Maha Shivaratri: ಒಡಿಶಾದಲ್ಲಿದೆ ವಿಸ್ಮಯಕಾರಿ ಗುಪ್ತೇಶ್ವರ ಶಿವನ ದೇವಾಲಯ.. ಇಲ್ಲಿ ಪೂಜಿಸಿದ್ರೆ ಇಷ್ಟಾರ್ಥಗಳು ಸಿದ್ಧಿಸುತಂತೆ!

ಲಕ್ಷಾಂತರ ಭಕ್ತರು ಒಡಿಶಾದ ಗುಪ್ತೇಶ್ವರ ದೇವಸ್ಥಾನಕ್ಕೆ ಬಂದು ಶಿವನ ದರ್ಶನವನ್ನು ಪಡೆಯುತ್ತಾರೆ. ಶಬರಿ ನದಿ ಹಾಗೂ ಚಾಪೆಯ ಸೇತುವೆ ದಾಟಿದ ನಂತರ ಶಿವನ ದರ್ಶನವಾಗುತ್ತದೆ.

ಶಬರಿ ನದಿ ದಂಡೆಯ ಮೇಲೆ ಚಾಪೆಯ ಸೇತುವೆ

ಶಬರಿ ನದಿ ದಂಡೆಯ ಮೇಲೆ ಚಾಪೆಯ ಸೇತುವೆ

 • Share this:
  ಇಂದು ಮಹಾ ಶಿವರಾತ್ರಿ (Maha Shivaratri). ಭಗವಂತ ಶಿವನ (God Shiva) ಭಕ್ತರು, ಶಿವ ದೇವಾಲಯ (Shiva Temple), ಗುಹೆ, ಜ್ಯೋತಿರ್ಲಿಂಗಗಳಿಗೆ ತೆರಳಿ ಮಹಾ ಪೂಜೆ ಸಲ್ಲಿಸುತ್ತಾರೆ. ಮೂಲೆ ಮೂಲೆಗಳಿಂದ ಜನರು ಪವಿತ್ರ (Holy) ಹಾಗೂ ತೀರ್ಥ ಕ್ಷೇತ್ರಗಳಿಗೆ ತೆರಳಿ ಶಿವನ ದರ್ಶನ ಪಡೆಯುತ್ತಾರೆ. ಇಲ್ಲೊಂದು ಶಿವನ ದೇವಾಲಯಕ್ಕೆ ತೆರಳಬೇಕಾದರೆ ನದಿಯನ್ನು (River) ದಾಟಬೇಕು. ನದಿಯನ್ನು ದಾಟಲು ನಿರ್ಮಾಣ ಮಾಡಿರುವ ಚಾಪೆಯ ಸೇತುವೆ (Mat Bridge)ಯನ್ನು ದಾಟಬೇಕು. ನಂತರ ಮಹಾದೇವನ ದರ್ಶನ ಸಿಗುತ್ತದೆ. ಲಕ್ಷಾಂತರ ಜನರು ದೂರ ದೂರುಗಳಿಂದ ಇಲ್ಲಿಗೆ ಬಂದು ಮಹಾದೇವನ ದರ್ಶನ ಪಡೆದು ಪುನೀತರಾಗುತ್ತಾರೆ. ಒಡಿಶಾದ ಗುಪ್ತೇಶ್ವರ ದೇವಾಲಯದ ಮಾರ್ಗವು ಮನಮೋಹಕವಾಗಿದೆ. ಭಗವಂತ ಶಿವನ ದರ್ಶನ ಪಡೆಯಲು ಬರುವ ಭಕ್ತಾದಿಗಳು ಈ ವಿಶೇಷ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.

  ಒಡಿಶಾದ ಗುಪ್ತೇಶ್ವರ ಶಿವನ ದೇವಾಲಯ

   ಒಡಿಶಾದ ಗುಪ್ತೇಶ್ವರ ಶಿವನ ದೇವಾಲಯಕ್ಕೆ ಬರಲು ಜಗದಲ್‌ಪುರದಿಂದ ತಿರಿಯಾದ ಕೋಲಾಬ್ ನದಿಯ ದಡಕ್ಕೆ ಕಾರಿನಲ್ಲಿ ಹೋಗಬೇಕು. ಇದಾದ ನಂತರ ಉಕ್ಕಿ ಹರಿಯುವ ನದಿಯ ಮೇಲೆ ಚಾಪೆಯಿಂದ ಮಾಡಿದ ತಾತ್ಕಾಲಿಕ ಸೇತುವೆಯನ್ನು ಕಾಲ್ನಡಿಗೆಯಲ್ಲಿ ದಾಟಬೇಕು. ಚಾಪೆಯ ತೆಳ್ಳಗಿನ ಸೇತುವೆಯನ್ನು ದಾಟಿದ ನಂತರ ಅಲ್ಲಿ ಮಹಾದೇವನ ದರ್ಶನ ಲಭಿಸುತ್ತದೆ. ಇಲ್ಲಿಗೆ ಲಕ್ಷಾಂತರ ಭಕ್ತರು ದೂರ ದೂರುಗಳಿಂದ ಬರುತ್ತಾರೆ.

  ಮಹಾಶಿವರಾತ್ರಿಯಂದು ಬಸ್ತಾರ್‌ನಿಂದ ಲಕ್ಷಾಂತರ ಭಕ್ತರು ಒಡಿಶಾದ ಗುಪ್ತೇಶ್ವರ ದೇವಸ್ಥಾನಕ್ಕೆ ಬಂದು ಶಿವನ ದರ್ಶನವನ್ನು ಪಡೆಯುತ್ತಾರೆ. ಭಗವಾನ್ ಭೋಲೆನಾಥನ ಶಿವಲಿಂಗವು ನದಿಯನ್ನು ದಾಟಿದ ನಂತರ ಒಡಿಶಾದ ಗುಪ್ತೇಶ್ವರವನ್ನು ತಲುಪಿದ ತಕ್ಷಣ ಗುಹೆಯಲ್ಲಿ ಗೋಚರಿಸುತ್ತದೆ. ಶಿವಲಿಂಗದ ದರ್ಶನದಿಂದ ಮಾತ್ರ ಅದ್ಭುತವಾದ ಶಾಂತಿ, ನೆಮ್ಮದಿ ಸಿಗುತ್ತದೆ ಮತ್ತು ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ.

  ಇದನ್ನೂ ಓದಿ: ಅತಿ ಎತ್ತರದ ಶಿವನ ಪ್ರತಿಮೆಗಳು ಇವು; ಎಲ್ಲಿವೆ ಗೊತ್ತಾ?

  ರೋಮಾಂಚನಕಾರಿ ಗುಪ್ತೇಶ್ವರದ ಪ್ರಯಾಣ

  ನಗರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಗುಪ್ತೇಶ್ವರದ ಪ್ರಯಾಣವು ತುಂಬಾ ರೋಮಾಂಚನಕಾರಿಯಾಗಿದೆ. ಮೊದಲು ಜಗದಲ್‌ಪುರದಿಂದ ಒಡಿಶಾ ಗಡಿ ಧನಪುಂಜಿ ತಲುಪಿ ಇಲ್ಲಿಂದ ಮಚ್‌ಕೋಟ್, ತಿರಿಯಾ ಮೂಲಕ ಗುಪ್ತೇಶ್ವರಕ್ಕೆ ಹೋಗಬೇಕು. ಮಚ್ಕೋಟ್ ನಿಂದಲೇ ಅರಣ್ಯ ಪ್ರದೇಶ  ಆರಂಭವಾಗುತ್ತದೆ. ಅದೇ ಸಮಯದಲ್ಲಿ, ತಿರಿಯಾದಿಂದ 12 ಕಿಮೀ ದೂರದಲ್ಲಿ ಗುಪ್ತೇಶ್ವರ ಮಹಾದೇವನ ದರ್ಶನವಾಗುತ್ತದೆ.

  ಇಲ್ಲಿನ ರೋಚಕ ಪ್ರಯಾಣವು ತಿರಿಯಾದಿಂದ ಪ್ರಾರಂಭವಾಗುತ್ತದೆ. ರಸ್ತೆಯ ಎರಡೂ ಬದಿಗಳಲ್ಲಿ ದಟ್ಟಡವಿ. ಕಿರಿದಾದ ರಸ್ತೆಗಳು ಮತ್ತು ದಟ್ಟವಾದ ಸಾಲ್-ಟೀಕ್ ಕಾಡು ನೋಡಬಹುದು. ಇಲ್ಲಿ ಸೂರ್ಯನ ಬೆಳಕು ಕೂಡ ಹೆಚ್ಚು ತಲುಪುವುದಿಲ್ಲ. 12 ಕಿಲೋಮೀಟರ್‌ಗಳ ಈ ರೋಮಾಂಚನಕಾರಿ ಪ್ರಯಾಣದ ನಂತರ, ಬಂಡೆಗಳ ಮೇಲೆ ಶಬರಿ ನದಿಯು ಗರ್ಜಿಸುತ್ತದೆ.

  ಶಬರಿ ನದಿ ದಂಡೆಯ ಮೇಲೆ ಚಾಪೆಯ ಸೇತುವೆ

  ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳ ಮೂಲಕವೂ ಇಲ್ಲಿಗೆ ಪ್ರಯಾಣಿಸಬಹುದು. ಶಬರಿ ನದಿಯ ಬೃಹತ್ ಬಂಡೆಗಳ ಮೇಲೆ ಬಿದಿರಿನ ಚಾಪೆಯಿಂದ ನಿರ್ಮಿಸಿದ ಸೇತುವೆ ದಾಟುವುದೇ ರೋಮಾಂಚನಕಾರಿ. ನದಿಯ ಬಂಡೆಗಳು ಮುಳ್ಳು ಮತ್ತು ಚೂಪಾದ ಕಲ್ಲಿನಿಂದ ಕೂಡಿವೆ. ಬೂಟುಗಳು ಮತ್ತು ಚಪ್ಪಲಿಗಳಿಲ್ಲದೆ ನದಿ ದಾಟಲು ಸಾಧ್ಯವಿಲ್ಲ.

  ಶಬರಿ ನದಿ ಮತ್ತು ಬೆಟ್ಟದ ಮೇಲೆ ಸುಮಾರು ಒಂದರಿಂದ ಒಂದೂವರೆ ಕಿ.ಮೀ ದೂರ ಕ್ರಮಿಸಿದ ನಂತರ ಗುಪ್ತೇಶ್ವರ ಬೆಟ್ಟದ ಆಕರ್ಷಕ ನೋಟ ಕಂಡು ಬರುತ್ತದೆ.

  ಗುಹೆಯೊಳಗೆ ದೈತ್ಯ ಗುಪ್ತೇಶ್ವರ ಮಹಾದೇವನ ಶಿವಲಿಂಗ

  ಇಲ್ಲಿ ಗುಹೆಯೊಳಗೆ ದೈತ್ಯ ಗುಪ್ತೇಶ್ವರ ಮಹಾದೇವನ ಶಿವಲಿಂಗವಿದೆ. ಗುಪ್ತೇಶ್ವರ ಮಹಾದೇವನನ್ನು ಭೇಟಿ ಮಾಡಲು, ಶಿವರಾತ್ರಿ ಮತ್ತು ಬೇಸಿಗೆ ಕಾಲದಲ್ಲಿ ಮಾತ್ರ ಈ ಮಾರ್ಗದಲ್ಲಿ ಹೋಗಬಹುದು. ಅದೇ ಸಮಯದಲ್ಲಿ, ಒಡಿಶಾದ ಜೈಪುರದಿಂದ ಸುಮಾರು 60 ಕಿ.ಮೀ ದೂರವನ್ನು ಕ್ರಮಿಸಿದರೆ ಗುಪ್ತೇಶ್ವರವನ್ನು ತಲುಪಬಹುದು.

  ಇದನ್ನೂ ಓದಿ: Mahashivratriಯಂದು ಶಿವನನ್ನು ಈ ರೀತಿ ಪೂಜಿಸಿದ್ರೆ; ಹಣದ ಸಮಸ್ಯೆ ದೂರ

  ಜಾತ್ರೆಯ ಸಂಭ್ರಮ ಸಿಂಗಾರಗೊಂಡ ಅಂಗಡಿಗಳು

  ವರ್ಷವಿಡೀ ಗುಪ್ತೇಶ್ವರಕ್ಕೆ ಸಾಕಷ್ಟು ಭಕ್ತರು ಭೇಟಿ ನೀಡುತ್ತಿದ್ದರೂ ಲಕ್ಷಾಂತರ ಜನರು ಬೇರೆ ರಾಜ್ಯಗಳಿಂದಲೂ ಬರುತ್ತಾರೆ. ಆದರೆ ಮಹಾಶಿವರಾತ್ರಿಯಂದು ಲಕ್ಷಾಂತರ ಭಕ್ತರು ಬರುತ್ತಾರೆ. ಪ್ರತಿ ವರ್ಷ ಶಿವರಾತ್ರಿಯಂದು ನಾಲ್ಕು ದಿನಗಳ ಜಾತ್ರೆ ನಡೆಯುತ್ತದೆ. ಈ ಬಾರಿಯೂ ಶಬರಿ ನದಿಯ ಇಕ್ಕೆಲಗಳಲ್ಲಿ ಜಾತ್ರೆಗೆ ಅಂಗಡಿಗಳು ಸಿಂಗಾರಗೊಂಡಿವೆ.

  ಮಹಾಶಿವರಾತ್ರಿಯಂದು ಒಡಿಶಾ, ಛತ್ತೀಸ್‌ಗಢ ಮತ್ತು ಇತರ ರಾಜ್ಯಗಳಿಂದ ಪ್ರತಿ ವರ್ಷ ಒಂದರಿಂದ ಒಂದೂವರೆ ಲಕ್ಷ ಭಕ್ತರು ದರ್ಶನಕ್ಕೆ ಬರುತ್ತಾರೆ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.
  Published by:renukadariyannavar
  First published: