Numerology: ನಿಮ್ಮ ಹೆಸರು S ಅಕ್ಷರದಿಂದ ಆರಂಭವಾಗುತ್ತದೆ ಎಂದರೆ ನಿಮ್ಮ ವ್ಯಕ್ತಿತ್ವ ಹೀಗಿರುತ್ತದೆ..

Name Starts With Letter S : ಎ, ಜೆ, ಮತ್ತು ಒ ವರ್ಣಮಾಲೆಗಳ ಜೊತೆಗೆ, ಎಸ್ ವರ್ಣಮಾಲೆಯ ಅತ್ಯಂತ ಶಕ್ತಿಶಾಲಿ ಅಕ್ಷರಗಳಲ್ಲಿ ಒಂದು. ಎಸ್ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವವರು ಜನರು ಸಾಮಾನ್ಯವಾಗಿ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿಮ್ಮ ಹೆಸರು(Name) ನಿಮ್ಮ ದಿನನಿತ್ಯದ ಆಯ್ಕೆಗಳ ಮೇಲೆ ಹಾಗೂ ಜೀವನದ ಬದಲಾವಣೆಯ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ಹೆಸರು ನಿಮ್ಮ ವ್ಯಕ್ತಿತ್ವ, ಹಣೆಬರಹವನ್ನು ನಿರ್ಧರಿಸುತ್ತದೆ ಎನ್ನುತ್ತಾರೆ. ನಿಮ್ಮ ಹೆಸರು ನಿಮ್ಮ ಹಿಂದಿನ, ವರ್ತಮಾನ ಮತ್ತು ಭವಿಷ್ಯದ ವಿಚಾರಗಳನ್ನುಹೊಂದಿರುತ್ತದೆ ಎನ್ನುವ ನಂಬಿಕೆ ಇದೆ.  ನಮ್ಮ ವರ್ಣಮಾಲೆಯ ಪ್ರತಿಯೊಂದು ಅಕ್ಷರವು ಸಂಖ್ಯಾಶಾಸ್ತ್ರದ(Numerology ) ಮೌಲ್ಯವನ್ನು ಹೊಂದಿರುತ್ತದೆ ಮತ್ತು ಅವುಗಳು ತಮ್ಮದೇ ಆದ ಗುಣಲಕ್ಷಣಗಳು ಮತ್ತು ಶಕ್ತಿಯನ್ನು ಹೊಂದಿವೆ. ಈ ಹೆಸರಿನೊಳಗಿನ ಅಕ್ಷರಗಳು ಬದುಕಿನ ದಿಕ್ಸೂಚಿ ಎಂಬುದು ಸತ್ಯ.  ನಿಮ್ಮ ಹೆಸರಿನಲ್ಲಿನ ಸಂಖ್ಯೆಗಳು ನಿಮ್ಮ ನಡವಳಿಕೆಗಳು ಮತ್ತು ಆಲೋಚನೆಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಪ್ರತಿಯೊಂದು ಹೆಸರಿನ ಹಿಂದೊಂದು ಅರ್ಥವಿದೆ.  ನಿಮ್ಮ ಹೆಸರಿನ ಮೊದಲಕ್ಷರಗಳು ನಿಮ್ಮ ವ್ಯಕ್ತಿತ್ವದ ಲಕ್ಷಣಗಳ ಸೂಚನೆಯನ್ನು ನೀಡುತ್ತದೆ. ಲೆಟರ್ ಎಸ್ ಅಕ್ಷರ ಸಂಖ್ಯೆ 1 ಕ್ಕೆ ಸಮಾನವಾಗಿದೆ ಮತ್ತು ಹೊಸ ಆರಂಭವನ್ನು ಪ್ರತಿನಿಧಿಸುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಎಸ್(S)​ ಆಗಿದ್ದರೆ  ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂಬುದು ಇಲ್ಲಿದೆ.  

ಎ, ಜೆ,  ಅಕ್ಷರಗಳ ಜೊತೆಗೆ, ಎಸ್ ವರ್ಣಮಾಲೆಯ ಅತ್ಯಂತ ಶಕ್ತಿಶಾಲಿ ಅಕ್ಷರಗಳಲ್ಲಿ ಒಂದು. ಎಸ್ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವವರು ಜನರು ಸಾಮಾನ್ಯವಾಗಿ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಹೆಚ್ಚು ಪ್ರಬಾವಶಾಲಿಯಾಗಿರುತ್ತಾರೆ. ಈ ರಾಶಿಯವರು ಜೀವನದ ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ.

ಎಸ್​ ಅಕ್ಷರದಿಂದ ಆರಂಭವಾಗುವ ಹೆಸರಿನ ವ್ಯಕ್ತಿಗಳು ಹಣಕ್ಕೆ ಸಹ  ಬಹಳ ಪ್ರಾಮುಖ್ಯತೆ ನೀಡುತ್ತಾರೆ ಮತ್ತು ಇಂತಹವರು ಉದ್ಯಮ, ರಾಜಕಾರಣ, ಮತ್ತು ಕಲಾವಿದರಾಗಿ ಯಶಸ್ಸು ಪಡೆಯುತ್ತಾರೆ. ಆರ್ಥಿಕವಾಗಿ ಪ್ರಬಲವಾಗಿರುವುದು ಈ ರಾಶಿಯವರಿಗೆ  ಬಹಳಷ್ಟು ಅರ್ಥವನ್ನು ನೀಡುತ್ತದೆ.

ಇದನ್ನೂ ಓದಿ: ಗಣೇಶನ ಹಬ್ಬದಂದು ಈ ರಾಶಿಯವರ ವಿಘ್ನಗಳೆಲ್ಲಾ ದೂರವಾಗುತ್ತೆ: 12 ರಾಶಿಗಳ ದಿನಭವಿಷ್ಯ ಹೀಗಿದೆ

ಎಸ್​ ಅಕ್ಷರದಿಂದ ಹೆಸರಿrಉವ ಜನರು ಕಷ್ಟವನ್ನು ಅನುಬವಿಸುತ್ತಾರೆ, ಹಾಗೆಯೇ ಮುಂದಿನ ದಿನಗಳಲ್ಲಿ ಸಂತೋಷ ಲಭಿಸುತ್ತದೆ. ಆದರೆ ಆಗಾಗ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಪರದಾಡುತ್ತಾರೆ.

ಎಸ್ ಅಕ್ಷರವು ಉತ್ಸಾಹ ಮತ್ತು ಆತ್ಮೀಯತೆಯನ್ನು ಸಹ ಸಂಕೇತವಾಗಿದೆ. ಈ ವ್ಯಕ್ತಿಗಳು  ಸ್ನೇಹಿತರು ಮತ್ತು ಸಂಗಾತಿಯ ಜೊತೆ ಹೆಚ್ಚು ಆತ್ಮೀಯವಾಗಿರಲು ಬಯಸುತ್ತಾರೆ.  ಈ ವ್ಯಕ್ತಿಗಳು ಸಂಬಂಧಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಆದರೆ ಒಮ್ಮೆ ಸಂಬಂಧದಲ್ಲಿ ಮೋಸ ಹೋದರೆ ನಂಬಿಕೆಯ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಾರೆ.

ಈ ಅಕ್ಷರದ ಹೆಸರಿನ ವ್ಯಕ್ತಿಗಳು  ಬೇರೆ ಜನರಿಗೆ ಸಲಹೆ ನೀಡುವ ಹಾಗೂ ಮಾರ್ಗದರ್ಶನ ನೀಡುವ ಗುಣವನ್ನು ಹೊಂದಿರುತ್ತಾರೆ. ಜನರು ಇವರ ಸಲಹೆಗಳನ್ನು ಹೆಚ್ಚು ನಂಬುತ್ತಾರೆ.

ಈ ಹೆಸರಿನ ಜನರು ಸೃಜನಶೀಲರು ಮತ್ತು ಬುದ್ಧಿವಂತರು ಮತ್ತು  ಪ್ರತಿಯೊಂದು ಕೆಲಸಗಳನ್ನು ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ.  ಅವರಿಗೆ ಕಷ್ಟದ ಕೆಲಸಗಳನ್ನು  ಮಾಡಲು ಇಷ್ಟಪಡುತ್ತಾರೆ.  ಇವರಿಗೆ ಹೆಚ್ಚು ಸಂಪತ್ತು ಸಾಧಿಸಬೇಕು ಎಂಬ ಛಲ ಇರುತ್ತದೆ.

ಎಸ್ ಅಕ್ಷರದಿಂದ ಹೆಸರು ಪ್ರಾರಂಭವಾಗುವ ವ್ಯಕ್ತಿಗಳು ಹೆಚ್ಚು ಸೂಕ್ಷ್ಮವಾಗಿರುತ್ತಾರೆ. ಅವರು ಆಭವುಕ ಜೀವಿಗಳು. ಆದರೆ , ತಮ್ಮ ಭಾವನೆಗಳನ್ನು ಇತರ ಜನರೊಂದಿಗೆ ಹಂಚಿಕೊಳ್ಳಲು ಸಿದ್ಧರಿರುವುದಿಲ್ಲ. ಅವರು ತಮ್ಮ ನೋವನ್ನು ಅವರ ಬೇರೆಯವರ ಬಳಿ ಹಂಚಿಕೊಳ್ಳದ ಕಾರಣ ಖಿನ್ನತೆಯ ಸಮಸ್ಯೆಯನ್ನು ಅನುಭವಿಸುತ್ತಾರೆ. ಇವರಿಗೆ ಬಹಳ ಬೇಗ ಕೋಪ ಬರುತ್ತದೆ. ಜನರನ್ನು ದೂರ ಮಾಡಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಇವರಿಗೆ ಉತ್ತಮ ಸ್ನೆಹಿತರು ಅಥವಾ ಸಂಗಾತಿ ಇದ್ದರೆ ಮಾತ್ರ ಅವರ ಬಳಿ ಎಲ್ಲವನ್ನು ಮಾರೆ  ಮಾಡದೆ ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ: ಗಣೇಶ ಹಬ್ಬಕ್ಕೆಂದು ಅತ್ತೆ ಜೊತೆ ಮೋದಕ ಮಾಡುತ್ತಿರುವ Pranitha Subhash

ಎಸ್​ ಅಕ್ಷರದಿಂದ ಆರಂಭವಾಗುವ ಹೆಸರಿನ ಜನರು, ಪ್ರಾಮಾಣಿಕತೆ  ಮತ್ತು ವಿಶ್ವಾಸಕ್ಕೆ ಹಸೆರುವಾಸಿಯಾಗಿದ್ದಾರೆ.  ಇವರು ಕೋಪ ಮಾಡಿಕೊಂಡಾಗ ಹೆಚ್ಚು ಹಠಮಾರಿಗಳಾಗಿರುತ್ತಾರೆ.  ಇವರ ಕೋಪವನ್ನು ನಿರ್ವಹಣೆ ಮಾಡುವುದು ಬಹಲ ಕಷ್ಟಕರ.
Published by:Sandhya M
First published: