಕೊಡುತ್ತಾನೆ. ಇತ್ತ ಚಂದ್ರಗುಪ್ತನಿಗೆ ಯುದ್ದಕಲೆಗಳನ್ನು ಕಲಿಸಿಕೊಡುವುದರ ಜೊತೆಗೆ ಚಾಣಕ್ಯ ಸಣ್ಣಪುಟ್ಟ ಸೈನ್ಯಗಳನ್ನು ಕಟ್ಟಿ ಮಗಧದ ರಾಜಧಾನಿ ಪಾಟಲಿಪುತ್ರ ಮೇಲೆ ದಾಳಿ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾನೆ..

  ಪಾಟಲಿಪುತ್ರದ ಮೇಲೆ ಚಾಣಕ್ಯನ ದಾಳಿ..

  ಸಣ್ಣಪುಟ್ಟ ಸೈನ್ಯದೊಂದಿಗೆ ಚಂದ್ರಗುಪ್ತನ ಜೊತೆ ಸೇರಿ ಮಗಧದ ರಾಜಧಾನಿಯಾಗಿದ್ದ ಪಾಟಲಿಪುತ್ರದ ಮೇಲೆ ಚಾಣಕ್ಯ ದಾಳಿ ಮಾಡುತ್ತಾನೆ.. ಆದರೆ ನಂದರ ಸೈನ್ಯದ ಮುಂದೆ ಚಾಣಕ್ಯನ ಸಣ್ಣ ಸೈನ್ಯ ಚೆಲ್ಲಾಪಿಲ್ಲಿಯಾಗುತ್ತದೆ.
  ಹೀಗಾಗಿ ಚಂದ್ರಗುಪ್ತ ಹಾಗೂ ಚಾಣಕ್ಯ ತಲೆಮರೆಸಿಕೊಂಡು ಮತ್ತೆ ಸೈನ್ಯ ಕಟ್ಟಲು ಓಡಾಡುತ್ತಿರುತ್ತಾರೆ.. ಹೀಗೆ ಒಂದು ದಿನ ಸೈನ್ಯ ಕಟ್ಟಲು ತಲೆ ತಲೆಮರೆಸಿಕೊಂಡು ಓಡಾಡುವಾಗ ತಾಯಿಯೊಬ್ಬಳು ತನ್ನ ಮಗನಿಗೆ ಚಾಣಕ್ಯ ರಂತೆ ಆತುರಕ್ಕೆ ಬಿಳಬೇಡ ಎಂದು ಬುದ್ಧಿ ಹೇಳುವುದನ್ನು ಕೇಳಿಸಿಕೊಂಡ ಚಾಣಕ್ಯ, ಆತುರಕ್ಕೆ ಬಿದ್ದು ಪಾಟಲಿಪುತ್ರದ ಮೇಲೆ ದಾಳಿ ಮಾಡಿದ್ದು ತಪ್ಪು ಎಂದು ಅರಿತುಕೊಳ್ಳುತ್ತಾನೆ..

  ಮಗಧ ಸಾಮ್ರಾಜ್ಯದ ಗಡಿ ವಶ..

  ತನ್ನ ತಪ್ಪಿನ ಅರಿವಾಗಿ ಮಗಧ ಸಾಮ್ರಾಜ್ಯದ ಸುತ್ತಮುತ್ತ ಇರುವ ಗಡಿಭಾಗದ ಪ್ರದೇಶಗಳ ಸಹ ಚಾಣಕ್ಯ ವಶಪಡಿಸಿಕೊಳ್ಳುತ್ತಾನೆ.. ನಿಧಾನವಾಗಿ ನಂದ ಸಾಮ್ರಾಜ್ಯದ ಮೇಲೆ ದ್ವೇಷ ಸಾಧಿಸುತ್ತಿರುವ ರಾಜರುಗಳ ಜೊತೆ ಮೈತ್ರಿ ಬೆಳೆಸಿ ಬೃಹತ್ ಸೈನ್ಯ ಸ್ಥಾಪನೆ ಮಾಡುತ್ತಾರೆ.. ಜೊತೆಗೆ ಚಾಣಕ್ಯನ ಜೊತೆ ಕೈಜೋಡಿಸಿದವರನ್ನ ವಿಷಕನ್ಯೆಯರ ಮೂಲಕ ಕೊಲ್ಲಿಸಿ ಸಾಮ್ರಾಜ್ಯವನ್ನ ವಶಕ್ಕೆ ಪಡೆದುಕೊಳ್ಳುತ್ತಾರೆ..

  ಇದನ್ನೂ ಓದಿ: ದಾನದಲ್ಲಿ ಯಾವುದು ಶ್ರೇಷ್ಠ? ಯಾವ ದಾನದಿಂದ ಯಾವ ಫಲ; Chanakya Niti ಹೇಳುವುದೇನು?

  ಮತ್ತೆ ಪಾಟಲಿಪುತ್ರದ ಮೇಲೆ ಚಾಣಕ್ಯನ ದಾಳಿ..

  ಅನೇಕ ರಾಜರ ಬೆಂಬಲ ಹಾಗೂ ಬೃಹತ್ ಸೈನ್ಯದೊಂದಿಗೆ ಚಂದ್ರಗುಪ್ತನ ಜೊತೆ ಚಾಣಕ್ಯ ಎರಡನೇ ಭಾರಿಗೆ ಮಗಧ ಸಾಮ್ರಾಜ್ಯದ ರಾಜಧಾನಿ ಪಾಟಲಿಪುತ್ರ ಮೇಲೆದಾಳಿ ಮಾಡುತ್ತಾನೆ.. ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾಗುವ ಚಾಣಕ್ಯ ತನ್ನ ಪ್ರತಿಜ್ಞೆಯಂತೆ ನಂದ ವಂಶದ ದೊರೆ ಧನನಂದನನ್ನನ್ನು ಹತ್ಯೆ ಮಾಡಿ ಮಗಧ ಸಾಮ್ರಾಜ್ಯದ ದೊರೆಯಾಗಿ ಚಂದ್ರಗುಪ್ತ ಮೌರ್ಯ ನನ್ನ ಕೂರಿಸುತ್ತಾರೆ.. ಹೀಗೆ ಚಂದ್ರಗುಪ್ತ ನನ್ನ ಮೌರ್ಯ ಸಾಮ್ರಾಜ್ಯದ ಅಧಿಪತಿಯನ್ನಾಗಿ ಮಾಡುವ ಚಾಣಕ್ಯರು ಚಂದ್ರಗುಪ್ತನಿಗೆ ಪ್ರಧಾನಿಯಾಗಿ ಆತನ ಆಳ್ವಿಕೆಗೆ ಸಹಾಯ ಮಾಡುತ್ತಾರೆ.. ಚಂದ್ರಗುಪ್ತನ ಬಳಿಕ ಆತನ ಮಗ ಬಿಂದುಸಾರನ ಕೂಡ ಚಾಣಕ್ಯರು ಪ್ರಧಾನಮಂತ್ರಿಯಾಗಿ ಆತನ ಆಳ್ವಿಕೆಗೆ ನೆರವಾಗುತ್ತಾರೆ.. ಇನ್ನು ಉತ್ತಮ ಆಡಳಿತ ಚತುರರಾಗಿ, ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿ ಜೀವನಕ್ಕೆ ಉತ್ತಮ ತಿಳುವಳಿಕೆಗಳನ್ನು ನೀಡುವ ಮಹಾನ್ ಚೇತನವಾಗಿ ಇತಿಹಾಸದ ಪುಟದಲ್ಲಿ ದಾಖಲಾಗಿದ್ದಾರೆ..
  Published by:ranjumbkgowda1 ranjumbkgowda1
  First published: