Astrology: ಸೂರ್ಯನ ಪಥ ಬದಲಾವಣೆಯಿಂದ ಈ 4 ರಾಶಿಯವರಿಗೆ ಅದೃಷ್ಟ

Sun: ಧನುರಾಶಿಯವರಿಗು ಸಹ ಸೂರ್ಯನ ಸಂಚಾರದ ಲಾಭ ಸಿಗಲಿದೆ.. ಧನು ರಾಶಿಯವರ ವೃತ್ತಿ ಜೀವನವು ಸಾಕಷ್ಟು ಬಲವಾಗಿ ಕುಡಿದು ವ್ಯಾಪಾರ ಹಾಗೂ ಪ್ರವಾಸದಿಂದ ಆರ್ಥಿಕ ಲಾಭ ಬರಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಗ್ರಹಗಳ (Planet) ಚಲನೆ ಒಂದೊಂದು ರಾಶಿಯವರ(Zodiac Sign) ಮೇಲೆ ಒಂದೊಂದು ಪರಿಣಾಮ ಬೀಳುತ್ತದೆ ಎನ್ನುವ ನಂಬಿಕೆ ಜ್ಯೋತಿಷ್ಯಶಾಸ್ತ್ರದಲ್ಲಿ (Astrology) ಇದೆ.. ಅದರಲ್ಲೂ ಸೂರ್ಯಚಂದ್ರರ (Sun and Moon) ಚಲನೆಯಿಂದ ದ್ವಾದಶ ರಾಶಿಗಳ ಮೇಲೆ ಅಪಾರ ಪರಿಣಾಮ ಬೀರುತ್ತದೆ.. ಕೆಲವು ರಾಶಿಯವರಿಗೆ ಇದು ಅದೃಷ್ಟ (Luck) ಹೊತ್ತು ತಂದರೆ ಮತ್ತೆ ಕೆಲವು ರಾಶಿಯವರಿಗೆ ಇದು ದುರಾದೃಷ್ಟವನ್ನು ತರುತ್ತದೆ. ಅದರಲ್ಲೂ ರಾಶಿಗಳಿಗೆ ಅಧಿಪತಿಯಾಗಿರುವ ಸೂರ್ಯ ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಹೀಗಾಗಿಯೇ ಕಳೆದ ಜನವರಿ(January) 14ರಂದು ಹೊಸ ರಾಶಿ ಪ್ರವೇಶಿಸಿದ ಸೂರ್ಯ ಮತ್ತೆ ತನ್ನ ಪಥ ಬದಲಾವಣೆ ಮಾಡುತ್ತಿದ್ದಾನೆ.. ಹೌದು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಫೆಬ್ರವರಿ(February) 13ರಂದು ಸೂರ್ಯ ಮಕರ ರಾಶಿಯನ್ನು ಪ್ರವೇಶ ಮಾಡಿ ಮಾರ್ಚ್ 15ರವರೆಗೆ ಮಕರ ರಾಶಿಯಲ್ಲಿ ಇರಲಿದ್ದಾನೆ. ಸೂರ್ಯ ಮಕರ ರಾಶಿ ಪ್ರವೇಶ ಮಾಡುವುದರಿಂದ ದ್ವಾದಶ ರಾಶಿಗಳಲ್ಲಿ ಹಲವು ರಾಶಿಗಳಿಗೆ ಶುಭ ಫಲ ಉಂಟಾಗಲಿದೆ. ಇದರಿಂದ ಈ ಕೆಳಗಿನ ರಾಶಿಯವರು ಹಲವು ಪ್ರಯೋಜನಗಳನ್ನು ಪಡೆಯಲಿದ್ದಾರೆ.. ಹಾಗಿದ್ರೆ ಸೂರ್ಯ ಮಕರ ರಾಶಿಗೆ ಬರುತ್ತಿರುವುದರಿಂದ ಯಾವ ರಾಶಿಯವರಿಗೆ ಏನು ಉಪಯೋಗ ಇದೆ ಎನ್ನುವ ಮಾಹಿತಿ ಇಲ್ಲಿದೆ..

  ಸೂರ್ಯನ ಪಥ ಬದಲಾವಣೆಯಿಂದ ಈ ರಾಶಿಯವರಿಗೆ ಅದೃಷ್ಟ

  1) ತುಲಾ ರಾಶಿ: ಸೂರ್ಯ ಮಕರ ರಾಶಿಗೆ ಸಂಚಾರ ಮಾಡುತ್ತಿರುವುದರಿಂದ ಲಾಭ ಪಡೆಯುತ್ತಿರುವ ರಾಶಿಗಳಲ್ಲಿ ತುಲಾ ರಾಶಿಯವರು ಕೂಡ ಒಬ್ಬರು.. ಈ ಒಂದು ತಿಂಗಳ ಅವಧಿಯಲ್ಲಿ ಸೂರ್ಯನ ಸಂಚಾರವೂ ತುಲಾ ರಾಶಿಯವರಿಗೆ ಶುಭಕರ ಲಾಭವನ್ನು ತಂದು ಕೊಡಲಿದೆ.. ಬಹುಮುಖ್ಯವಾಗಿ ಈ ಸಂದರ್ಭದಲ್ಲಿ ತುಲಾರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರುವುದು ವೃತ್ತಿಯಲ್ಲಿ ಸಾಕಷ್ಟು ಮುನ್ನಡೆಯಲಿದ್ದಾರೆ.. ಕುಟುಂಬದವರು ಸಹ ತುಲಾ ರಾಶಿಯವರಿಗೆ ಆರ್ಥಿಕ ನೆರವು ನೀಡಲಿದ್ದಾರೆ.. ಹೀಗಾಗಿ ಆರ್ಥಿಕ ಸಮಸ್ಯೆಯಿಂದ ಕಂಗೆಟ್ಟಿದ್ದ ತುಲಾರಾಶಿಯವರ ಜೀವನದಲ್ಲಿ ಚೈತನ್ಯ ಕಾಣಲಿದೆ. ಇನ್ನು ಉದ್ಯೋಗದಲ್ಲಿ ಅಭಿವೃದ್ಧಿ ಕಾಣಬೇಕು ಎಂದು ಬಯಸುತ್ತಿದ್ದ ತುಲಾ ರಾಶಿಯವರಿಗೆ ಸೂರ್ಯನ ಸಂಚಾರದಿಂದ ಲಾಭ ಆಗಲಿದ್ದು ಉದ್ಯೋಗದಲ್ಲಿ ಹೊಸ ಸ್ಥಾನ ಪಡೆದುಕೊಳ್ಳಲಿದ್ದಾರೆ.

  ಇದನ್ನೂ ಓದಿ: ವಿಷ್ಣುವಿನ ಈ ಒಂದು ಮಂತ್ರ ಜಪಿಸುವುದರಿಂದ ಅನಾರೋಗ್ಯ ಸಮಸ್ಯೆಗೆ ಸಿಗಲಿದೆ ಮುಕ್ತಿ

  2) ವೃಶ್ಚಿಕ ರಾಶಿ: ಸೂರ್ಯ ಸಂಚಾರದ ವೇಳೆ ಸಂಪತ್ತು ಅಧಿಕವಾಗಿರುತ್ತದೆ.. ಹೀಗಾಗಿ ಸೂರ್ಯ ಹೊಸ ರಾಶಿಗೆ ಪ್ರವೇಶ ಮಾಡುತ್ತಿರುವುದರಿಂದ ವೃಶ್ಚಿಕರಾಶಿಯವರಿಗೆ ಸಾಕಷ್ಟು ಧನ ಲಾಭ ಇದೆ. ಅದರಲ್ಲೂ ಉದ್ಯೋಗದಲ್ಲಿ ವೃಶ್ಚಿಕರಾಶಿಯವರಿಗೆ ಆದಾಯ ಹೆಚ್ಚಳ ಆಗಲಿದೆ.. ಇಷ್ಟು ದಿನ ವೃಶ್ಚಿಕ ರಾಶಿಯವರು ಕೆಲಸದ ಸ್ಥಳದಲ್ಲಿ ತೋರಿದ ಕಠಿಣ ಪರಿಶ್ರಮದಿಂದ ಲಾಭ ಪಡೆದುಕೊಳ್ಳಲಿದ್ದಾರೆ. ವ್ಯಾಪಾರ-ವ್ಯವಹಾರಗಳಲ್ಲಿ ಹಣಕಾಸಿನ ಲಾಭ ಹೆಚ್ಚಾಗಿ ಇರುತ್ತದೆ.. ಇತರ ಮೂಲಗಳಿಂದ ಹಣ ಲಭಿಸುವ ಸಾಧ್ಯತೆ ಇರುತ್ತದೆ.. ಬಹುಮುಖ್ಯವಾಗಿ ವೃಶ್ಚಿಕ ರಾಶಿಯವರು ಪೂರ್ವಿಕರ ಆಸ್ತಿಯಲ್ಲಿ ಲಾಭವನ್ನು ಸೂರ್ಯ ಸಂಚಾರದ ಈ ತಿಂಗಳಿನಲ್ಲಿ ಪಡೆದುಕೊಳ್ಳಲಿದ್ದಾರೆ.

  3) ಧನು ರಾಶಿ: ಧನುರಾಶಿಯವರಿಗು ಸಹ ಸೂರ್ಯನ ಸಂಚಾರದ ಲಾಭ ಸಿಗಲಿದೆ.. ಧನು ರಾಶಿಯವರ ವೃತ್ತಿ ಜೀವನವು ಸಾಕಷ್ಟು ಬಲವಾಗಿ ಕುಡಿದು ವ್ಯಾಪಾರ ಹಾಗೂ ಪ್ರವಾಸದಿಂದ ಆರ್ಥಿಕ ಲಾಭ ಬರಲಿದೆ.
  ಪ್ರಮುಖವಾಗಿ ಸೂರ್ಯನ ಕೃಪೆಯಿಂದ ಧನು ರಾಶಿಯವರ ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗಲಿದ್ದು ಕಾನೂನು ಕೆಲಸದಲ್ಲಿ ಯಶಸ್ಸು ಸಿಗಲಿದೆ.. . ಆಸ್ತಿ ಕೆಲಸದಲ್ಲಿ ಲಾಭ ಇರುತ್ತದೆ. ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆ ಕಂಡುಬರಲಿದೆ. ಸೂರ್ಯನ ರಾಶಿ ಬದಲಾವಣೆಯ ಅವಧಿಯಲ್ಲಿ ವ್ಯಾಪಾರ ಲಾಭವನ್ನು ಪಡೆಯುತ್ತದೆ.

  ಇದನ್ನೂ ಓದಿ: ಪರಮ ಶಿವ ಅರ್ಧನಾರೀಶ್ವರನ ಅವತಾರ ತಾಳಿದ್ದು ಯಾಕೆ ಗೊತ್ತಾ..?

  4) ಕುಂಭ ರಾಶಿ: ತುಲಾ ಧನು ವೃಶ್ಚಿಕರಾಶಿಯವರಿಗೆ ಕುಂಭ ರಾಶಿಯವರಿಗೂ ಸಹ ಸೂರ್ಯನ ಸಂಚಾರದಿಂದ ಲಾಭ ಆಗಲಿದೆ. ಅದೃಷ್ಟ ಎನ್ನುವುದು ಈ ಸಮಯದಲ್ಲಿ ಕುಂಭ ರಾಶಿಯವರನ್ನು ಹುಡುಕಿಕೊಂಡು ಬರಲಿದೆ.. ಎಲ್ಲಾ ಕ್ಷೇತ್ರಗಳಲ್ಲಿಯೂ ಸಹ ತುಂಬಾ ರಾಶಿಯವರು ಯಶಸ್ಸನ್ನು ಕಾಣಲಿದ್ದಾರೆ..
  ಸೂರ್ಯನ ಸಂಚಾರ ಸಾಕಷ್ಟು ಫಲಪ್ರದವಾಗಿ ಇರುವುದರಿಂದ ಕುಂಭ ರಾಶಿಯವರು ಯಾವ ಕ್ಷೇತ್ರದಲ್ಲಿ ಕಠಿಣ ಪರಿಶ್ರಮ ಹಾಕಿರುತ್ತಾರೆ ಕ್ಷೇತ್ರದಲ್ಲಿ ಸಂಪೂರ್ಣ ಯಶಸ್ಸು ಎಂಬುದು ಕುಂಭರಾಶಿಯವರಿಗೆ ಸಿಗಲಿದೆ.. ವ್ಯಾಪಾರ-ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಕಂಡು ಬರಲಿದ್ದು ಆರ್ಥಿಕವಾಗಿ ಚೇತರಿಕೆ ಕಾಣುವುದರ ಜೊತೆಗೆ ಆರ್ಥಿಕ ಲಾಭ ಕೂಡ ಒದಗಿಬರಲಿದೆ.. ಇದರಿಂದಾಗಿ ಕುಂಭರಾಶಿಯವರು ಆರ್ಥಿಕ ಸಂಕಷ್ಟದಿಂದ ಮುಕ್ತಿ ಹೊಂದಬಹುದಾಗಿದೆ.
  Published by:ranjumbkgowda1 ranjumbkgowda1
  First published: