Astrology: ಗುಟ್ಟಾಗಿ ಒಬ್ಬರನೊಬ್ಬರು ಲವ್ ಮಾಡುವ ರಾಶಿಗಳು ಇವಂತೆ - ನಿಮ್ಮದು ಇದಿಯಾ ನೋಡಿ

Zodiac Sign: ವೃಷಭ ರಾಶಿಯವರು ದೊಡ್ಡ ಕನಸುಗಳನ್ನು ಕಂಡರೆ, ಮಕರ ರಾಶಿಯವರು ಹೆಚ್ಚು ಪ್ರಾಯೋಗಿಕ ಮತ್ತು ವಾಸ್ತವಿಕವಾಗಿರುತ್ತಾರೆ. ಅವರು ಪರಸ್ಪರರನ್ನು ಚೆನ್ನಾಗಿ ಸಮತೋಲನಗೊಳಿಸುತ್ತಾರೆ. ಅವರು ರಹಸ್ಯವಾಗಿ ಪರಸ್ಪರ ಇಷ್ಟಪಟ್ಟರೆ ಅದು ಆಶ್ಚರ್ಯಕರವಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಇಷ್ಟಪಟ್ಟವರು (Loved Ones) ಯಾರಾದರೂ ಇರಲಿ, ಅವರು ನಿಮ್ಮನ್ನು ಇಷ್ಟಪಡುತ್ತಾರೆಯೇ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳುವುದು ತುಂಬಾನೇ ಕಷ್ಟದ ಕೆಲಸ ಎಂದು ಹೇಳಬಹುದು. ಏಕೆಂದರೆ ಬಾಯಿ ಬಿಟ್ಟು ‘ನೀವು ನನ್ನನ್ನು ಇಷ್ಟ ಪಡುತ್ತೀರಾ’ ಅಂತ ಕೇಳೋದಕ್ಕೂ ಬಹುತೇಕರಿಗೆ ಧೈರ್ಯ ಸಾಲಲ್ಲ, ಹಾಗಂತಾ ಕೆಲವೊಂದು ಸಂಬಂಧದಲ್ಲಿ ತಿಳಿದುಕೊಳ್ಳದೆ ಇರೋದಕ್ಕೂ ಆಗೋದಿಲ್ಲ. ಈ ಪ್ರೀತಿ (Love) ಅನ್ನೋ ವಿಷಯಕ್ಕೆ ಬಂದಾಗ, ನಾವು ಇಷ್ಟ ಪಡುವವವರು ನಮ್ಮನ್ನು ಎಷ್ಟು ಇಷ್ಟಪಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಮತ್ತು ಆಸಕ್ತಿ ಯಾರಿಗೆ ತಾನೇ ಇರುವುದಿಲ್ಲ ಹೇಳಿ. ಇದನ್ನು ತಿಳಿದುಕೊಂಡಾಗಲೇ ನಮ್ಮ ಸಂಬಂಧವು (relationship) ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಯಾರನ್ನೋ ನೋಡಿ ಆಕರ್ಷಿತರಾಗುವುದು ಒಂದು ವಿಷಯವಾದರೆ, ಅವರನ್ನು ನಾವು ಇಷ್ಟಪಡುವುದಕ್ಕೆ ಶುರು ಮಾಡುವುದು ಎರಡನೇ ಹಂತ ಎಂದು ಹೇಳಬಹುದು. ಇದೆಲ್ಲವೂ ಸರಿ, ಆದರೆ ಕಷ್ಟದ ಕೆಲಸ ಎಂದರೆ ನಮ್ಮನ್ನು ಅವರು ಎಷ್ಟು ಇಷ್ಟಪಡುತ್ತಾರೆ ಎಂದು ತಿಳಿದುಕೊಳ್ಳುವುದು ಆಗಿರುತ್ತದೆ.

ನಿಮ್ಮ ಭಾವನೆಗಳನ್ನು ಅವರು ನಿಮ್ಮ ಮುಂದೆ ಹೇಳುವುದಕ್ಕಿಂತಲೂ ಮುಂಚಿತವಾಗಿಯೇ ವ್ಯಕ್ತಪಡಿಸುವುದು ಅತ್ಯುತ್ತಮವಾದ ಮಾರ್ಗವಾಗಿರುತ್ತದೆ. ಹೀಗೆ ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳುವುದಕ್ಕಿಂತಲೂ ನಾವೇ ಅವರನ್ನು ಇಷ್ಟಪಡುತ್ತಿದ್ದೇವೆ ಅಂತ ಒಮ್ಮೆ ಧೈರ್ಯದಿಂದ ಹೇಳುವುದು ಒಳ್ಳೆಯದು ಎಂದು ಕೆಲವರ ಅಭಿಪ್ರಾಯವಾಗಿರುತ್ತದೆ.

ಹೀಗೆ ಗೊಂದಲದಲ್ಲಿರುವ ಅನೇಕ ಜನರಿಗೆ ಸಹಾಯವಾಗಲೆಂದು ಈ ಗುಟ್ಟಾಗಿ ಒಬ್ಬರನ್ನೊಬ್ಬರು ಇಷ್ಟಪಡುವ ಕೆಲವು ರಾಶಿಚಕ್ರ ಚಿಹ್ನೆಗಳ ಜೋಡಿಗಳನ್ನು ಇಲ್ಲಿ ತಿಳಿಸಲಾಗಿದೆ. ಇದರಲ್ಲಿ ನಿಮ್ಮ ಜೋಡಿಯ ರಾಶಿಚಕ್ರ ಚಿಹ್ನೆಗಳು ಇದ್ದರೆ ನಿಮಗೆ ದಾರಿ ಇನ್ನಷ್ಟು ಸುಗಮವಾಗಲಿದೆ.

1. ಮೀನ ಮತ್ತು ಧನು ರಾಶಿ

ಇವರದ್ದು ಒಂದು ಅಸಂಭವ ಜೋಡಿ ಎಂದು ಹೇಳಬಹುದು, ಏಕೆಂದರೆ ಮೀನ ರಾಶಿಯವರು ಅತಿ ಸಂವೇದನಾಶೀಲರಾಗಿರುತ್ತಾರೆ. ಆದರೆ ಧನು ರಾಶಿಯವರು ಸ್ವಾತಂತ್ರ್ಯ, ಪ್ರಯಾಣ ಮತ್ತು ಸಾಹಸದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದವರಾಗಿರುತ್ತಾರೆ.

ಈ ಇಬ್ಬರಲ್ಲೂ ಸಾಮಾನ್ಯವಾಗಿರುವ ವಿಷಯವೆಂದರೆ ತಮ್ಮ ಆಪ್ತರ ಮೇಲಿನ ಅವರ ಪ್ರೀತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅವರಿಬ್ಬರೂ ತುಂಬಾ ಸಂವೇದನಾಶೀಲರು ಮತ್ತು ಪ್ರೀತಿಯನ್ನು ಬಹಳವಾಗಿ ಗೌರವಿಸುತ್ತಾರೆ. ಈ ಇಬ್ಬರೂ ಪರಸ್ಪರರ ಸೃಜನಶೀಲತೆಯನ್ನು ಚೆನ್ನಾಗಿ ಪ್ರಶಂಸಿಸುತ್ತಾರೆ.

ಇದನ್ನೂ ಓದಿ: ಬಲು ಮಹತ್ವಕಾಂಕ್ಷಿಗಳಾಗಿರುತ್ತಾರೆ ಈ ರೇಖೆ ಹೊಂದಿರುವವರು

2. ವೃಷಭ ಮತ್ತು ಮಕರ ರಾಶಿ

ಇವೆರಡೂ ರಾಶಿಯವರು ತಲೆಕೆಳಗಾದ ಮತ್ತು ಪರಸ್ಪರ ವಿರುದ್ಧವಾಗಿವೆ ಎಂದು ಹೇಳಬಹುದು. ಆದರೆ, ವಿರೋಧಗಳು ಯಾವಾಗಲೂ ಆಕರ್ಷಿಸುತ್ತವೆ ಎಂಬ ಮಾತು ಇವರಿಗೆ ಸರಿಯಾಗಿ ಹೊಂದುತ್ತದೆ. ಅವರಿಬ್ಬರೂ ಬಹಳ ಮಹತ್ವಾಕಾಂಕ್ಷೆಯುಳ್ಳವರು ಮತ್ತು ಇಬ್ಬರೂ ಪರಸ್ಪರ ಮೆಚ್ಚುವುದು ಇದನ್ನೇ ಅಂತ ಹೇಳಬಹುದು.

ವೃಷಭ ರಾಶಿಯವರು ದೊಡ್ಡ ಕನಸುಗಳನ್ನು ಕಂಡರೆ, ಮಕರ ರಾಶಿಯವರು ಹೆಚ್ಚು ಪ್ರಾಯೋಗಿಕ ಮತ್ತು ವಾಸ್ತವಿಕವಾಗಿರುತ್ತಾರೆ. ಅವರು ಪರಸ್ಪರರನ್ನು ಚೆನ್ನಾಗಿ ಸಮತೋಲನಗೊಳಿಸುತ್ತಾರೆ. ಅವರು ರಹಸ್ಯವಾಗಿ ಪರಸ್ಪರ ಇಷ್ಟಪಟ್ಟರೆ ಅದು ಆಶ್ಚರ್ಯಕರವಲ್ಲ.

3. ಮೇಷ ಮತ್ತು ಕುಂಭ ರಾಶಿ

ಇವೆರಡೂ ರಾಶಿಚಕ್ರ ಚಿಹ್ನೆಯ ಜನರು ಸಂಪೂರ್ಣವಾಗಿ ವಿರುದ್ಧವಾಗಿರುತ್ತಾರೆ. ಮೇಷ ರಾಶಿಯವರು ಉಗ್ರ ಮತ್ತು ದಂಗೆಯ ವ್ಯಕ್ತಿತ್ವವನ್ನು ಹೊಂದಿದ್ದರೆ, ಕುಂಭ ರಾಶಿಯವರು ಅಂತರ್ಮುಖಿಗಳಾಗಿರುತ್ತಾರೆ.

ಆದರೆ ಅವರಿಬ್ಬರೂ ದುಃಖದಿಂದ ತುಂಬಿದ ಪ್ರಾಪಂಚಿಕ ಜೀವನವನ್ನು ಆಯ್ಕೆ ಮಾಡುವ ಬದಲು ಅಪಾಯಗಳನ್ನು ತೆಗೆದುಕೊಳ್ಳಲು ಬಯಸುತ್ತಾರೆ. ಪರಸ್ಪರರ ಸಹವಾಸದಲ್ಲಿ, ಈ ಇಬ್ಬರೂ ಪ್ರಕಾಶಮಾನವಾಗಿ ಹೊಳೆಯುತ್ತಾರೆ.

4. ಮಿಥುನ ಮತ್ತು ಕರ್ಕಾಟಕ ರಾಶಿ

ಇಡೀ ಗುಂಪಿನಲ್ಲಿ ಮತ್ತೊಂದು ಅನಿರೀಕ್ಷಿತ ಜೋಡಿ ಎಂದರೆ ಇವರದ್ದು ಎಂದು ಹೇಳಬಹುದು, ಮಿಥುನ ಮತ್ತು ಕರ್ಕಾಟಕ ರಾಶಿಯವರು ಉತ್ತಮ ಜೋಡಿಯಾಗುವ ಸಾಧ್ಯತೆಯಿದೆ. ಏಕೆಂದರೆ ಅವರಿಬ್ಬರೂ ಸ್ನೇಹ ಮತ್ತು ಪ್ರೀತಿಯನ್ನು ಹೊಸ ಮಟ್ಟಕ್ಕೆ ಗೌರವಿಸುತ್ತಾರೆ.

ಇದನ್ನೂ ಓದಿ: ಮನೆಯಲ್ಲಿ ಇದೇ ಕಾರಣಕ್ಕೆ ಕುದುರೆ ಲಾಳ ನೇತುಹಾಕುವುದು

ಕರ್ಕಾಟಕ ರಾಶಿಯವರು ಮಿಥುನ ರಾಶಿಯವರಿಗೆ ತಾಳ್ಮೆಯಿಂದ ಮತ್ತು ಆಧಾರವಾಗಿರಬೇಕೆಂದು ಕಲಿಸುತ್ತಾರೆ, ಮಿಥುನ ರಾಶಿಯವರು ಕರ್ಕಾಟಕ ರಾಶಿಯವರಿಗೆ ಸಾಮಾಜಿಕವಾಗಿರುವುದನ್ನು ಮತ್ತು ಬಹಿರ್ಮುಖಿಗಳಾಗಿರುವುದನ್ನು ಕಲಿಸುತ್ತಾರೆ. ಅವರಿಬ್ಬರೂ ಪರಸ್ಪರರ ವ್ಯಕ್ತಿತ್ವಗಳನ್ನು ಪ್ರೀತಿಸುತ್ತಾರೆ ಮತ್ತು ಗುಟ್ಟಾಗಿ ಒಬ್ಬರನ್ನೊಬ್ಬರು ಇಷ್ಟಪಡುತ್ತಾರೆ ಎಂದು ಹೇಳಬಹುದು.
Published by:Sandhya M
First published: