Sunstone: ಸನ್ ಸ್ಟೋನ್ ಅಥವಾ ಮಾಣಿಕ್ಯ ಧರಿಸುವುದರಿಂದ ಆಗುವ ಪ್ರಯೋಜನ ಏನು..?

Benefits of wearing Sunstone: ಸನ್ ಸ್ಟೋನ್ ರತ್ನವನ್ನು ಸಿಂಹ, ತುಲಾ ಮತ್ತು ಮೀನ ರಾಶಿಯವರಿಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಈ ರಾಶಿಚಕ್ರ ಚಿಹ್ನೆಗಳ ಜನರು ಜ್ಯೋತಿಷಿಯನ್ನು ಸಂಪರ್ಕಿಸಿದ ನಂತರ ಈ ರತ್ನವನ್ನು ಧರಿಸಬಹುದು

ಸನ್ ಸ್ಟೋನ್

ಸನ್ ಸ್ಟೋನ್

 • Share this:
  ಜ್ಯೋತಿಷ್ಯಶಾಸ್ತ್ರ(Astrology) ಒಂದೊಂದು ರಾಶಿಯ(Zodiac Sign) ಕುರಿತು ಹಲವಾರು ಕೌತುಕಗಳನ್ನು ಹೇಳುತ್ತದೆ.. ಯಾವ ರಾಶಿಯವರು ಯಾವ ಬಟ್ಟೆ(Dress) ಧರಿಸಿದರೆ ಸೂಕ್ತ ಯಾವ ಬಣ್ಣ (Colour)ಯಾವ ರಾಶಿಯವರಿಗೆ ಹೆಚ್ಚು ಹೊಂದಾಣಿಕೆಯಾಗುತ್ತದೆ ಎಂಬುದನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ವಿಸ್ತಾರವಾಗಿ ಹೇಳಲಾಗಿದೆ.. ಅದರಲ್ಲೂ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜನರು ರತ್ನದ ಕಲ್ಲು ಅಥವಾ ಹರಳುಗಳಿರುವ(Stone) ಆಭರಣಗಳನ್ನು(Jewellery) ಜನರು ತಮ್ಮ ರಾಶಿಗೆ ತಕ್ಕಂತೆ ಮಾಡಿಸಿಕೊಳ್ಳುತ್ತಾರೆ. ರಾಶಿಗೆ ತಕ್ಕಂತೆ ರತ್ನದ ಹರಳುಗಳನ್ನು ಧರಿಸಿದರೆ ಅದೃಷ್ಟ(Luck) ಅನ್ನುವ ನಂಬಿಕೆ ನಮ್ಮಲ್ಲಿ ಬಲವಾಗಿದೆ.

  ಕೆಲವರಂತೂ ಜೋತಿಷ್ಯರ ಹತ್ತಿರ ನಮಗೆ ಯಾವ ಕಲ್ಲು ಸೂಕ್ತವೆಂದು ಕೇಳಿದ ಬಳಿಕವಷ್ಟೇ ಈ ರತ್ನದ ಹರಳುಗಳನ್ನು ಧರಿಸುತ್ತಾರೆ.. ಯಾಕೆಂದರೆ ನಮ್ಮನ್ನು ದೇಹವನ್ನು ಆಳುವುದೇ ಜನ್ಮಪಟ್ಟಿಯಲ್ಲಿರುವಂತಹ ರಾಶಿಗಳು. ದೇಹವಿದ್ದರೆ ಮಾತ್ರ ಸುಖ ದುಃಖಗಳು. ಹೀಗಾಗಿ ಜನ್ಮಪಟ್ಟಿಯಲ್ಲಿರುವ ರಾಶಿಯ ಅಧಿಪತಿಗಳಾದ ಗ್ರಹಗಳು ಪ್ರಬಲವಾಗಿದ್ದರೆ ಶುಭವಾಗುವುದು, ದುರ್ಬಲವಾಗಿದ್ದಾಗ ಅಶುಭ ಫಲವುಂಟಾಗುವುದು. ಜನ್ಮರಾಶಿಯಲ್ಲಿರುವ ಅಧಿಪತಿಯನ್ನು ಪ್ರಬಲಗೊಳಿಸಲು ಹರಳುಗಳನ್ನು ಧರಿಸಬೇಕು. ಹಾಗಿದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಸನ್ ಸ್ಟೋನ್ ಅಥವಾ ಮಾಣಿಕ್ಯ ಹರಳು ದರಿಸುವುದರ ಪ್ರಯೋಜನ ಏನು ಎನ್ನುವುದನ್ನು ನೋಡೋಣ.

  ಸೂರ್ಯನನ್ನು ಪ್ರತಿನಿಧಿಸುವ ಮಾಣಿಕ್ಯ

  ಸೂರ್ಯ, ವಿಶ್ವದ ಶಕ್ತಿ ಮತ್ತು ಜೀವನದ ಮೂಲ. ಸೌರವ್ಯೂಹದಲ್ಲಿನ ಭವ್ಯತೆಯ ಜೊತೆಗೆ, ಜ್ಯೋತಿಷ್ಯಶಾಸ್ತ್ರದಲ್ಲಿ ಸೂರ್ಯ ಮಹತ್ವದ ಪಾತ್ರ ವಹಿಸುತ್ತಾನೆ. ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯ, ಆತ್ಮ ಮತ್ತು ನೋಟವನ್ನು ಸೂಚಿಸುತ್ತಾನೆ. ಇವನು ಸ್ಥಿತಿ, ಮಾನ್ಯತೆ, ತಂದೆ, ಸಹೋದರ, ಸ್ವಾಭಿಮಾನ, ವ್ಯಕ್ತಿತ್ವ ಮತ್ತು ಗೌರವವನ್ನು ಪ್ರತಿನಿಧಿಸುತ್ತಾನೆ. ನಮ್ಮ ಜನ್ಮ ಕುಂಡಲಿಯಲ್ಲಿನ ಸೂರ್ಯ, ಅವನು ನೆಲೆಸಿರುವ ಮನೆಗೆ ಅನುಗುಣವಾಗಿ ಒಳ್ಳೆಯ ಅಥವ ಕೆಟ್ಟ ಫಲಿತಾಂಶಗಳನ್ನು ನೀಡುತ್ತಾನೆ.

  ಇದನ್ನೂ ಓದಿ:  ಸ್ವಾಹಾ ಎಂಬ ಪದದ ಅರ್ಥವೇನು; ಹೋಮ, ಯಜ್ಞಮಾಡುವಾಗ ಯಾಕೆ ಈ ಪದ ಬಳಸುತ್ತಾರೆ?

  ಕುಂಡಲಿಯಲ್ಲಿ ಸುಸ್ಥಿತಿಯಲ್ಲಿರುವ ಸೂರ್ಯನು, ಉತ್ತಮ ಸಾಮಾಜಿಕ ಸ್ಥಾನ, ಅಧಿಕಾರ, ಖ್ಯಾತಿ, ಸಂಪತ್ತು, ಮೌಲ್ಯ, ಸೌಜನ್ಯ ತಂದರೆ, ಕೆಟ್ಟ ಸ್ಥಾನದಲ್ಲಿರುವ ಸೂರ್ಯನು ಜೀವನದಲ್ಲಿ ಅನೇಕ ಸಮಸ್ಯೆಗಳಾದ ಏಕಾಗ್ರತೆಯ ಕೊರತೆ, ಅಗೌರವ, ಕಳಪೆ ಆರ್ಥಿಕ ಸ್ಥಿತಿ ಮತ್ತು ಕಳಪೆ ಸ್ವ-ಅಭಿವ್ಯಕ್ತಿ ತರುತ್ತಾನೆ. ರೂಬಿ ಸೂರ್ಯನ ಧನಾತ್ಮಕ ಶಕ್ತಿಯ ಮೇಲೆ ಪ್ರಭಾವ ಬೀರಿ, ಒಳ್ಳೆಯ ಆಲೋಚನೆಗಳನ್ನು ಆಕರ್ಷಿಸುವುದರಿಂದ ಜ್ಯೋತಿಷಿಗಳು, ರೂಬಿಯನ್ನು ಧರಿಸಲು ಸೂಚಿಸುತ್ತಾರೆ.

  ಸನ್ ಸ್ಟೋನ್ ಧರಿಸುವುದರಿಂದ ಆಗುವ ಉಪಯೋಗ

  * ಇದನ್ನು ಧರಿಸಿದವರಿಗೆ ಇದು ಗೌರವ, ಖ್ಯಾತಿ, ಮನ್ನಣೆಯನ್ನು ತರುತ್ತದೆ. ವಿಶೇಷವಾಗಿ, ಆತ್ಮವಿಶ್ವಾಸದ ಕೊರತೆಯಿರುವವರಿಗೆ ಈ ಹರಳು ಉಪಯೋಗಕಾರಿ.

  * ಈ ಹರಳು ಗೊಂದಲಗಳನ್ನು ನಿವಾರಿಸಿ, ಆಲೋಚನೆಗಳ ಸ್ಪಷ್ಟತೆಯನ್ನು ನೀಡುತ್ತದೆ.

  * ಸರ್ಕಾರದ ಅಧಿಕಾರ ಮತ್ತು ಆಡಳಿತದಂತಹ ಕ್ಷೇತ್ರಗಳನ್ನು ಸೂರ್ಯ ನಿಯಂತ್ರಿಸುವುದರಿಂದ, ಸರ್ಕಾರಿ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ, ರೂಬಿ ಧರಿಸುವುದರಿಂದ ಅನುಕೂಲಕರವಾಗಬಹುದು.

  * ತಂದೆಯೊಂದಿಗೆ ವಿಷಮ ಸಂಬಂಧವನ್ನು ಹೊಂದಿರುವವರು ಮಾಣಿಕ್ಯ ಹರಳು ಧರಿಸಿದರೆ, ಅವರ ನಡುವಿನ ಸಂಬಂಧ ಸುಧಾರಿಸಬಹುದು.

  * ಜೀವನದಲ್ಲಿ ಗುರಿಗಳನ್ನು ಆಯ್ಕೆ ಮಾಡಲು ಅಸಮರ್ಥವಾಗಿರುವ ವ್ಯಕ್ತಿ ಕೂಡ ರೂಬಿಯನ್ನು ಧರಿಸುವುದರಿಂದ, ಬುದ್ಧಿಶಕ್ತಿ, ದೃಢತೆ ಮತ್ತು ಸ್ಪಷ್ಟತೆಯನ್ನು ಕಾಣಬಹುದು.

  *ಜಾತಕದಲ್ಲಿ ಸೂರ್ಯನ ದೃಷ್ಟಿ ಬಲಿಷ್ಠವಾಗಿರದ ಕಾರಣ ಹಲವರು ಅಜೀರ್ಣತೆ, ಕಾಮಾಲೆ, ಭೇದಿ, ಬೆನ್ನುನೋವು, ಕಡಿಮೆ ಅಥವಾ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುತ್ತಾರೆ. ಇಂಥವರು ಮಾಣಿಕ್ಯದ ಹರಳನ್ನು ಧರಿಸಲು ಆರಂಭಿಸಿದರೆ ಬೇಗನೆ ಆರೋಗ್ಯವಂತರಾಗಲು ಸಹಕಾರಿಯಾಗುತ್ತದೆ.

  *ಮಾಣಿಕ್ಯದ ಧಾರಣೆಯಿಂದ ಕೇವಲ ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ಸದೃಢರಾಗಬಹುದಾಗಿದೆ. ಒಟ್ಟಾರೆಯಾಗಿ ದೇಹ ಸಾಮರ್ಥ್ಯವನ್ನು ಹೆಚ್ಚಿಸಿ ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ.

  ಸನ್ ಸ್ಟೋನ್ ಧರಿಸುವ ಸರಿಯಾದ ಕ್ರಮ ಯಾವುದು..

  ನೀವು ಸನ್ ಸ್ಟೋನ್ ಧರಿಸುವ ಮೊದಲು, ಕಲ್ಲಿನ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬೇಕು. ಇದಲ್ಲದೆ, ಕಲ್ಲನ್ನು ಶುದ್ಧೀಕರಿಸುವುದು ಅತ್ಯಗತ್ಯ. ಹೀಗಾಗಿ, ನೀವು ಭಾನುವಾರ ಅದನ್ನು ಗಂಗಾಜಲ, ಜೇನುತುಪ್ಪ, ಹಾಲು, ಸಕ್ಕರೆ ಮತ್ತು ಮೊಸರು ಮಿಶ್ರಣದಲ್ಲಿ ಮುಳುಗಿಸಿ ಪವಿತ್ರಗೊಳಿಸಬೇಕು. ಮರುದಿನ ಬೆಳಿಗ್ಗೆ, ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದವನ್ನು ತೆಗೆದುಕೊಂಡು, ಸೂರ್ಯ ಮಂತ್ರ ಜಪಿಸಿ ಕಲ್ಲನ್ನು ಧರಿಸಿ.

  ಇದನ್ನೂ ಓದಿ: ಗಣೇಶನ ನಾಲ್ಕು ಕೈಗಳ ರಹಸ್ಯ ಗೊತ್ತಾ?

  ಯಾರು ಸನ್ ಸ್ಟೋನ್(ಮಾಣಿಕ್ಯ) ಧರಿಸಬೇಕು.?

  ಸನ್ ಸ್ಟೋನ್ ರತ್ನವನ್ನು ಸಿಂಹ, ತುಲಾ ಮತ್ತು ಮೀನ ರಾಶಿಯವರಿಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಈ ರಾಶಿಚಕ್ರ ಚಿಹ್ನೆಗಳ ಜನರು ಜ್ಯೋತಿಷಿಯನ್ನು ಸಂಪರ್ಕಿಸಿದ ನಂತರ ಈ ರತ್ನವನ್ನು ಧರಿಸಬಹುದು. ಸಮಾಲೋಚನೆಯಿಲ್ಲದೆ ಅದನ್ನು ಧರಿಸುವುದು ಹಾನಿಕಾರಕವಾಗಿದೆ
  Published by:ranjumbkgowda1 ranjumbkgowda1
  First published: